ಕಳೆದ ೭೩ ವರ್ಷಗಳ ಯಾವುದೇ ಪಕ್ಷದ ಆಡಳಿತಗಾರರಿಗೆ ದೇವಾಲಯಗಳನ್ನು ರಕ್ಷಿಸಲು ಸಾಧ್ಯವಾಗದ ಕಾರಣ, ದೇವಾಲಯಗಳ ಸುರಕ್ಷತೆಗೆ ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ !
ತಂಜಾವೂರ (ತಮಿಳುನಾಡು) – ಇಲ್ಲಿನ ತಿರುವಿದಾಯಿಮರುತುರ ಪ್ರದೇಶದ ೩೫೦ ವರ್ಷಗಳಷ್ಟು ಹಳೆಯದಾದ ಆನಂದವಲ್ಲಿ ಸಮೇತ ಭಾಸ್ಕರೆಸ್ವರಾರ ದೇವಸ್ಥಾನವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿ ದೇವಾಲಯದ ದೇವಿಯ ವಿಗ್ರಹದಿಂದ ಮಂಗಳಸೂತ್ರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ನಡೆದಿದೆ. ದೇವಾಲಯದ ವ್ಯವಸ್ಥಾಪಕ ಕೃಷ್ಣಸಾಮಿಯವರಿಗೆ ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದಾಗ ಅವರು ಸ್ಥಳಕ್ಕೆ ತಲುಪಿದರು. ಅವರು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
तमिलनाडु: 350 साल पुराने मंदिर में तोड़फोड़, ‘मंगलसूत्र’ चोरी#TamilNadu https://t.co/uGyjubf2sM
— ऑपइंडिया (@OpIndia_in) December 20, 2020
೧. ದೇವಾಲಯದ ಅರ್ಚಕ ಶಿವಾನಂದಿಯಾರ ಸೇನಾಥಿಪತಿಯವರು ರಾತ್ರಿ ದೇವಾಲಯದ ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು. ಮರುದಿನ ಬೆಳಿಗ್ಗೆ ದೇವಾಲಯದ ಭದ್ರತಾ ಸಿಬ್ಬಂದಿಗಳು ದೇವಾಲಯದ ಮುಖ್ಯ ಪ್ರವೇಶ ದ್ವಾರವನ್ನು ತೆರೆದಾಗ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ದೇವಾಲಯದಲ್ಲಿ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಕಾಣೆಯಾಗಿವೆ, ಜೊತೆಗೆ ಧ್ವಂಸ ಮಾಡಿರುವ ಬಗ್ಗೆ ಬೆಳಕಿಗೆ ಬಂದಿವೆ.
೨. ಈ ಬಗ್ಗೆ ಸ್ಥಳೀಯ ‘ಕಥಿರ್ ನ್ಯೂಸ್’ ಸುದ್ದಿವಾಹಿನಿಯಲ್ಲಿ ದೇವಾಲಯದಿಂದ ಪದೇ ಪದೇ ದೂರುಗಳು ನೀಡಿದರೂ ದೇವಾಲಯದ ವಿತ್ತ ವಿಭಾಗವು ಇಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಲ್ಲ. ‘ಆಡಳಿತದ ನಿರ್ಲಕ್ಷ್ಯದಿಂದಾಗಿ ಕಳ್ಳತನ ನಡೆದಿದೆ’ ಎಂದು ಭಕ್ತರು ಆರೋಪಿಸಿದ್ದಾರೆ.