ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪೊಲೀಸ್ ಪೇದೆಯ ಬಂಧನ

ರಕ್ಷಕರಲ್ಲ, ಭಕ್ಷಕರಾಗಿರುವ ಪೊಲೀಸರು !

ಸಾಸಾರಾಮ (ಬಿಹಾರ) – ರಾಜೀವ ಕುಮಾರ ಎಂಬ ಪೊಲೀಸ ಪೇದೆಯು ಓರ್ವ ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಪೊಲೀಸರು ರಾಜೀವ ಕುಮಾರನನ್ನು ಬಂಧಿಸಿದ್ದಾರೆ. ಪೀಡಿತೆಯ ಗಂಡ ಕೂಡ ಪೊಲೀಸ ಆಗಿದ್ದರಿಂದ ಅವರು ದೂರು ನೀಡಿದ ನಂತರ ರಾಜೀವ ಕುಮಾರನನ್ನು ಬಂಧಿಸಲಾಯಿತು.

ಕೆಲವು ದಿನಗಳ ಹಿಂದೆ ಮಹಿಳಾ ಪೊಲೀಸ್‌ನ ನೇಮಕವನ್ನು ಪಾಟಲೀಪುತ್ರದಲ್ಲಿಯ ಗರ್ದನೀಬಾಗ ಪ್ರದೇಶದಲ್ಲಿ ಮಾಡಲಾಗಿತ್ತು. ಆಗ ಆರೋಪಿ ರಾಜೀವ ಕುಮಾರ ಆಕೆಗೆ ಒಂದು ಹೋಟೆಲ್‌ನಲ್ಲಿ ಕರೆದನು ಮತ್ತು ಅಲ್ಲಿ ಅತ್ಯಾಚಾರ ಮಾಡಿದನು. ಇವರಿಬ್ಬರಿಗೂ ಮೊದಲಿನಿಂದಲೂ ಪರಸ್ಪರ ಪರಿಚಯವಿತ್ತು.