ಕೊರೋನಾದ ಸಂಕಟದ ಹಿನ್ನಲೆಯಲ್ಲಿ ದೇಶದಾದ್ಯಂತ ಘೋಷಿಸಲಾದ ‘ಜನತಾ ಕರ್ಫ್ಯೂ ಹಾಗೂ ಸಂಚಾರ ನಿಷೇಧದಿಂದಾಗಿ ಮುದ್ರಣ ಹಾಗೂ ವಿತರಣೆಗಾಗಿ ಬರುತ್ತಿದ್ದ ಅಡಚಣೆಗಳನ್ನು ಗಮನದಲ್ಲಿಟ್ಟು ಮಾರ್ಚ್ ತಿಂಗಳಿಂದ ವಾಚಕರ ತನಕ ಸಾಪ್ತಾಹಿಕ ಸನಾತನ ಪ್ರಭಾತದ ಮುದ್ರಿತ ಸಂಚಿಕೆಯನ್ನು ತಲುಪಿಸಲು ಆಗಲಿಲ್ಲ. ಈ ಅವಧಿಯಲ್ಲಿ ವಾಚಕರಿಗಾದ ತೊಂದರೆ ಬಗ್ಗೆ ವಿಷಾದಿಸುತ್ತೇವೆ. ನಂತರ ಸರಕಾರವು ದಿನಪತ್ರಿಕೆಯ ಮುದ್ರಣಕ್ಕಾಗಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದರಿಂದ ನಮಗೆ ಪುನಃ ಸಾಪ್ತಾಹಿಕವನ್ನು ಮುದ್ರಿಸಲು ಸಾಧ್ಯವಾಗುತ್ತಿದೆ. ಹಾಗಾಗಿ ಈ ವಾರದಿಂದ ಸಾಪ್ತಾಹಿಕವನ್ನು ಪುನಃ ವಾಚಕರ ತನಕ ತಲುಪಿಸಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಎಲ್ಲ ವಾಚಕರ ತನಕ ಸಾಪ್ತಾಹಿಕ ತಲುಪಿಸುವುದು ಸಾಧ್ಯವಾಗುತ್ತದೆ ಹಾಗಿಲ್ಲ. ಹಾಗಾಗಿ ಅವರು ‘ಆನ್‌ಲೈನ್ ಸಾಪ್ತಾಹಿಕ ‘ಸನಾತನ ಪ್ರಭಾತದ ಲಾಭ ಪಡೆದು ಸಹಕರಿಸ ಬೇಕೆಂದು ವಿನಂತಿ ! – ಸಂಪಾದಕರು