ಉತ್ತರ ಪ್ರದೇಶ ಸರಕಾರ ರಾಜ್ಯದಲ್ಲಿ ೧೨೦ ಹೊಸ ಗೋಶಾಲೆಗಳನ್ನು ಸ್ಥಾಪಿಸಲಿದೆ

ಸರಕಾರವು ಕೇವಲ ಹೊಸ ಗೋಶಾಲೆಗಳನ್ನು ನಿರ್ಮಿಸದೇ, ರಾಜ್ಯದಲ್ಲಿ ಈಗಿರುವ ಗೋಶಾಲೆಗಳ ಸ್ಥಿತಿ ಹೇಗೆ ಸುಧಾರಿಸಬಹುದು ಮತ್ತು ಹಸುಗಳನ್ನು ಹೇಗೆ ಸುರಕ್ಷಿತವಾಗಿರಿಸಬಹುದು ಎಂಬುದರ ಬಗ್ಗೆಯೂ ಗಮನ ಹರಿಸಬೇಕು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ರಾಜ್ಯ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿಯವರಿಗೆ ರಾಜ್ಯದಲ್ಲಿ ಹೊಸ ಗೋಶಾಲೆಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳಿಂದ ಹೊಸ ಪ್ರಸ್ತಾವನೆ ಪಡೆಯುವಂತೆ ಆದೇಶ ನೀಡಿದೆ. ಒಟ್ಟು ೧೨೦ ಗೋಶಾಲೆಗಳನ್ನು ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದ್ದು ಇದಕ್ಕಾಗಿ ೧೪೭ ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ, ಅದೇರೀತಿ ಅಗತ್ಯವಿದ್ದರೆ ಹಣಕಾಸು ಆಯೋಗದ ಬಜೆಟ್‌ನಿಂದ ಗೋವುಗಳ ಆರೈಕೆಗಾಗಿ ಗೋ ಸೇವಕರನ್ನು ನೇಮಿಸಲಾಗುವುದು, ಎಂದೂ ಕೂಡ ಆದೇಶದಲ್ಲಿ ಹೇಳಿದೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾಡ್ರಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದ್ದು, ಅನೇಕ ಸ್ಥಳಗಳಲ್ಲಿ ಶೀತ ಹವಾಮಾನದಿಂದ ಹಸುಗಳು ಸಾಯುತ್ತಿದ್ದರಿಂದ ಗೋಶಾಲೆಗಳ ಆವಶ್ಯಕತೆಯಿದೆ ಎಂದು ಹೇಳಿದ್ದಾರೆ. ಅದಾದ ನಂತರ ಸರಕಾರ ಈ ಆದೇಶ ಹೊರಡಿಸಿದೆ.