ಬಂಗಾಲದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳಿಗೆ ಮತದಾನದಿಂದ ತಡೆಯಲಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

  • ನ್ಯಾಯಾಲಯದಲ್ಲಿ ಇಂತಹ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂಬುವುದು ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನಾಚಿಕೆಯ ವಿಷಯ !
  • ಬಂಗಾಲದಲ್ಲಿ ಮಾತ್ರವಲ್ಲ, ದೇಶದ ಇತರ ರಾಜ್ಯಗಳಲ್ಲಿರುವ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಈ ರೀತಿಯಲ್ಲಿ ಆಗುತ್ತದೆಯೇ ? ಈ ಬಗ್ಗೆ ಚುನಾವಣಾ ಆಯೋಗ ಮತ್ತು ಸ್ಥಳೀಯ ಸರಕಾರ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಹಾಗೆ ಆಗುತ್ತಿದ್ದಲ್ಲಿ ಹಿಂದೂಗಳಿಗೆ ಭದ್ರತೆಯೊದಗಿಸಿ ಮತ ಚಲಾಯಿಸಲು ಅವಕಾಶ ನೀಡಬೇಕು !

ನವ ದೆಹಲಿ – ಮುಂದಿನ ವರ್ಷ ಬಂಗಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಕಲಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಪುನೀತ್ ಕೌರ್ ಢಾಂಡಾ ಇವರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ರಾಜ್ಯದ ಮುಸ್ಲಿಂ ಬಹುಸಂಖ್ಯಾತ ಮಾಲದಾ, ಉತ್ತರ ದಿನಾಜಪುರ, ಮುರ್ಷಿದಾಬಾದ, ನಾದಿಯಾ, ಕೂಚ್‌ಬಿಹಾರ, ಕೋಲಕಾತಾ, ಉತ್ತರ ೨೪ ಪರಗಣಾ ಮತ್ತು ದಕ್ಷಿಣ ಪರಗಣಾಗಳಲ್ಲಿ ಹಿಂದೂಗಳಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ. ಅಲ್ಲಿ ಅವರಿಗೆ ಮತದಾನ ಮಾಡಲು ಅಡಚಣೆ ನಿರ್ಮಾಣ ಮಾಡುತ್ತಾರೆ. ಈ ಅಡಚಣೆಯನ್ನು ನಿವಾರಿಸಬೇಕು, ಎಂದು ಒತ್ತಾಯಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ನಡೆದ ಬಿಜೆಪಿ ಕಾರ್ಯಕರ್ತರ ಮೇಲಿನ ದಾಳಿಗಳು

 

ಢಾಂಡಾರವರು ಅರ್ಜಿಯಲ್ಲಿ,

೧. ಬಂಗಾಲದ ನಕಲಿ ಮತದಾರರ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಹೇಳಬೇಕು.

೨. ಬಂಗಾಲದ ವಿರೋಧಿಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು.

೩. ರಾಜ್ಯದಲ್ಲಿ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದ್ದರೂ ಆಡಳಿತ ಪಕ್ಷ ಈ ನಿಟ್ಟಿನಲ್ಲಿ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಮಹಿಳಾ ನಾಯಕರ ಹತ್ಯೆಯಾಗಿದೆ. ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಪರಿಸ್ಥಿತಿಯಿಂದಾಗಿ ವಿರೋಧಿಪಕ್ಷದ ನಾಯಕರಿಗೆ ಭದ್ರತೆಯೊದಗಿಸಬೇಕು ಎಂದು ಬೇಡಿಕೆ ಮಾಡಲಾಗಿದೆ.