ವಿದ್ಯುತ್ ದೀಪದ ಪ್ಲಾಸ್ಟಿಕ್ ಹಣತೆ ಮತ್ತು ಮೇಣದ ಹಣತೆ ಹಚ್ಚಿದ್ದರಿಂದ ನಕಾರಾತ್ಮಕ ಸ್ಪಂದನ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು
ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಗಳು ಸಾತ್ತ್ವಿಕತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಮಹತ್ವದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ‘ವಿದ್ಯುತ್ ದೀಪವಿರುವ ಪ್ಲಾಸ್ಟಿಕ್ ‘ಚೀನಿ ಹಣತೆ, ಮೇಣದ ಹಣತೆ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಪಾರಂಪಾರಿಕ ಮಣ್ಣಿನ ಹಣತೆಯನ್ನು ಹಚ್ಚಿದಾಗ ಆ ಪ್ರತಿಯೊಂದು ಹಣತೆಯಿಂದ ಪ್ರಕ್ಷೇಪಿತಗೊಳ್ಳುವ ಸ್ಪಂದನಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡುವುದೇ ಆ ಪರೀಕ್ಷಣೆಯ ಉದ್ದೇಶವಾಗಿತ್ತು.