ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯೂನಿವರ್ಸಲ್ ಔರಾ ಸ್ಕ್ಯಾನರ್(ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಜಿಗಣೆಯ ಎದುರಿಗೆ ಅಲೋಪಥಿಕ್, ಹೋಮಿಯೋಪಥಿಕ್ ಹಾಗೂ ಆಯುರ್ವೇದೀಯ ಔಷಧಿಗಳ ಮಾತ್ರೆಯನ್ನು ಇಟ್ಟಾಗ ಅದು ನೀಡಿದ ಸ್ಪಂದನ ಮತ್ತು ಅದರ ಮೇಲಾಗಿರುವ ಪರಿಣಾಮ

‘ಆಯುರ್ವೇದೀಯ ಶ್ರೀ ಧನ್ವಂತರಿ ದೇವರ ಚಿತ್ರದಲ್ಲಿ ದೇವರ ಬಲಗೈಯಲ್ಲಿ ಜಿಗಣೆಯಿರುವುದು ಕಾಣಿಸುತ್ತದೆ. ಆಯುರ್ವೇದದಲ್ಲಿ ಜಿಗಣೆಗಳನ್ನು ಸಾಧಾರಣ ಶರೀರದಲ್ಲಿನ ರಕ್ತದ ಸಂದರ್ಭದಲ್ಲಿನ ರೋಗಗಳ ನಿವಾರಣೆಗಾಗಿ ಉಪಯೋಗಿಸುತ್ತಾರೆ. ೩೦.೭.೨೦೨೦ ಈ ದಿನ ಗೋವಾದ ಸನಾತನದ ಆಶ್ರಮದ ಮುಖ್ಯ ಪ್ರವೇಶ ದ್ವಾರದ ಬಳಿ ಒಂದು ಜಿಗಣೆ ಕಾಣಿಸಿತು. ಅದು ಸಾತ್ವಿಕ ವಸ್ತುಗಳ ಕಡೆಗೆ ಆಕರ್ಷಿತವಾಗುವುದು ಗಮನಕ್ಕೆ ಬಂದಿತು. ಜಿಗಣೆಯ ಎದುರಿಗೆ ಅಲೋಪಥಿಕ್, ಹೋಮಿಯೋಪಥಿಕ್ ಹಾಗೂ ಆಯುರ್ವೇದಿಕ್ ಔಷಧಿಗಳ ಮಾತ್ರೆಗಳನ್ನು ಇಟ್ಟಾಗ, ಅದರ ಸ್ಪಂದನೆ ಮತ್ತು ಅದರ ಮೇಲಾಗುವ ಪರಿಣಾಮದ ಅಧ್ಯಯನಕ್ಕಾಗಿ ೧.೮.೨೦೨೦ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ  ಪರೀಕ್ಷಣೆಯ ನಿರೀಕ್ಷಣೆಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡುತ್ತಿರುವ ಶ್ರೀ. ಆಶಿಷ ಸಾವಂತ

 

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ

೧ ಅ. ನಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿನ ನಿರೀಕ್ಷಣೆಯ ವಿಶ್ಲೇಷಣೆ : ಅಲೋಪಥಿಕ್ ಮಾತ್ರೆಗಳಲ್ಲಿ ‘ಇನ್ಫ್ರಾ ರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ರೀತಿಯ ನಕಾರಾತ್ಮಕ ಶಕ್ತಿ ಇತ್ತು. ಹೋಮಿಯೋಪಥಿಕ್ ಮತ್ತು  ಆಯುರ್ವೇದೀಯ ಮಾತ್ರೆಗಳಲ್ಲಿ ನಕಾರಾತ್ಮಕ ಶಕ್ತಿ ಕಂಡು ಬರಲಿಲ್ಲ.

೧ ಆ. ಸಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿನ ನಿರೀಕ್ಷಣೆಯ ವಿಶ್ಲೇಷಣೆ : ಅಲೋಪಥಿಕ್ ಮಾತ್ರೆಗಳಲ್ಲಿ ಸಕಾರಾತ್ಮಕ ಶಕ್ತಿ ಕಂಡು ಬರಲಿಲ್ಲ. ಹೋಮಿಯೋಪಥಿಕ್ ಮಾತ್ರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮತ್ತು ಆಯುರ್ವೇದಿಯ ಮಾತ್ರೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿಯಿತ್ತು. ಮೇಲಿನ ವಿಶ್ಲೇಷಣೆಯು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೧ ಇ. ಜಿಗಣೆಯು ಔಷಧಿಯ ಮಾತ್ರೆಗಳಿಗೆ ನೀಡಿದ ಸ್ಪಂದನೆ ಮತ್ತು ಅದರ ಮೇಲಾಗಿರುವ ಪರಿಣಾಮ : ಪ್ರಯೋಗದಲ್ಲಿ ಒಂದು ಗಾಜಿನ ಪೆಟ್ಟಿಗೆಯಲ್ಲಿ ನೆಗಡಿ(ಶೀತ) ಕಡಿಮೆಯಾಗಲು ನೀಡಲಾಗುವ ಅಲೋಪಥಿಕ್, ಹೋಮಿಯೋಪಥಿಕ್ ಮತ್ತು ಆಯುರ್ವೇದೀಯ ಔಷಧಿಗಳ ಮಾತ್ರೆಗಳನ್ನು ಸ್ವಲ್ಪ ಸ್ವಲ್ಪ ಅಂತರದಲ್ಲಿ ಇಡಲಾಗಿತ್ತು. ಜಿಗಣೆಯನ್ನು ಪೆಟ್ಟಿಗೆಯಲ್ಲಿ ಬಿಟ್ಟಾಗ ಅದು ಮೊದಲು ಆಯುರ್ವೇದೀಯ ಮಾತ್ರೆಯ ಬಳಿ ಹೋಯಿತು ಮತ್ತು ಅದನ್ನು ಸ್ಪರ್ಶಿಸಿತು. ತದನಂತರ ಅದು ಆಯುರ್ವೇದೀಯ ಮತ್ತು ಹೋಮಿಯೋಪಥಿಕ್ ಮಾತ್ರೆಗಳ ಮಧ್ಯದಿಂದ ಹೋಯಿತು. ತದನಂತರ ಅದು ಅಲೋಪಥಿಕ್ ಔಷಧಿಗಳ ಮಾತ್ರೆಯ ಬಳಿ ಹೋಯಿತು ಮತ್ತು ಅದನ್ನು ಸ್ಪರ್ಶಿಸಿತು. ಒಟ್ಟು ೨೦ ನಿಮಿಷಗಳ ಪ್ರಯೋಗದಲ್ಲಿ ಜಿಗಣೆ ಹೆಚ್ಚು ಹೊತ್ತು ಆಯುರ್ವೇದೀಯ ಮಾತ್ರೆಯ ಬಳಿ ನಿಲ್ಲುತ್ತಿರುವುದು ಗಮನಕ್ಕೆ ಬಂದಿತು. ಜಿಗಣೆಯಲ್ಲಿ ನಕಾರಾತ್ಮಕ ಶಕ್ತಿಯಿರಲಿಲ್ಲ, ಸಕಾರಾತ್ಮಕ ಶಕ್ತಿಯಿತ್ತು. ಅದರ ಪ್ರಭಾವಲಯ ೨.೮೦ ಮೀಟರ್ ಇತ್ತು. ಪ್ರಯೋಗದ ಬಳಿಕ ಅದರ ಸಕಾರಾತ್ಮಕ ಶಕ್ತಿಯಲ್ಲಿ ೦.೩೦ ಮೀಟರ್‌ಗಳಷ್ಟು  ಹೆಚ್ಚಾಗಿ ಅದು ೩.೧೦ ಮೀಟರ್ ಆಯಿತು.

೨. ಪರೀಕ್ಷಣೆಯ ಫಲಿತಾಂಶ

ಆಯುರ್ವೇದೀಯ ಔಷಧಿಗಳ ಮಾತ್ರೆಯಿಂದ ಪ್ರಕ್ಷೇಪಿತವಾಗುವ ಸತ್ತ್ವಪ್ರಧಾನ ಸ್ಪಂದನಗಳಿಂದ ಜಿಗಣೆ ಆಯುರ್ವೇದೀಯ ಮಾತ್ರೆಯ ಹತ್ತಿರ ಅಧಿಕ ಸಮಯ ನಿಂತುಕೊಂಡಿತ್ತು. ಪರೀಕ್ಷಣೆಯ ಬಳಿಕ ಅದರ ಸಕಾರಾತ್ಮಕ ಶಕ್ತಿಯಲ್ಲಿ ಸ್ವಲ್ಪ ಹೆಚ್ಚಳವಾಯಿತು. ಮೇಲಿನ ಎಲ್ಲ ಅಂಶಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩ರಲ್ಲಿ ನೀಡಲಾಗಿದೆ.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ಆಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆ

೩ ಅ. ಪರೀಕ್ಷಣೆಯಲ್ಲಿನ ಅಲೋಪಥಿಕ್ ಮಾತ್ರೆಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದರ ಕಾರಣಗಳು : ಅಲೋಪಥಿಕ್ ಉಪಚಾರ ಪದ್ಧತಿಯಲ್ಲಿ ರೋಗದ ಮೂಲ ಕಾರಣವನ್ನು ಕಂಡುಹಿಡಿದು ಅದರ ಮೇಲೆ ಉಪಚಾರವನ್ನು ಮಾಡದೇ ಕೇವಲ ರೋಗಿಗೆ ಆಗಿರುವ ರೋಗವನ್ನು ದೂರಗೊಳಿಸಲು ಅವನಿಗೆ ಔಷಧಿಗಳನ್ನು ನೀಡಲಾಗುತ್ತದೆ. ಅನೇಕ ಸಂಶೋಧನೆಗಳಿಂದ ಅಲೋಪಥಿಕ್ ಔಷಧಿಗಳಲ್ಲಿರುವ ರಾಸಾಯನಿಕ ಘಟಕಗಳಿಂದ ಅವು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎನ್ನುವುದು ಸಿದ್ಧಗೊಂಡಿದೆ. ಕೆಲವು ಸಲ ಅದರಲ್ಲಿರುವ ರಾಸಾಯನಿಕ ಘಟಕಗಳಿಂದ ದೇಹದಲ್ಲಿರುವ ವಿಷಾಣುಗಳು ತಕ್ಷಣವೇ ಸಾಯುತ್ತವೆ; ಆದರೆ ಅದರಿಂದ ದೇಹದ ಮೇಲೆ ದೂರಗಾಮಿ ನಕಾರಾತ್ಮಕ ಪರಿಣಾಮಗಳೂ ಆಗಬಹುದು, ಅಲ್ಲದೇ ಅವುಗಳಿಂದ ತಮೋಗುಣಿ ಸ್ಪಂದನಗಳ ಪ್ರಕ್ಷೇಪಣೆಯಾಗುತ್ತದೆ. ಪರೀಕ್ಷಣೆಯಲ್ಲಿನ ಅಲೋಪಥಿಕ್ ಮಾತ್ರೆಯಲ್ಲಿ ತಮೋ ಗುಣಿ (ತೊಂದರೆದಾಯಕ) ಸ್ಪಂದನಗಳಿರುವುದರಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾದವು.

೩ ಆ. ಪರೀಕ್ಷಣೆಯಲ್ಲಿನ ಹೋಮಿಯೋಪಥಿಕ್ ಮಾತ್ರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹಾಗೆಯೇ ಆಯುರ್ವೇದೀಯ ಮಾತ್ರೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳಿರುವುದರ ಕಾರಣ : ‘ಹೋಮಿಯೋಪಥಿಕ್ ಉಪಚಾರ ಪದ್ಧತಿಯಲ್ಲಿ ರೋಗಿಯ ರೋಗವನ್ನು ನಿವಾರಿಸಲು ಅವನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ ಮತ್ತು ಅದಕ್ಕನುಸಾರ ಅವನಿಗೆ ಔಷಧಿಗಳನ್ನು ನೀಡಲಾಗುತ್ತದೆ. ಈ ಔಷಧಿಗಳನ್ನು ಪಶು, ವನಸ್ಪತಿ, ಖನಿಜ ಮತ್ತು ಸಿಂಥೆಟಿಕ್ ಪದಾರ್ಥಗಳಿಂದ ತಯಾರಿಸಲಾಗಿರುತ್ತದೆ. (ಆಧಾರ: ಜಾಲತಾಣ).

ಆಯುರ್ವೇದೀಯ ಉಪಚಾರ ಪದ್ಧತಿಯಲ್ಲಿ ರೋಗಿಯ ರೋಗದ ಮೂಲ ಕಾರಣವನ್ನು ಕಂಡುಹಿಡಿದು ರೋಗಿಯ ಪ್ರಕೃತಿಗನುಸಾರ (ವಾತ, ಪಿತ್ತ ಮತ್ತು ಕಫ) ಉಪಚಾರವನ್ನು ಮಾಡಲಾಗುತ್ತದೆ. ರೋಗಿಗೆ ಆಯುರ್ವೇದೀಯ ಔಷಧಗಳನ್ನು ನೀಡುವುದರೊಂದಿಗೆ ಯೋಗ್ಯ ಆಹಾರ-ವಿಹಾರ, ಅಲ್ಲದೇ ಪಥ್ಯ-ಅಪಥ್ಯ ಇತ್ಯಾದಿಗಳ ಸಂದರ್ಭದಲ್ಲಿಯೂ ಮಾರ್ಗದರ್ಶನ ಮಾಡಲಾಗುತ್ತದೆ. ಆಯುರ್ವೇದೀಯ ಔಷಧಗಳು ದೇಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ. ಅಲ್ಲದೇ ರೋಗಗಳು ಮೂಲದಿಂದಲೇ ನಾಶವಾಗುತ್ತವೆ. ಆಯುರ್ವೇದಿಯ ಔಷಧಗಳಿಂದ ಪ್ರಕ್ಷೇಪಿಸುವ ಸತ್ತ್ವ ಪ್ರಧಾನ ಸ್ಪಂದನಗಳಿಂದ ಮತ್ತು ಆಯುರ್ವೇದೀಯ ಔಷಧಿಗಳಲ್ಲಿರುವ ನೈಸರ್ಗಿಕ ಘಟಕಗಳಿಂದ ಅವು ಆರೋಗ್ಯಕ್ಕೆ ಹಿತಕರವಾಗಿರುತ್ತವೆ. ಪರೀಕ್ಷಣೆಯಲ್ಲಿನ ಹೋಮಿಯೋಪಥಿ ಮಾತ್ರೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮತ್ತು ಆಯುರ್ವೇದೀಯ ಮಾತ್ರೆಯಲ್ಲಿ ಅಧಿಕ ಪ್ರಮಾಣದಲ್ಲಿ ಸಾತ್ತ್ವಿಕ ಸ್ಪಂದನಗಳಿರುವುದರಿಂದ ಅವುಗಳಿಂದ ಆಯಾ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಲ್ಪಟ್ಟವು.

೩ ಇ. ಜಿಗಣೆಗೆ ಮೂರೂ ಪ್ರಕಾರದ ಔಷಧಗಳ ಮಾತ್ರೆಗಳಿಂದ ಪ್ರಕ್ಷೇಪಿತವಾಗುವ ನಕಾರಾತ್ಮಕ ಅಥವಾ ಸಕಾರಾತ್ಮಕ ಸ್ಪಂದನಗಳನ್ನು ಗುರುತಿಸಲು ಸಾಧ್ಯವಾಗಿದ್ದರಿಂದ ಅದು ಅದಕ್ಕನುಗುಣವಾಗಿ ಪ್ರತಿಸ್ಪಂದಿಸುವುದು : ಪರೀಕ್ಷಣೆಯಲ್ಲಿನ ಹೋಮಿಯೋಪಥಿಕ್ ಮಾತ್ರೆಯಿಂದ ಅಲ್ಪ ಪ್ರಮಾಣದಲ್ಲಿ, ಆಯುರ್ವೇದೀಯ ಮಾತ್ರೆಯಿಂದ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿವೆ. ಇದನ್ನು ಜಿಗಣೆಗೆ ಸರಿಯಾಗಿ ಗುರುತಿಸಲು ಸಾಧ್ಯವಾಯಿತು. ಇದರಿಂದ ಅದು ಮೊದಲು ಆಯುರ್ವೇದೀಯ ಔಷಧಿಗಳ ಮಾತ್ರೆಯ ಹತ್ತಿರ ಹೋಯಿತು. ತದನಂತರ ಅದು ಆಯುರ್ವೇದೀಯ ಮತ್ತು ಹೋಮಿಯೋಪಥಿಕ್ ಮಾತ್ರೆಗಳ ಮಧ್ಯದಿಂದ ಹೋಯಿತು. ಜಿಗಣೆಯು ಆಲೋಪಥಿಕ್ ಮಾತ್ರೆಯನ್ನು ಸ್ಪರ್ಶಿಸಿತು. ಅದಕ್ಕೆ ಅದರಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು ಗಮನಕ್ಕೆ ಬಂದಿದ್ದರಿಂದ ಅದು ಆ ಮಾತ್ರೆಯ ಹತ್ತಿರ ನಿಲ್ಲಲಿಲ್ಲ. ಒಟ್ಟು ೨೦ ನಿಮಿಷಗಳ ಪ್ರಯೋಗದಲ್ಲಿ ಜಿಗಣೆ ಅಧಿಕ ಸಮಯ ಆಯುರ್ವೇದೀಯ ಮಾತ್ರೆಯ ಹತ್ತಿರ ನಿಲ್ಲುತ್ತಿತ್ತು. ಪ್ರಯೋಗದ ಬಳಿಕ ಜಿಗಣೆಯ ಸಕಾರಾತ್ಮಕ ಶಕ್ತಿಯಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಯಿತು. ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಶಕ್ತಿ ಇದ್ದೇ ಇರುತ್ತದೆ ಎಂದೇನಿಲ್ಲ. ಜಿಗಣೆಯಲ್ಲಿ ೩.೧೦ ಮೀಟರ್‌ಗಳಷ್ಟು ಅಂದರೆ ಅಧಿಕ ಸಕಾರಾತ್ಮಕ ಶಕ್ತಿಯಿರುವುದು ಮತ್ತು ಅದು ಮೂರು ಮಾತ್ರೆಗಳಿಗೆ ನೀಡಿದ ಸ್ಪಂದನಗಳನ್ನು ನೋಡಿ, ಅದು ಸಾಧಾರಣ ಪ್ರಾಣಿಯಾಗಿರದೇ ಸಾತ್ತ್ವಿಕ ಜೀವವಾಗಿರುವುದು ಅರಿವಾಗುತ್ತದೆ. ಈ ಜಿಗಣೆಯಲ್ಲಿ ಸೂಕ್ಷ್ಮದಲ್ಲಿ ಅರಿಯುವ ಕ್ಷಮತೆಯಿರುವುದರಿಂದ ಅದಕ್ಕೆ ಮೂರು ಪ್ರಕಾರದ ಔಷಧಿಗಳ ಮಾತ್ರೆ ಗಳಿಂದ ಪ್ರಕ್ಷೇಪಿತಗೊಳ್ಳುವ ನಕಾರಾತ್ಮಕ ಅಥವಾ ಸಕಾರಾತ್ಮಕ ಸ್ಪಂದನಗಳನ್ನು ಗುರುತಿಸಲು ಸಾಧ್ಯವಾಯಿತು.

೩ ಈ. ಮಾನವನನ್ನು ಹೊರತುಪಡಿಸಿ ಇತರ ಯೋನಿಗಳಲ್ಲಿನ ಸಾತ್ತ್ವಿಕ ಜೀವಗಳಿಗೆ ಸಾತ್ತ್ವಿಕತೆಯ ಸೆಳೆತವಿರುವುದರಿಂದ ಅವು ಸನಾತನದ ಆಶ್ರಮದ ಸಾತ್ತ್ವಿಕ ವಾತಾವರಣದ ಕಡೆಗೆ ಆಕರ್ಷಿಸಲ್ಪಟ್ಟು ದೇಹವನ್ನು ಬಿಡುವುದು : ಕೆಲವು ಸಾಧಕ ಜೀವಗಳು ಮಾನವೇತರ ಯೋನಿಗಳಲ್ಲಿ (ಪಶು-ಪಕ್ಷಿ ಮತ್ತು ವನಸ್ಪತಿ) ಜನ್ಮ ಪಡೆದು ಅವುಗಳ ಪ್ರಾರಬ್ಧದ ಭೋಗವನ್ನು ಅನುಭವಿಸಿ ಮುಗಿಸುತ್ತವೆ. ಅವು ಸಾತ್ತ್ವಿಕ ಸ್ಥಳದಲ್ಲಿ ಮತ್ತು ಸಾತ್ತ್ವಿಕ ವ್ಯಕ್ತಿಗಳ ಕಡೆಗೆ ಸಹಜವಾಗಿ ಆಕರ್ಷಿಸಲ್ಪಡುತ್ತವೆ ಮತ್ತು ಅವರ ಸಹವಾಸದಲ್ಲಿರುತ್ತವೆ. ಸನಾತನದ ಆಶ್ರಮದಲ್ಲಿರುವ ಸಾತ್ತ್ವಿಕತೆಯಿಂದ ಕೆಲವು ಪ್ರಾಣಿ ಮತ್ತು ಪಕ್ಷಿ, ಉದಾ. ಪಾತರಗಿತ್ತಿ, ಜಿಗಣೆ ಇತ್ಯಾದಿ ಆಶ್ರಮದಲ್ಲಿ ತಾವಾಗಿಯೇ ಬರುತ್ತವೆ. ಅವು ಆಶ್ರಮದಲ್ಲಿರುವ ಸಾಧಕರು ಮತ್ತು ಸಂತರ ಸಹವಾಸದಲ್ಲಿರುತ್ತವೆ ಮತ್ತು ಕೆಲವು ದಿನಗಳ ಬಳಿಕ ಕೆಲವು ಅಲ್ಲಿಯೇ ಪ್ರಾಣ ಬಿಡುತ್ತವೆ ಎನ್ನುವುದು ಗಮನಕ್ಕೆ ಬಂದಿದೆ. ಸಾತ್ತ್ವಿಕ ಸ್ಥಳದಲ್ಲಿ ಪ್ರಾಣತ್ಯಾಗ ಮಾಡಿದರೆ ಅವುಗಳಿಗೆ ಒಳ್ಳೆಯ ಗತಿ ಪ್ರಾಪ್ತವಾಗುತ್ತದೆ. ಸನಾತನದ ಆಶ್ರಮದ ಪ್ರವೇಶದ್ವಾರದ ಬಳಿ ಸಿಕ್ಕ ಜಿಗಣೆ ಇದರ ಒಂದು ಉದಾಹರಣೆಯಾಗಿದೆ. ಅದು ಸನಾತನದ ಆಶ್ರಮದಲ್ಲಿ ಬಂದು ಪ್ರಯೋಗದಲ್ಲಿ ಭಾಗವಹಿಸಿ ದೇವರ ಚರಣಗಳಲ್ಲಿ ತನ್ನ ಸೇವೆಯನ್ನು ಅರ್ಪಿಸಿತು. ೨.೮.೨೦೨೦ ರಂದು ಅದು ಆಶ್ರಮದಲ್ಲಿಯೇ ಪ್ರಾಣ ಬಿಟ್ಟಿತು. ಆದುದರಿಂದ ಅದಕ್ಕೆ ಒಳ್ಳೆಯಗತಿ ದೊರಕಿತು. – ಡಾ. ಅಮಿತ ಭೋಸಲೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಮೀರಜ. (೧೪.೯.೨೦೨೦)

ಇ- ಮೇಲ್: [email protected]