ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಸಂಶೋಧನೆ ‘ಸೋಶಿಯಲ್ ಮೀಡಿಯಾ ನೋಡುವುದರಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಾಗುವ ಹಾನಿಕರ ಪರಿಣಾಮಗಳು !
‘ಸೋಶಿಯಲ್ ಮೀಡಿಯಾದ ಅಂತರ್ಗತ ಬರುವ ‘ಫೇಸಬುಕ್ (ಟಿಪ್ಪಣಿ ೧) ಜಗತ್ತಿನಾದ್ಯಂತ ಮನೆ ಮನೆ ತಲುಪುವ ಒಂದು ಮಾಧ್ಯಮವಾಗಿದೆ. ಜಗತ್ತಿನಾದ್ಯಂತ ‘ಫೇಸ್‌ಬುಕ್ ಉಪಯೋಗಿಸುವವರನ್ನು ಒಟ್ಟು ಗೂಡಿಸಿದರೆ ಕೇವಲ ಒಂದು ದಿನಕ್ಕೆ ಸರಾಸರಿ ೯.೫ ಕೋಟಿ ಗಂಟೆಗಳನ್ನು (ಅಂದರೆ ೧ ಲಕ್ಷ ೮ ಸಾವಿರ ವರ್ಷಗಳನ್ನು) ವ್ಯರ್ಥ ಮಾಡುತ್ತಾರೆ.
ಟಿಪ್ಪಣಿ ೧– ‘ಫೇಸ್‌ಬುಕ್, ಇದೊಂದು ಸಾಮಾಜಿಕ ಜಾಲತಾಣ (ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್) ಆಗಿದೆ. ಈ ಜಾಲತಾಣದ ಮಾಧ್ಯಮದಿಂದ ನಮಗೆ ನಮ್ಮ ಕುಟುಂಬ ವರ್ಗದವರ ಮತ್ತು ಮಿತ್ರ ಪರಿವಾರದವರೊಂದಿಗೆ ಉಚಿತವಾಗಿ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ. ಸದ್ಯ ಜಗತ್ತಿನಾದ್ಯಂತ ೧ ಅಬ್ಜಕ್ಕಿಂತ ಅಧಿಕ ವ್ಯಕ್ತಿಗಳು ‘ಫೇಸ್‌ಬುಕ್ ಉಪಯೋಗಿಸುತ್ತಿದ್ದಾರೆ. ಫೇಸ್‌ಬುಕ್ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿರುವ ಅಂಕಿಅಂಶಗಳಿಂದ ಮುಂದಿನ ಎರಡು ಅಂಶಗಳು ಸ್ಪಷ್ಟವಾಗುತ್ತವೆ.
೧. ಸೋಶಿಯಲ್ ಮೀಡಿಯಾಗಳು (ಸಾಮಾಜಿಕ ಜಾಲತಾಣಗಳು) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ.
೨. ನಮ್ಮ ಜೀವನದ ಮೇಲೆ ಈ ಮಾಧ್ಯಮಗಳ ಪ್ರಭಾವ ಅತ್ಯಧಿಕವಿದೆ.
ಈ ಮಾಧ್ಯಮಗಳಿಗೆ ಇಷ್ಟು ಸಮಯವನ್ನು ವ್ಯಯಿಸುವುದು ಸಮಾಜಕ್ಕೆ ಯೋಗ್ಯವಾಗಿದೆಯೇ ? ‘ಈ ಮಾಧ್ಯಮಗಳಿಂದ ನಮ್ಮ ಮೇಲೆ ಸೂಕ್ಷ್ಮ (ಟಿಪ್ಪಣಿ ೨) ಸ್ತರದಲ್ಲಿ ಏನು ಪರಿಣಾಮವಾಗುತ್ತದೆ ಎನ್ನುವುದನ್ನು ಆಧುನಿಕ ವ್ಶೆಜ್ಞಾನಿಕ ಉಪಕರಣ ಮತ್ತು ಸೂಕ್ಷ್ಮ ಪರೀಕ್ಷಣೆಗಳ ಮಾಧ್ಯಮದಿಂದ ತಿಳಿದುಕೊಳ್ಳಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ಫಲಿತಾಂಶವನ್ನು ಸಂಕ್ಷಿಪ್ತ ರೂಪದಲ್ಲಿ ಇಲ್ಲಿ ನೀಡುತ್ತಿದ್ದೇವೆ.
ಟಿಪ್ಪಣಿ ೨ – ‘ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳ ಆಚೆಗಿರುವುದನ್ನು ಸೂಕ್ಷ್ಮ ಎನ್ನುತ್ತಾರೆ.
೧. ಸೋಶಿಯಲ್ ಮೀಡಿಯಾ ನೋಡುವುದರಿಂದಾಗುವ ಲಾಭ ಮತ್ತು ಹಾನಿ
ಸೋಶಿಯಲ್ ಮೀಡಿಯಾ ಸ್ನೇಹಿತರ ಸಂಪರ್ಕದಲ್ಲಿರಲು ಸಹಜ, ಸರಳ ಸಾಧನವಾಗಿದೆ. ಇದರಿಂದ ಜಗತ್ತಿನಾದ್ಯಂತ ಹರಡಿರುವ ನಮ್ಮ ಕುಟುಂಬವರ್ಗದವರು, ವಿದ್ಯಾಲಯ-ವಿಶ್ವವಿದ್ಯಾಲಯಗಳ ನಮ್ಮ ಸ್ನೇಹಿತರು, ನೌಕರಿ-ಉದ್ಯೋಗ ಕ್ಷೇತ್ರದ ನಮ್ಮ ಸಹೋದ್ಯೋಗಿಗಳೊಂದಿಗೆ ಈಗ ನಾವು ಸಂಪರ್ಕದಲ್ಲಿದ್ದೇವೆ. ಸೋಶಿಯಲ್ ಮೀಡಿಯಾದ ಆಗಮನದ ಮೊದಲು ಜನಸಾಮಾನ್ಯರಿಗೆ ಇದು ಸಾಧ್ಯವಿರಲಿಲ್ಲ. ಈ ಲಾಭವಾಗುತ್ತಿದ್ದರೂ ಸೋಶಿಯಲ್ ಮೀಡಿಯಾದ ವಿಷಯದಲ್ಲಿ ನಡೆಸಿದ ಸಮೀಕ್ಷೆಯಿಂದ ಅದರಿಂದಾಗುತ್ತಿರುವ ಮುಂದೆ ತಿಳಿಸಿರುವ ಹಾನಿಗಳು ಗಮನಕ್ಕೆ ಬಂದಿದೆ.
ಅ. ಸಂಯಮವಿಲ್ಲದಿರುವುದು
ಆ. ಮನಸ್ಸಿನ ಏಕಾಗ್ರತೆ ನಾಶವಾಗುವುದು
ಇ. ಯಾವುದೇ ಕಾರ್ಯವನ್ನು ತಕ್ಷಣ ಕೈಗೊಳ್ಳದಿರುವುದು. (ಮುಂದೂಡುವುದು)
ಈ. ‘ಶೀಘ್ರ ಸುಖ ಪಡೆದುಕೊಳ್ಳುವ (instant gratification) ಸೆಳೆತ ಉತ್ಪನ್ನವಾಗುವುದು.
ಉ. ‘ಇತರರೊಂದಿಗೆ ತುಲನೆ ಮಾಡುವ ಪ್ರವೃತ್ತಿ ಹೆಚ್ಚಾಗುವುದು
ಊ. ನೈಜ ಪರಿಸ್ಥಿತಿಯ ಅರಿವು ಕಡಿಮೆಯಾಗುವುದು
ಎ. ಆಳವಾದ, ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸುವ ಕ್ಷಮತೆ ಕಡಿಮೆಯಾಗುವುದು.
ಏ. ಉದಾಸೀನ ವೃತ್ತಿಯಲ್ಲಿ ಹೆಚ್ಚಳವಾಗುವುದು.
೨. ಸೋಶಿಯಲ್ ಮೀಡಿಯಾದಿಂದ ಸೂಕ್ಷ್ಮ ಸ್ತರದಲ್ಲಾಗುವ ಪರಿಣಾಮಗಳ ಬಗ್ಗೆ ಆಧುನಿಕ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ನಡೆಸಲಾದ ಅಧ್ಯಯನ
ಇದಕ್ಕಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಆಧುನಿಕ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ಸಂಶೋಧನೆಯನ್ನು ನಡೆಸಲಾಯಿತು.
೨ ಅ. ಪ್ರಯೋಗದ ಮಂಡನೆ : ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಸಂಶೋಧನಾ ಕೇಂದ್ರದಲ್ಲಿ ವಾಸ್ತವ್ಯವಿರುವ ೫ ಜನ ಸಾಧಕಿಯರು ಪರೀಕ್ಷಣೆಯಲ್ಲಿ ಭಾಗವಹಿಸಿದ್ದರು. ಪರೀಕ್ಷಣೆಯನ್ನು ಪ್ರಾರಂಭಿಸುವ ಮೊದಲು ‘ಯೂ.ಎ.ಎಸ್ ನಿಂದ ಅವರ ಸ್ಥಿತಿಯ ನೋಂದಣಿ ಮಾಡಲಾಯಿತು. ಈ ನೋಂದಣಿಯು ಅವರ ‘ಮೂಲಭೂತ ಸ್ಥಿತಿ (ಬೇಸಲೈನ್ ರೀಡಿಂಗ್) ತೋರಿಸುತ್ತದೆ. ತದನಂತರ ಪ್ರತಿಯೊಬ್ಬ ಸಾಧಕಿಗೆ ಅವರು ಯಾವಾಗಲೂ ನೋಡುತ್ತಿದ್ದ ಸೋಶಿಯಲ್ ಮೀಡಿಯಾವನ್ನು ೧ ಗಂಟೆ ಕಾಲ ನೋಡಲು ಹೇಳಲಾಯಿತು. ನಂತರ ‘ಯೂ.ಎ.ಎಸ್. ಉಪಕರಣದಿಂದ ಅವರ ಸ್ಥಿತಿಯನ್ನು ಅಳೆಯಲಾಯಿತು. ಈ ನೊಂದಣಿಯು ‘ಸೋಶಿಯಲ್ ಮೀಡಿಯಾ ವೀಕ್ಷಿಸುವ ಸಾಧಕಿಯರ ಮೇಲಾಗುವ ಪರಿಣಾಮಗಳನ್ನು ದರ್ಶಿಸುತ್ತದೆ. ಈ ಪರೀಕ್ಷಣೆಯ ಅಳತೆಯ ನೋಂದಣಿಯನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
ಮೇಲಿನ ಅಂಕಿಅಂಶಗಳಿಂದ ಸೋಶಿಯಲ್ ಮೀಡಿಯಾ ವೀಕ್ಷಣೆಯಿಂದ ಮುಂದಿನಂತೆ ಪರಿಣಾಮಗಳಾದುದು ಗಮನಕ್ಕೆ ಬರುತ್ತವೆ.
೧. ಸೋಶಿಯಲ್ ಮೀಡಿಯಾ ನೋಡುವ ಮೊದಲು ಕ್ರ. ೧, ೩ ಮತ್ತು ೪ ರ ಸಾಧಕಿಯರಲ್ಲಿ ಇದ್ದ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗಿದ್ದು, ಕ್ರ. ೫ ರ ಸಾಧಕಿಯಲ್ಲಿ ವೀಕ್ಷಿಸುವ ಮೊದಲು ಇಲ್ಲದ ನಕಾರಾತ್ಮಕ ಶಕ್ತಿ ವೀಕ್ಷಿಸಿದ ಬಳಿಕ ಉತ್ಪನ್ನವಾಯಿತು.
೨. ಸಾಧಕಿ ಕ್ರ. ೨ ಮತ್ತು ೫ ರಲ್ಲಿ ಸೋಶಿಯಲ್ ಮೀಡಿಯಾ ವೀಕ್ಷಿಸುವ ಮೊದಲು ಇದ್ದ ಸಕಾರಾತ್ಮಕ ಶಕ್ತಿಯು ವೀಕ್ಷಿಸಿದ ಬಳಿಕ ಕಡಿಮೆಯಾಯಿತು.
೨ ಅ. ಸೋಶಿಯಲ್ ಮೀಡಿಯಾದಿಂದ ಸೂಕ್ಷ್ಮ ಸ್ತರದಲ್ಲಾಗುವ ಪರಿಣಾಮಗಳ ಅಧ್ಯಯನವನ್ನು ನಡೆಸಲು ಪರೀಕ್ಷಣೆಯಲ್ಲಿ ಭಾಗವಹಿಸಿದ್ದ ಸಾಧಕಿಯರಿಗೆ ಬಂದ ಅನುಭವ : ಮಾಯೆಯ ವಿಚಾರಗಳಲ್ಲಿ ಹೆಚ್ಚಳವಾಗುವುದು, ‘ನಾನು ಕಳುಹಿಸಿದ ವಿಷಯ (ಪೋಸ್ಟ್) ಜನರಿಗೆ ಇಷ್ಟವಾಗುತ್ತಿದೆಯೇ ?, ಎಂಬ ಅಹಂಯುಕ್ತ ವಿಚಾರ ಬರುವುದು, ಬೇಸರವಾಗುವುದು; ಆದರೆ ನೋಡುವುದನ್ನು ನಿಲ್ಲಿಸಲು ಸಾಧ್ಯವಾಗದಿರುವುದು, ಖಾಲಿಯಾಗಿರುವಂತೆ ಅನಿಸುವುದು, ಉದಾಸೀನತೆ, ಎಲ್ಲಕ್ಕಿಂತ ಮಹತ್ವದ್ದೆಂದರೆ ಸಾಧನೆಯ ಪ್ರಯತ್ನಗಳ ಬಗ್ಗೆ ಸಾಧಕಿಯರಲ್ಲಿ ಗಮನಕ್ಕೆ ಕಮ್ಮಿ ಬರುವುದು ಅಥವಾ ಅವರಿಗೆ ಸಾಧನೆ ನಿಲ್ಲಿಸುವ ವಿಚಾರ ಬರುವುದು
೨ ಆ. ಸೋಶಿಯಲ್ ಮೀಡಿಯಾದ ಸೂಕ್ಷ್ಮ ಸ್ತರದಲ್ಲಿನ ಪರಿಣಾಮಗಳನ್ನು ಸೂಕ್ಷ್ಮ ಪರೀಕ್ಷಣೆಯ ಮಾಧ್ಯಮದಿಂದ ನಡೆಸಿದ ಅಧ್ಯಯನ : ಯಾವುದೇ ಘಟನೆಯ ಬಗ್ಗೆ ಸೂಕ್ಷ್ಮ ಸ್ತರದಲ್ಲಾಗುವ ಪರಿಣಾಮವನ್ನು ನೈಜ ಅರ್ಥದಿಂದ ಕೇವಲ ಸೂಕ್ಷ್ಮ ಪರೀಕ್ಷಣೆಯಿಂದ ಅರಿತುಕೊಳ್ಳಬಹುದು. ಇದಕ್ಕಾಗಿ ಪ್ರಾತಿನಿಧಿಕ ರೂಪದಲ್ಲಿ ಫೇಸ್‌ಬುಕ್ ಈ ಸೋಶಿಯಲ್ ಮೀಡಿಯಾವನ್ನು ನೋಡುವ ಸಾಮಾನ್ಯ ವ್ಯಕ್ತಿಯ ಮೇಲಾಗುವ ಸೂಕ್ಷ್ಮದ ಪರಿಣಾಮದ ಅಧ್ಯಯನವನ್ನು ‘ಎಸ್.ಎಸ್.ಆರ್.ಎಫ್ನ (ಟಿಪ್ಪಣಿ ೩) ಸೂಕ್ಷ್ಮ ಪರೀಕ್ಷಣೆ ಮಾಡುವ ಕ್ಷಮತೆಯಿರುವ ಯುರೋಪ್‌ನ ಸಾಧಕಿ ಸೌ. ಯೋಯಾ ವಾಲೆಯವರು ಮಾಡಿದರು. ಅವರ ಗಮನಕ್ಕೆ ಬಂದ ಅಂಶಗಳು ಮುಂದಿನಂತಿವೆ.
ಟಿಪ್ಪಣಿ ೩ – ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್ (ಎಸ್.ಎಸ್.ಆರ್.ಎಫ್.) ಪರಾತ್ಪರ ಗುರು ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಸ್ಥಾಪನೆಯಾಗಿದೆ ಮತ್ತು ಆಸ್ಟ್ರೇಲಿಯಾ, ಯುರೋಪ್ ಮತ್ತು ಅಮೇರಿಕಾದಲ್ಲಿ ನೋಂದಾಯಿತ ಸರಕಾರೇತರ ಸಂಸ್ಥೆಯಾಗಿದೆ
೧. ಫೇಸ್‌ಬುಕ್ ಮಾಧ್ಯಮದಿಂದ ತೊಂದರೆದಾಯಕ ಮತ್ತು ಮಾಯಾವಿ ಶಕ್ತಿ ವಲಯವು ಕಣಗಳ ರೂಪದಲ್ಲಿ ವ್ಯಕ್ತಿಗಳೆಡೆಗೆ ಪ್ರಕ್ಷೇಪಿತಗೊಳ್ಳುತ್ತವೆ.
೨. ತೊಂದರೆದಾಯಕ ಮತ್ತು ಮಾಯಾವಿ ಶಕ್ತಿಗಳ ವಲಯ ವ್ಯಕ್ತಿಯ ತಲೆಯ ಸುತ್ತಲೂ ಕಾರ್ಯನಿರತವಿರುತ್ತದೆ. ಇದರಿಂದ ವ್ಯಕ್ತಿಯ ವಿಚಾರ ಮಾಡುವ ಕ್ಷಮತೆ ಕಡಿಮೆಯಾಗುತ್ತದೆ.
೩. ಅವರ ದೇಹದ ಸುತ್ತಲೂ ಬಂದಿರುವ ತೊಂದರೆದಾಯಕ ಮತ್ತು ಮಾಯಾವಿ ಶಕ್ತಿಯ ಆವರಣದಿಂದ ವ್ಯಕ್ತಿಯ ಭಾವನೆಯು ಕಾರ್ಯನಿರತವಾಗಿ ಅವನ ಸ್ಥಿರತೆ ನಾಶವಾಗುತ್ತದೆ. ಹಾಗೂ ವ್ಯಕ್ತಿಯ ಅಹಂ ಕಾರ್ಯನಿರತವಾಗಿ ಅದರ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.
ಮೇಲೆ ಉಲ್ಲೇಖಿಸಿದ ಸೂಕ್ಷ್ಮ ಪ್ರಕ್ರಿಯೆ ಈ ವಿಷಯದಲ್ಲಿರುವ ಸೂಕ್ಷ್ಮಚಿತ್ರದಿಂದ ಸ್ಪಷ್ಟವಾಗಬಹುದು.
೨ ಇ. ಸಾತ್ತ್ವಿಕ ವಿಷಯಗಳಿರುವ ಜಾಲತಾಣಗಳನ್ನು ನೋಡುವುದ ರಿಂದಾಗುವ ಪರಿಣಾಮವನ್ನು ಆಧುನಿಕ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ಮಾಡಿದ ಅಧ್ಯಯನ : ಇದಕ್ಕಾಗಿ ಇಬ್ಬರು ಸಾಧಕಿಯರಿಗೆ ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್ (ಎಸ್.ಎಸ್.ಆರ್.ಎಫ್.) ಫೇಸ್‌ಬುಕ್ ಪುಟವನ್ನು ಅರ್ಧಗಂಟೆ ವೀಕ್ಷಿಸಲು ಹೇಳಲಾಯಿತು. ವೀಕ್ಷಣೆ ಮಾಡುವ ಮೊದಲು ಮತ್ತು ವೀಕ್ಷಿಸಿದ ಬಳಿಕ ಆ ಸಾಧಕಿಯರ ಸ್ಥಿತಿಯ ಅಳತೆ ಮಾಡಿದ ನೋಂದಣಿಯು ಮುಂದಿನಂತಿದೆ.
ಪಕ್ಕದಲ್ಲಿರುವ ಕೋಷ್ಟಕದಿಂದ ಸ್ಪಷ್ಟವಾಗುವುದೇನೆಂದರೆ,
೧. ಯಾವ ಸಾಧಕಿಯಲ್ಲಿ ಪರೀಕ್ಷಣೆಯ ಮೊದಲು ನಕಾರಾತ್ಮಕ ಶಕ್ತಿಯಿತ್ತೋ, ಅದು ಅವಳು ಸಾತ್ತ್ವಿಕ ವಿಷಯಗಳಿರುವ ಸೋಶಿಯಲ್ ಮೀಡಿಯಾ ನೋಡಿದ ಬಳಿಕ ಕಡಿಮೆಯಾಯಿತು.
೨. ಯಾವ ಸಾಧಕಿಯಲ್ಲಿ ಪರೀಕ್ಷಣೆಯ ಮೊದಲು ಸಕಾರಾತ್ಮಕ ಶಕ್ತಿಯಿತ್ತೋ, ಅದು ಅವಳು ಸಾತ್ತ್ವಿಕ ವಿಷಯಗಳಿರುವ ಸೋಶಿಯಲ್ ಮೀಡಿಯಾ ನೋಡಿದ ನಂತರ ತುಂಬಾ ಹೆಚ್ಚಾಯಿತು.
ಈ ಪರೀಕ್ಷಣೆಯಿಂದ ಸೋಶಿಯಲ್ ಮೀಡಿಯಾ ನೋಡುವುದರಿಂದ ನಮ್ಮ ಮೇಲಾಗುವ ಪರಿಣಾಮವು ‘ನಾವು ಅದರ ಮೇಲೆ ಯಾವ ರೀತಿಯ ವಿಷಯಗಳನ್ನು ನೋಡುತ್ತೇವೆ, ಇದನ್ನು ಅವಲಂಬಿಸಿರುತ್ತದೆ, ಎಂಬುದು ಗಮನಕ್ಕೆ ಬರುತ್ತದೆ.
೩. ನಿಷ್ಕರ್ಷ
ಸೋಶಿಯಲ್ ಮೀಡಿಯಾ ನೋಡುವುದರಿಂದ ಮಾನವನ ಮೇಲಾಗುವ ಪರಿಣಾಮದ ಕುರಿತು ಮಾಡಿರುವ ಅಧ್ಯಯನದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
ಅ. ಸೋಶಿಯಲ್ ಮೀಡಿಯಾ ಇದು ಮನೋರಂಜನೆಯ ಇತರ ಮಾಧ್ಯಮಗಳಂತೆಯೇ ಇದೆ. ಅದನ್ನು ನಾವು ಹೇಗೆ ಬಳಸುತ್ತೇವೆ ಮತ್ತು ಏನು ನೋಡುತ್ತೇವೆ ಎನ್ನುವುದರ ಮೇಲೆ ಅದರ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ದುರ್ದೈವದಿಂದ ಬಹುತೇಕ ಸೋಶಿಯಲ್ ಮೀಡಿಯಾಗಳು ನಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿತಗೊಳಿಸುತ್ತವೆ. ಈ ನಕಾರಾತ್ಮಕ ಸ್ಪಂದನಗಳು ಮತ್ತು ಅದಕ್ಕಾಗಿ ನಾವು ವ್ಯರ್ಥ ಮಾಡುವ ಸಮಯ (ಕೇವಲ ಫೇಸಬುಕ್‌ಗೆ ಒಂದು ದಿನದಲ್ಲಿ ೧ ಲಕ್ಷ ೮ ಸಾವಿರ ಗಂಟೆ) ಇದನ್ನು ಲೆಕ್ಕಾಚಾರ ಮಾಡಿದರೆ, ಈ ಮಾಧ್ಯಮ ಮನುಕುಲದ ಮೇಲೆ ಎಷ್ಟು ಪ್ರತಿಕೂಲ ಪರಿಣಾಮ ಬೀರುತ್ತಿದೆಯೆಂದು ನಮ್ಮ ಗಮನಕ್ಕೆ ಬರುತ್ತದೆ !
ಆ. ಭಾರತೀಯ ಸಂಸ್ಕೃತಿಯು ಜೀವನದ ಪ್ರತಿಯೊಂದು ಭಾಗವನ್ನು ಆಧ್ಯಾತ್ಮೀಕರಣಗೊಳಿಸಲು ಕಲಿಸುತ್ತದೆ. ಪ್ರತಿಯೊಂದು ಕೃತಿಯನ್ನು ಆಧ್ಯಾತ್ಮೀಕರಣಗೊಳಿಸುವುದರಿಂದ ಅದರಲ್ಲಿರುವ ಸಕಾರಾತ್ಮಕತೆ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕತೆ ಕಡಿಮೆಯಾಗುತ್ತದೆ. ಇದರ ತದ್ವಿರುದ್ಧ ಸೋಶಿಯಲ್ ಮೀಡಿಯಾ ನಕಾರಾತ್ಮಕತೆಯನ್ನು ಹೆಚ್ಚಿಸುವುದರಿಂದ ಮಾನವನಿಗೆ ಮತ್ತು ಭಾರತೀಯ ಸಂಸ್ಕೃತಿಗೆ ಹಾನಿಕಾರವಾಗಿದೆ.
ಇ. ಪೃಥ್ವಿಯಲ್ಲಿ ನಮ್ಮ ಸಮಯವು ಅಮೂಲ್ಯವಾಗಿದೆ. ದೇವರು ನಮಗೆ ಈ ಸಮಯವನ್ನು ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ನೀಡಿದ್ದಾನೆ. ನಾವು ಮತ್ತು ನಮ್ಮ ಮಕ್ಕಳು ನೋಡುತ್ತಿರುವ ಸೋಶಿಯಲ್ ಮೀಡಿಯಾದ ವಿಷಯಗಳು ಯಾವ ವಿಧದ್ದಾಗಿವೆ ಎನ್ನುವುದರ ಬಗ್ಗೆ ನಾವು ಜಾಗೃತರಾಗಿದ್ದರೆ, ನಾವು ಪ್ರತಿಕೂಲ ವಿಷಯಗಳನ್ನು ವೀಕ್ಷಿಸದೇ ಆಧ್ಯಾತ್ಮಿಕ ಉನ್ನತಿಯೆಡೆಗೆ ಕೊಂಡೊಯ್ಯುವ ವಿಷಯಗಳನ್ನು ನೋಡಲು ಸಾಧ್ಯವಾಗುವುದು. – ಡಾ. (ಸೌ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.