‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು’ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ
ಕಲೆಯ ಬಗ್ಗೆ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ರಂಗೋಲಿಯು ೬೪ ಕಲೆಗಳ ಪೈಕಿ ಒಂದಾಗಿದೆ. ಹಬ್ಬ-ಸಮಾರಂಭಗಳಲ್ಲಿ ಮನೆಮನೆಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ಸೌಂದರ್ಯದ ಸಾಕ್ಷಾತ್ಕಾರ ಮತ್ತು ಮಾಂಗಲ್ಯದ ಸಿದ್ಧಿ ಇವು ರಂಗೋಲಿಯ ಎರಡು ಉದ್ದೇಶಗಳಾಗಿವೆ. ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿದ ಸ್ಥಳದಲ್ಲಿ ತನ್ನಿಂದ ತಾನೆ ಮಂಗಲಮಯ ವಾತಾವರಣವು ಸೃಷ್ಟಿಯಾಗುತ್ತದೆ. ಸನಾತನದ ಸಾಧಕ-ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ದೇವತಾತತ್ತ್ವ ಮತ್ತು ಆನಂದ ಮುಂತಾದ ಸ್ಪಂದನಗಳನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಈ ರಂಗೋಲಿಗಳು ಸನಾತನದ ಗ್ರಂಥ ‘ಸಾತ್ತ್ವಿಕ ರಂಗೋಲಿಗಳು (ಭಾಗ ೧) (ರಂಗೋಲಿಗಳ ಸಾತ್ತ್ವಿಕತೆಯ ಹಿಂದಿನ ಶಾಸ್ತ್ರ ಸಹಿತ)ದಲ್ಲಿ ಕೊಡಲಾಗಿದೆ. ಸಾತ್ತ್ವಿಕ ಮತ್ತು ಅಸಾತ್ತ್ವಿಕ ರಂಗೋಲಿಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಲು ೧೭.೭.೨೦೨೦ ಈ ದಿನದಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಗಳ ವಿವೇಚನೆ – ಅಸಾತ್ತ್ವಿಕ ರಂಗೋಲಿಯಲ್ಲಿ ಬಹಳ ನಕಾರಾತ್ಮಕ ಊರ್ಜೆ ಮತ್ತು ಸಾತ್ತ್ವಿಕ ರಂಗೋಲಿಯಲ್ಲಿ ಬಹಳ ಸಕಾರಾತ್ಮಕ ಊರ್ಜೆ ಇರುವುದು
೨. ನಿಷ್ಕರ್ಷ : ಅಸಾತ್ತ್ವಿಕ ರಂಗೋಲಿಯಿಂದ ವಾತಾವರಣದಲ್ಲಿ ಬಹಳ ನಕಾರಾತ್ಮಕ ಸ್ಪಂದನಗಳು ಮತ್ತು ಸಾತ್ತ್ವಿಕ ರಂಗೋಲಿಯಿಂದ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ, ಎಂದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.
೩. ಪರೀಕ್ಷಣೆಯ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಸಾತ್ತ್ವಿಕ ಕಲಾಕೃತಿಯನ್ನು (ರಂಗೋಲಿ) ಬಿಡಿಸುವುದರ ಮಹತ್ವ : ‘ರಂಗೋಲಿಯ ಕಲಾಕೃತಿಯನ್ನು ಬಿಡಿಸುವಾಗ ‘ಅದು ಕಣ್ಣುಗಳಿಗೆ ಹೇಗೆ ಕಾಣಿಸುತ್ತದೆ ?’ ಮತ್ತು ‘ಅದರಲ್ಲಿ ಸಾತ್ತ್ವಿಕ ಸ್ಪಂದನಗಳು ಇವೆಯೇ ?’, ಇವೆರಡನ್ನೂ ಗಮನಿಸುವುದು ಮಹತ್ವದ್ದಾಗಿರುತ್ತದೆ. ಕಲಾಕೃತಿಯಿಂದ ಪ್ರಕ್ಷೇಪಿತವಾಗುವ ಉತ್ತಮ ಅಥವಾ ತೊಂದರೆದಾಯಕ ಸ್ಪಂದನಗಳು ಕಲಾಕೃತಿಯ ಆಕಾರ (Shape), ಕಲಾಕೃತಿಯಲ್ಲಿನ ಆಕೃತಿಗಳ ದಿಕ್ಕು, ಕಲಾಕೃತಿಯ ಆಕಾರಗಳ ಗತಿದರ್ಶಕತೆ, ರಚನೆ, ಸಮತೋಲನ (Balance) ಮತ್ತು ನೈಸರ್ಗಿಕತೆ ಇವುಗಳ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಂದು ಆಕಾರದ ಸ್ಪಂದನಗಳು ಭಿನ್ನವಾಗಿರುತ್ತವೆ. ಸ್ಪಂದನಗಳಿಗನುಸಾರ ಆಕಾರಗಳ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಈ ರೀತಿಯ ವಿಭಜನೆಯನ್ನು ಮಾಡಲು ಬರುತ್ತದೆ.ರಂಗೋಲಿಯ ಒಂದು ಕಲಾಕೃತಿಯಲ್ಲಿ ಅನೇಕ ಕಲಾಕೃತಿಗಳ (ಆಕಾರಗಳ) ಸಮೂಹವು ಸಮಾವೇಶಗೊಂಡಿರುತ್ತದೆ. ರಂಗೋಲಿಯ ಕಲಾಕೃತಿಯಲ್ಲಿ ಆದಷ್ಟು ಹೆಚ್ಚು ಆಕಾರವು ಸಾತ್ತ್ವಿಕವಿದ್ದರೆ, ಆ ಸಂಪೂರ್ಣ ಕಲಾಕೃತಿಯ ಒಟ್ಟು ಸ್ಪಂದನಗಳು ಸಾತ್ತ್ವಿಕವಾಗುತ್ತದೆ.’ (ಆಧಾರ : ಸನಾತನದ ಗ್ರಂಥ ‘ಸಾತ್ತ್ವಿಕ ರಂಗೋಲಿಗಳು (ಭಾಗ ೧) (ರಂಗೋಲಿಗಳ ಸಾತ್ತ್ವಿಕತೆಯ ಹಿಂದಿನ ಶಾಸ್ತ್ರದೊಂದಿಗೆ’)
೩ ಆ. ಅಸಾತ್ತ್ವಿಕ ರಂಗೋಲಿಯಿಂದ ವಾತಾವರಣದಲ್ಲಿ ಬಹಳ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಪರೀಕ್ಷಣೆಯಲ್ಲಿ ಅಸಾತ್ತ್ವಿಕ ರಂಗೋಲಿಯಲ್ಲಿ ರಜ-ತಮವನ್ನು ಆಕರ್ಷಿಸುವ ತಾಮಸಿಕ ಆಕೃತಿಗಳಿವೆ. ಈ ರಂಗೋಲಿಯ ಕಡೆಗೆ ನೋಡಿದರೆ ಮನಸ್ಸಿಗೆ ಬಹಳ ತೊಂದರೆದಾಯಕವೆನಿಸುತ್ತದೆ. ಈ ರಂಗೋಲಿಯಿಂದ ವಾತಾವರಣದಲ್ಲಿ ಬಹಳ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗಿವೆ. ಸದ್ಯ ಜನರು ಮಾರುಕಟ್ಟೆಯಲ್ಲಿ ಸಿಗುವ ರಂಗೋಲಿಯ ಪುಸ್ತಕಗಳನ್ನು ಖರೀದಿಸಿ ತರುತ್ತಾರೆ ಮತ್ತು ಅದರಲ್ಲಿ ಕೊಡಲಾದ ರಂಗೋಲಿಯ ಕಲಾಕೃತಿಯನ್ನು ನೋಡುವವರ ಅಂತಹ ರಂಗೋಲಿಗಳನ್ನು ಬಿಡಿಸುತ್ತಾರೆ ಮತ್ತು ಕೆಲವರು ಮನಸ್ಸಿಗೆ ತೋಚಿದಂತೆ ಕಲಾಕೃತಿಯನ್ನು ಬಿಡಿಸುತ್ತಾರೆ. ಸರ್ವಸಾಮಾನ್ಯರು ಸಾಧನೆಯನ್ನು ಮಾಡದಿರುವುದರಿಂದ, ಹಾಗೆಯೇ, ಅವರಿಗೆ ಸ್ಪಂದನಶಾಸ್ತ್ರದ ಅಧ್ಯಯನವಿಲ್ಲದಿರುವುದರಿಂದ ಅವರಿಗೆ ಸಾತ್ತ್ವಿಕ ಮತ್ತು ಅಸಾತ್ತ್ವಿಕ ರಂಗೋಲಿಗಳ ಭೇದವನ್ನು ಗುರುತಿಸಲು ಬರುವುದಿಲ್ಲ. ಆದ್ದರಿಂದ ಅವರಿಂದ ರಜ-ತಮವನ್ನು ಆಕರ್ಷಿಸುವ, ತಾಮಸಿಕ ಆಕೃತಿಬಂಧ ಮತ್ತು ಅಸಾತ್ತ್ವಿಕ ವರ್ಣಸಂಯೋಜನೆ ಇರುವ ರಂಗೋಲಿ ಬಿಡಿಸಲ್ಪಡುತ್ತದೆ. ಅಸಾತ್ತ್ವಿಕ ರಂಗೋಲಿಯಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದ ರಿಂದ ಅದರ ನಕಾರಾತ್ಮಕ ಪರಿಣಾಮ ರಂಗೋಲಿಯನ್ನು ಬಿಡಿಸುವ, ಅದನ್ನು ನೋಡುವ ಮತ್ತು ರಂಗೋಲಿಯನ್ನು ಬಿಡಿಸಿದ ಭೂಮಿ ಮತ್ತು ಸುತ್ತ ಮುತ್ತಲಿನ ವಾತಾವರಣದ ಮೇಲಾಗುತ್ತದೆ.
೩ ಇ. ಸಾತ್ತ್ವಿಕ ರಂಗೋಲಿಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಪರೀಕ್ಷಣೆಯಲ್ಲಿ ಸಾತ್ತ್ವಿಕ ರಂಗೋಲಿಯಲ್ಲಿ ಸಾತ್ತ್ವಿಕ ಆಕೃತಿಬಂಧ (ಸಾತ್ತ್ವಿಕ ಆಕಾರದ ಹೂವು ಮತ್ತು ಎಲೆಗಳು) ಮತ್ತು ಸಾತ್ತ್ವಿಕ ಬಣ್ಣಗಳನ್ನು ಉಪಯೋಗಿಸಲಾಗಿದೆ. ರಂಗೋಲಿಯ ಕಲಾಕೃತಿಯು ಸುಲಭ, ಸರಳವಿದ್ದು ಅದನ್ನು ನೋಡುವಾಗ ಮನಸ್ಸಿಗೆ ಆನಂದವಾಗುತ್ತದೆ. ಸಾಧಕ ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಎಂದರೆ ಸಾಧನೆಯೆಂದು ಸಾತ್ತ್ವಿಕ ರಂಗೋಲಿಯ ಕಲಾಕೃತಿಗಳನ್ನು ರಚಿಸಿದ್ದಾರೆ. ಕಲಿಯುಗದಲ್ಲಿ ಸಾತ್ತ್ವಿಕ ರಂಗೋಲಿಯ ಕಲಾಕೃತಿಯಲ್ಲಿ ಶಕ್ತಿ, ಭಾವ, ಚೈತನ್ಯ ಅಥವಾ ಆನಂದ ಇವುಗಳ ಹೆಚ್ಚೆಂದರೆ ಶೇ. ೧೦ ರಷ್ಟು ಸ್ಪಂದನಗಳು ಬರಬಹುದು. ಪರೀಕ್ಷಣೆಯಲ್ಲಿ ಸಾತ್ತ್ವಿಕ ರಂಗೋಲಿಯಲ್ಲಿ ಶೇ. ೫ ರಷ್ಟು ಆನಂದದ ಸ್ಪಂದನಗಳು ಮತ್ತು ರಂಗೋಲಿಯಿಂದ ವಾತಾವರಣದಲ್ಲಿ (೧೦.೨೨ ಮೀಟರ್) ಬಹಳಷ್ಟು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಂಡಿರುವುದು ಕಂಡು ಬರುತ್ತದೆ. ಸಾತ್ತ್ವಿಕ ರಂಗೋಲಿಯನ್ನು ಬಿಡಿಸುವುದರಿಂದ ಭೂಮಿ ಮತ್ತು ಸುತ್ತಮುತ್ತಲಿನ ವಾಯುಮಂಡಲವು ಶುದ್ಧ ಮತ್ತು ಸಾತ್ತ್ವಿಕವಾಗುತ್ತದೆ. ಹಾಗೆಯೇ ರಂಗೋಲಿಯನ್ನು ಬಿಡಿಸುವವರಿಗೆ ಮತ್ತು ಅದನ್ನು ನೋಡುವವರಿಗೂ ರಂಗೋಲಿಯಿಂದ ಪ್ರಕ್ಷೇಪಿತವಾಗುವ ಸಕಾರಾತ್ಮಕ ಸ್ಪಂದನಗಳ ಲಾಭವಾಗುತ್ತದೆ.
೪. ಹಬ್ಬ ಮತ್ತು ಇತರ ವೇಳೆ ಸಾತ್ತ್ವಿಕ ರಂಗೋಲಿ ಬಿಡಿಸಿ !
ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬಗಳು, ಹಾಗೆಯೇ ವಿಧಿಗಳು ಯಾವುದಾದರೊಂದು ದೇವತೆಗಳೊಂದಿಗೆ ಸಂಬಂಧಿಸಿರುತ್ತದೆ. ಆಯಾ ಹಬ್ಬದ ದಿನ ಅಥವಾ ವಿಧಿಗಳ ದಿನದಂದು ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿರುತ್ತದೆ ಅಥವಾ ವಿಧಿಗಳಿಂದಾಗಿ ಅಲ್ಲಿ ಆಕರ್ಷಿತವಾಗುತ್ತದೆ. ಆ ತತ್ತ್ವವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂದು ಎಲ್ಲರಿಗೂ ಲಾಭವಾಗಬೇಕೆಂದು, ಆ ತತ್ತ್ವಗಳನ್ನು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿರಿ. ಹಬ್ಬಹರಿದಿನಗಳಂದು ಮತ್ತು ನಿತ್ಯವೂ ಸಾತ್ತ್ವಿಕ ರಂಗೋಲಿ ಬಿಡಿಸಿ ! – ಡಾ. ಅಮಿತ ಭೋಸಲೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಮೀರಜ (೩.೯.೨೦೨೦)