ವಿದ್ಯುತ್ ದೀಪದ ಪ್ಲಾಸ್ಟಿಕ್ ಹಣತೆ ಮತ್ತು ಮೇಣದ ಹಣತೆ ಹಚ್ಚಿದ್ದರಿಂದ ನಕಾರಾತ್ಮಕ ಸ್ಪಂದನ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಪಾರಂಪರಿಕ ಪದ್ಧತಿ ಸಂಬಂಧಿ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಯು ‘ಯೂ.ಎ.ಎಸ್.(ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ನಡೆಸಿದ ವೈಜ್ಞಾನಿಕ ಪರೀಕ್ಷೆ

‘ಅಂಧಃಕಾರವನ್ನು ದೂರಗೊಳಿಸಿ ತೇಜವನ್ನು ಹರಡುವ ಹಬ್ಬವೆಂದರೆ ‘ದೀಪಾವಳಿ! ದೀಪಾವಳಿಯಲ್ಲಿ ಮನೆಮನೆಗಳಲ್ಲಿ ಹಣತೆಗಳನ್ನು ಹಚ್ಚುವ ಪರಂಪರೆ ಬಹಳ ಹಿಂದಿನಿಂದ, ಅಂದರೆ ತ್ರೇತಾಯುಗದಲ್ಲಿ ಪ್ರಾರಂಭವಾಯಿತು. ಪ್ರಭು ಶ್ರೀರಾಮನು ಲಂಕಾಪತಿ ರಾವಣನ ಮೇಲೆ ವಿಜಯವನ್ನು ಪಡೆದು ಅಯೋಧ್ಯೆಗೆ ಮರಳಿದನು, ಆಗ ಪ್ರಜೆಗಳು ಅವನನ್ನು ದೀಪೋತ್ಸವದಿಂದ ಸ್ವಾಗತಿಸಿದರು. ಸದ್ಯದ ರಜ-ತಮಪ್ರಧಾನ ಕಾಲದಲ್ಲಿ ವಿದ್ಯುತ್ ದೀಪವಿರುವ ಪ್ಲಾಸ್ಟಿಕಿನ ‘ಚೀನಿ ಹಣತೆಗಳು ಮಾರುಕಟ್ಟೆಯಲ್ಲಿ ಎಲ್ಲೆಡೆ ಬಹಳ ಕಂಡು ಬರುತ್ತವೆ. ಹಾಗೆಯೇ ಮೇಣದ ಹಣತೆಗಳನ್ನು ಹಚ್ಚುವ ಮಾನಸಿಕತೆಯೂ ಕಂಡು ಬರುತ್ತದೆ. ಹಿಂದಿನ ಪದ್ಧತಿಯನ್ನು ತಿಳಿದಿರುವವರು ಮಾತ್ರ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿದ ಮಣ್ಣಿನ ಪಾರಂಪಾರಿಕ ಹಣತೆಯನ್ನು ಹಚ್ಚುತ್ತಾರೆ. ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ  ಹಣತೆಗಳು ಸಾತ್ತ್ವಿಕತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಮಹತ್ವದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ‘ವಿದ್ಯುತ್ ದೀಪವಿರುವ ಪ್ಲಾಸ್ಟಿಕ್ ‘ಚೀನಿ ಹಣತೆ, ಮೇಣದ ಹಣತೆ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಪಾರಂಪಾರಿಕ ಮಣ್ಣಿನ ಹಣತೆಯನ್ನು ಹಚ್ಚಿದಾಗ ಆ ಪ್ರತಿಯೊಂದು ಹಣತೆಯಿಂದ ಪ್ರಕ್ಷೇಪಿತಗೊಳ್ಳುವ ಸ್ಪಂದನಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡುವುದೇ ಆ ಪರೀಕ್ಷಣೆಯ ಉದ್ದೇಶವಾಗಿತ್ತು. ಈ ಪರೀಕ್ಷಣೆಗಾಗಿ ‘ಯೂ.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯನ್ನು ೫.೧೦.೨೦೧೭ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಕೈಗೊಳ್ಳಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಮುಂದಿನ ಅಂಶಗಳನ್ನು ‘ಯೂ.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ನಡೆಸಲಾಯಿತು.

ಅ. ವಿದ್ಯುತ್ ದೀಪವಿರುವ ಪ್ಲಾಸ್ಟಿಕ್ ನ ‘ಚೀನಿ ಹಣತೆ : ಇದು ಪ್ಲಾಸ್ಟಿಕಿನ ಹಣತೆಯಾಗಿದ್ದು, ಅದರಲ್ಲಿ ವಿದ್ಯುಚ್ಛಕ್ತಿಯಿಂದ ಬೆಳಗುವ ವಿದ್ಯುತ್ ದೀಪವಿದೆ. ಈ ಹಣತೆಗಳು ನೋಡಲು ಆಕರ್ಷಕವಾಗಿರುತ್ತವೆ. ಪ್ರಮುಖವಾಗಿ ಚೀನಾ ದೇಶದಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ.

ಆ. ಮೇಣದ ಹಣತೆ : ಇದು ಮೇಣದಿಂದ ತಯಾರಿಸಲಾಗಿರುವ ಹಣತೆಯ ಆಕಾರದ ಮೇಣಬತ್ತಿಯಾಗಿದೆ.

ಇ. ಪಾರಂಪಾರಿಕ ಮಣ್ಣಿನ ಹಣತೆ : ಇವುಗಳು ಮಾರುಕಟ್ಟೆಯಲ್ಲಿ ದೊರೆಯುವ ಮಣ್ಣಿನ ಸಾಧಾರಣ ಹಣತೆಯಾಗಿವೆ. ಇದರಲ್ಲಿ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ದೀಪ ಹಚ್ಚುತ್ತಾರೆ.

೨. ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ

 ವಿದ್ಯುತ್ ದೀಪವಿರುವ ಪ್ಲಾಸ್ಟಿಕ್ ‘ಚೀನಿ ಹಣತೆ ಮತ್ತು ಮೇಣದ ಹಣತೆಯಲ್ಲಿ ನಕಾರಾತ್ಮಕ ಶಕ್ತಿ ಕಂಡು ಬಂದರೆ, ಪಾರಂಪಾರಿಕ ಮಣ್ಣಿನ ಹಣತೆಯಲ್ಲಿ ಸಕಾರಾತ್ಮಕ ಶಕ್ತಿ ಕಂಡುಬರುವುದು : ಇದು ಈ ಮುಂದಿನ ತಖ್ತೆಯಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ ೧ : ವಿದ್ಯುತ್ ಹಣತೆ ಮತ್ತು ಮೇಣದ ಹಣತೆಗಳಲ್ಲಿರುವ ‘ಇನ್‌ಫ್ರಾರೆಡ್ ಈ ನಕಾರಾತ್ಮಕ ಶಕ್ತಿಯನ್ನು ಅಳೆಯುವಾಗ ‘ಔರಾ ಸ್ಕ್ಯಾನರ್ನ  ಭುಜಗಳು ೧೨೦ ಅಂಶದ ಕೋನದಲ್ಲಿ ತೆರೆಯಿತು. ಅಂದರೆ ಇವೆರಡೂ ಹಣತೆಗಳಲ್ಲಿ ನಕಾರಾತ್ಮಕ ಶಕ್ತಿಯಿತ್ತು; ಆದರೆ ಅದರ ಪ್ರಭಾವಲಯವಿರಲಿಲ್ಲ. ‘ಔರಾ ಸ್ಕ್ಯಾನರ್ ೧೮೦ ಅಂಶದ ಕೋನದಲ್ಲಿ ತೆರೆದರೆ ಮಾತ್ರ ಅದರ ಪ್ರಭಾವಲಯವನ್ನು ಅಳೆಯಲು ಸಾಧ್ಯವಾಗುತ್ತದೆ.

ಟಿಪ್ಪಣಿ ೨ : ಮಣ್ಣಿನ ಹಣತೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಅಳೆಯುವಾಗ ಸ್ಕ್ಯಾನರ್‌ನ ಭುಜ ೯೦ ಅಂಶದ ಕೋನದಲ್ಲಿ ತೆರೆಯಿತು. ಅಂದರೆ ಹಣತೆಯಲ್ಲಿ ಸಕಾರಾತ್ಮಕ ಶಕ್ತಿಯಿತ್ತು; ಆದರೆ ಅದರ ಪ್ರಭಾವಲಯ ಇರಲಿಲ್ಲ.

೩. ನಿಷ್ಕರ್ಷ

 ‘ವಿದ್ಯುತ್ ಹಣತೆ ಮತ್ತು ಮೇಣದ ಹಣತೆಗಳಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ, ಆದರೆ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ಹಚ್ಚಿದ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ, ಎನ್ನುವುದು ಈ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ.

೪. ಪರೀಕ್ಷಣೆಯ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿವರ

೪ ಅ. ವಿದ್ಯುತ್ ದೀಪವಿರುವ ಹಣತೆ ಮತ್ತು ಮೇಣದ ಹಣತೆಯಲ್ಲಿ ಮಾನವನಿರ್ಮಿತ ತಮೋಗುಣೀ ಅಂಶಗಳಿರುವುದರಿಂದ ಅವುಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ. ಆದರೆ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಲ್ಲಿ ನೈಸರ್ಗಿಕ ಸತ್ತ್ವಗುಣಿ ಅಂಶಗಳಿರುವುದರಿಂದ ಅದರಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ : ಈ ಪರೀಕ್ಷಣೆಯಲ್ಲಿದ್ದಂತಹ ವಿದ್ಯುಚ್ಛಕ್ತಿ, ಪ್ಲಾಸ್ಟಿಕ ಮತ್ತು ಮೇಣ ಈ ಘಟಕಗಳು ಮಾನವನಿರ್ಮಿತವಾಗಿವೆ, ಆದರೆ ಮಣ್ಣು, ಎಳ್ಳೆಣ್ಣೆ ಹಾಗೂ ಹತ್ತಿ ಈ ಘಟಕಗಳು ನಿಸರ್ಗದತ್ತವಾಗಿವೆ. ಸಾಮಾನ್ಯವಾಗಿ ನೈಸರ್ಗಿಕ ಘಟಕಗಳಲ್ಲಿ ಸತ್ತ್ವಗುಣ ಪ್ರಧಾನವಾಗಿದ್ದರೆ, ಅನೈಸರ್ಗಿಕ (ಕೃತಕ) ಘಟಕಗಳಲ್ಲಿ ತಮೋಗುಣ ಪ್ರಮುಖವಾಗಿರುತ್ತದೆ. ಯಾವ ಘಟಕಗಳಲ್ಲಿ ಯಾವ ಗುಣ ಪ್ರಮುಖವಾಗಿರುತ್ತದೆಯೋ, ಅದೇ ತರಹದ ಸ್ಪಂದನಗಳು ಆ ಘಟಕಗಳಿಂದ ವಾತಾವರಣದಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ. ಸಾತ್ತ್ವಿಕ ಘಟಕಗಳ ಕಾರಣದಿಂದ ಮಣ್ಣಿನ ಹಣತೆಯಲ್ಲಿ ಸಾತ್ತ್ವಿಕ (ಸಕಾರಾತ್ಮಕ) ಸ್ಪಂದನಗಳು ಕಂಡು ಬಂದಿತು. ತದ್ವಿರುದ್ಧ ಮಾನವನಿರ್ಮಿತ ತಮೋಗುಣಿ ಘಟಕಗಳಿಂದ ವಿದ್ಯುತ್ ಹಣತೆ ಮತ್ತು ಮೇಣದ ಹಣತೆಗಳಲ್ಲಿ ಅಸಾತ್ತ್ವಿಕ (ನಕಾರಾತ್ಮಕ) ಸ್ಪಂದನಗಳು ಕಂಡು ಬಂದಿತು. ಈ ತಮೋಗುಣಿ ಘಟಕಗಳಿಂದ ವಾತಾವರಣದಲ್ಲಿ ತೊಂದರೆದಾಯಕ ಸ್ಪಂದನಗಳು ಹರಡುತ್ತವೆ. ಇದರಿಂದ ಗಮನಕ್ಕೆ ಬರುವುದೇನೆಂದರೆ, ಎಳ್ಳೆಣ್ಣೆ ಮತ್ತು ಕೈಯಿಂದ ತಯಾರಿಸಿದ ಹತ್ತಿಯ ಬತ್ತಿಯನ್ನು ಹಾಕಿ ಮಣ್ಣಿನ ಹಣತೆಯನ್ನು ಹಚ್ಚುವುದು, ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೮.೧೦.೨೦೧೭)

ಇ-ಮೇಲ್: [email protected]