ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರಫೆರನ್ಸ್ ಫೋಟೋಗ್ರಾಫಿ) ಈ ತಂತ್ರಜ್ಞಾನದ ಸಹಾಯದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ದೀಪಾವಳಿಯ ಸಮಯದಲ್ಲಿ ಆಕಾಶದೀಪಕ್ಕೆ ಅಸಾಧಾರಣ ಮಹತ್ವವಿರುತ್ತದೆ; ಆದುದರಿಂದ ಮಾರುಕಟ್ಟೆಯಿಂದ ಆಕಾಶದೀಪಗಳನ್ನು ಎಲ್ಲರೂ ಖರೀದಿಸುತ್ತಾರೆ ಮತ್ತು ದೀಪಾವಳಿಯ ಕಾಲಾವಧಿಯಲ್ಲಿ ಅದನ್ನು ಮನೆಯ ಹೊರಗೆ ಬಾಗಿಲಿನೆದುರು ತೂಗು ಹಾಕುತ್ತಾರೆ. ಆಕಾಶದೀಪವನ್ನು ಖರೀದಿಸುವಾಗ ಅದರ ವೈಶಿಷ್ಟ್ಯ ಪೂರ್ಣ ಆಕಾರ, ಬಣ್ಣ, ರೂಪ ಇತ್ಯಾದಿಗಳ ವಿಚಾರವನ್ನು ಮಾಡಲಾಗುತ್ತದೆ; ಆದರೆ ‘ಅದರಿಂದ ನಮ್ಮ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮ ಆಗುವುದು ?, ಎನ್ನುವ ವಿಚಾರವನ್ನು ಸಾಮಾನ್ಯವಾಗಿ ಯಾರೂ ಮಾಡುವುದಿಲ್ಲ. ಸಾಮಾನ್ಯ ಆಕಾಶದೀಪ ಮತ್ತು ‘ಸನಾತನ-ನಿರ್ಮಿತ ಆಕಾಶದೀಪ ಇವುಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿ ‘ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರಫೆರನ್ಸ್ ಫೊಟೊಗ್ರಾಫಿ) ತಂತ್ರಜ್ಞಾನವನ್ನು ಉಪಯೋಗಿಸಲಾಯಿತು. ಈ ತಂತ್ರಜ್ಞಾನದ ಸಹಾಯದಿಂದ ವಸ್ತು ಮತ್ತು ವ್ಯಕ್ತಿಯ ಶಕ್ತಿವಲಯದ (‘ಔರಾ) ಅಧ್ಯಯನ ಮಾಡಬಹುದು. ಈ ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅದರ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯ ಆರಂಭದಲ್ಲಿ ‘ ಪಿಪ್ ‘ ತಂತ್ರಜ್ಞಾನದಿಂದ ಪರೀಕ್ಷಣೆಯ ಸ್ಥಳದ ವಾತಾವರಣದ ಛಾಯಾಚಿತ್ರ ತೆಗೆಯಲಾಹಿತು. ಇದು ಮೂಲಭೂತ ನೊಂದಣಿಯಾಗಿದೆ. ಅನಂತರ ಸರ್ವಸಾಮಾನ್ಯ ಆಕಾಶದೀಪ ಮತ್ತು ಮತ್ತು ಸನಾತನ – ನಿರ್ಮಿತ ಆಕಾಶದೀಪ ಇವುಗಳ ಒಂದೊಂದಾಗಿ ‘ಪಿಪ್’ ಛಾಯಾಚಿತ್ರ ತೆಗೆಯಲಾಹಿತು. ಈ ಛಾಯಾಚಿತ್ರ ತುಲಾತ್ಮಕ ಅಧ್ಯಯನದಿಂದ ಎರೆಡೂ ಆಕಾಶದೀಪಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳಿಂದ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದು ತಿಳಿಯಿತು.
೧ ಅ. ಸಾಮಾನ್ಯ ಆಕಾಶದೀಪದಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಹಾಗೂ ಸನಾತನ – ನಿರ್ಮಿತ ಆಕಾಶದೀಪದಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯದ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಪರೀಕ್ಷಣೆಯಲ್ಲಿ ‘ಪಿಪ್ ‘ ಛಾಯಾಚಿತ್ರಗಳ ಪ್ರಭಾವಲಯದಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಸ್ಪಂದನಗಳನ್ನು ತೋರಿಸುವ ಬಣ್ಣ ಮತ್ತು ಅವುಗಳ ಪ್ರಮಾಣವನ್ನು ಮುಂದೆ ನೀಡಲಾಗಿದೆ .
ಟಿಪ್ಪಣಿ ೧ : ಘಟಕದ ಅಂತರ್ಬಾಹ್ಯ ಸ್ತರದಲ್ಲಿ ನಕಾರಾತ್ಮಕ ಸ್ಪಂದನಗಳನ್ನು ಅಲ್ಪ ಅಥವಾ ನಾಶ ಮಾಡುವ ಹಾಗೂ ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಗೊಳಿಸುವ ಕ್ಷಮತೆ ಎರಡೂ ಆಕಾಶದೀಪಗಳಿಂದ ಪ್ರಕ್ಷೇಪಿಸಲ್ಪಡುವ ಸ್ಪಂದನಗಳನ್ನು ವಾತಾವರಣದಲ್ಲಿರುವ ಮೂಲಭೂತ ಸ್ಪಂದನಗಳೊಂದಿಗೆ ತುಲನೆ ಮಾಡಿದಾಗ ಮುಂದಿನ ಅಂಶಗಳು ಗಮನಕ್ಕೆ ಬಂದವು.
ಅ. ಸಾಮಾನ್ಯ ಆಕಾಶದೀಪದಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಲ್ಪಡುವುದು : ಸಾಮಾನ್ಯ ಆಕಾಶದೀಪದಿಂದ ಶೇ. ೬೭ ರಷ್ಟು ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು. ಮೂಲಭೂತ ನೋಂದಣಿಯ ಶೇ. ೫೪ ರಷ್ಟು ನಕಾರಾತ್ಮಕ ಸ್ಪಂದನಗಳ ತುಲನೆಯಲ್ಲಿ ಈ ಸ್ಪಂದನಗಳು ಶೇ.೧೩ ರಷ್ಟು ಹೆಚ್ಚಾಗಿದ್ದವು. ವಿಶೇಷ ವೆಂದರೆ ಮೂಲಭೂತ ನೋಂದಣಿಯಲ್ಲಿ ಪ್ರಭಾವಲಯದ ಚೈತನ್ಯದ ದ್ಯೋತಕವಾಗಿರುವ ಹಳದಿ ಬಣ್ಣದ ಪ್ರಮಾಣ ಶೇ. ೧೮ ರಷ್ಟಿತ್ತು ಮತ್ತು ಸಾಧಾರಣ ಆಕಾಶದೀಪದ ಪ್ರಭಾವಲಯದಲ್ಲಿ ಹಳದಿ ಬಣ್ಣ ಕಾಣಿಸಲೇ ಇಲ್ಲ. ಇದರರ್ಥ ಸಾಮಾನ್ಯ ಆಕಾಶದೀಪದಿಂದ ಚೈತನ್ಯವು ಪ್ರಕ್ಷೇಪಿಸುವುದೇ ಇಲ್ಲ. ಈ ಆಕಾಶದೀಪದಿಂದ ಬಹಳಷ್ಟು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವ ನಕಾರಾತ್ಮಕ ಸ್ಪಂದನಗಳು (ಶೇ. ೬೭), ಹಾಗೆಯೇ ತುಲನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವ ಸಕಾರಾತ್ಮಕ ಸ್ಪಂದನಗಳ (ಶೇ.೩೩) ವಿಚಾರ ಮಾಡಿದರೆ, ಈ ಆಕಾಶದೀಪ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಆ. ಸನಾತನ-ನಿರ್ಮಿತ ಆಕಾಶದೀಪದಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯದ ಸ್ಪಂದನಗಳು ಪ್ರಕ್ಷೇಪಿಸುವುದು : ಸನಾತನ-ನಿರ್ಮಿತ ಆಕಾಶದೀಪದಿಂದ ಶೇ. ೫೮ ರಷ್ಟು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು. ಅಂದರೆ ಮೂಲಭೂತ ನೋಂದಣಿಯ ಪ್ರಭಾವಲಯದ ಶೇ. ೪೬ ರಷ್ಟು ಸಕಾರಾತ್ಮಕ ಸ್ಪಂದನಗಳ ತುಲನೆಯಲ್ಲಿ ಅವು ಶೇ. ೧೨ ರಷ್ಟು ಹೆಚ್ಚಾಗಿದ್ದವು. ಅದರಲ್ಲಿಯೂ ಈ ಆಕಾಶದೀಪದ ಪ್ರಭಾವಲಯದಿಂದ ಪ್ರಕ್ಷೇಪಿಸುವ ಚೈತನ್ಯದ ಸ್ಪಂದನಗಳ ಪ್ರಮಾಣ ಶೇ. ೩೭ ರಷ್ಟು, ಅಂದರೆ ಮೂಲಭೂತ ನೋಂದಣಿಯ ಚೈತನ್ಯದ (ಶೇ.೧೮) ಪ್ರಮಾಣಕ್ಕಿಂತ ಎರಡರಷ್ಟಾಗುತ್ತದೆ. ಇದರಿಂದ ಈ ಆಕಾಶದೀಪ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.
೨. ನಿಷ್ಕರ್ಷ
ಸಾಮಾನ್ಯ ಆಕಾಶದೀಪದಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದರಿಂದ, ಅದು ಆಧ್ಯಾತ್ಮಿಕ ದೃಷ್ಟಿಯಿಂದ ಹಾನಿಕರವಾಗಿದೆ ಮತ್ತು ಸನಾತನ-ನಿರ್ಮಿತ ಆಕಾಶದೀಪದಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯದ ಸ್ಪಂದನಗಳು ಪ್ರಕ್ಷೇಪಿಸುವುದರಿಂದ, ಅದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ ಎನ್ನುವುದು ಈ ಪರೀಕ್ಷಣೆಯಿಂದ ಸ್ಪಷ್ಟವಾಗುತ್ತದೆ.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರದ ವಿಶ್ಲೇಷಣೆ
೩ ಅ. ಸಾಮಾನ್ಯ ಆಕಾಶದೀಪ ಮತ್ತು ಸನಾತನ-ನಿರ್ಮಿತ ಆಕಾಶದೀಪ ಇವುಗಳ ನಡುವಿನ ಆಧ್ಯಾತ್ಮಿಕ ದೃಷ್ಟಿಯ ಮೂಲಭೂತ ವ್ಯತ್ಯಾಸ : ಸಾಮಾನ್ಯ ಆಕಾಶದೀಪಗಳನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ಮತ್ತು ಹಣ ಸಂಪಾದನೆಯ ಉದ್ದೇಶದಿಂದ ನಿರ್ಮಿಸಲಾಗುತ್ತದೆ. ತದ್ವಿರುದ್ಧ ಸನಾತನ-ನಿರ್ಮಿತ ಆಕಾಶದೀಪವನ್ನು ಅಲಂಕಾರಕ್ಕಾಗಿ ತಯಾರಿಸದೇ, ಧರ್ಮಪ್ರಸಾರಕ್ಕಾಗಿ ತಯಾರಿಸಲಾಗಿದೆ. ಅದರ ಮೇಲೆ ಆ ರೀತಿಯ ಧರ್ಮ ಪ್ರಸಾರದ ಪ್ರಬೋಧನೆಯ ವಿಷಯವನ್ನು ಬರೆಯಲಾಗಿದೆ. ಇವೆರಡರಲ್ಲಿ ಇರುವ ಆಧ್ಯಾತ್ಮಿಕ ದೃಷ್ಟಿಯಲ್ಲಿ ಮೂಲಭೂತ ವ್ಯತ್ಯಾಸವನ್ನು ಮುಂದೆ ನೀಡಲಾಗಿದೆ.
ಇದು ವಾತಾವರಣದ ಪ್ರಭಾವಲಯದ ಪರೀಕ್ಷಣೆಯಾಗಿದ್ದರಿಂದ ‘ಪಿಪ್ ಛಾಯಾಚಿತ್ರ ೨ ಮತ್ತು ೩ ಇವುಗಳನ್ನು ಮೂಲ ಪ್ರಭಾವಲಯದೊಂದಿಗೆ (ಛಾಯಾಚಿತ್ರ ೧ ದೊಂದಿಗೆ) ತುಲನೆ ಮಾಡಿದಾಗ ಪರೀಕ್ಷಣೆಗಾಗಿ ಇಟ್ಟಿದ್ದ ಕ್ಲಾಂಪ್, ಆಕಾಶದೀಪ ಹಾಗೂ ಮೇಜಿನ ಮೇಲಿನ ಬಣ್ಣವನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ.
– ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೧೫.೧೦.೨೦೦೬, ರಾತ್ರಿ ೧೦.೦೧)
ಟಿಪ್ಪಣಿ ೧ – ಆಧ್ಯಾತ್ಮಿಕ ಮಟ್ಟ : ‘ನಿರ್ಜೀವ ವಸ್ತುಗಳೆಂದರೆ ಶೇ. ೧ ಮತ್ತು ಈಶ್ವರನೆಂದರೆ ಶೇ. ೧೦೦ ಆಧ್ಯಾತ್ಮಿಕ ಮಟ್ಟ, ಎಂದು ತಿಳಿದುಕೊಂಡರೆ, ಆ ತುಲನೆಯಲ್ಲಿ ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಗನುಸಾರ ಅವನ ವರ್ತಮಾನದ ಆಧ್ಯಾತ್ಮಿಕ ಮಟ್ಟವನ್ನು ನಿರ್ಧರಿಸಬಹುದು. ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟು ಇರುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೭೦ ಕ್ಕಿಂತ ಅಧಿಕ ಇರುವವರಿಗೆ ‘ಸಂತರು ಎಂದು ಹೇಳುತ್ತಾರೆ. ಆಧ್ಯಾತ್ಮಿಕ ಮಟ್ಟ ಶೇ. ೭೦ ರಿಂದ ೭೯ ರಷ್ಟು ಇರುವವರಿಗೆ ‘ಗುರು ಗಳು, ಶೇ. ೮೦ ರಿಂದ ೮೯ ಇರುವವರಿಗೆ ‘ಸದ್ಗುರುಗಳು ಮತ್ತು ಶೇ. ೯೦ ಕ್ಕಿಂತ ಅಧಿಕ ಮಟ್ಟ ಇರುವವರಿಗೆ ‘ಪರಾತ್ಪರ ಗುರುಗಳು ಎನ್ನುತ್ತಾರೆ.
೩ ಆ. ಸನಾತನ-ನಿರ್ಮಿತ ಆಕಾಶದೀಪದ ಆಧ್ಯಾತ್ಮಿಕ ವೈಶಿಷ್ಟ್ಯಗಳು : ‘ಸನಾತನ ಆಕಾಶದೀಪ ಕೇವಲ ಆಕಾಶದೀಪವಲ್ಲ, ಅದು ಜ್ಞಾನ ದೀಪವಾಗಿದೆ. ಅದು ಚೈತನ್ಯಮಯ ಪ್ರಕಾಶವನ್ನು ಮನೆ-ಮನೆಗಳಿಗೆ ತಲುಪಿಸುತ್ತದೆ. ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯದ) ಸ್ಥಾಪನೆಯಾಗಲು ದೇವತೆಗಳು, ಋಷಿಮುನಿಗಳು ಮತ್ತು ಸಂತರ ಸಂಕಲ್ಪ ಕಾರ್ಯನಿರತವಾಗಿದೆ. ಈ ಸಂಕಲ್ಪ ಫಲಪ್ರದವಾಗಲು ಈ ದೀಪ ಪ್ರಯತ್ನರತವಾಗಿದೆ. ವಾಸ್ತುವಿನಲ್ಲಿ ಸನಾತನ ಆಕಾಶದೀಪವನ್ನು ಹಚ್ಚುವುದರಿಂದ ಅನೇಕ ಜನರಿಗೆ ಒಳ್ಳೆಯ ಅನುಭೂತಿಗಳು ಬಂದಿವೆ. ಈ ಆಕಾಶದೀಪ ಮಾಯಾ ರೂಪಿ ಅಂಧಃಕಾರವನ್ನು ನಾಶ ಮಾಡಿ ದೇವತೆಗಳ ದೈದೀಪ್ಯಮಾನ ಪ್ರಕಾಶವನ್ನು ಎಲ್ಲೆಡೆ ಪ್ರಕ್ಷೇಪಿಸುತ್ತದೆ. – (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೯.೯.೨೦೧೭)
ಮೇಲಿನ ಅಂಶಗಳಿಂದ ‘ಸಾಮಾನ್ಯ ಆಕಾಶದೀಪ ನೋಡಲು ಬಹಳಷ್ಟು ಆಕರ್ಷಕವಾಗಿದ್ದರೂ, ಆಧ್ಯಾತ್ಮಿಕ ಸ್ತರದಲ್ಲಿ ಅದು ಏಕೆ ಲಾಭದಾಯಕವಾಗಿಲ್ಲ ಮತ್ತು ಸನಾತನ-ನಿರ್ಮಿತ ಆಕಾಶದೀಪ ಆಧ್ಯಾತ್ಮಿಕ ದೃಷ್ಟಿಯಿಂದ ಏಕೆ ಲಾಭದಾಯಕವಾಗಿದೆ, ಎನ್ನುವುದು ಸ್ಪಷ್ಟವಾಗುತ್ತದೆ.
– ಆಧುನಿಕ ವೈದ್ಯೆ (ಡಾ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೨.೧೦.೨೦೧೭)
ಇ-ಮೇಲ್ : [email protected]