ವಿದ್ಯುತ್ ತಂಪುಪೆಟ್ಟಿಗೆಯ ತುಲನೆಯಲ್ಲಿ ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಟ್ಟಿದ್ದ ಆಹಾರದಿಂದ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಬಹಳ ಹೆಚ್ಚು ಪ್ರಕ್ಷೇಪಿತವಾಗುವುದು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

 

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡುತ್ತಿರುವ ಶ್ರೀ. ಆಶಿಷ ಸಾವಂತ

‘ಹಿಂದಿನ ಕಾಲದಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ಮಣ್ಣಿನ ತಂಪು ಪೆಟ್ಟಿಗೆಗಳನ್ನು (ಟಿಪ್ಪಣಿ) ಉಪಯೋಗಿಸುತ್ತಿದ್ದರು. ಇದರಿಂದ ಆಹಾರಪದಾರ್ಥಗಳು ಸ್ಥೂಲದಲ್ಲಿ ಉತ್ತಮವಾಗಿ ಉಳಿದು ಅವುಗಳಲ್ಲಿ ಸಾತ್ತ್ವಿಕತೆಯೂ ಉಳಿಯುತ್ತಿತ್ತು. ನೈಸರ್ಗಿಕ ಪದ್ಧತಿಯಿಂದ ಉಳಿಸಿಡಲಾದ ಆಹಾರ ಪದಾರ್ಥಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಸೇವಿಸುವವರಿಗೆ ಅವುಗಳಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತಿತ್ತು. ಸದ್ಯದ ವಿಜ್ಞಾನ ಯುಗದಲ್ಲಿ ಮಾನವನು ವಿದ್ಯುತ್‌ನಿಂದ ನಡೆಯುವ ವಿವಿಧ ಆಧುನಿಕ ಉಪಕರಣಗಳನ್ನು ನಿರ್ಮಿಸಿದ್ದಾನೆ, ಉದಾ. ಫ್ರಿಜ್ (ತಂಪು ಪೆಟ್ಟಿಗೆ), ವಾಶಿಂಗ್ ಮಶೀನ್ (ಬಟ್ಟೆಗಳನ್ನು ತೊಳೆಯುವ ಯಂತ್ರ) ಇತ್ಯಾದಿ. ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡಲು ಎಲ್ಲ ಕಡೆಗಳಲ್ಲಿ ವಿದ್ಯುತ್ ಚಾಲಿತ ತಂಪುಪೆಟ್ಟಿಗೆಗಳನ್ನು (ರೆಫ್ರಿಜರೇಟರನ) ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ವಿದ್ಯುತ್‌ಚಾಲಿತ ತಂಪುಪೆಟ್ಟಿಗೆಗಳಲ್ಲಿ ಇಡುವ ಆಹಾರಪದಾರ್ಥಗಳಿಂದ ಮತ್ತು ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನವನ್ನು ಮಾಡಲು ೪.೯.೨೦೨೦ ಈ ದಿನದಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಎಂಬ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಟಿಪ್ಪಣಿ – ಮಣ್ಣಿನ ತಂಪುಪೆಟ್ಟಿಗೆ : ಇದು ಮಣ್ಣಿನಿಂದ ಪಾರಂಪರಿಕ ಪದ್ಧತಿಯಲ್ಲಿ ತಯಾರಿಸಿದ ಕೊಡದ ಆಕಾರದ ಒಂದು ಪಾತ್ರೆಯಾಗಿದ್ದು ಅದರ ಬಾಯಿಗೆ ಮಣ್ಣಿನ ವರ್ತುಲಾಕಾರದ ಮುಚ್ಚಳ ಇರುತ್ತದೆ. ಇದರಲ್ಲಿ ತರಕಾರಿ, ಹಣ್ಣು ಮತ್ತು ಆಹಾರ ಪದಾರ್ಥಗಳನ್ನು ಸಂರಕ್ಷಿಸಬಹುದು.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

೧ ಅ. ನಕಾರಾತ್ಮಕ ಊರ್ಜೆಯ ಸಂದರ್ಭದ ನಿರೀಕ್ಷಣೆಯ ವಿವೇಚನೆ : ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳಲ್ಲಿ (ಟೊಮೆಟೊ, ಹೆಸರುಬೇಳೆಯ ತೊವ್ವೆ ಮತ್ತು ನೆಲ್ಲಿಕಾಯಿಯ ಶರಬತ್ ಇವುಗಳಲ್ಲಿ) ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬಂದಿತು ಮತ್ತು ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಕಂಡು ಬರಲಿಲ್ಲ.

೧ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದ ನಿರೀಕ್ಷಣೆಯ ವಿವೇಚನೆ : ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳಲ್ಲಿ (ಟೊಮೆಟೊ, ಹೆಸರುಬೇಳೆಯ ತೊವ್ವೆ ಮತ್ತು ನೆಲ್ಲಿಕಾಯಿ ಶರಬತ್ ಇವುಗಳಲ್ಲಿ) ಸಕಾರಾತ್ಮಕ ಊರ್ಜೆಯು ಸ್ವಲ್ಪವೂ ಕಂಡು ಬರಲಿಲ್ಲ ಮತ್ತು ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

ಮೇಲಿನ ವಿವೇಚನೆಯು ಮುಂದೆ ಕೊಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ ವಿದ್ಯುತ್ ಚಾಲಿತ ತಂಪುಪೆಟ್ಟಿಗೆಯಲ್ಲಿ ಆಹಾರಪದಾರ್ಥಗಳನ್ನು ಇಟ್ಟನಂತರ ಅವುಗಳಲ್ಲಿ ಸಕಾರಾತ್ಮಕ ಊರ್ಜೆಯು ಇಲ್ಲವಾಗಿ ಬಹಳಷ್ಟು ಪ್ರಮಾಣದಲ್ಲಿ ‘ಇನ್‌ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳು ಉಂಟಾಗಿದ್ದವು. ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಆಹಾರಪದಾರ್ಥಗಳನ್ನು ಇಟ್ಟನಂತರ ಅವುಗಳಲ್ಲಿ ನಕಾರಾತ್ಮಕ ಊರ್ಜೆಗಳು ಇಲ್ಲವಾಗಿ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯು ಉತ್ಪನ್ನವಾಗಿತ್ತು.

೨. ನಿಷ್ಕರ್ಷ

ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಆಹಾರಪದಾರ್ಥಗಳನ್ನು ಉಳಿಸಿಡುವ ಪದ್ಧತಿಯು ಅಸಾತ್ತ್ವಿಕವಾಗಿದ್ದು ಆರೋಗ್ಯಕ್ಕೆ ಹಾನಿಕರವಾಗಿದೆ ಮತ್ತು ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಆಹಾರ ಪದಾರ್ಥಗಳನ್ನು ಉಳಿಸಿಡುವ ಪದ್ಧತಿಯು ಸಾತ್ತ್ವಿಕವಾಗಿದ್ದು ಆರೋಗ್ಯಕ್ಕೆ ಲಾಭದಾಯಕವಾಗಿದೆ, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.

ಮೇಲಿನ ಎಲ್ಲ ಅಂಶಗಳ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩’ ರಲ್ಲಿ ಕೊಡಲಾಗಿದೆ.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಉತ್ಪನ್ನವಾಗುವುದರ ಕಾರಣಗಳು : ಪಾಶ್ಚಾತ್ಯ ಜನರ ಅಂಧಾನುಕರಣೆ ಯನ್ನು ಮಾಡಿದುದರಿಂದ ಭಾರತೀಯರ ಆಚಾರ-ವಿಚಾರಗಳು ವಿಕೃತವಾಗಿವೆ. ನೈಸರ್ಗಿಕ ಪದ್ಧತಿಯಿಂದ ಆಹಾರಪದಾರ್ಥಗಳನ್ನು ಉಳಿಸಿಡುವುದು ಕಾಲಬಾಹಿರವಾಗಿದೆ. ವಿದ್ಯುತ್‌ಚಾಲಿತ ‘ಫ್ರಿಜ್’ ನಂತಹ ಉಪಕರಣಗಳ ಉಪಯೋಗದ ಕಡೆಗೆ ಎಲ್ಲರ ಒಲವಿರುವುದು ಕಂಡು ಬರುತ್ತದೆ. ಈ ಆಧುನಿಕ ಉಪಕರಣಗಳ ಸಹಾಯದಿಂದಾಗುವ ಪ್ರಕ್ರಿಯೆಯಿಂದ ತಮೋಗುಣಿ ವಾಯು ಮಂಡಲ ತಯಾರಾಗುವುದರಿಂದ ಈ ವಾಯುಮಂಡಲದ ಕಡೆಗೆ ಅನಿಷ್ಟ ಶಕ್ತಿಗಳು ಆಕರ್ಷಿತವಾಗುತ್ತವೆ. ಆದ್ದರಿಂದ ಆಹಾರವು ದೂಷಿತವಾಗಿ ಅದನ್ನು ಸೇವಿಸುವವರ ಶರೀರದ ಮೇಲೆ ಅನಿಷ್ಟ ಶಕ್ತಿಗಳ ಆಕ್ರಮಣಗಳಾಗುವ ಪ್ರಮಾಣವು ಹೆಚ್ಚಾಗುತ್ತದೆ. ಇದೇ ಅನುಭವವು ಪರೀಕ್ಷಣೆಯಲ್ಲಿನ ವಿದ್ಯುತ್ ತಂಪುಪೆಟ್ಟಿಗೆಲ್ಲಿ ಇಡಲಾದ ಆಹಾರಪದಾರ್ಥಗಳ ಸಂದರ್ಭದಲ್ಲಿ ಕಂಡುಬಂದಿತು. ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳಲ್ಲಿ ಸಕಾರಾತ್ಮಕ ಸ್ಪಂದನಗಳು ಇಲ್ಲವಾಗಿ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಉಂಟಾದವು. ಆದುದರಿಂದ ವಿದ್ಯುತ್ ತಂಪುಪೆಟ್ಟಿಗೆಯಲ್ಲಿ ಆಹಾರಪದಾರ್ಥ ಗಳನ್ನು ಸಂರಕ್ಷಿಸುವ ಪದ್ಧತಿಯು ಅಸಾತ್ತ್ವಿಕವಾಗಿರುವುದು ಸಿದ್ಧವಾಗುತ್ತದೆ. ಅಸಾತ್ತ್ವಿಕ ಪದ್ಧತಿಯಿಂದ ಉಳಿಸಿಡಲಾದ ಆಹಾರವು ಆರೋಗ್ಯದ ದೃಷ್ಟಿಯಿಂದ ಬಹಳ ಹಾನಿಕರವಾಗಿದೆ.

೩ ಆ. ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥ ಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಉತ್ಪನ್ನ ವಾಗುವುದರ ಕಾರಣಗಳು : ಮಣ್ಣಿನಲ್ಲಿ ಪೃಥ್ವಿತತ್ತ್ವವಿರುತ್ತದೆ. ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳ ಸುತ್ತಲೂ ಪೃಥ್ವಿತತ್ತ್ವದ (ಚೈತನ್ಯದ) ಸಂರಕ್ಷಕ ಕವಚ ಕಾರ್ಯ ನಿರತರಾಗಿರುವುದರಿಂದ ಕೆಟ್ಟ ಶಕ್ತಿಗಳಿಗೆ ಅವುಗಳ ಮೇಲೆ (ಆಹಾರ ಪದಾರ್ಥಗಳ ಮೇಲೆ) ಆಕ್ರಮಣ ಮಾಡಲು ಬರುವುದಿಲ್ಲ. ಮಣ್ಣಿನ ತಂಪುಪೆಟ್ಟಿಗೆಯಲ್ಲಿ ನೈಸರ್ಗಿಕ ಪದ್ಧತಿಯಿಂದ ಸಂರಕ್ಷಿಸಿದ ಆಹಾರ ಪದಾರ್ಥಗಳಲ್ಲಿ ಸಾತ್ತ್ವಿಕ ಸ್ಪಂದನಗಳು ಆಕರ್ಷಿತಗೊಳ್ಳುತ್ತವೆ. ಇದರಿಂದ ಆಹಾರಪದಾರ್ಥಗಳು ಸ್ಥೂಲದಲ್ಲಿ ಚೆನ್ನಾಗಿ ಉಳಿಯುವುದರೊಂದಿಗೆ ಅವುಗಳಲ್ಲಿ ಸಾತ್ತ್ವಿಕತೆಯೂ ಉಳಿಯುತ್ತದೆ. ಇದೇ ಅನುಭವವು ಪರೀಕ್ಷಣೆಯಲ್ಲಿ ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳ ಸಂದರ್ಭದಲ್ಲಿ ಬಂದಿತು. ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಡಲಾದ ಆಹಾರಪದಾರ್ಥಗಳಲ್ಲಿ ನಕಾರಾತ್ಮಕ ಸ್ಪಂದನಗಳು ಇಲ್ಲವಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಉಂಟಾದವು. ಇದರಿಂದ ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಆಹಾಪದಾರ್ಥಗಳನ್ನು ಸಂರಕ್ಷಿಸುವ ಪದ್ಧತಿಯು ಸಾತ್ತ್ವಿಕವಾಗಿದೆ ಎಂದು ಸಿದ್ಧವಾಯಿತು. ಸಾತ್ತ್ವಿಕ ಪದ್ಧತಿಯಿಂದ ಸಂರಕ್ಷಿಸಿದ ಆಹಾರವು ಆರೋಗ್ಯದ ದೃಷ್ಟಿಯಿಂದ ಬಹಳ ಲಾಭದಾಯಕವಾಗಿದೆ.’

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಮೀರಜ. (೨೨.೯.೨೦೨೦)

ಈ-ಮೆಲ್ : [email protected]