ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

ಜಿಗಣೆಯ ಮೇಲೆ ಮಾಡಿದ ಪ್ರಯೋಗಕ್ಕೆ ಅದು ನೀಡಿದ ಸ್ಪಂದನೆಯ ಹಿಂದಿನ ಆಧ್ಯಾತ್ಮಿಕ ವಿಶ್ಲೇಷಣೆ

ಸಂತರೇ ನಿಜವಾದ ಸಂಶೋಧಕರು!

ವಿಜ್ಞಾನ ಮತ್ತು ಅಧ್ಯಾತ್ಮದ ಸುಂದರ ಸಂಯೋಗದಿಂದ ಅಧ್ಯಾತ್ಮವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಹೇಳುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಒಟ್ಟು ಕಾರ್ಯದಲ್ಲಿ ಸಂಶೋಧನಾ ಕ್ಷೇತ್ರದಲ್ಲಿನ ಅವರ ಕಾರ್ಯ ಅದ್ವಿತೀಯವಾಗಿದೆ. ಕಳೆದ ೩೦ ವರ್ಷಗಳಿಂದ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿವಿಧ  ವೈಜ್ಞಾನಿಕ ಉಪಕರಣಗಳ ಮೂಲಕ ವಿಶ್ವದಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕಗಳಂತಹ ಅತೀಂದ್ರಿಯ ಶಕ್ತಿಗಳನ್ನು ತಿಳಿದುಕೊಳ್ಳುವುದು ಅಥವಾ ಅವುಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷ ರೀತಿಯಲ್ಲಿ ಪರೀಕ್ಷಿಸುವುದು ಇತ್ಯಾದಿ ಮಾಧ್ಯಮಗಳಿಂದ ವಿಜ್ಞಾನ ಮತ್ತು ಆಧ್ಯಾತ್ಮದ ಸುಂದರ ಸಂಯೋಗದಿಂದ ಜಗತ್ತಿಗೆ ವೈಜ್ಞಾನಿಕ ಭಾಷೆಯಲ್ಲಿ ಅಧ್ಯಾತ್ಮವನ್ನು ತಿಳಿಸಿ ಹೇಳುವ ಅಮೂಲ್ಯ ಕಾರ್ಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ್ದಾರೆ. ಇದರ ಒಂದು ಉದಾಹರಣೆಯನ್ನು ಮುಂದೆ ನೀಡಲಾಗಿದೆ ವರ್ಷ ೨೦೦೭ ರಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಅನೇಕ ಬಾರಿ ಮಹಾಮೃತ್ಯು ಯೋಗದ ಸಂಕಟಗಳು ಬಂದಿವೆ. ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯು ಯೋಗ ದೂರವಾಗಿ ಅವರಿಗೆ ಒಳ್ಳೆಯ ಆರೋಗ್ಯ ಲಭಿಸಬೇಕೆಂದು ಮಹರ್ಷಿಗಳು ಮತ್ತು ಸಂತರು ಯಜ್ಞಯಾಗ, ಅನುಷ್ಠಾನಗಳು ಹಾಗೆಯೇ ಕೆಲವು ನಾಮಜಪಾದಿ ಉಪಾಯಗಳನ್ನು ಮಾಡಲು ಹೇಳುತ್ತಾರೆ, ಅಲ್ಲದೇ ಪರಾತ್ಪರ ಗುರು ಡಾ. ಆಠವಲೆಯವರಿಗೆ ಆಗುವ ಶಾರೀರಿಕ ತೊಂದರೆಗಳ ಮೇಲೆ ಆಯಾ ಸಮಯದಲ್ಲಿ ವೈದ್ಯಕೀಯ ಉಪಚಾರಗಳನ್ನೂ ಮಾಡಲಾಗುತ್ತದೆ. ಫೆಬ್ರವರಿ ೨೦೨೦ ರಿಂದ ಅವರ ಔಷಧಿಗಳ ಮೇಲೆಯೂ ಕೆಟ್ಟ ಶಕ್ತಿಗಳ ಆಕ್ರಮಣವಾಗುತ್ತಿರುವುದು ಗಮನಕ್ಕೆ ಬಂದಿತು. ‘ಈ ರೀತಿ ಔಷಧಿಗಳ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣವಾದರೆ ರೋಗಿಯ ಆರೋಗ್ಯದಲ್ಲಿ ಸುಧಾರಣೆಯಾಗಲು ಅವಶ್ಯಕತೆಗಿಂತ ಅಧಿಕ ಕಾಲಾವಧಿ ತಗಲಬಹುದು, ಹಾಗೂ ಇನ್ನೂ ಕೆಲವು ಸಲ ರೋಗಿಗೆ ಔಷಧಿಗಳಿಂದ ಯೋಗ್ಯ ಪರಿಣಾಮದ ಲಾಭ ಸಿಗದೇ ದುಷ್ಪರಿಣಾಮಗಳಾಗುವ ಸಾಧ್ಯತೆಯಿದೆ ಎನ್ನುವ ಅದ್ಭುತ ಸಂಶೋಧನೆಯನ್ನು ಪರಾತ್ಪರ ಗುರು ಡಾಕ್ಟರರು ಕಂಡು ಹಿಡಿದರು.

ಈ ಸಂದರ್ಭದಲ್ಲಿ ಅವರು ವೈಜ್ಞಾನಿಕ ಉಪಕರಣಗಳ ಮೂಲಕ ಅವುಗಳ ಪರೀಕ್ಷಣೆಯನ್ನು ನಡೆಸಿ, ಅವುಗಳಲ್ಲಿ ಯಾವ ರೀತಿ ನಕಾರಾತ್ಮಕ ಸ್ಪಂದನಗಳಿರುತ್ತವೆ. ಎನ್ನುವುದನ್ನು ಸಮಾಜದ ಎದುರಿಗೆ ಮಂಡಿಸಿದ್ದಾರೆ ಮತ್ತು ಕೇವಲ ಸಂಶೋಧನೆಯನ್ನು ಮಂಡಿಸುವುದರ ಜೊತೆಗೆ ಅನ್ಯ ಸಂತರ ಮಾರ್ಗದರ್ಶನವನ್ನು ಪಡೆದುಕೊಂಡು ‘ಅದರ ಮೇಲೆ ಏನು ಉಪಾಯಗಳನ್ನು ಮಾಡಬಹುದು?, ಎನ್ನುವುದನ್ನು ಕೂಡ ಶೋಧಿಸಿದ್ದಾರೆ. ಕರ್ನಾಟಕದ ಸಂತರಾದ ಪ.ಪೂ. ದೇವಬಾಬಾರವರು ಪರಾತ್ಪರ ಗುರು ಡಾಕ್ಟರರ ಔಷಧಿಗಳ ಮೇಲೆ ತುಳಸಿದಳವನ್ನು ಇಡಲು ಹೇಳಿದರು. ‘ಔಷಧಿಗಳ ಮೇಲೆ ತುಳಸಿ ದಳವನ್ನು ಇಟ್ಟರೆ ಅವುಗಳ ಮೇಲೆ (ಔಷಧಿಗಳ ಮೇಲೆ) ಏನು ಪರಿಣಾಮವಾಗುತ್ತದೆ?, ಎನ್ನುವುದನ್ನು ಅಧ್ಯಯನ ಮಾಡಲು ಎಪ್ರಿಲ್ ೨೦೨೦ ರಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ‘ತುಳಸಿ ದಳಗಳನ್ನು ಇಡುವುದರಿಂದ ಔಷಧಿಗಳಲ್ಲಿ ಸಕಾರಾತ್ಮಕ ಶಕ್ತಿ ನಿರ್ಮಾಣವಾಗುತ್ತದೆ ಎನ್ನುವುದನ್ನು ಕೂಡ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಪರೀಕ್ಷಣೆಯಿಂದ ಮಂಡಿಸಿದ್ದಾರೆ.

‘ಇವೆಲ್ಲ ಸಂಶೋಧನೆಗಳಿಂದ ಆಧ್ಯಾತ್ಮಿಕ ಜಗತ್ತಿನಲ್ಲಿ ಖಂಡಿತ ಒಂದು ಕ್ರಾಂತಿಕಾರಿಪರ್ವ ಉದಯವಾಗಲಿದೆ, ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ‘ಇದರಿಂದಲೇ ಕೆಲವರಾದರೂ ಸಾಧನೆಯಲ್ಲಿ ತೊಡಗಲಿ ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ ಮತ್ತು ಇದುವೇ ಎಲ್ಲ ಪ್ರಯತ್ನಗಳ ನಿಜವಾದ ಫಲನಿಷ್ಪತ್ತಿಯಾಗಿದೆ.

೧. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದೀಯ ಔಷಧಿಗಳ ಮೇಲೆ (ಮಾತ್ರೆಗಳ ಮೇಲೆ) ಆಗಿರುವ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಆ ಔಷಧಿಗಳು ನಕಾರಾತ್ಮಕ ಸ್ಪಂದನಗಳಿಂದ ತುಂಬುವುದು ಮತ್ತು ನಕಾರಾತ್ಮಕ ಸ್ಪಂದನಗಳಿಂದಾಗಿ ಜಿಗಣೆಯು ಅವುಗಳ ಕಡೆಗೆ ಹೋಗದೇ, ಸಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಔಷಧಿಗಳೆಡೆಗೆ ಆಕರ್ಷಿಸಲ್ಪಡುವುದು

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡುತ್ತಿರುವ ಶ್ರೀ. ಆಶಿಷ ಸಾವಂತ

೧ ಅ. ಅಲೋಪಥಿಯ ಮಾತ್ರೆಗಳು : ಅಲೋ ಪಥಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಎರಡು ರೀತಿಯ ಮಾತ್ರೆಗಳನ್ನು ಜಿಗಣೆಯ ಎದುರಿಗೆ ಇಡಲಾಯಿತು. ಆ ಮಾತ್ರೆಗಳ ಹತ್ತಿರ ಜಿಗಣೆಯನ್ನು ಬಿಟ್ಟಾಗ ಅದು ಮೊದಲು ಸಕಾರಾತ್ಮಕ ಸ್ಪಂದನಗಳಿರುವ ಮಾತ್ರೆಗಳ ಕಡೆಗೆ ಹೋಯಿತು. ಆ ಮಾತ್ರೆಗಳಲ್ಲಿನ ಒಂದು ಮಾತ್ರೆ ಅದರ ಶರೀರಕ್ಕೆ ಅಂಟಿಕೊಂಡಿತು. ಆ ಮಾತ್ರೆಯೊಂದಿಗೆ ಜಿಗಣೆ ಗೋಲಾಕಾರವಾಗಿ ತಿರುಗಿ, ಮರಳಿ ಅದೇ ಸ್ಥಳದಲ್ಲಿ ಆ ಮಾತ್ರೆಯನ್ನು ತಂದಿಟ್ಟಿತು. ಆ ಮಾತ್ರೆಯನ್ನು ಜಿಗಣೆಯು ಎರಡು ಸಲ ಸ್ಪರ್ಶಿಸಿತು ಮತ್ತು ಅದು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಮಾತ್ರೆಗಳ ಕಡೆಗೆ ಹೋಗಲಿಲ್ಲ.

೧ ಆ. ಹೋಮಿಯೋಪಥಿಯ ಮಾತ್ರೆಗಳು : ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಎರಡು ಪ್ರಕಾರದ ಮಾತ್ರೆಗಳನ್ನು ಅದರ ಎದುರಿಗೆ ಇಡಲಾಯಿತು. ಆ ಮಾತ್ರೆಗಳ ಕಡೆಗೆ ಜಿಗಣೆಯನ್ನು ಬಿಟ್ಟಾಗ, ಅದು ಮೊದಲು ಸಕಾರಾತ್ಮಕ ಮಾತ್ರೆಗಳ ಕಡೆಗೆ ಹೋಯಿತು ಮತ್ತು ನಕಾರಾತ್ಮಕ ಸ್ಪಂದನಗಳಿಂದ ತುಂಬಿ ರುವ ಮಾತ್ರೆಗಳ ಕಡೆಗೆ ಹೋಗಲಿಲ್ಲ.

೧ ಇ. ಆಯುರ್ವೇದದ ಮಾತ್ರೆಗಳು : ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಎರಡು ಪ್ರಕಾರದ ಮಾತ್ರೆಗಳನ್ನು ಜಿಗಣೆಯ ಎದುರಿಗೆ ಇಟ್ಟಾಗ, ಅದು ಸಕಾರಾತ್ಮಕ ಮಾತ್ರೆಗಳಿರುವ ಕಡೆಗೆ ಹೋಯಿತು ಮತ್ತು ಆ ಮಾತ್ರೆಗಳನ್ನು ಅದು ತನ್ನ ಬಾಯಿಯಿಂದ ಸ್ಪರ್ಶಿಸಿತು ಮತ್ತು ಅದು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಮಾತ್ರೆಗಳ ಕಡೆಗೆ ಹೋಗಲಿಲ್ಲ.

೧ ಈ. ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಅಲೋಪತಿ, ಹೋಮಿಯೋ ಪತಿ ಮತ್ತು ಆಯುರ್ವೇದದ ಮಾತ್ರೆಗಳ ಬಳಿ ಜಿಗಣೆಯನ್ನು ಬಿಟ್ಟಾಗ ಅದರ ಮೇಲಾಗಿರುವ ಪರಿಣಾಮ : ೧.೮.೨೦೨೦ ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿ ಯಿಂದ ‘ಯೂ.ಎ.ಎಸ್.(ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದ ಮೂಲಕ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದೀಯ ಮಾತ್ರೆಗಳ ಹಾಗೆಯೇ ಜಿಗಣೆಯ ಪರೀಕ್ಷಣೆಯನ್ನು ಮಾಡಲಾಯಿತು. ಸಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಮಾತ್ರೆಗಳಲ್ಲಿ ಸಕಾರಾತ್ಮಕ ಶಕ್ತಿಯಿದ್ದರೆ, ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಮಾತ್ರೆಗಳಲ್ಲಿ ನಕಾರಾತ್ಮಕ ಶಕ್ತಿಯಿತ್ತು. ಅಲೋಪಥಿಯ ಮಾತ್ರೆಗಳ ಪ್ರಯೋಗದ ಬಳಿಕ ಜಿಗಣೆಯ ಸಕಾರಾತ್ಮಕ ಶಕ್ತಿ ಕಡಿಮೆಯಾದರೆ, ಹೋಮಿಯೋಪತಿ ಮತ್ತು ಆಯುರ್ವೇದೀಯ ಮಾತ್ರೆಗಳ ಪ್ರಯೋಗದ ಬಳಿಕ ಜಿಗಣೆಯ ಸಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಯಿತು, ಇದು ಮುಂದೆ ನೀಡಿರುವ ಅಂಶಗಳಿಂದ ಸ್ಪಷ್ಟವಾಗುತ್ತದೆ.

೧ ಈ ೧. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದೀಯ ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಮಾತ್ರೆಗಳಲ್ಲಿ ನಕಾರಾತ್ಮಕ ಶಕ್ತಿಯಿದ್ದರೆ, ಸಕಾರಾತ್ಮಕ ಸ್ಪಂದನಗಳಿಂದ ತುಂಬಿರುವ ಮಾತ್ರೆಗಳಲ್ಲಿ ಸಕಾರಾತ್ಮಕ ಶಕ್ತಿಯಿರುತ್ತದೆ.

೧ ಈ ೨. ಅಲೋಪಥಿಯ ಮಾತ್ರೆಗಳ ಪ್ರಯೋಗದ ಬಳಿಕ ಜಿಗಣೆಯ ಸಕಾರಾತ್ಮಕ ಶಕ್ತಿ ಕಡಿಮೆಯಾಗಿದ್ದರೆ, ಹೋಮಿಯೋಪಥಿ ಮತ್ತು ಆಯುರ್ವೇದೀಯ ಮಾತ್ರೆಗಳ ಪ್ರಯೋಗದ ಬಳಿಕ ಜಿಗಣೆಯ ಸಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗುವುದು

ಪರೀಕ್ಷಣೆಯ ಪ್ರಯೋಗ ಜಿಗಣೆಯ ಸಕಾರಾತ್ಮಕ ಶಕ್ತಿಯ ಪ್ರಭಾವಲಯ (ಮೀಟರ್)  ಪ್ರಯೋಗದ ಬಳಿಕ ಜಿಗಣೆಯ ಸಕಾರಾತ್ಮಕ ಶಕ್ತಿ ಹೆಚ್ಚು-ಕಡಿಮೆಯಾಗುವುದರ ಹಿಂದಿನ ಕಾರಣಗಳು

೨. ವಿಶ್ಲೇಷಣೆ

ಯಾವುದಾದರೊಬ್ಬ ವ್ಯಕ್ತಿಗೆ ಶಾರೀರಿಕ ತೊಂದರೆಗಳು ಅಥವಾ ರೋಗವಿದ್ದರೆ, ಅದರಿಂದ ಆ ವ್ಯಕ್ತಿಯು ಗುಣಮುಖನಾಗಬೇಕೆಂದು ಆಧುನಿಕ ವೈದ್ಯರು (ಡಾಕ್ಟರು) ಆ ವ್ಯಕ್ತಿಗೆ ಔಷಧಿಗಳನ್ನು ಕೊಡುತ್ತಾರೆ. ಪರೀಕ್ಷಣೆ ನಡೆಸಿದ ಔಷಧಿಗಳ ಮೇಲೆ ಅನಿಷ್ಟ ಶಕ್ತಿಗಳು ಆಕ್ರಮಣ ಮಾಡಿ, ಅವುಗಳಲ್ಲಿ ತೊಂದರೆದಾಯಕ ಸ್ಪಂದನಗಳಿಂದ ತುಂಬಿಸಿದ್ದವು. ಈ ಔಷಧಿಗಳನ್ನು ರೋಗಿಗೆ ಕೊಟ್ಟರೆ ಅವನು ಗುಣಮುಖನಾಗುವ ಬದಲು ಅವನ ಜೀವಕ್ಕೆ (ಪ್ರಾಣ) ಅಪಾಯವಾಗಬಹುದು. ಅಲೋಪಥಿ, ಹೋಮಿಯೋ ಪಥಿ ಮತ್ತು ಆಯುರ್ವೇದೀಯ ಔಷಧಿಗಳ (ಮಾತ್ರೆಗಳ) ಮೇಲೆ ಅನಿಷ್ಟ ಶಕ್ತಿಗಳ ಆಕ್ರಮಣಗಳಿಂದ ಆ ಔಷಧಿಗಳು ನಕಾರಾತ್ಮಕ ಸ್ಪಂದನಗಳಿಂದ ತುಂಬಿದ್ದವು. ಈ ಕಾರಣದಿಂದ ಜಿಗಣೆ ಮೂರೂ ನಕಾರಾತ್ಮಕ ಔಷಧಿಗಳ ಹತ್ತಿರ ಹೋಗಲಿಲ್ಲ.

೨ ಅ. ದೇವಾಸುರರ ಯುದ್ಧದ ವೈಶಿಷ್ಟ್ಯವೆಂದರೆ, ‘ಅಧರ್ಮದ ಪಕ್ಷ (ಆಸುರಿ ಶಕ್ತಿಗಳು) ಎಷ್ಟೇ ಬಲಾಢ್ಯ ಮತ್ತು ಕಪಟವಾಗಿದ್ದರೂ ‘ಧರ್ಮದ ಪಕ್ಷ (ಸಂತರು ಮತ್ತು ಸಾಧಕರು) ಸತ್ಯದ ಪರವಾಗಿ ಹೋರಾಡುತ್ತಿರುವುದರಿಂದ, ಈಶ್ವರನ ಆಶೀರ್ವಾದದಿಂದ ಧರ್ಮದ ವಿಜಯವೇ ಆಗುತ್ತದೆ. ದೇವಾಸುರರ ಯುದ್ಧದಲ್ಲಿ ಈಶ್ವರನು ಭಕ್ತರನ್ನು ತನ್ನ ಲೀಲೆಯಿಂದ ರಕ್ಷಿಸುತ್ತಾನೆ. ನಾವು ಮಾಡಿರುವ ಪ್ರಯೋಗದಲ್ಲಿ ತುಳಸಿ ಎಲೆಗಳಿಂದ ಪ್ರಕ್ಷೇಪಿಸಲ್ಪಡುವ ಸಾತ್ತ್ವಿಕ ಸ್ಪಂದನಗಳಿಂದ ಔಷಧಿಗಳಲ್ಲಿರುವ ನಕಾರಾತ್ಮಕ ಸ್ಪಂದನ ಗಳು ೪-೫ ದಿನಗಳಲ್ಲಿ ನಾಶವಾಗಿ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಸ್ಪಂದನಗಳು ಬಂದಿವೆ. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದೀಯ ಔಷಧಿ ಮಾತ್ರೆಗಳಲ್ಲಿರುವ ಸಕಾರಾತ್ಮಕ ಸ್ಪಂದನಗಳಿಂದ ಜಿಗಣೆಯು ಮೂರೂ ರೀತಿಯ ಸಕಾರಾತ್ಮಕ ಔಷಧಿಗಳತ್ತ ಆಕರ್ಷಿತವಾಯಿತು. ಹಾಗೆಯೇ ನಕಾರಾತ್ಮಕ ಸ್ಪಂದನಗಳಿರುವ ಔಷಧಿಗಳಿಂದ ಅದು ದೂರ ಹೋಯಿತು.

೩. ಪ್ರಾಣಿ ಮತ್ತು ಪಕ್ಷಿಗಳಿಗೆ ಯಾವುದು ತಿಳಿಯುತ್ತದೆಯೋ, ಅದು ಮನುಷ್ಯರಿಗೆ ತಿಳಿಯುವುದಿಲ್ಲ

ಪ್ರಾಣಿಗಳ ಬಾಹ್ಯ ಮನಸ್ಸು ದೊಡ್ಡದಿರುತ್ತದೆ ಮತ್ತು ಒಳಮನಸ್ಸು ಚಿಕ್ಕದಿರುತ್ತದೆ. ಆದುದರಿಂದಲೇ ಅವು ಬುದ್ಧಿಯಿಂದ ಹೆಚ್ಚು ವಿಚಾರ ಮಾಡಲಾರವು; ಆದರೆ ಮನುಷ್ಯನ ಅಂತ ರ್ಮನಸ್ಸು ದೊಡ್ಡದು ಮತ್ತು ಬಾಹ್ಯಮನಸ್ಸು ಚಿಕ್ಕದಾಗಿರುತ್ತದೆ. ಮನುಷ್ಯನ ಚಿತ್ತದ ಮೇಲಿನ ಸಂಸ್ಕಾರಗಳಿಂದ ಅವನಿಗೆ ಸೂಕ್ಷ್ಮ ವಿಚಾರಗಳು ಹೆಚ್ಚು ಅರಿವಾಗುತ್ತವೆ. ಪ್ರಾಣಿಗಳ ವ್ಯವಹಾರ ನೈಸರ್ಗಿಕ ಪ್ರೇರಣೆಗನುಸಾರ ಮತ್ತು ಮನುಷ್ಯನ ವ್ಯವಹಾರ ಬುದ್ಧಿ ನೀಡುವ ನಿರ್ಣಯಗಳಿಗೆ ಅನುಗುಣವಾಗಿರುತ್ತವೆ. ಇದರಿಂದ ‘ಎಲ್ಲ ಪ್ರಾಣಿಗಳಲ್ಲಿ ಮನುಷ್ಯ ಪ್ರಾಣಿಯು ಎಲ್ಲರಿಗಿಂತ ಹೆಚ್ಚು ಬುದ್ಧಿವಂತನಾಗಿದ್ದಾನೆ ಎಂಬುದು ಕಂಡು ಬರುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಮತ್ತು ಅಂಧಾನುಕರಣೆಯಿಂದ ಮನುಷ್ಯನು ಸೂಕ್ಷ್ಮ ವಿಚಾರಗಳನ್ನು ಗ್ರಹಿಸುವ ಬದಲು ಇಂದ್ರಿಯಜನ್ಯ ವಿಚಾರಗಳ ಹಿಂದೆ ಓಡುತ್ತಿದ್ದಾನೆ. ಇದರಿಂದ ಮನುಷ್ಯನಿಗೆ ಸಕಾರಾತ್ಮಕ ಸ್ಪಂದನಗಳು ಮತ್ತು ನಕಾರಾತ್ಮಕ ಸ್ಪಂದನಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಪ್ರಾಣಿಗಳಿಗೆ ಯಾವುದು ಅರಿವಾಗುತ್ತದೆಯೋ, ಅದು ಮನುಷ್ಯನಿಗೆ ಅರಿವಾಗುವುದಿಲ್ಲ. ಇದು ಜಿಗಣೆಯ ಮೇಲಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಆದುದರಿಂದ ದಾರಿತಪ್ಪಿರುವ ಮನುಷ್ಯ ಪ್ರಾಣಿಗಳು ಈಗ ಸೃಷ್ಟಿಯ ಇತರ  ಪ್ರಾಣಿಗಳಿಂದ ಕಲಿತು ಅವುಗಳ ಅನುಕರಣೆಯನ್ನು ಮಾಡುವುದು ಆವಶ್ಯಕವಾಗಿದೆ. ಇದರಿಂದ ‘ಮನುಷ್ಯನಿಗೆ ಅವನತಿಯಿಂದ ಉನ್ನತಿಯೆಡೆಗೆ ಹೋಗಲು ಸಾಧನೆಯ ಆವಶ್ಯಕತೆಯಿದೆ, ಎನ್ನುವುದು ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯರ ಮಾಯಾವಿ ಜಗತ್ತಿಗೆ ಬಲಿಯಾಗಿ ಅಧೋಗತಿಗೆ ಹೋಗುವುದಕ್ಕಿಂತ ಸಾಧನೆ ಮಾಡಿ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳುವುದೇ ಜೀವನದ ಇತಿಶ್ರೀಯಾಗಿದ್ದರಿಂದ ಸಾಧನೆಯನ್ನು ಇಂದಲ್ಲ ಈಗಲೇ ಪ್ರಾರಂಭಿಸಿರಿ ! – ಕು. ಪ್ರಿಯಾಂಕಾ ಲೋಟಲಿಕರ, ಸಂಶೋಧನಾ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೮.೨೦೨೦)

ಸಾತ್ತ್ವಿಕ ವಿಷಯಗಳತ್ತ ಪ್ರಾಣಿಗಳು ಆಕರ್ಷಿತವಾಗುತ್ತವೆ, ಈ ವಿಷಯದಲ್ಲಿ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘ಸಾಧಕರ ಮನೆಗಳಲ್ಲಿನ ಸಾಕಿದ ನಾಯಿ, ಕೋಳಿಗಳಂತಹ ಪಶು-ಪಕ್ಷಿಗಳು ಸನಾತನದ ಸಂಪರ್ಕಕ್ಕೆ ಬರುತ್ತಿವೆ ಮತ್ತು ಅವುಗಳಲ್ಲಿರುವ ಸಾತ್ತ್ವಿಕತೆಯ ಅನುಭೂತಿಯೂ ಸಾಧಕರಿಗೆ ಬರುತ್ತಿದೆ. ಗೋವಾದಲ್ಲಿರುವ ಸನಾತನದ ಆಶ್ರಮದ ಮುಖ್ಯ ಪ್ರವೇಶದ್ವಾರದಲ್ಲಿ ಒಂದು ಜಿಗಣೆ ಕಂಡು ಬಂದಿತು. ಅದರ ಮೇಲೆ ವಿವಿಧ ಪ್ರಯೋಗಗಳನ್ನು ಮಾಡಿದಾಗ ಅದು ಸಾತ್ತ್ವಿಕ ವಿಷಯಗಳ ಗಡೆಗೆ ಆಕರ್ಷಿತವಾಗುತ್ತಿರುವುದು ಗಮನಕ್ಕೆ ಬಂದಿತು. ‘ಸಾತ್ತ್ವಿಕ ವಿಷಯಗಳ ಕಡೆಗೆ ಪ್ರಾಣಿಗಳು ಆಕರ್ಷಿತಗೊಳ್ಳುತ್ತವೆ. ಅದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು ? ಯಾವ ಯಂತ್ರಗಳ ಮಾಧ್ಯಮದಿಂದ ಇವುಗಳ ಸಂಶೋಧನೆಯನ್ನು ಮಾಡಬಹುದು ಎನ್ನುವ ಸಂಧರ್ಭದಲ್ಲಿ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆಯನ್ನು ಮಾಡುವವರ ಸಹಾಯ ಲಭಿಸಿದರೆ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ, – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಗೋವಾ

(ಸಂಪರ್ಕ: ಶ್ರೀ ರೂಪೇಶ ಲಕ್ಷ್ಮಣ ರೇಡಕರ, ಇ-ಮೇಲ್ : [email protected])