ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ಶ್ರೀ ಗಣೇಶ ಮೂರ್ತಿಯು ಮಣ್ಣಿನ, ಚಿಕ್ಕದಾದ, ಮಣೆಯಮೇಲೆ ಕುಳಿತಿರುವ ಹೀಗೆ ಶಾಸ್ತ್ರಕ್ಕನುಸಾರವಾಗಿದ್ದರೆ, ಭಕ್ತರಿಗೆ ಗಣೇಶೋತ್ಸವದ ನಿಜವಾದ ಲಾಭವಾಗುತ್ತದೆ. ಈ ದೃಷ್ಟಿಯಿಂದ ವಿಗ್ರಹಕಾರರು, ಭಕ್ತರು ಮತ್ತು ಗಣೇಶೋತ್ಸವ ಮಂಡಳಿಯವರಿಗಾಗಿ ಪ್ರಬೋಧನೆ ಮಾಡಲಾಗಿದೆ. ಅದೇರೀತಿ ಆದರ್ಶವಾಗಿರುವ ಸನಾತನ-ನಿರ್ಮಿತ ಗಣೇಶಮೂರ್ತಿಯ ಅಳತೆಗಳನ್ನೂ ಕೊಡಲಾಗಿದೆ.

ಶ್ರೀ ಗಣೇಶಮೂರ್ತಿ ವಿಸರ್ಜನೆಯ ಬಗ್ಗೆ ಶಾಸ್ತ್ರೋಕ್ತ ಮಾಹಿತಿ 

ಗಣೇಶೋತ್ಸವದ ನಂತರ ಉತ್ತರಪೂಜೆಯ ನಂತರ ಮೂರ್ತಿಯನ್ನು ಜಲಾಶಯಗಳಲ್ಲಿ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸುತ್ತಾರೆ. ವಿಸರ್ಜನೆಗೆ ಹೋಗುವಾಗ ಗಣಪತಿಯ ಜೊತೆಗೆ ಮೊಸರು, ತೆಂಗಿನಕಾಯಿ, ಮೋದಕ, ಅವಲಕ್ಕಿ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವಾಗ ಮತ್ತೊಮ್ಮೆ ಆರತಿ ಮಾಡಿ ತಮ್ಮ ಜೊತೆಗೆ ತಂದಿರುವ ಮೇಲಿನ ವಸ್ತುಗಳೊಂದಿಗೆ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುತ್ತಾರೆ

ಕ್ಷಾಮಪೀಡಿತ ಭಾಗದಲ್ಲಿ ಅಥವಾ ಆಪತ್ಕಾಲದ ಪರಿಸ್ಥಿತಿಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಇರುವ ಪರ್ಯಾಯಗಳು !

‘ಯಾವುದಾದರೊಂದು ವರ್ಷ ಬೇಕಾದಷ್ಟು ಮಳೆ ಬೀಳದಿದ್ದರೆ ನದಿ, ಹಳ್ಳ, ಕೊಳ ಸಾಕಷ್ಟು ಒಣಗುತ್ತವೆ. ಇದರಿಂದ ಶ್ರೀ ಗಣೇಶಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲು ಅಡಚಣೆಯಾಗುವ ಸಾಧ್ಯತೆಯಿರುತ್ತದೆ. ಬರಗಾಲದ ಪರಿಸ್ಥಿತಿಯಲ್ಲಿಯೂ ಧಾರ್ಮಿಕ ಕೃತಿಗಳನ್ನು ಅಧ್ಯಾತ್ಮದ ತತ್ತ್ವಗಳಿಗನುಸಾರ ಮಾಡಿದರೆ ಅದು ಧರ್ಮಶಾಸ್ತ್ರಕ್ಕೆ ಸಮ್ಮತವಾಗಿರುತ್ತದೆ.

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ಗಣಪತಿಗೆ ಮಾಡಬೇಕಾದ ಪ್ರಾರ್ಥನೆ

ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.

ಕೊರೊನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?

ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶ ಚತುರ್ಥಿಗೆ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶ ತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ.