ಸೊಂಡಿಲು
ಬಲಗಡೆಯ ಸೊಂಡಿಲು
ಬಲಬದಿಗೆ ಸೊಂಡಿಲಿರುವ (ಬಲಮುರಿ) ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮುಖಿ ಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ ಗಣಪತಿ ಎಂದು ಹೇಳುತ್ತಾರೆ. ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರಿಶೋಧನೆ ಆಗುತ್ತದೆ, ಆದುದರಿಂದ ದಕ್ಷಿಣ ದಿಕ್ಕು ನಮಗೆ ಬೇಡವೆನಿಸುತ್ತದೆ. ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ ಯಾವ ರೀತಿಯ ಪರಿಶೋಧನೆಯಾಗುತ್ತದೆಯೋ, ಅದೇ ರೀತಿಯ ಪರಿಶೋಧನೆಯು ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತರೆ ಅಥವಾ ಕಾಲುಚಾಚಿ ಮಲಗಿದರೆ ಆಗುತ್ತದೆ. ದಕ್ಷಿಣಾಭಿಮುಖಿಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿಯಂತೆ ಮಾಡುವುದಿಲ್ಲ. ಏಕೆಂದರೆ, ದಕ್ಷಿಣದಿಂದ ‘ತಿರ್ಯಕ್ (ರಜ-ತಮ) ಲಹರಿಗಳು ಬರುತ್ತವೆ. ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಅದರಿಂದ ಸಾತ್ತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.
ಎಡಗಡೆಯ ಸೊಂಡಿಲು
ಎಡಬದಿಗೆ ಸೊಂಡಿಲಿರುವ ಮೂರ್ತಿ (ಎಡಮುರಿ) ಎಂದರೆ ವಾಮಮುಖಿ ಗಣಪತಿ. ವಾಮ ಎಂದರೆ ಎಡಬದಿ ಅಥವಾ ಉತ್ತರದಿಕ್ಕು. ಎಡಬದಿಗೆ ಚಂದ್ರನಾಡಿಯು ಇರುತ್ತದೆ ಮತ್ತು ಅದು ಶೀತಲತೆಯನ್ನು ಕೊಡುತ್ತದೆ, ಹಾಗೆಯೇ ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕವಾಗಿದೆ, ಆನಂದದಾಯಕವಾಗಿದೆ; ಆದುದರಿಂದಲೇ ವಾಮಮುಖಿ (ಎಡಮುರಿ) ಗಣಪತಿಯನ್ನು ಪೂಜೆಯಲ್ಲಿ ಇಡುತ್ತಾರೆ. ಈ ಗಣಪತಿಯ ಪೂಜೆಯನ್ನು ದಿನನಿತ್ಯದ ಪೂಜೆಯಂತೆ ಮಾಡುತ್ತಾರೆ.
ಮೋದಕ
‘ಮೋದ ಎಂದರೆ ಆನಂದ ಮತ್ತು ‘ಕ ಎಂದರೆ ಚಿಕ್ಕ ಭಾಗ. ಮೋದಕವೆಂದರೆ ಆನಂದದ ಚಿಕ್ಕ ಭಾಗ. ಮೋದಕದ ಆಕಾರವು ತೆಂಗಿನಕಾಯಿಯಂತೆ, ಎಂದರೆ ‘ಖ ಈ ಬ್ರಹ್ಮರಂಧ್ರದಲ್ಲಿನ ಟೊಳ್ಳಿ ನಂತಿರುತ್ತದೆ. ಕುಂಡಲಿನಿಯು ‘ಖದವರೆಗೆ ತಲುಪಿದಾಗ ಆನಂದದ ಅನುಭೂತಿಯು ಬರುತ್ತದೆ. ಕೈಯಲ್ಲಿ ಹಿಡಿದ ಮೋದಕವೆಂದರೆ, ಆನಂದವನ್ನು ಪ್ರದಾನಿಸುವ ಶಕ್ತಿ.
ಮೋದಕವು ಜ್ಞಾನದ ಪ್ರತೀಕವಾಗಿದೆ; ಆದುದರಿಂದ ಅದನ್ನು ಜ್ಞಾನಮೋದಕವೆಂದೂ ಕರೆಯುತ್ತಾರೆ. ಮೊದಲು, ಜ್ಞಾನವು ಸ್ವಲ್ಪವೇ ಇದೆ ಎಂದೆನಿಸುತ್ತದೆ (ಮೋದಕದ ತುದಿಯು ಇದರ ಪ್ರತೀಕವಾಗಿದೆ); ಆದರೆ ಅಧ್ಯಯನ ಮಾಡತೊಡಗಿದಾಗ ಜ್ಞಾನವು ಬಹಳ ವಿಶಾಲವಾಗಿದೆ ಎಂಬುದು ತಿಳಿಯುತ್ತದೆ. (ಮೋದಕದ ಕೆಳಭಾಗವು ಇದರ ಪ್ರತೀಕವಾಗಿದೆ) ಮೋದಕವು ಸಿಹಿಯಾಗಿರುತ್ತದೆ ಅದೇ ರೀತಿ ಜ್ಞಾನದ ಆನಂದವೂ ಸಿಹಿಯಾಗಿರುತ್ತದೆ.
ಅಂಕುಶ
ಆನಂದ ಮತ್ತು ವಿದ್ಯೆಯನ್ನು ಸಂಪಾದಿಸುವ ಮಾರ್ಗದಲ್ಲಿ ವಿಘ್ನಗಳನ್ನು ತರುವ ಕೆಟ್ಟ ಶಕ್ತಿಗಳ ವಿನಾಶ ಮಾಡಲು
ಪಾಶ
ಶ್ರೀ ಗಣಪತಿಯು ಕೆಟ್ಟ ವಿಷಯಗಳನ್ನು ಪಾಶದ ಸಹಾಯದಿಂದ ದೂರ ಮಾಡುತ್ತಾನೆ.
ಸೊಂಟಕ್ಕೆ ಕಟ್ಟಿರುವ ನಾಗ
ನಾಗದ ಹೆಡೆ
ಇಲಿ / ಮೂಷಿಕ
ಮೂಷಿಕ, ಇದರ ಅರ್ಥ ರಜೋಗುಣವು ಗಣಪತಿಯ ನಿಯಂತ್ರಣದಲ್ಲಿದೆ.
(ಹೆಚ್ಚಿನ ಮಾಹಿತಿಗೆ ಓದಿ : ಸನಾತನ ನಿರ್ಮಿಸಿದ ಗ್ರಂಥ ‘ಶ್ರೀ ಗಣಪತಿ)