ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಮೂರ್ತಿಯು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ !

ವಿವಿಧ ವಸ್ತುಗಳಿಂದ ತಯಾರಿಸಿದ ಅಸಾತ್ತ್ವಿಕ ಗಣೇಶ ಮೂರ್ತಿ

ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್, ಕಾಗದ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶನ ಮೂರ್ತಿಯನ್ನು ತಯಾರಿಸಲಾಗು ತ್ತದೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಗಳ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿತವಾಗುವುದಿಲ್ಲ. ಕಲೆಯನ್ನು ಕೇವಲ ಕಲಾತ್ಮಕತೆಗಾಗಿ ಬಳಸುವುದರಿಂದ ಆ ಕಲಾಕೃತಿಯಲ್ಲಿ ದೈವೀ ಸ್ಪಂದನಗಳನ್ನು ಆಕರ್ಷಿಸುವ ಪ್ರಮಾಣ ಕಡಿಮೆಯಿರುತ್ತದೆ. ಇದರಿಂದಲೇ ವಿಕೃತಿಯ ಉಂಟಾಗುತ್ತದೆ. ಈ ರೀತಿಯ ಕಲಾಕೃತಿಯಲ್ಲಿ ಅಹಂನ ಸ್ಪಂದನಗಳ ಪ್ರಮಾಣ ಹೆಚ್ಚಿರುವುದರಿಂದ, ಆ ಕಲಾಕೃತಿಯ ಕಡೆಗೆ ಕಪ್ಪು ಶಕ್ತಿಯ ಸ್ಪಂದನಗಳು ಆಕರ್ಷಿತವಾಗುವ ಪ್ರಮಾಣವು ಹೆಚ್ಚಿರುತ್ತದೆ. ಆದುದರಿಂದ ಮಾರುಕಟ್ಟೆಯಲ್ಲಿ ದೊರಕುವ ದೇವತೆಗಳ ಚಿತ್ರಗಳಲ್ಲಿ ಸಾತ್ತ್ವಿಕತೆಯ ಪ್ರಮಾಣವು ಕಡಿಮೆಯಿರುತ್ತದೆ. ಆದರೆ ಕಲೆಗೆ ಸಾತ್ತ್ವಿಕತೆಯನ್ನು ಜೋಡಿಸಿದರೆ ಕಲಾಕೃತಿ ದೇವತ್ವವನ್ನು ನಿರ್ಮಿಸುತ್ತದೆ.

‘ಇಕೊ-ಫ್ರೆಂಡ್ಲಿ ಗಣೇಶಮೂರ್ತಿ ವ್ಯಾಪಾರಿಗಳ ವಂಚನೆಯಿಂದ ಎಚ್ಚರ !

ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (‘ಇಕೊಲೊಜಿಕಲ್ ಫ್ರೆಂಡ್ಲಿ ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿಗಳನ್ನು ತಯಾರಿಸಲು ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತವೆ. ಈ ರೀತಿಯ ಮೂರ್ತಿಗಳು ಅಶಾಸ್ತ್ರೀಯವಾಗಿವೆ, ಅಲ್ಲದೇ ಪರಿಸರಕ್ಕೂ ಹಾನಿಕರವಾಗಿದೆ, ಕಾಗದದ ಮುದ್ದೆಗಳಿಂದ ಶ್ರೀಗಣೇಶಮೂರ್ತಿಯನ್ನು ತಯಾರಿಸುವುದರಿಂದಾಗುವ ಹಾನಿಗಳು ಮುಂದಿನಂತಿವೆ.

೧. ಕಾಗದದ ಮುದ್ದೆಯು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರಿಕೊಳ್ಳುತ್ತದೆ ಮತ್ತು ಅದರಿಂದ ಜೀವ ಸೃಷ್ಟಿಗೆ ಹಾನಿಕರವಾದ ‘ಮಿಥೇನ್ ವಾಯು ಉತ್ಪನ್ನವಾಗುತ್ತದೆ.

೨. ‘ಕಾಗದದ ಮುದ್ದೆಯಲ್ಲಿ ‘ಟಾಲ್ಕ್ ಎಂಬ ಅಜೈವಿಕ ರಾಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಅದು ನೀರಿನಲ್ಲಿ ಕರಗುವುದಿಲ್ಲ.

೩. ಮರದಿಂದ ನಿರ್ಮಿಸಿದ ಕಾಗದದ ತಿರುಳಿನಲ್ಲಿ ‘ಲಿಗ್ನಿನ್ ಎಂಬ ಹೆಸರಿನ ವಿಷಕಾರಿ ಪದಾರ್ಥವಿರುತ್ತದೆ. ಒಂದು ವೇಳೆ ಅದು ನೀರಿನಲ್ಲಿ ಸೇರಿಕೊಂಡರೆ ಅದರಿಂದ ಗಂಭೀರ ಪರಿಣಾಮಗಳಾಗಬಹುದು.

೪. ಕಾಗದದ ಮುದ್ದೆಯಿಂದ ನೀರಿನಲ್ಲಿರುವ ಬಿ.ಒ.ಡಿ. (ಬಯಾಲಾಜಿಕಲ್ ಆಕ್ಸಿಜನ್ ಡಿಮಾಂಡ್) ಮತ್ತು ಸಿ.ಒ.ಡಿ. (ಕೆಮಿಕಲ್ ಆಕ್ಸಿಜನ್ ಡಿಮಾಂಡ್) ಪ್ರಚಂಡ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಮತ್ತು ನೀರು ಕಪ್ಪಾಗುತ್ತದೆ.

೫. ನೀರಿನಲ್ಲಿ ತೇಲುವ ಕಾಗದದ ಮುದ್ದೆಯ ತುಂಡುಗಳು ಮೀನುಗಳ ಜಲಪುಪ್ಪುಸಗಳಲ್ಲಿ ಸಿಲುಕಿ ಅವು ಸಾವನ್ನಪ್ಪುವ ಪ್ರಮಾಣ ಹೆಚ್ಚಾಗುತ್ತದೆ.

ಸಂಬಂಧಪಟ್ಟ ಸಂಸ್ಥೆಗಳ ಪರಿಸರದ ಕಾಳಜಿಯು ಕೇವಲ ಮೇಲು ಮೇಲಿನದ್ದಾಗಿದೆ ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಹಿಂದೂ ಧರ್ಮಶಾಸ್ತ್ರವು ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನು ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಗೋಮಯದಿಂದ ತಯಾರಿಸಿದ ಅಸಾತ್ತ್ವಿಕ ಗಣೇಶ ಮೂರ್ತಿ

‘ಗೋಮಯದಿಂದ ತಯಾರಿಸಿದ ಗಣೇಶಮೂರ್ತಿ

‘ಗೋಮಯದಿಂದ (ಆಕಳ ಸೆಗಣಿಯಿಂದ) ತಯಾರಿಸಿದ ‘ಗೋಬರ್ ಗಣೇಶಮೂರ್ತಿಯ ಪೂಜೆ ಮಾಡಿದರೆ ಬೇಗನೇ ಫಲಪ್ರಾಪ್ತಿಯಾಗುತ್ತದೆ, ಹಾಗೆಯೇ ಮಣ್ಣು ಮತ್ತು ಗೋಮಯಗಳಿಂದ ತಯಾರಿಸಿದ ಮೂರ್ತಿಯಲ್ಲಿ ಪಂಚ ತತ್ತ್ವಗಳು ವಾಸಿಸುತ್ತವೆ, ಇಂತಹ ಅಯೋಗ್ಯ ಪ್ರಚಾರ ಮಾಡಲಾಗುತ್ತದೆ. ಗೋಮಯದಿಂದ ತಯಾರಿಸಿದ ಗಣೇಶಮೂರ್ತಿ ಅಶಾಸ್ತ್ರೀಯವಾಗಿದೆ. ಇದರ ಕಾರಣ ಹೀಗಿದೆ – ಗೋಮಯ ಅಥವಾ ಗೋಮೂತ್ರ ಇವುಗಳಲ್ಲಿ ಮೂಲತಃ ಗೋಮಾತೆಯ ತತ್ತ್ವವಿರುತ್ತದೆ. ಶಾಸ್ತ್ರಕ್ಕನುಸಾರ ಯಾವುದಾದರೊಂದು ವಸ್ತುವಿನಲ್ಲಿ ಮೊದಲೇ ಬೇರೆ ತತ್ತ್ವವಿದ್ದಲ್ಲಿ, ಅಲ್ಲಿ ಇನ್ನೊಂದು ತತ್ತ್ವ ಬರುವುದಿಲ್ಲ. ಆದ್ದರಿಂದ ನೈಸರ್ಗಿಕವಾಗಿ ಗೋಮಾತೆಯ ತತ್ತ್ವವಿರುವ ಗೋಮಯದಲ್ಲಿ ಗಣೇಶತತ್ತ  ಆಕರ್ಷಿತವಾಗಲು ಸಾಧ್ಯವಿಲ್ಲ.