ಶ್ರೀ ಗಣೇಶಮೂರ್ತಿ ವಿಸರ್ಜನೆಯ ಬಗ್ಗೆ ಶಾಸ್ತ್ರೋಕ್ತ ಮಾಹಿತಿ
ಗಣೇಶೋತ್ಸವದ ನಂತರ ಉತ್ತರಪೂಜೆಯ ನಂತರ ಮೂರ್ತಿಯನ್ನು ಜಲಾಶಯಗಳಲ್ಲಿ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸುತ್ತಾರೆ. ವಿಸರ್ಜನೆಗೆ ಹೋಗುವಾಗ ಗಣಪತಿಯ ಜೊತೆಗೆ ಮೊಸರು, ತೆಂಗಿನಕಾಯಿ, ಮೋದಕ, ಅವಲಕ್ಕಿ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವಾಗ ಮತ್ತೊಮ್ಮೆ ಆರತಿ ಮಾಡಿ ತಮ್ಮ ಜೊತೆಗೆ ತಂದಿರುವ ಮೇಲಿನ ವಸ್ತುಗಳೊಂದಿಗೆ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುತ್ತಾರೆ