‘ಸಪ್ತರ್ಷಿಗಳು ಪೂ. (ಡಾ.) ಓಂ ಉಲಗನಾಥನ್‌ರವರ ಮಾಧ್ಯಮದಿಂದ ಹೇಳಿದಂತೆ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಪ್ರತಿಷ್ಠಾಪಿಸಲು ತಯಾರಿಸಿಕೊಂಡಿದ್ದ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿ ವಿನಾಯಕನ ಮೂರ್ತಿಯು ೨೧.೨.೨೦೨೦ ರ ಮಹಾಶಿವರಾತ್ರಿಯ ದಿನದಂದು ರಾಮನಾಥಿ ಆಶ್ರಮಕ್ಕೆ ಶುಭಾಗಮನವಾಯಿತು. ಆಗ ಆಶ್ರಮದಲ್ಲಿನ ನಾವೆಲ್ಲ ಸಾಧಕರು ಮತ್ತು ಸಂತರು ಶ್ರೀ ಸಿದ್ಧಿವಿನಾಯಕನ ಮೂರ್ತಿಯನ್ನು ಗೌರವಾದರ ಮತ್ತು ಪುಷ್ಪವೃಷ್ಟಿಯೊಂದಿಗೆ ಆಶ್ರಮದಲ್ಲಿ ಕರೆದುಕೊಳ್ಳಲು ಉಪಸ್ಥಿತರಿದ್ದೆವು. ಆಶ್ರಮದಲ್ಲಿ ಬಂದ ಬಳಿಕ ಶ್ರೀ ಸಿದ್ಧಿವಿನಾಯಕನ ಪಂಚೋಪಚಾರ ಪೂಜೆಯನ್ನು ಮಾಡಲಾಯಿತು. ಆಗ ನನಗೆ ಶ್ರೀ ಸಿದ್ಧಿವಿನಾಯಕ ಮೂರ್ತಿಯ ಸಂದರ್ಭದಲ್ಲಿ ಬಂದ ಅನುಭೂತಿಗಳನ್ನು ಇಲ್ಲಿ ನೀಡುತ್ತಿದ್ದೇನೆ.
೧. ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಶುಭಾಗಮನ ಆಗುತ್ತಿರುವಾಗ ಅದು ಸುಮಾರು ೨೫ ಮೀಟರ್ ದೂರವಿರುವಾಗಲೇ ಮೂರ್ತಿಯಿಂದ ಬಹಳಷ್ಟು ಪ್ರಮಾಣದಲ್ಲಿ ತಣ್ಣನೆಯ ಲಹರಿಗಳ ಅರಿವಾಗುವುದು ಮತ್ತು ಅದು ಶರೀರದಾದ್ಯಂತ ಪಸರಿಸುವುದು
ಆಶ್ರಮದ ಪರಿಸರದಲ್ಲಿ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಆಗಮನವಾಗುತ್ತಿರುವಾಗ, ಆ ಮೂರ್ತಿಯು ಸಾಧಾರಣ ೨೫ ಮೀಟರ ದೂರ ಇರುವಾಗಲೇ ನನಗೆ ಮೂರ್ತಿಯಿಂದ ಬಹಳಷ್ಟು ಪ್ರಮಾಣದಲ್ಲಿ ತಣ್ಣನೆಯ ಲಹರಿಗಳು ಬರುತ್ತಿರುವುದು ಅರಿವಾಯಿತು. ಆಗ ನನಗೆ ‘ತಣ್ಣನೆಯ ಸುಳಿಗಾಳಿಯೇ ಬೀಸುತ್ತಿದೆ, ಎಂದೆನಿಸಿತು. ನನ್ನ ಸಂಪೂರ್ಣ ದೇಹಕ್ಕೆ ಆ ತಣ್ಣನೆಯ ಲಹರಿಗಳ ಅರಿವಾಯಿತು.
೨. ಶ್ರೀ ಗಣೇಶಮೂರ್ತಿಯನ್ನು ನೋಡಿ ನನಗೆ ಬಹಳ ಆನಂದ ವೆನಿಸತೊಡಗಿತು, ಅಲ್ಲದೇ ಅದು ಬಹಳ ಸುಂದರವಾಗಿದೆ ಎಂದು ಅನಿಸಿತು.
೩. ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಪಂಚೋಪಚಾರ ಪೂಜೆಯಾದ ಬಳಿಕ ಮೂರ್ತಿಯಲ್ಲಿ ಅರಿವಾದ ಬದಲಾವಣೆಗಳು
ಶ್ರೀ ಸಿದ್ಧಿವಿನಾಯಕನ ಮೂರ್ತಿಯನ್ನು ಆಶ್ರಮಕ್ಕೆ ತಂದ ಬಳಿಕ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳರವರು ಮೂರ್ತಿಗೆ ಪಂಚೋಪಚಾರ ಪೂಜೆಯನ್ನು ಮಾಡಿದರು. ತದನಂತರ ಪರಾತ್ಪರ ಗುರು ಡಾ. ಆಠವಲೆಯವರು ಮೂರ್ತಿಗೆ ಪುಷ್ಪಗಳನ್ನು ಅರ್ಪಿಸಿ ನಮಸ್ಕಾರ ಮಾಡಿದರು.
ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧. ಕಾರವಾರದ ಮೂರ್ತಿಕಾರರಾದ ಶ್ರೀ. ವಿವೇಕಾನಂದ (ನಂದಾ) ಆಚಾರಿಯವರು ಸಿದ್ಧಿವಿನಾಯಕನ ಮೂರ್ತಿಯನ್ನು ಎಷ್ಟು ಭಾವಪೂರ್ಣವಾಗಿ ಕೆತ್ತಿದ್ದಾರೆಂದರೆ, ಅದರಲ್ಲಿ ಶೇ. ೩೦ ರಷ್ಟು ಗಣೇಶತತ್ತ್ವ ಬಂದಿದೆ. ಅಲ್ಲದೆ ಮೂರ್ತಿಯಲ್ಲಿ ಶೇ. ೪೦ ರಷ್ಟು ಚೈತನ್ಯವೂ ಅರಿವಾಗುತ್ತಿದೆ.
೨. ಶ್ರೀ ಗಣೇಶಮೂರ್ತಿಯ ಪೂಜೆಯನ್ನು ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಇವರು ಭಾವಪೂರ್ಣವಾಗಿ ಮಾಡಿದ್ದರಿಂದ, ಅಲ್ಲದೇ ಮೂರ್ತಿಗೆ ಪರಾತ್ಪರ ಗುರು ಡಾ. ಆಠವಲೆಯವರು ಪುಷ್ಪಗಳನ್ನು ಅರ್ಪಿಸಿದ್ದರಿಂದ ಅದರಲ್ಲಿನ ಗಣೇಶತತ್ತ್ವ ಶೇ. ೧ ರಷ್ಟು ಹೆಚ್ಚಾಯಿತು. ಹಾಗೆಯೇ ಅದರಿಂದ ಪ್ರಕ್ಷೇಪಿತವಾಗುವ ಆನಂದದ ಸ್ಪಂದನಗಳೂ ಹೆಚ್ಚಾದವು. ಇದರಿಂದ ಪೂಜೆಯ ಬಳಿಕ ಎಲ್ಲರಿಗೂ ಆಶ್ರಮದ ವಾತಾವರಣದಲ್ಲಿ ಆನಂದದ ಲಹರಿಗಳು ಅರಿವಾಗತೊಡಗಿದವು.
೪. ಶ್ರೀ ಸಿದ್ಧಿವಿನಾಯಕನ ಮೂರ್ತಿಯಿಂದಾಗಿ ಕಾರ್ಯನಿರತವಾಗುವ ನಾಡಿಗಳು
ನಾನು ಪ್ರಯೋಗವೆಂದು ‘ಶ್ರೀ ಗಣೇಶಮೂರ್ತಿ ಎದುರು, ಎಡ ಮತ್ತು ಬಲಗಡೆಗೆ ನಿಂತಾಗ ಏನು ಅರಿವಾಗುತ್ತದೆ ?, ಎಂದು ನೋಡಿದೆನು.
ಅ. ಈ ಮೂರ್ತಿಯಲ್ಲಿ ಮನುಷ್ಯನ ಶ್ವಾಸದ ನಾಡಿಯನ್ನು ಬದಲಾಯಿಸುವ ಸಾಮರ್ಥ್ಯವಿರುವುದು ಗಮನಕ್ಕೆ ಬಂದಿತು. ಇದರಿಂದ ಮೂರ್ತಿಕಾರರಾದ ಶ್ರೀ. ವಿವೇಕಾನಂದ ಆಚಾರ್ಯರವರ ಭಾವಪೂರ್ಣ ಸೇವೆಯಿಂದಾಗಿ ಅದರಲ್ಲಿ ಎಷ್ಟು ಶಕ್ತಿ ಬಂದಿದೆ ಎಂಬುದು ಗಮನಕ್ಕೆ ಬಂದಿತು.
ಆ. ಮೂರ್ತಿಯ ಎಡಗಡೆಗೆ ನಿಂತಾಗಲೂ ಮೂರ್ತಿಯು ನಮ್ಮೆಡೆಗೆ ನೋಡುತ್ತಿದೆ ಎಂದು ಅನಿಸುತ್ತದೆ ಮತ್ತು ಬಲಗಡೆಗೆ ನಿಂತಾಗಲೂ ಮೂರ್ತಿಯು ನಮ್ಮೆಡೆಗೆ ನೋಡುತ್ತಿದೆ ಎಂದು ಅನಿಸುತ್ತದೆ. ಇದು ಮೂರ್ತಿಯಲ್ಲಿ ಸಜೀವತೆ ನಿರ್ಮಾಣವಾಗಿರುವುದರ ಲಕ್ಷಣವಾಗಿದೆ.
೫. ಶ್ರೀ ಸಿದ್ಧಿವಿನಾಯಕನ ಮೂರ್ತಿಯಲ್ಲಿನ ತಾರಕ ಮತ್ತು ಮಾರಕ ತತ್ತ್ವ
‘ಶ್ರೀ ಸಿದ್ಧಿವಿನಾಯಕನ ಮೂರ್ತಿಯಲ್ಲಿ ತಾರಕ ತತ್ತ್ವ ಶೇ. ೬೫ ರಷ್ಟಿದೆ ಮತ್ತು ಮಾರಕ ತತ್ತ್ವ ಶೇ. ೩೫ ರಷ್ಟಿದೆ, ಎಂದು ಅರಿವಾಯಿತು. ಮೂರ್ತಿಕಾರ ಶ್ರೀ. ವಿವೇಕಾನಂದ ಆಚಾರಿಯವರು ಸಿದ್ಧಿವಿನಾಯಕನ ಮೂರ್ತಿಯನ್ನು ತಯಾರಿಸುವಾಗ ಮೂರ್ತಿಯ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಮಾತ್ರ ‘ಪರಶು ಶಸ್ತ್ರವನ್ನು ತೋರಿಸಿದ್ದಾರೆ ಮತ್ತು ಅದನ್ನು ಸಹ ಮೂರ್ತಿಯ ಎಡಗೈಯಲ್ಲಿ ತೋರಿಸಿದ್ದಾರೆ. ಇದರಿಂದ ಈ ಮೂರ್ತಿ ಹೆಚ್ಚು ಪ್ರಮಾಣದಲ್ಲಿ ತಾರಕ ತತ್ತ್ವವನ್ನು ನೀಡುತ್ತದೆ ಎಂದು ಅರಿವಾಯಿತು.
೬. ಮೂರ್ತಿಕಾರ ಶ್ರೀ. ವಿವೇಕಾನಂದ ಆಚಾರಿಯವರು ಶ್ರೀ ಸಿದ್ಧಿವಿನಾಯಕನ ಮೂರ್ತಿಯಲ್ಲಿ ರಿದ್ಧಿಯ ಕಣ್ಣುಗಳು ಮುಚ್ಚಿದಂತೆ ಹಾಗೂ ಸಿದ್ಧಿಯ ಕಣ್ಣುಗಳನ್ನು ತೆರೆದಿರುವಂತೆ ತೋರಿಸಿರುವುದರ ಬಗ್ಗೆ ಅರಿವಿಗೆ ಬಂದ ಶಾಸ್ತ್ರ
ಮೂರ್ತಿಕಾರ ಶ್ರೀ. ವಿವೇಕಾನಂದ ಆಚಾರಿಯವರು ಗಣಪತಿಯ ಬಲಗಡೆಗೆ ಕೆತ್ತಿದ ರಿದ್ಧಿಯ ಕಣ್ಣುಗಳು ಮುಚ್ಚಿದಂತೆ ಅರಿವಾಗುತ್ತದೆ ಮತ್ತು ಗಣಪತಿಯ ಎಡಗಡೆಗೆ ಕೆತ್ತಿದ ಸಿದ್ಧಿಯ ಕಣ್ಣುಗಳು ತೆರೆದಂತೆ ಅರಿವಾಗುತ್ತದೆ. ರಿದ್ಧಿಯ ಅರ್ಥವೆಂದರೆ ‘ಬುದ್ಧಿ ಮತ್ತು ಸಿದ್ಧಿಯ ಅರ್ಥವೆಂದರೆ ‘ಆಧ್ಯಾತ್ಮಿಕ ಶಕ್ತಿ. ‘ಸನಾತನದ ಸಾಧಕರಿಗೆ ಬುದ್ಧಿಯ ತುಲನೆಯಲ್ಲಿ ಆಧ್ಯಾತ್ಮಿಕ ಶಕ್ತಿಯು ಅಧಿಕ ಆವಶ್ಯಕತೆಯಿರುವುದರಿಂದ ಮೂರ್ತಿಕಾರ ಶ್ರೀ. ವಿವೇಕಾನಂದ ಆಚಾರಿಯವರಿಂದ ರಿದ್ಧಿಯ ಕಣ್ಣುಗಳು ಮುಚ್ಚಿದಂತೆ ತೋರಿಸಲಾಗಿದೆ ಮತ್ತು ಸಿದ್ಧಿಯ ಕಣ್ಣುಗಳು ತೆರೆದಂತೆ ತೋರಿಸಲಾಗಿದೆ, ಎಂದು ಅರಿವಾಯಿತು. – (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.