‘ಶ್ರೀ ಗಣೇಶಚತುರ್ಥಿಯಂದು ಚಂದ್ರದರ್ಶನ ನಿಷೇಧ’, ಎಂದು ಪಂಚಾಂಗಶಾಸ್ತ್ರ ಹೇಳುತ್ತದೆ. ಮಾನವನ ಅಭ್ಯಾಸದ ದೃಷ್ಟಿಕೋನದಿಂದ ಚಂದ್ರದರ್ಶನ ನಿಷೇಧವೆಂದು ಏಕೆ ಹೇಳಲಾಗಿದೆ ? ಎಂಬುದರ ಕಾರಣಗಳು ಮುಂದಿನಂತಿವೆ.
೧. ಮಾನವನ ಶರೀರ, ಮನಸ್ಸು ಮತ್ತು ಚಂದ್ರ ಇವುಗಳಿಗಿರುವ ಸಂಬಂಧ
ಮಾನವನ ಶರೀರ ಶೇ. ೭೦ ರಷ್ಟು ಜಲಮಯವಾಗಿದೆ. ಈ ಜಲ ಮತ್ತು ಚಂದ್ರನ ಸಂಬಂಧ ಅತೀ ಸಮೀಪದ್ದಾಗಿದೆ. ನಿಸರ್ಗನಿಯಮಕ್ಕನುಸಾರ ಸಮುದ್ರದಲ್ಲಿ ಏರಿಳಿತ ಬರುತ್ತದೆ. ಇದಕ್ಕೂ ಚಂದ್ರನಿಗೂ ಸಂಬಂಧವಿದೆ. ಮನಸ್ಸಿನ ಲಹರಿಗಳು ವಾಯುತತ್ತ್ವಕ್ಕನುಸಾರ ಬದಲಾಗುತ್ತಿರುತ್ತವೆ; ಆದ್ದರಿಂದಲೆ ಮನಸ್ಸು ಚಂಚಲವಾಗಿರುತ್ತದೆ. ಇದು ನಮ್ಮ ಪೂರ್ವಜರು ನಮಗೆ ಕಲಿಸಿದ ಪಾಠ. ಮನಸ್ಸು ಮತ್ತು ಚಂದ್ರ ಲಹರಿಗಳಿಗೂ ಸಂಬಂಧವಿರುತ್ತದೆ. ವಿಶೇಷವಾಗಿ ಚಂದ್ರನ ಗುಣಧರ್ಮ ಶೀತಲವಾಗಿದೆ, ಅದೇ ರೀತಿ ಮಾನವನ ದೃಷ್ಟಿಯಲ್ಲಿ ಶೀತಲತೆ ಈ ಶಬ್ದದ ಅರ್ಥ ಸ್ವಸ್ಥ ಮತ್ತು ಸ್ವಾಸ್ಥ್ಯ ಎಂದಾಗುತ್ತದೆ, ಅಂದರೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ! ಈ ಆರೋಗ್ಯ ಸಂಪನ್ಮೂಲದ ಆಧಾರದಿಂದ ನಮ್ಮ ಜೀವನಪ್ರವಾಸದ ಸಂಘರ್ಷದಲ್ಲಿ ಮಾನವ ಜೀವನಕ್ಕೆ ಸ್ವಸ್ಥ ಮತ್ತು ಸ್ವಾಸ್ಥ್ಯ ಇವುಗಳ ಸಹವಾಸ ಲಾಭದಾಯಕವಾಗಿದೆ.
೨. ಶ್ರೀ ಗಣೇಶಚತುರ್ಥಿಯಂದು ಚಂದ್ರದರ್ಶನ ನಿಷೇಧವಿರುವುದರ ಹಿಂದಿನ ಕಾರಣ
ನಮ್ಮೆಲ್ಲರಿಗೆ ತಿಳಿದಂತೆ ‘ವರ್ಷದಲ್ಲಿ ಒಮ್ಮೆ ಮಾತ್ರ ಭಾದ್ರಪದ ಶುಕ್ಲ ಚತುರ್ಥಿ ಈ ತಿಥಿಯಂದು ಬರುವ ಶ್ರೀ ಗಣೇಶಚತುರ್ಥಿಗೆ ಮಾತ್ರ ಚಂದ್ರದರ್ಶನ ನಿಷೇಧ’, ಎಂದು ಹೇಳಲಾಗಿದೆ. ಇದಕ್ಕೆ ಇನ್ನೂ ಒಂದು ಕಾರಣವೆಂದರೆ, ಚಂದ್ರನ ತೇಜ (ಶೀತಲತೆ) ಈ ದಿನವೆ ಪೃಥ್ವಿಯ ಮೇಲೆ ಅವತರಿಸುತ್ತಿರುತ್ತದೆ.
ಶ್ರೀ ಗಣೇಶಚತುರ್ಥಿಯಂದು ನಮ್ಮ ಮನೆಯಲ್ಲಿ ಪ್ರಾಣಪ್ರತಿಷ್ಠೆ ಮಾಡಿರುವ ಶ್ರೀ ಗಣೇಶನ ತಲೆಯ ಮೇಲೆ ಚಂದ್ರ ವಿರಾಜಮಾನನಾಗಿರುತ್ತಾನೆ. ಆಕಾಶದಲ್ಲಿನ ಚಂದ್ರನ ಶೀತಲ ವಾಯುಲಹರಿ ಶ್ರೀ ಗಣೇಶಚತುರ್ಥಿಯಂದು ಹೊರಹೊಮ್ಮಿ (ಪ್ರಸವವಾಗಿ-(ಟಿಪ್ಪಣಿ)) ಶ್ರೀಗಣೇಶಮೂರ್ತಿಯ ತಲೆಯಲ್ಲಿರುವ ಚಂದ್ರಕಲೆಯಲ್ಲಿ ವಿರಾಜಮಾನವಾಗುತ್ತವೆ. ಆದ್ದರಿಂದ ಆ ದಿನ ಮನೆಯವರೆಲ್ಲರೂ ಪ್ರಾಣಪ್ರತಿಷ್ಠೆಯಾಗಿರುವ ಶ್ರೀ ಗಣೇಶಮೂರ್ತಿಯ ಮುಂದೆ ಕುಳಿತುಕೊಳ್ಳಬೇಕು ಹಾಗೂ ಆದಷ್ಟು ಹೆಚ್ಚು ನಾಮಜಪ ಮಾಡಬೇಕು. ಇದರಿಂದ ನಮಗೆ ಮನೆಯಲ್ಲಿಯೆ ಚಂದ್ರ ಮತ್ತು ಶ್ರೀಗಣೇಶ ಲಹರಿಗಳ ಲಾಭವಾಗುತ್ತದೆ.
ನಿರಂತರ ವಿಚಾರ ಮಾಡುವುದು ಮನಸ್ಸಿನ ಕಾರ್ಯವಾಗಿದೆ. ಈ ದಿನ ಚಂದ್ರನಿಂದ ಪ್ರಸವಸ್ವರೂಪದಲ್ಲಿ ಪೃಥ್ವಿಗೆ ತೇಜವು (ಶೀತಲತೆ) ಬರುತ್ತಿರುತ್ತದೆ. ನಾವು ನಾನಾ ಪ್ರಕಾರದ ವಿಚಾರ ಮತ್ತು ಸಂಶಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಂದ್ರದರ್ಶನ ಮಾಡುವುದರಿಂದ ಆ ತೇಜವು ಬಾಧಿತವಾಗುತ್ತದೆ. ಅದರಿಂದ ಆ ತೇಜ ಸಹಜವಾಗಿ ಪೃಥ್ವಿಯವರೆಗೆ ತಲುಪಲು ಅಡಚಣೆಯುಂಟಾಗುತ್ತದೆ. ಅದರ ಪರಿಣಾಮವೆಂದು ನಾವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೇಲೆ ಹೇಳಿದಂತೆ ಸಂಶಯಯುಕ್ತ ಮನಸ್ಸು, ಅಂದರೆ ಬೇರೆ ಏನೂ ಅಲ್ಲ, ಕೇವಲ ಭಯವಾಗಿದೆ.
ಪುರಾಣದಲ್ಲಿ ಹೇಳಿರುವಂತೆ ಶ್ರೀಗಣೇಶಚತುರ್ಥಿಯಂದು ಚಂದ್ರದರ್ಶನ ಮಾಡಿದರೆ ಕಳ್ಳತನದ ಆರೋಪ ಬರುತ್ತದೆ. ಇದರ ನಿಜವಾದ ಅರ್ಥವೆಂದರೆ, ಮನಸ್ಸು ಸಂಶಯಕ್ಕೊಳಗಾಗುತ್ತದೆ, ಅಂದರೆ ಸಂಶಯಕ್ಕೆ ಆಮಂತ್ರಣ ನೀಡುವುದು. ಸಂಶಯವೇ ಭಯದ ಇನ್ನೊಂದು ರೂಪವಾಗಿದೆ. ಆ ಭಯವೇ ಮನಸ್ಸಿನ ಮೇಲಿನ ಒತ್ತಡವಾಗಿದೆ. ಆದ್ದರಿಂದಲೆ ಶ್ರೀ ಗಣೇಶಚತುರ್ಥಿಯಂದು ಚಂದ್ರದರ್ಶನ ನಿಷೇಧವೆಂದು ಹೇಳಲಾಗಿದೆ.
– ಸೋಮಯಾಜಿ ಶ್ರೀ. ಪ್ರಕಾಶ ಆಪಟೆ, ಮ್ಹಾಪ್ಸಾ ಗೋವಾ.
ಟಿಪ್ಪಣಿ : ‘ಪ್ರಸವ’ ಈ ಶಬ್ದದ ಅರ್ಥ : ನಿಸರ್ಗ ನಿಯಮಕ್ಕನುಸಾರ ಬೆಕ್ಕು, ನಾಯಿ, ಇಂತಹ ಸಾಕುಪ್ರಾಣಿಗಳು ಪ್ರಸವ ಕಾಲದಲ್ಲಿ ಯಾರ ಕಣ್ಣಿಗೂ ಬೀಳುವುದಿಲ್ಲ. (ಅಂದರೆ ಪ್ರಸವದ ಮೊದಲು ೪ ಗಂಟೆ ಹಾಗೂ ಪ್ರಸವದ ನಂತರ ೬ ಗಂಟೆ)