ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ವಾಸಿಸುತ್ತಿರುವ ಮನೆಯು ಕುಸಿಯುವ ಸ್ಥಿತಿಯಲ್ಲಿದ್ದರೆ ಅಥವಾ ಕೆಲವು ಭಾಗ ಕುಸಿಯುತ್ತಿದ್ದರೆ ಅಥವಾ ಮನೆಯ ಮಹತ್ವದ ದುರಸ್ತಿಯನ್ನು ಮಾಡುವುದು ಬಾಕಿಯಿದ್ದಲ್ಲಿ ಮುಂದೆ ಆಪತ್ಕಾಲದಲ್ಲಿ ನೆರೆ, ಬಿರುಗಾಳಿ ಮುಂತಾದ ಆಪತ್ತುಗಳು ಎದುರಾದಾಗ ಮನೆಯು ಬೀಳುವ ಸಾಧ್ಯತೆಯಿರುತ್ತದೆ ಅಥವಾ ಮನೆ ಕುಸಿಯುವ ಸಾಧ್ಯತೆಯಿರುತ್ತದೆ. ಆಪತ್ಕಾಲದಲ್ಲಿ ಮನೆಯನ್ನು ದುರುಸ್ತಿ ಮಾಡಿಸಿಕೊಳ್ಳುವುದೂ ಸಹ ಬಹಳ ಕಠಿಣವಾಗಬಹುದು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಪೂರ್ವ ಸಿದ್ಧತೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಪ್ರತಿನಿತ್ಯ ಭಗವಂತನ ಆರಾಧನೆ (ಸಾಧನೆ)ಯನ್ನು ಮಾಡಬೇಕು. ಸರ್ವಸಾಮಾನ್ಯ ವ್ಯಕ್ತಿ ಆಪತ್ಕಾಲದ ಸ್ಥಿತಿಯಲ್ಲಿ ತುಂಬಾ ಹೆದರುತ್ತಾನೆ. ಆದರೆ ಸಾಧನೆಯನ್ನು ಮಾಡುವವರ(ಸಾಧಕರ) ಮನಸ್ಸಿನಲ್ಲಿ ಮಾತ್ರ ‘ಈ ಕಠಿಣ ಪ್ರಸಂಗದಲ್ಲಿ ದೇವರು ನಮ್ಮ ರಕ್ಷಣೆಯನ್ನು ಮಾಡುತ್ತಾನೆ, ಎನ್ನುವ ದೃಢ ವಿಶ್ವಾಸವಿರುವುದರಿಂದ ಅವರು ಕಠಿಣ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರಬಲ್ಲರು.

ನಾವೀನ್ಯಪೂರ್ಣ ಆಧ್ಯಾತ್ಮಿಕ  ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಅಥರ್ವಶೀರ್ಷವನ್ನು ಬಹಳ ನಿಧಾನವಾಗಿ ಮತ್ತು ಒಂದೇ ಲಯದಲ್ಲಿ ಹೇಳಬೇಕು. ಸ್ತೋತ್ರವನ್ನು ಹೇಳುವ ಮೊದಲು ಸ್ನಾನ ಮಾಡಬೇಕು. ಕುಳಿತುಕೊಳ್ಳಲು ಒಗೆದು ಮಡಚಿದ ವಸ್ತ್ರ, ಮೃಗಾಜಿನ, ಉಣ್ಣೆಯ ಪಂಚೆ ಅಥವಾ ದರ್ಭೆಯ ಚಾಪೆಯನ್ನು ಉಪಯೋಗಿಸಬೇಕು. ಪಠಣ ಪೂರ್ಣವಾಗುವವರೆಗೆ ಪುನಃ ಪುನಃ ಕಾಲುಗಳನ್ನು ಬದಲಾಯಿಸುವ ಆವಶ್ಯಕತೆ ಬರದಂತಹ ಸುಲಭ ಸುಖಾಸನದಲ್ಲಿ (ಕಾಲುಮಡಚಿ) ಕುಳಿತುಕೊಳ್ಳಬೇಕು.

ಸುಶಿಕ್ಷಿತ ನಿರುದ್ಯೋಗಿಗಳ ಸೈನ್ಯವನ್ನು ಸೃಷ್ಟಿಸುವ ಪ್ರಸ್ತುತ ಶಿಕ್ಷಣ ವ್ಯವಸ್ಥೆ !

‘ಶಿಕ್ಷಣ ಚಕ್ರವರ್ತಿಗಳು ತಮ್ಮ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ಅನುಪಯುಕ್ತ ಶಿಕ್ಷಣವನ್ನು ನೀಡಿದ್ದಾರೆ ಮತ್ತು ಸಮಾಜಕ್ಕೆ ಜ್ಞಾನದ ಬದಲು ಅನುಪಯುಕ್ತ ಪದವಿಗಳ ಸಂಪತ್ತನ್ನು ನೀಡಿದ್ದಾರೆ. ನಾವು ಅಶಿಕ್ಷಿತ ನಿರುದ್ಯೋಗಿಗಳ ಸ್ಥಾನದಲ್ಲಿ ಸುಶಿಕ್ಷಿತ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದೇವೆ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ನೆರೆ, ಭೂಕಂಪದಂತಹ ನೈಸರ್ಗಿಕ ಆಪತ್ತುಗಳಲ್ಲಿ ಸಂಚಾರಸಾಗಾಟ ಸ್ಥಗಿತವಾಗುವುದರಿಂದ ಇತರ ಸಾಮಾಗ್ರಿಗಳೊಂದಿಗೆ ಔಷಧಿಗಳೂ ಸಹ ಸಿಗುವುದು ಕಠಿಣವಾಗುತ್ತದೆ. ಯುದ್ಧದ ಕಾಲದಲ್ಲಿ ಔಷಧಿಗಳ ಸಂಗ್ರಹವನ್ನು ಪ್ರಾಧಾನ್ಯತೆಯಿಂದ ಸೈನ್ಯಕ್ಕಾಗಿ ಉಪಯೋಗಿಸಲಾಗುತ್ತದೆ. ಹಾಗಾಗಿ ಔಷಧಿಗಳ ಕೊರತೆ ಉಂಟಾಗುತ್ತದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಪ್ರವಾಹ ಬಂದಾಗ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ನೀರಿನಲ್ಲಿ ಮುಳುಗಿ ಹೋಗುವುದರಿಂದ ವಿದ್ಯುತ್ ಕೊರತೆ ನಿರ್ಮಾಣವಾಗುತ್ತದೆ. ವಿದ್ಯುತ್‌ದ ಅಭಾವದಿಂದ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ನೀರಿನ ಟ್ಯಾಂಕರ್‌ಗಳೂ ತಲುಪುವುದು ಕಠಿಣವಾಗುತ್ತದೆ. ಇದರ ಪರಿಣಾಮದಿಂದ ಕುಡಿಯುವ ನೀರು ದೊರೆಯುವುದಿಲ್ಲ.

ಶ್ರೀ ಗಣೇಶನ ಪೂಜೆಯನ್ನು ಮಾಡಲು ಮಾರ್ಗದರ್ಶಕವಾಗಿರುವ ಸನಾತನದ ‘ಗಣೇಶ ಪೂಜೆ ಮತ್ತು ಆರತಿ ಆಪ್ !

ಗಣೇಶೋತ್ಸವವು ಎಲ್ಲ ಹಿಂದೂಗಳ ಶ್ರದ್ಧೆಯ ಹಾಗೂ ಆನಂದದ ಹಬ್ಬವಾಗಿದೆ ! ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ ಶ್ರೀ ಗಣೇಶನ ಆಗಮನದಿಂದ ಮಂಗಲಮಯವಾಗುವ ವಾತಾವರಣದಿಂದ ಭಕ್ತರಲ್ಲಿ ಆನಂದ ಹಾಗೂ ಉತ್ಸಾಹ ಸಂಚರಿಸುತ್ತದೆ. ಈ ವರ್ಷ ಮಾತ್ರ ಈ ಉತ್ಸಾಹಕ್ಕೆ ಕೊರೋನಾದ ಕರಿನೆರಳು ಬಂದಿದೆ. ಆದ್ದರಿಂದ ಈ ವರ್ಷ ಸರಕಾರವೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲು ಕರೆ ನೀಡಿದೆ.

ಮಹಾನಗರಗಳು ಮತ್ತು  ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗೆ ಮಹತ್ವ ಸೂಚನೆ

ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನೆಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿಯ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡು ಬರುತ್ತದೆ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಡಬ್ಬದಲ್ಲಿ ಅಥವಾ ಚೀಲದಲ್ಲಿ ಧಾನ್ಯಗಳನ್ನು ತುಂಬುವಾಗ, ಕೆಲವು ಒಣಗಿದ ಬೇವಿನ ಎಲೆಗಳನ್ನು ಕೆಳಭಾಗದಲ್ಲಿ ಇಟ್ಟು ಅದರ ಮೇಲೆ ಕಾಗದ ಅಥವಾ ಸ್ವಚ್ಛವಾಗಿ ತೊಳೆದ ಹತ್ತಿ (ನೂಲಿನ) ಬಟ್ಟೆಯನ್ನು ಹರಡಬೇಕು. ಡಬ್ಬದಲ್ಲಿ ಧಾನ್ಯಗಳನ್ನು ತುಂಬಿಸಿದ ನಂತರ ಆಕಸ್ಮಿಕವಾಗಿ ಡಬ್ಬದಲ್ಲಿ ಆವಿಯಿದ್ದರೆ, ಅದನ್ನು ಕಾಗದ ಅಥವಾ ಹತ್ತಿ ಬಟ್ಟೆಯು ಹೀರಿಕೊಳ್ಳುತ್ತದೆ.

ನೆರೆಪೀಡಿತ ಕ್ಷೇತ್ರದ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಮಳೆಗಾಲದಲ್ಲಿ ಅತಿವೃಷ್ಟಿಯಾದರೆ ನೆರೆ ಬರುತ್ತದೆ. ಇತರ ಋತುಗಳಲ್ಲಿಯೂ ಮೇಘಸ್ಫೋಟವಾದರೆ ನೆರೆ (ಪ್ರವಾಹ) ಬರಬಹುದು. ೨೦೧೯ ರಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಅನೇಕ ನಗರಗಳು ಅತಿವೃಷ್ಟಿಯಿಂದ ಜಲವೃತ್ತಗೊಂಡಿದ್ದವು. ಅನೇಕ ಗ್ರಾಮಗಳನ್ನು ಜೋಡಿಸುವ ರಸ್ತೆಗಳು ಕುಸಿದುದರಿಂದ ಅಥವಾ ರಸ್ತೆಗಳ ಮೇಲೆ ತುಂಬಾ ನೀರು ಬಂದಿದ್ದರಿಂದ ಸಂಚಾರಸಾರಿಗೆ ಸ್ಥಗಿತವಾಗಿತ್ತು.