ಗಣೇಶೋತ್ಸವವು ಎಲ್ಲ ಹಿಂದೂಗಳ ಶ್ರದ್ಧೆಯ ಹಾಗೂ ಆನಂದದ ಹಬ್ಬವಾಗಿದೆ ! ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ ಶ್ರೀ ಗಣೇಶನ ಆಗಮನದಿಂದ ಮಂಗಲಮಯವಾಗುವ ವಾತಾವರಣದಿಂದ ಭಕ್ತರಲ್ಲಿ ಆನಂದ ಹಾಗೂ ಉತ್ಸಾಹ ಸಂಚರಿಸುತ್ತದೆ. ಸನಾತನ ಸಂಸ್ಥೆಯ ‘ಗಣೇಶ ಪೂಜೆ ಮತ್ತು ಆರತಿ ಆಪ್ ಇದು ಭಕ್ತರಿಗೆ ನಿಶ್ಚಿತವಾಗಿ ಉಪಯೋಗವಾಗುವುದು. ಈ ಆಪ್‌ನಲ್ಲಿ ‘ಶ್ರೀ ಗಣೇಶನ ವಿಷಯದಲ್ಲಿ ಅತ್ಯಂತ ಸುಂದರ ಹಾಗೂ ಭಕ್ತಿಭಾವವನ್ನು ಜಾಗೃತಗೊಳಿಸುವ ಶಾಸ್ತ್ರೀಯ ವಿವೇಚನೆಯನ್ನು ನೀಡಲಾಗಿದೆ.
ಈ ‘ಆಪ್’ನ ಮೂಲಕ ಶ್ರೀ ಗಣೇಶನ ಶೋಡಷೋಪಚಾರ ಪೂಜೆಯ ವಿಧಿಯನ್ನು ಮಾಡಬಹುದು !
ಆಪ್‌ನಲ್ಲಿ ಸುಲಭ ಹಾಗೂ ಸರಳ ಭಾಷೆಯಲ್ಲಿ ನೀಡಿರುವ ಪೂಜಾ ವಿಧಿಯು ಪುರೋಹಿತರೇ ಪೂಜಾವಿಧಿಯನ್ನು ಹೇಳುತ್ತಿದ್ದಾರೆ, ಎಂದು ಭಕ್ತರಿಗೆ ಅನುಭವವಾಗುತ್ತದೆ. ಇದರಲ್ಲಿ ಪೂಜಾವಿಧಿಗಾಗಿ ಬೇಕಾಗುವ ಸಾಹಿತ್ಯ, ಪೂಜೆಗಾಗಿ ಮಾಡಬೇಕಾದ ಸಿದ್ಧತೆ, ನೈವೇದ್ಯ ಇತ್ಯಾದಿಗಳ ಮಾಹಿತಿಯ ಜೊತೆಗೆ ಶೋಡಷೋಪಚಾರ ಪೂಜಾವಿಧಿ ಕೂಡ ಲಭ್ಯವಿದೆ. ಪ್ರತಿಯೊಂದು ಉಪಚಾರವು ಶ್ರೀ ಗಣೇಶನ ಚರಣಗಳಿಗೆ ತಲುಪಬೇಕು, ಎಂಬ ಭಾವದಿಂದ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗಿದೆ. ಆದ್ದರಿಂದ ಈ ಪೂಜಾವಿಧಿಯು ಭಕ್ತರಿಗೆ ನಿಶ್ಚಿತವಾಗಿ ಸಮಾಧಾನವನ್ನು ನೀಡುವುದು. ಈ ಆಪ್ ಕನ್ನಡ, ಮರಾಠಿ, ಹಿಂದಿ, ಮತ್ತು ಆಂಗ್ಲ ಈ ೪ ಭಾಷೆಗಳಲ್ಲಿ ಲಭ್ಯವಿದೆ.
ಶ್ರೀ ಗಣೇಶನ ಬಗ್ಗೆ ಭಾವ ವೃದ್ಧಿಗೊಳಿಸುವ ಆಪ್ !
ಶ್ರೀ ಗಣೇಶನ ಮಾಹಿತಿಯು ಅಂತರಜಾಲದಲ್ಲಿಯೂ ಲಭ್ಯವಿದೆ. ಇದರ ಮಾಹಿತಿಯನ್ನು ನೀಡುವ ಅನೇಕ ‘ಆಪ್ಗಳೂ ಇವೆ; ಆದರೆ ಸನಾತನದ ‘ಗಣೇಶ ಪೂಜಾ ಹಾಗೂ ಆರತಿ ಈ ಆಪ್‌ಅನ್ನು ಸಾಧನೆಯ ಅನುಭೂತಿಯನ್ನು ಪಡೆದ ಸಾಧಕರು ತಯಾರಿಸಿದ್ದಾರೆ, ಇದು ಈ ‘ಆಪ್ನ ವೈಶಿಷ್ಟ್ಯವಾಗಿದೆ. ಆದ್ದರಿಂದ ಇದರಲ್ಲಿನ ಪ್ರತಿಯೊಂದು ಭಾಗವೂ ಭಕ್ತರಿಗೆ ಗಣೇಶೋತ್ಸವದ ಆಧ್ಯಾತ್ಮಿಕ ಲಾಭವನ್ನು ಮಾಡಿಕೊಡುವುದು. ಯಾವುದೇ ವ್ಯವಹಾರಿಕ ಉದ್ದೇಶವನ್ನಿಡದೇ ‘ಭಕ್ತರ ಮನಸ್ಸಿನಲ್ಲಿ ಶ್ರೀ ಗಣೇಶನ ಬಗೆಗಿನ ಭಾವವೃದ್ಧಿಯಾಗಬೇಕು, ಎಂಬ ಭಾವವನ್ನಿಟ್ಟುಕೊಂಡು ಈ ‘ಆಪನ್ನು ತಯಾರಿಸಲಾಗಿದೆ. ಆದ್ದರಿಂದ ಈ ಆಪ್ ಭಕ್ತರಿಗೆ ನಿಶ್ಚಿತವಾಗಿ ಶ್ರೀ ಗಣೇಶಪೂಜಾವಿಧಿಯ ಆಧ್ಯಾತ್ಮಿಕ ಲಾಭವನ್ನು ನೀಡುವುದು.
ವಿವಿಧಾಂಗಿ ಹಾಗೂ ವೈಶಿಷ್ಟ್ಯಪೂರ್ಣ !
ಶ್ರೀ ಗಣೇಶನ ಆಗಮನದಿಂದ ವಿಸರ್ಜನೆಯಾಗುವವರೆಗೆ ವಿವಿಧಾಂಗಗಳಿಂದ ಅವನ ಉಪಾಸನೆಯನ್ನು ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ಈ ‘ಆಪ್ನಲ್ಲಿ ನೀಡಲಾಗಿದೆ. ಶ್ರೀ ಗಣೇಶನನ್ನು ಹೇಗೆ ಸ್ವಾಗತಿಸಬೇಕು ? ಎಂಬುದರ ವೀಡಿಯೋ, ಶ್ರೀ ಗಣೇಶನ ಸ್ಥಾಪನೆ ಮತ್ತು ಶೋಡಷೋಪಚಾರ, ನಿಯಮಿತವಾಗಿ ಮಾಡುವ ಪೂಜಾವಿಧಿ ಇತ್ಯಾದಿಗಳ ಮಾಹಿತಿ, ಸಾತ್ತ್ವಿಕ ಸಾಧಕರು ಶ್ರೀ ಗಣೇಶನ ಮತ್ತು ಇತರ ದೇವತೆಗಳ ಬಗ್ಗೆ ಹಾಡಿರುವ ಆರತಿಗಳು, ಶ್ರೀ ಗಣೇಶ ತತ್ತ್ವವನ್ನು ಆಕರ್ಷಿಸುವ ರಂಗೋಲಿ, ಅದನ್ನು ಹಾಕುವ ಪದ್ಧತಿ, ದೂರ್ವೆ-ಮೋದಕ-ಕೆಂಪು ಹೂವು ಇತ್ಯಾದಿ ಶ್ರೀ ಗಣೇಶನಿಗೆ ಪ್ರಿಯವಾಗಿರುವ ಹಿನ್ನೆಲೆಯ ಭಾವಾರ್ಥ, ಶ್ರೀ ಗಣೇಶನ ನಾಮಜಪ, ಶ್ರೀ ಗಣೇಶನ ಉಪಾಸನೆಯನ್ನು ಹೇಗೆ ಮಾಡಬೇಕು ?, ಶ್ರೀ ಗಣೇಶಸ್ತ್ರೋತ್ರ, ಅಥರ್ವಶೀರ್ಷಗಳ ‘ಆಡಿಯೋ, ಶ್ರೀ ಗಣೇಶನ ತೀರ್ಥಕ್ಷೇತ್ರಗಳು, ಆದರ್ಶ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ? ಇತ್ಯಾದಿ ವೈಶಿಷ್ಟ್ಯಪೂರ್ಣ ಮಾಹಿತಿಗಳೂ ಈ ‘ಆಪ್ನಲ್ಲಿವೆ.
ಗಣೇಶಮೂರ್ತಿಯ ವೈಜ್ಞಾನಿಕ ಪರೀಕ್ಷಣೆಯ ಅಳೆತಗಳ ಅದ್ವಿತೀಯ ಸಂಶೋಧನೆಯು ಈ ‘ಆಪ್ನಲ್ಲಿ ಲಭ್ಯವಿದೆ !
ಇಂದು ಆಧುನಿಕತೆಯ ಹೆಸರಿನಲ್ಲಿ ಕ್ರಿಕೇಟ್ ಆಡುವ, ಹೆಲ್ಮೇಟ್ ಧರಿಸಿರುವ, ರಾಜಕೀಯ ನೇತಾರರ ರೂಪದಲ್ಲಿ ಇತ್ಯಾದಿ ಅಯೋಗ್ಯ ರೂಪದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ, ಕಾಗದದ ಮುದ್ದೆಯಿಂದ, ತರಕಾರಿ, ತ್ಯಾಜ್ಯ ವಸ್ತು ಇತ್ಯಾದಿಗಳಿಂದಲೂ ಅಶಾಸ್ತ್ರೀಯ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಇಂತಹ ಅಶಾಸ್ತ್ರಿಯ ಮೂರ್ತಿ ಮತ್ತು ಆವೆ ಮಣ್ಣಿನಿಂದ (ಜೇಡಿ ಮಣ್ಣಿನಿಂದ) ತಯಾರಿಸಿದ ಸಾತ್ತ್ವಿಕ ಗಣೇಶಮೂರ್ತಿ ಇವುಗಳ ವೈಜ್ಞಾನಿಕ ಪರೀಕ್ಷಣೆಯ ಅಧ್ಯಯನವನ್ನೂ ಈ ‘ಆಪ್ನಲ್ಲಿ ವಿಸ್ತಾರವಾಗಿ ನೀಡಲಾಗಿದೆ.
ವೈಜ್ಞಾನಿಕಯಂತ್ರಗಳ ಮೂಲಕ ಮಾಡಿರುವ ಪರೀಕ್ಷಣೆಗಳಿಂದ ಗಣೇಶೋತ್ಸವವನ್ನು ಶಾಸ್ತ್ರಾನುಸಾರ ಆಚರಿಸುವ ಮಹತ್ವವು ಭಕ್ತರ ಗಮನಕ್ಕೆ ಬರುವುದು ಹಾಗೂ ಶಾಸ್ತ್ರದ ವಿರುದ್ಧ ಉತ್ಸವವನ್ನು ಆಚರಿಸುವುದರಿಂದಾಗುವ ಹಾನಿಯನ್ನು ತಡೆಗಟ್ಟಬಹುದು.
ಸನಾತನದ ‘ಗಣೇಶ ಪೂಜೆ ಮತ್ತು ಆರತಿ ಆಪ್ ಕೇವಲ ಪೂಜಾ ವಿಧಿಯನ್ನು ಹೇಳುವುದು ಮಾತ್ರವಲ್ಲ, ಭಕ್ತರಿಗೆ ಶ್ರೀ ಗಣೇಶನ ಉಪಾಸನೆಗಾಗಿ ಮಾರ್ಗದರ್ಶನ ಸಹ ನೀಡುತ್ತದೆ. ಆದ್ದರಿಂದ ಈ ‘ಆಪ್ ಸ್ವತಃ ‘ಡೌನ್‌ಲೋಡ್ ಮಾಡಿ ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ಹಿತಚಿಂತಕರಿಗೆ ಮತ್ತು ತಮ್ಮ ಸಂಪರ್ಕದಲ್ಲಿರುವ ಎಲ್ಲರಿಗೂ ತಲುಪಿಸಿದರೆ ಅವರಿಗೂ ಶ್ರೀ ಗಣೇಶನ ಉಪಾಸನೆಯ ಲಾಭವಾಗುವುದು. ಶ್ರೀ ಗಣೇಶನು ಎಲ್ಲ ವಿಘ್ನಗಳನ್ನು ಸಂಪೂರ್ಣ ನಾಶ ಮಾಡಲು ಸಮರ್ಥ ನಾಗಿದ್ದಾನೆ. ಶ್ರದ್ಧೆಯಿಂದ ಅವನ ಉಪಾಸನೆ ಮಾಡಿದರೆ ಕೊರೋನಾದ ವಿಘ್ನವನ್ನು ಕೂಡ ಅವನು ಖಂಡಿತವಾಗಿ ದೂರ ಮಾಡುವನು. – ಶ್ರೀ. ಪ್ರೀತಮ ನಾಚಣಕರ, ದಾದರ, ಮುಂಬೈ. (೩.೮.೨೦೨೦)
ಧರ್ಮಶಾಸ್ತ್ರಕ್ಕನುಸಾರ ಉಪಾಸನೆಯ ಮಾಹಿತಿಯನ್ನು ನೀಡುವ ‘ಆಡಿಯೊ-ವೀಡಿಯೋ !
ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ತರುವ ಪದ್ಧತಿ, ಶ್ರೀ ಗಣೇಶನ ಸ್ಥಾಪನೆಯಿಂದ ಉತ್ತರಪೂಜೆಯವರೆಗೆ ಮಾಡಬೇಕಾದ ನಿತ್ಯ ಕೃತಿಗಳು, ದೂರ್ವೆ-ಮೋದಕ-ಕೆಂಪು ಹೂವು ಇವುಗಳ ಗಣೇಶನ ಉಪಾಸನೆಯಲ್ಲಿನ ಮಹತ್ವ, ಹರಿತಾಲಿಕಾ, ಗೌರಿಪೂಜೆ, ಋಷಿಪಂಚಮಿ, ಸಾರ್ವಜನಿಕ ಗಣೇಶೋತ್ಸವದಲ್ಲಿ ಏನೆಲ್ಲ ತಪ್ಪು ಕೃತಿಗಳನ್ನು ಮಾಡಬಾರದು, ‘ಆಪ್ನಲ್ಲಿ ಶ್ರೀ ಗಣೇಶನಮೂರ್ತಿ ವಿಸರ್ಜನೆಗೆ ಸಂಬಂಧಿಸಿ ಧರ್ಮಶಾಸ್ತ್ರವನ್ನು ಆಧರಿಸಿರುವ ‘ವೀಡಿಯೋ, ಇವು ಭಕ್ತರಿಗೆ ಮಾರ್ಗದರ್ಶಕವಾಗುವವು. ಇದರೊಂದಿಗೆ ಆಪ್‌ನಲ್ಲಿ ಅಥರ್ವಶೀರ್ಷ, ಸಂಕಟನಾಶನ ಸ್ತೋತ್ರ, ಶ್ರೀ ಗಣೇಶನ ನಾಮಜಪ, ಮಂತ್ರಪುಷ್ಪಾಂಜಲಿ ಇತ್ಯಾದಿಗಳ ‘ಆಡಿಯೋಗಳೂ ಲಭ್ಯವಿದೆ.
‘ಗಣೇಶ ಪೂಜೆ ಮತ್ತು ಆರತಿ ಈ ಆಪ್‌ನ್ನು ಡೌನ್‌ಲೋಡ್ ಮಾಡಲು ಕ್ಯು-ಆರ್ ಕೋಡ್ ಸ್ಕ್ಯಾನ್ ಮಾಡಿ !
‘ಗಣೇಶ ಪೂಜೆ ಮತ್ತು ಆರತಿ ಈ ಆಪ್‌ನ್ನು ಡೌನ್‌ಲೋಡ್ ಮಾಡಲು ಬೇಕಾಗುವ ಲಿಂಕ್ –
೧ . Andriod App : sanatan.org/ganeshapp
೨. Apple iOS App: sanatan.org/iosganeshapp