ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin)ರಿಂದ ಮತ್ತೆ ಪ್ರಧಾನಿ ಮೋದಿಯವರ ಶ್ಲಾಘನೆ !
ಮಾಸ್ಕೋ (ರಷ್ಯಾ) – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದು ಎರಡೂ ದೇಶಗಳ ಹಿತವನ್ನು ಒಳಗೊಂಡಿದೆ ಎನ್ನುವ ಶಬ್ದಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರು ಪ್ರಧಾನಮಂತ್ರಿ ಮೋದಿಯವರನ್ನು ಹೊಗಳಿದ್ದಾರೆ. ಆರ್ಥಿಕ ಭದ್ರತೆಗಾಗಿ ಸಂಬಂಧಿಸಿದ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ `ರಷ್ಯಾ ಮತ್ತು ಭಾರತ ಆರ್ಥಿಕ ಭದ್ರತೆ ಮತ್ತು ಸೈಬರ್ ಅಪರಾಧ ಕ್ಷೇತ್ರಗಳಲ್ಲಿ ಒಂದಾಗಿ ಕೆಲಸ ಮಾಡಲಿವೆ’ ಎಂಬ ಭರವಸೆಯನ್ನೂ ನೀಡಿದರು. ಭಾರತ ಮತ್ತು ರಷ್ಯಾ ಶತಮಾನಗಳಿಂದ ಮಿತ್ರರು ಮತ್ತು ಪಾಲುದಾರರಾಗಿದ್ದಾರೆ. ಎರಡೂ ದೇಶಗಳು ನಿರ್ಧರಿಸಿರುವ ಕಾರ್ಯಸೂಚಿಯನ್ನು(ಅಜೆಂಡಾ) ನಾವು ಖಂಡಿತವಾಗಿಯೂ ಸಾಧಿಸುತ್ತೇವೆ ಎಂದೂ ಪುಟಿನ್ ಹೇಳಿದ್ದಾರೆ.
रूसी राष्ट्रपति पुतिन ने PM मोदी की तारीफों के पुल बांधे, कह दी ये बड़ी बात
पढ़ें पूरी ख़बर: https://t.co/JNec4di0dS #VladimirPutin #NarendraModi #RussiaIndia #ATCard pic.twitter.com/iMjpYq03ss
— AajTak (@aajtak) October 4, 2023
ಸುಮಾರು ಒಂದು ತಿಂಗಳ ಹಿಂದೆ, ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ, ಭಾರತವು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡಿತ್ತು; ಆದರೆ ರಷ್ಯಾದ ವಿರುದ್ಧ ಯಾವುದೇ ಆರೋಪ ಮಾಡಿರಲಿಲ್ಲ. ಮಾಸ್ಕೋ ಈ ಘೋಷಣೆಯನ್ನು ಮತ್ತು ಭಾರತದ ಜಿ-20 ಅಧ್ಯಕ್ಷ ಸ್ಥಾನವನ್ನು ಬೆಂಬಲಿಸಿತ್ತು.
ಸಂಪಾದಕೀಯ ನಿಲುವುವ್ಲಾದಿಮಿರ್ ಪುಟಿನ ಇವರು ಪ್ರಧಾನಮಂತ್ರಿ ಮೋದಿಯವರನ್ನು ಪದೇ ಪದೇ ಹೊಗಳುವುದನ್ನು ನೋಡಿ, ‘ಪುಟಿನ ಇವರು ಭಾಜಪದ ಅಂತರಾಷ್ಟ್ರೀಯ ಕಾರ್ಯಕರ್ತರಾಗಿದ್ದಾರೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ಉದ್ಧಟತನದ ಹೇಳಿಕೆ ನೀಡಿದರೆ, ಆಶ್ಚರ್ಯಪಡಬಾರದು ! |