‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ದರ್ಶನವಾದಾಗ ‘ಪ್ರತ್ಯಕ್ಷ ಶ್ರೀ ಮಹಾಲಕ್ಷ್ಮೀ ದೇವಿಯೇ ನಮ್ಮೆದುರು ನಿಂತಿದ್ದಾಳೆ’, ಎಂಬ ಅನುಭೂತಿ ಬರುತ್ತದೆ. ಅವರು ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ಕಡಿಮೆ ಕಾಲಾವಧಿಯಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡರು. ಅವರ ಜಾತಕದಲ್ಲಿ ಆಧ್ಯಾತ್ಮಿಕ ವೈಶಿಷ್ಟ್ಯಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಟ್ಟಿದ್ದೇವೆ.
೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ವ್ಯಕ್ತಿತ್ವವನ್ನು ತೋರಿಸುವ ಘಟಕಗಳು
ಅ. ಲಗ್ನರಾಶಿ (ಕುಂಡಲಿಯ ಪ್ರಥಮ ಸ್ಥಾನದ ರಾಶಿ) : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಪ್ರಥಮಸ್ಥಾನದಲ್ಲಿ ‘ತುಲಾ’ ರಾಶಿ ಇದೆ. ತುಲಾ ರಾಶಿಯು ವಾಯುತತ್ತ್ವಕ್ಕೆ ಸಂಬಂಧಿಸಿದುದರಿಂದ ವ್ಯಕ್ತಿಯಲ್ಲಿ ಕಾರ್ಯ ಕೌಶಲ್ಯ, ಗತಿಶೀಲತೆ, ಸೇವಾಭಾವ, ತತ್ತ್ವನಿಷ್ಠೆ ಮತ್ತು ಅಲಿಪ್ತತೆ ಈ ಗುಣಗಳಿದ್ದು ವ್ಯಕ್ತಿಯ ಬೌದ್ಧಿಕ ಕ್ಷಮತೆ ಮತ್ತು ತಿಳಿದುಕೊಳ್ಳುವ ಶಕ್ತಿ ಉತ್ತಮವಾಗಿರುತ್ತದೆ.
ಆ. ಜನ್ಮರಾಶಿ (ಕುಂಡಲಿಯಲ್ಲಿ ಚಂದ್ರನ ರಾಶಿ) : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಕುಂಡಲಿಯಲ್ಲಿ ಚಂದ್ರನು ‘ಕನ್ಯಾ’ ರಾಶಿಯಲ್ಲಿದ್ದಾನೆ. ಕನ್ಯಾ ರಾಶಿಯಲ್ಲಿ ಚಂದ್ರನು ಜಿಜ್ಞಾಸೆ, ಚಿಕಿತ್ಸಕಬುದ್ಧಿ, ಅಧ್ಯಯನವೃತ್ತಿ, ತರ್ಕಶಕ್ತಿ, ನಿಯೋಜನಾಕೌಶಲ್ಯ ಮತ್ತು ಕಲಾಪ್ರಿಯತೆ ಈ ವೈಶಿಷ್ಟ್ಯಗಳ ಪ್ರತಿನಿಧಿಯಾಗಿದ್ದಾನೆ. ಕನ್ಯಾ ರಾಶಿಯ ಚಂದ್ರನು ವೈಚಾರಿಕ ಪ್ರೌಢಿಮೆಯನ್ನು ನೀಡುತ್ತಾನೆ.
೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಜನ್ಮಕುಂಡಲಿಯಲ್ಲಿ ಕಂಡುಬರುವ ಆಧ್ಯಾತ್ಮಿಕ ವೈಶಿಷ್ಟ್ಯಗಳು
೨ ಅ. ಜನ್ಮದಿಂದಲೇ ಈಶ್ವರ ಮತ್ತು ಗುರುಗಳ ಬಗ್ಗೆ ಭಾವ ಇರುವುದು : ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಗ್ರಹಗಳ ಸಂಯೋಗವಿದೆ. ಈ ಯೋಗವು ಜನ್ಮದಿಂದಲೇ ಈಶ್ವರ ಮತ್ತು ಗುರುಗಳ ಬಗ್ಗೆ ಭಾವವನ್ನು ದರ್ಶಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ತಮ್ಮಲ್ಲಿನ ಭಾವವನ್ನು ಭಕ್ತಿಯಲ್ಲಿ ರೂಪಾಂತರಿಸಿ ಕೊಂಡರು. ಭಕ್ತಿ ಎಂದರೆ ಗುರುಚರಣಗಳಲ್ಲಿ ಸಂಪೂರ್ಣ ಶರಣಾಗತಿ ! ಅವರು ತಾವು ಸ್ವತಃ ಭಕ್ತಿ ಮಾಡಿ, ಸಾಧಕರಿಗೂ ಭಕ್ತಿಯನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಸಿದರು. ಅವರು ಭಕ್ತಿಯ ಬಲದಿಂದ ವ್ಯಾಪಕ ಸಮಷ್ಟಿ ಕಾರ್ಯವನ್ನು ಮಾಡಿದರು; ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ ‘ಸಮಷ್ಟಿ ರಾಧಾ’ ಎಂಬ ಅದ್ವಿತೀಯ ಉಪಮೆಯನ್ನು ನೀಡಿದರು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ವಾಣಿಯಿಂದ ವ್ಯಕ್ತವಾಗುವ ಉತ್ಕಟ ಭಕ್ತಿಯು ಇವರು ತೆಗೆದುಕೊಳ್ಳುವ ಸಾಪ್ತಾಹಿಕ ಭಕ್ತಿಸತ್ಸಂಗಗಳಲ್ಲಿ ಪ್ರತಿಯೊಬ್ಬ ಸಾಧಕನಿಗೆ ಅನುಭವಿಸಲು ಸಿಗುತ್ತದೆ. ಅವರ ವಾಣಿಯ ಚೈತನ್ಯದಿಂದ ಭಕ್ತಿಸತ್ಸಂಗದಲ್ಲಿ ಉಚ್ಚ ಲೋಕಗಳಲ್ಲಿನ ವಾತಾವರಣ ಅವತರಿಸಿದ ಅನುಭೂತಿ ಬರುತ್ತದೆ.
೨ ಆ. ಆಯೋಜನಾಕೌಶಲ್ಯ ಮತ್ತು ಅಧ್ಯಯನವೃತ್ತಿ’ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಕುಂಡಲಿಯಲ್ಲಿ ರವಿ ಮತ್ತು ಚಂದ್ರ ಈ ಗ್ರಹಗಳು ‘ಕನ್ಯಾ’ ರಾಶಿಯಲ್ಲಿವೆ. ಕನ್ಯಾ ರಾಶಿಯಲ್ಲಿ ‘ಆಯೋಜನೆಯ ಕೌಶಲ್ಯ ಮತ್ತು ಅಧ್ಯಯನವೃತ್ತಿ’ ಈ ಗುಣಗಳು ಪ್ರಧಾನವಾಗಿವೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿ ಈ ಗುಣಗಳು ಗಣನೀಯವಾಗಿ ಎದ್ದು ಕಾಣಿಸುತ್ತವೆ. ಅವರು ಎಲ್ಲ ಸಾಧಕರೆದುರು ಪರಿಪೂರ್ಣ ಸೇವೆಯ ಆದರ್ಶ ವನ್ನಿಟ್ಟಿದ್ದಾರೆ. ಒಂದು ಸೇವೆಯು ಸಿಕ್ಕಿದೊಡನೆ ಅದರ ಅಧ್ಯಯನ, ಚಿಕ್ಕ ಚಿಕ್ಕ ಅಂಶಗಳನ್ನು ತಿಳಿದುಕೊಳ್ಳುವುದು, ಪೂರ್ವನಿಯೋಜನೆ, ಸಮಯಮಿತಿಯನ್ನು ನಿಗದಿ ಪಡಿಸುವುದು, ವಿಚಾರಿಸಿ ಕೃತಿಗಳನ್ನು ಮಾಡುವುದು, ಸೇವೆಯ ವರದಿಯನ್ನು ನೀಡುವುದು, ಸೇವೆಯಲ್ಲಾದ ತಪ್ಪುಗಳ ಅಧ್ಯಯನ ಇತ್ಯಾದಿ ಕೃತಿಗಳ ಮೂಲಕ ‘ಪರಿಪೂರ್ಣ ಸೇವೆಯನ್ನು ಹೇಗೆ ಮಾಡಬೇಕು’, ಎಂದು ಅವರು ಸಾಧಕರಿಗೆ ಕಲಿಸಿದರು. ಅವರ ಮಾರ್ಗದರ್ಶನದಿಂದ ಸಾಧಕರ ಸೇವೆಗಳ ಫಲನಿಷ್ಪತ್ತಿ ಹೆಚ್ಚಾಯಿತು, ಹಾಗೆಯೇ ಸಮಷ್ಟಿ ಸಾಧನೆಯನ್ನು ಮಾಡಲು ಅನೇಕ ಯುವ ಸಾಧಕರು ಮತ್ತು ಸಾಧಕಿಯರು ಸಕ್ಷಮರಾದರು.
೨ ಇ. ಸೇವಾಭಾವ ಮತ್ತು ತತ್ತ್ವನಿಷ್ಠೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಶನಿ ಗ್ರಹವು ಯೋಗಕಾರಕ (ಪ್ರಭಾವಿ) ಆಗಿದೆ. ಶನಿಗ್ರಹವು ‘ಸೇವಾಭಾವ ಮತ್ತು ತತ್ತ್ವನಿಷ್ಠೆ’ ಈ ಗುಣಗಳನ್ನು ನೀಡುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ‘ಪ್ರತಿಯೊಬ್ಬ ಸಾಧಕನ ಆಧ್ಯಾತ್ಮಿಕ ಉನ್ನತಿ ಬೇಗನೆ ಆಗಬೇಕು’, ಎಂಬ ತಳಮಳವಿರುವುದರಿಂದ ಅವರು ಸಾಧಕರೊಂದಿಗೆ ಮಾನಸಿಕ ಸ್ತರದಲ್ಲಿ ವ್ಯವಹರಿಸದೇ ಯಾವಾಗಲೂ ಆಧ್ಯಾತ್ಮಿಕ ಸ್ತರದಲ್ಲಿಯೇ ವ್ಯವಹರಿಸುತ್ತಾರೆ. ಈ ಬಗ್ಗೆ ಅವರು, ‘ನಾನು ಸಾಧಕರ ಅಡಚಣೆಗಳನ್ನು ಪರಿಹರಿಸುವಾಗ ಅವರನ್ನು ಎಂದಿಗೂ ಮಾನಸಿಕ ಸ್ತರದಲ್ಲಿ ವ್ಯವಹರಿಸುವುದಿಲ್ಲ. ಮಾನಸಿಕ ಮಟ್ಟದಲ್ಲಿ ತಾತ್ಕಾಲಿಕ ಆಧಾರ ನೀಡುವುದಕ್ಕಿಂತ ಶಾಶ್ವತ ದಿಶೆಯನ್ನು ಹೇಗೆ ನೀಡಬಹುದು, ಎಂಬ ವಿಚಾರವೇ ಯಾವಾಗಲೂ ನನ್ನ ಮನಸ್ಸಿನಲ್ಲಿ ಇರುತ್ತದೆ. ಕೆಲವೊಮ್ಮೆ ಸಾಧಕರಿಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ; ಆದರೆ ಸಾಧನೆಯಲ್ಲಿ ಭಾವನೆಗೆ ಅವಕಾಶವಿಲ್ಲ, ಎಂದು ಗಮನದಲ್ಲಿಟ್ಟು ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವಂತಹ ಅಂಶಗಳನ್ನೇ ಹೇಳುತ್ತೇನೆ’, ಎಂದು ಹೇಳುತ್ತಾರೆ.
೨ ಈ. ‘ಜ್ಞಾನ, ಭಕ್ತಿ ಮತ್ತು ಕರ್ಮ’ ಈ ಸಾಧನಾಮಾರ್ಗಗಳ ಸಂಗಮ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿನ ಗ್ರಹಯೋಗವು ‘ಜ್ಞಾನ, ಭಕ್ತಿ ಮತ್ತು ಕರ್ಮ’ ಈ ಮೂರೂ ಸಾಧನಾಮಾರ್ಗಗಳಿಗೆ ಪೂರಕವಾಗಿದೆ. ‘ಗುರುಕೃಪಾಯೋಗ’ದಲ್ಲಿ ಈ ಮೂರೂ ಸಾಧನಾಮಾರ್ಗಗಳ ಸಂಗಮವಿದೆ. ‘ಕೇವಲ ಗುರುತತ್ತ್ವ ಶಾಶ್ವತವಾಗಿದೆ’ ಎಂಬುದನ್ನು ತಿಳಿದುಕೊಂಡು ಮಾಯೆಯನ್ನು ತ್ಯಜಿಸುವುದು’, ಇದರಿಂದ ಅವರು ಜ್ಞಾನಯೋಗವನ್ನು ಸಾಧಿಸಿದರು. ‘ಗುರುಚರಣಗಳಲ್ಲಿ ಸತತವಾಗಿ ಶರಣಾಗತರಾಗಿರುವುದು’, ಇದರಿಂದ ಅವರು ಭಕ್ತಿಯೋಗವನ್ನು ಸಾಧಿಸಿದರು. ಹಾಗೆಯೇ ‘ಅಖಂಡ ಕಾರ್ಯನಿರತರಾಗಿದ್ದು ಪರಿಪೂರ್ಣ ಸೇವೆಯಿಂದ’, ಇದರಿಂದ ಅವರು ಕರ್ಮಯೋಗವನ್ನು ಸಾಧಿಸಿದರು. ಆದುದರಿಂದ ಬಹಳ ವೇಗದಿಂದ ಅವರ ಆಧ್ಯಾತ್ಮಿಕ ಉನ್ನತಿ ಆಯಿತು. ಮೂರೂ ಸಾಧನಾಮಾರ್ಗಗಳ ಸಂಗಮವಿದ್ದುದರಿಂದ ಯಾವುದೇ ಪ್ರಕೃತಿಯ ಸಾಧಕನಿಗೆ ಅವರು ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಮಾಡಬಲ್ಲರು.
೨ ಉ. ಗುರು, ಮಂಗಳ ಮತ್ತು ಶನಿ ಈ ಗ್ರಹಗಳ ನವಪಂಚಮ ಯೋಗ ಇದ್ದುದರಿಂದ ವ್ಯಾಪಕ ಸಮಷ್ಟಿ ಕಾರ್ಯವನ್ನು ಮಾಡುವ ಕ್ಷಮತೆ ಬರುವುದು : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಗುರು, ಮಂಗಳ ಮತ್ತು ಶನಿ ಈ ಗ್ರಹಗಳ ನವಪಂಚಮಯೋಗ (ಶುಭಯೋಗ)ವಿದೆ. ಈ ಯೋಗವು ವ್ಯಾಪಕ ಸಮಷ್ಟಿ ಕಾರ್ಯವನ್ನು ಮಾಡುವ ಕ್ಷಮತೆಯನ್ನು ದರ್ಶಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧನೆಯ ಬಗೆಗಿನ ಅನೇಕ ದೊಡ್ಡ ಉಪಕ್ರಮಗಳ ಸೇವೆಯನ್ನು ಸಮರ್ಥವಾಗಿ ಮತ್ತು ಸಹಜವಾಗಿ ಮಾಡಿದ್ದಾರೆ. ಅವರು ದೇಶ-ವಿದೇಶಗಳಲ್ಲಿನ ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮದಿಂದ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ’ ಎಂದು ಘೋಷಿಸಿದ್ದಾರೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೊಡುಗೆಯು ‘ಹಿಂದೂ ರಾಷ್ಟ್ರದ’ ಸ್ಥಾಪನೆಯ ಕಾರ್ಯದಲ್ಲಿ ಮಹತ್ತರವಾಗಿರಲಿದೆ.
೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಲೌಕಿಕ ಆಧ್ಯಾತ್ಮಿಕ ವೈಶಿಷ್ಟ್ಯಗಳು
೩ ಅ. ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸುವುದು : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ರವಿ ಮತ್ತು ಶನಿ ಈ ಗ್ರಹಗಳ ಅಶುಭಯೋಗವಿದೆ, ಹಾಗೆಯೇ ‘ಸರ್ವಪಿತ್ರೀ ಅಮಾವಾಸ್ಯೆಯ’ ತಿಥಿಯಂದು ಅವರ ಜನ್ಮವಾಗಿದೆ. ಆದುದರಿಂದ ಅವರಿಗೆ ಆರಂಭದಲ್ಲಿ ತೀವ್ರ ಆಧ್ಯಾತ್ಮಿಕ
ತೊಂದರೆ ಇತ್ತು; ಆದರೆ ಸಮಷ್ಟಿ ಸಾಧನೆಯ ಹಂಬಲವನ್ನಿಟ್ಟು ಕೊಂಡು ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯನ್ನು ಸಾತತ್ಯದಿಂದ ಮಾಡಿದುದರಿಂದ ಅವರ ಆಧ್ಯಾತ್ಮಿಕ ತೊಂದರೆ ಕಡಿಮೆ ಕಾಲಾವಧಿಯಲ್ಲಿ ಸಂಪೂರ್ಣ ದೂರವಾಯಿತು. ಈ ಬಗ್ಗೆ ಅವರು, ‘ಪ್ರತಿಯೊಂದು ಕ್ಷಣ ‘ಸೇವೆಗಾಗಿ ಯಾವ ರೀತಿ ಪ್ರಯತ್ನಿಸಲಿ ? ಪ್ರತಿಯೊಂದು ಕ್ಷಣ ಸೇವೆಯಲ್ಲಿ ಹೇಗೆ ಇರಲಿ ?’ ಎಂಬುದಕ್ಕಾಗಿ ನಾನು ಪ್ರಯತ್ನಿಸತೊಡಗಿದೆನು. ಪ್ರತಿಯೊಂದು ಕ್ಷಣವನ್ನು ಸೇವೆಯಲ್ಲಿ ತೊಡಗಿಸಿಕೊಂಡಾಗ ತೊಂದರೆಯ ಪ್ರಮಾಣ ತನ್ನಿಂದತಾನೇ ಕಡಿಮೆಯಾಗುತ್ತಾ ಹೋಯಿತು. ಭಾವಜಾಗೃತಿಯ ಪ್ರಯತ್ನ ಮತ್ತು ಅಖಂಡ ಸೇವೆಯಲ್ಲಿರುವುದು, ಇವುಗಳಿಂದ ನನ್ನ ತೊಂದರೆ ಕಡಿಮೆಯಾಯಿತು’, ಎಂದು ಹೇಳುತ್ತಾರೆ.
ಕೃತಜ್ಞತೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಜನ್ಮಕುಂಡಲಿಯ ವಿಶ್ಲೇಷಣೆ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಶ್ರೀ. ಯಶವಂತ ಕಣಗಲೇಕರ (ಜ್ಯೋತಿಷ್ಯ ವಿಶಾರದ) ಮತ್ತು ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೪.೨೦೨೩)