‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರು ಎಲ್ಲ ಸಾಧಕರಿಗೆ ತಮ್ಮ ವಾಣಿ, ವಿಚಾರ ಮತ್ತು ಕೃತಿಗಳ ಮೂಲಕ ‘ಪ್ರತಿಯೊಂದು ಕೃತಿ ಮತ್ತು ವಿಚಾರವು ಪ್ರತಿಯೊಂದು ಹಂತದಲ್ಲಿ ಹೇಗೆ ಯೋಗ್ಯ ಇರಬೇಕು ?’ ಎಂಬುದನ್ನು ನಿರಂತರವಾಗಿ ಕಲಿಸುತ್ತಿದ್ದಾರೆ. ಆದ್ದರಿಂದ ನಾವು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರನ್ನು ‘ಸಂತ’ರೆಂದು ಘೋಷಣೆ ಮಾಡಿದಾಗ ಪೂ. ಪೃಥ್ವಿರಾಜ ಹಜಾರೆ (ಸನಾತನದ ೨೫ ನೇ ಸಂತರು, ವ. ೬೫ ವರ್ಷ) ಇವರು ಅವರನ್ನು ‘ನಡೆದಾಡುವ ಗ್ರಂಥ’, ಎಂದು ಸಂಬೋಧಿಸಿದ್ದರು. ಈ ವಾಕ್ಯ ನಿಜವಾಗಿಯೂ ಯೋಗ್ಯವಾಗಿದೆ ಎಂಬುದು ಈ ಮುಂದಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ. ಅದರ ಕೆಲವು ಅಂಶಗಳನ್ನು ೨೬/೧ ಸಂಚಿಕೆಯಲ್ಲಿ ನೋಡಿದ್ದೆವು. ಅದರ ಉಳಿದ ಅಂಶಗಳನ್ನು ಈ ಸಂಚಿಕೆಯಲ್ಲಿ ನೋಡೋಣ.
೩ ಎ. ತಪ್ಪು ಹೇಳುವ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ದೈವೀ ಪದ್ಧತಿ – ಸಾಧಕರಲ್ಲಿ ತಪ್ಪುಗಳ ಗಾಂಭೀರ್ಯ ನಿರ್ಮಾಣವಾಗಲು ತಪ್ಪನ್ನು ಕಠೋರವಾಗಿ ಹೇಳುವಾಗ ಅವರಿಗೆ ನಿರಾಶೆಯಾಗದಂತೆ ಶಕ್ತಿಯನ್ನೂ ನೀಡುವುದು : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಯಾವುದೇ ಒಂದು ತಪ್ಪನ್ನು ಹೇಳುವಾಗ ಅದರ ಬಗ್ಗೆ ಗಾಂಭೀರ್ಯ ನಿರ್ಮಾಣವಾಗಬೇಕೆಂದು ಅವರು ಕಠೋರವಾಗಿ ಹೇಳುತ್ತಾರೆ. ಅವರು ತಪ್ಪನ್ನು ಹೇಳುವುದೆಂದರೆ, ಸಾಧಕನ ಅಹಂನ ಮೇಲೆ ಒಂದು ರೀತಿಯ ಆಘಾತವಾಗಿರುತ್ತದೆ ಹಾಗೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಹಿಸಿಕೊಳ್ಳಲು ಸಾಧ್ಯವಾಗದಿರುವಾಗ ಕೆಲವೊಮ್ಮೆ ಸಾಧಕರು ನಿರಾಶರಾಗಬಹುದು; ಆದರೆ ಅವರಿಗೆ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ ಅವರೇ ಕೊಡುತ್ತಾರೆ. ಆದ್ದರಿಂದ ಮನಸ್ಸಿನಲ್ಲಿ ನಕಾರಾತ್ಮಕತೆ ನಿರ್ಮಾಣವಾಗುವುದಿಲ್ಲ ಹಾಗೂ ‘ಭಗವಂತ ಜನ್ಮಜನ್ಮಾಂತರದ ಅಯೋಗ್ಯ ಸಂಸ್ಕಾರವನ್ನು ಅಳಿಸಲು ತಪ್ಪುಗಳನ್ನು ತೋರಿಸುತ್ತಿದ್ದಾನೆ’, ಎನ್ನುವ ವಿಷಯದಲ್ಲಿ ಕೃತಜ್ಞತೆಯೆನಿಸುತ್ತದೆ. ಅದರಿಂದ ಸ್ವಭಾವದೋಷ ಮತ್ತು ಅಹಂನ ಅಂಗಗಳನ್ನು ಅಳಿಸಲು ಪ್ರೇರಣೆ ದೊರೆತು ಉತ್ಸಾಹ ಹೆಚ್ಚಾಗುತ್ತದೆ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ತಪ್ಪು ಹೇಳುವ ಈ ಪದ್ಧತಿ ತುಂಬಾ ದೈವಿಕವೆನಿಸುತ್ತದೆ; ಏಕೆಂದರೆ ‘ತಪ್ಪುಗಳನ್ನು ಕೇಳುವುದು, ಅಹಂನ ವಿಷಯದಲ್ಲಿ ಯಾರಾದರೂ ಹೇಳುತ್ತಿದ್ದರೆ ಅದನ್ನು ಜೀರ್ಣಿಸಿಕೊಳ್ಳುವುದು ಹಾಗೂ ಅದನ್ನು ತಕ್ಷಣ ಶೇ. ೧೦೦ ರಷ್ಟು ಸ್ವೀಕರಿಸುವುದು’, ಇದು ನಿಜವಾಗಿಯೂ ಅತ್ಯಂತ ಕಠಿಣವಾಗಿರುತ್ತದೆ. ಕೇವಲ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ಕೃಪೆಯಿಂದಲೇ ನಾನು ನನ್ನ ಅಹಂನ ವಿಷಯವನ್ನು ಕೇಳಿ ಅದನ್ನು ಸ್ವೀಕರಿಸುವಂತಹ ಅಂತರ್ಮುಖತೆಯನ್ನು ಅವರೇ ನನ್ನಲ್ಲಿ ಮೂಡಿಸಿದ್ದಾರೆ. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕೃತಜ್ಞಳಾಗಿದ್ದೇನೆ.
೩ ಏ. ಸಾಧಕರಿಂದ ತಪ್ಪುರಹಿತ ಸೇವೆಯಾಗಿ ಆಧ್ಯಾತ್ಮಿಕ ಉನ್ನತಿಯಾಗಬೇಕು, ಎನ್ನುವ ತಳಮಳ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರಲ್ಲಿಯೇ ಹೆಚ್ಚು ಪ್ರಮಾಣದಲ್ಲಿದೆ : ‘ಪ್ರತಿಯೊಂದು ತಪ್ಪು ನಮ್ಮನ್ನು ಈಶ್ವರನಿಂದ ದೂರ ಒಯ್ಯುತ್ತದೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಚನವಾಗಿದೆ. ಅದಕ್ಕನುಸಾರ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ನನಗೆ ನನ್ನ ಪ್ರತಿಯೊಂದು ತಪ್ಪನ್ನು ಹೇಳಿ ದೇವರ ಕಡೆಗೆ ಹೋಗಲು ಒಂದೊಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತಿದ್ದಾರೆ. ನನಗಿಂತ ನನ್ನ ಆಧ್ಯಾತ್ಮಿಕ ಉನ್ನತಿಯಾಗಬೇಕೆಂಬ ತಳಮಳ ಅವರಿಗೇ ಹೆಚ್ಚು ಪ್ರಮಾಣದಲ್ಲಿದೆ.
೩ ಒ. ಪ್ರೀತಿ
೩. ಒ ೧. ಸಾಧಕಿಗೆ ಶಾರೀರಿಕ ತೊಂದರೆ ಆಗುತ್ತಿದ್ದ ಕಾರಣ ಪ್ರೇಮಭಾವದಿಂದ ಅವಳ ಕಾಳಜಿ ವಹಿಸುವುದು : ನನಗೆ ಹೊಟ್ಟೆಯಲ್ಲಿ ತೊಂದರೆಯಾಗುತ್ತಿದ್ದ ಕಾರಣ ವೈದ್ಯರು ಬೇಗನೆ ಮಲಗಲು ಹೇಳಿದ್ದಾರೆ. ಅದಕ್ಕನುಸಾರ ನನ್ನ ಪ್ರಸಾದ ಮತ್ತು ಮಹಾಪ್ರಸಾದ ಸೇವಿಸುವ ಹಾಗೂ ಮಲಗುವ ಸಮಯ ಆದಾಗ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ನನಗೆ ನೆನಪಿಸುತ್ತಾರೆ. ಅವರು ನನ್ನ ವಿಷಯದಲ್ಲಿ ತುಂಬಾ ಕಾಳಜಿ ವಹಿಸುತ್ತಾರೆ. ‘ನನ್ನ ಸೇವೆಗೆ ಮತ್ತು ನನ್ನ ಮನಸ್ಸಿಗೂ ಯಾವುದೇ ಪರಿಣಾಮವಾಗದಂತೆ ಅವರು ಸ್ವತಃ ಗಮನಹರಿಸುತ್ತಾರೆ.
೩ ಓ ೨. ಎಲ್ಲ ಸಾಧಕರ ಮೇಲೆ ತಾಯಿಯಂತೆ ಪ್ರೀತಿಯನ್ನು ಮಾಡುವುದು : ಪ್ರಸಾರದಿಂದ, ಅಂದರೆ ಹೊರಗಿನಿಂದ ಅನೇಕ ದಿನಗಳ ನಂತರ ರಾಮನಾಥಿ ಆಶ್ರಮಕ್ಕೆ ಬರುವ ಎಲ್ಲ ಸಾಧಕರ ಮೇಲೆ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ತಾಯಿಯಂತೆ ಪ್ರೇಮವನ್ನು ಮಾಡುತ್ತಾರೆ. ಸಾಧಕರಿಗೆ ಮಾನಸಿಕ ದೃಷ್ಟಿಯಲ್ಲಿ ಆಧಾರ ನೀಡುವುದು, ಅವರನ್ನು ಭೇಟಿಯಾಗಿ ಸಾಧನೆಗಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಊರ್ಜೆ ನೀಡುವುದು; ಇತ್ಯಾದಿ ಮಾಡುತ್ತಾರೆ.
೩ ಔ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ‘ಗುರು’ ಸ್ಥಾನದಲ್ಲಿದ್ದರೂ ಯಾವಾಗಲೂ ಶಿಷ್ಯಭಾವದಲ್ಲಿರುತ್ತಾರೆ.
೩ ಅಂ. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಇರುವ ಭಾವ : ಒಮ್ಮೆ ಸೇವೆಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಕೆಲವು ದಿನಗಳಿಗಾಗಿ ಬೇರೆ ಆಶ್ರಮಕ್ಕೆ ಹೋಗಿದ್ದರು. ಆಗ ಪ.ಪೂ. ಡಾಕ್ಟರರು ನನಗೆ ಸಂದೇಶ ನೀಡಿದರು, ”ಯಾವುದಾದರೊಬ್ಬ ಸಾಧಕ ವಾಹನದಲ್ಲಿ ಆ ಆಶ್ರಮಕ್ಕೆ ಹೋಗುತ್ತಿದ್ದರೆ, ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರಿಗೆ ಏನಾದರೂ ಕಳುಹಿಸಲಿಕ್ಕಿದ್ದರೆ, ನಾವು ಅದನ್ನು ಕಳುಹಿಸೋಣ.’’ ನಾನು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರನ್ನು ಸಂಪರ್ಕಿಸಿ ಈ ವಿಷಯವನ್ನು ಹೇಳಿದೆ. ಆಗ ಅವರು ಮುಂದಿನಂತೆ ಹೇಳಿದರು, ‘ಪ.ಪೂ. ಡಾಕ್ಟರರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಈಗ ನನಗೆ ಏನೂ ಬೇಡ.’’ ಅವರ ಉತ್ತರದಿಂದ ‘ಅವರಿಗೆ ಗುರುದೇವರ ಬಗ್ಗೆ ಎಷ್ಟು ಭಾವ ಇದೆ’, ಎಂಬುದು ನನಗೆ ತಿಳಿಯಿತು.
೪. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ಭಾವದಿಂದಾಗಿ ‘ಬ್ರಹ್ಮಾಂಡ ಮಾತ್ರವಲ್ಲ, ಪ್ರತ್ಯಕ್ಷ ನಕ್ಷತ್ರಗಳೂ ಅವರೊಂದಿಗೆ ಮಾತನಾಡುತ್ತ್ತವೆ’, ಎಂದು ಅನಿಸುವುದು
ಒಮ್ಮೆ ನಾನು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ಜೊತೆಗೆ ಒಂದು ಸೇವೆಗಾಗಿ ಹೊರಗೆ ಹೋಗಿದ್ದೆ. ನಮಗೆ ಆಶ್ರಮಕ್ಕೆ ಹಿಂತಿರುಗಿ ಬರಲು ತುಂಬಾ ರಾತ್ರಿ ಆಯಿತು. ಆಗ ಅವರು ವಾಹನದಿಂದಲೇ ಮೇಲೆ ನೋಡಿ ನನಗೆ ಮುಂದಿನಂತೆ ಹೇಳಿದರು, ”ಈಗ ಒಂದು ನಕ್ಷತ್ರ ನನ್ನನ್ನು ಕರೆಯಿತು.’’ ಅನಂತರ ಅವರು ಆಕಾಶಮಂಡಲದಲ್ಲಿನ ನಕ್ಷತ್ರಗಳನ್ನು ನೋಡಿದರು. ನಂತರ ಅವರು, ನಕ್ಷತ್ರ ‘ನೀನು ಹೇಗಿದ್ದಿಯ ?’, ಎಂದು ನನಗೆ ಕೇಳಿತು, ನಾನು ಆ ನಕ್ಷತ್ರಕ್ಕೆ, ‘ನಾನು ಆನಂದ ಹಾಗೂ ಸ್ಥಿರವಾಗಿದ್ದೇನೆ !’ ಎಂದು ಹೇಳಿದೆ. ಅವರ ಮಾತುಗಳನ್ನು ಕೇಳಿ ನನಗೆ ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರಲ್ಲಿನ ಭಾವದಿಂದ ಬ್ರಹ್ಮಾಂಡ ಮಾತ್ರವಲ್ಲ, ನಕ್ಷತ್ರಗಳು ಕೂಡ ಅವರೊಂದಿಗೆ ಮಾತನಾಡುತ್ತಿವೆ, ಎಂಬುದು ಅರಿವಾಯಿತು. ಇಂತಹ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಸೌ. ಪ್ರಿಯಾಂಕಾ ಚೇತನ ರಾಜಹಂಸ (ಆಧ್ಯಾತ್ಮಿಕ ಮಟ್ಟ ಶೇ.೬೮, ವಯಸ್ಸು ೩೭ ವರ್ಷ) ಬಾಂದೋಡಾ, ಫೋಂಡಾ ಗೋವಾ. (೧೮.೯.೨೦೨೩)