‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಸಂತರು ಮತ್ತು ಸಮಾಜದ ಗಣ್ಯ ವ್ಯಕ್ತಿಗಳು ಬರುತ್ತಾರೆ. ಸಂತರು ಮತ್ತು ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರನ್ನು ಭೇಟಿಯಾದ ನಂತರ ಅವರಿಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಗ್ಗೆ ಅರಿವಾದ ಅಂಶಗಳನ್ನು ಇಲ್ಲಿ ಕೊಟ್ಟಿದ್ದೇವೆ.
೧. ಸದ್ಗುರು ಆಪಟೆಅಜ್ಜಿಯವರು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರನ್ನು ಹತ್ತಿರ ಕರೆದುಕೊಂಡು ಪ್ರೀತಿಯಿಂದ ಅವರ ಮೈಮೇಲೆ ಕೈಯಾಡಿಸಿ ಅವರ ಕೈಗಳನ್ನು ತಮ್ಮ ಹಣೆಗೆ ಹಚ್ಚಿಕೊಳ್ಳುವುದು
‘೨.೯.೨೦೨೩ ಈ ದಿನದಂದು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಮತ್ತು ನಾವು ಕೆಲವು ಸಾಧಕರು ಸದ್ಗುರು ಆಪಟೆ ಅಜ್ಜಿಯವರ ಮನೆಗೆ ಹೋಗಿದ್ದೆವು. ಆಗ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಮನೆಗೆ ಬಂದಿದ್ದನ್ನು ನೋಡಿ ಸದ್ಗುರು ಆಪಟೆಅಜ್ಜಿಯವರಿಗೆ ಬಹಳ ಆನಂದವಾಯಿತು. ಅವರು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರನ್ನು ಹತ್ತಿರ ಕರೆದುಕೊಂಡು ಪ್ರೀತಿಯಿಂದ ಅವರ ಬೆನ್ನ ಮೇಲೆ, ತಲೆಯ ಮೇಲೆ ಮತ್ತು ಮುಖದ ಮೇಲೆ ಕೈಯಾಡಿಸಿದರು. ಅವರು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಕೈಗಳನ್ನು ಹಿಡಿದು ಅವುಗಳನ್ನು ತಮ್ಮ ಹಣೆಗೆ ಹಚ್ಚಿಕೊಂಡರು. ಈ ಎಲ್ಲ ಕೃತಿಗಳಿಂದ ಅವರಿಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಗ್ಗೆ ಅನಿಸುತ್ತಿರುವ ಪ್ರೇಮ ಮತ್ತು ಭಾವವು ಗಮನಕ್ಕೆ ಬಂದಿತು. ‘ಅವರಿಗೆ ಗುರುದೇವರ ಬಗ್ಗೆ ಯಾವ ರೀತಿಯ ಭಾವವಿದೆಯೋ, ಅದೇ ರೀತಿಯ ಭಾವ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಬಗ್ಗೆಯೂ ಇದೆ’, ಎಂದು ಅನಿಸಿತು.
– ಸೌ. ವೈಷ್ಣವಿ ಅಮೋಲ ಬಧಾಲೆ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೫) , ಸೌ. ವರ್ಧಿನಿ ಗೊರಲ್ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೩), ಶ್ರೀ. ಅತುಲ ಬಧಾಲೆ
‘ಗೋವಾದ, ಮ್ಹಾಪಸಾದ, ಸದ್ಗುರು ಸುಶೀಲಾ ಆಪಟೆಅಜ್ಜಿ ಯವರು ಆಗಾಗ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬರುತ್ತಿರುತ್ತಾರೆ. ಅವರ ವಯಸ್ಸು ೮೬ ವರ್ಷಗಳು. ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರನ್ನು ಭೇಟಿಯಾದ ನಂತರ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರನ್ನು ಭೇಟಿಯಾಗುತ್ತಾರೆ. ಆಶ್ರಮಕ್ಕೆ ಬಂದ ನಂತರ ಅವರು, ”ಶ್ರೀ ಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಎಲ್ಲಿದ್ದಾರೆ ? ಅವರು ಆಶ್ರಮದಲ್ಲಿ ಇದ್ದಾರಲ್ಲಾ ?’’ ಎಂದು ನೆನಪಿನಿಂದ ಕೇಳುತ್ತಾರೆ. ಶ್ರೀ ಸತ್ಶಕ್ತಿ (ಸೌ.) ಸಿಂಗಬಾಳ ಇವರು ಸದ್ಗುರು ಆಪಟೆಅಜ್ಜಿಯವರ ಚರಣಗಳನ್ನು ಸ್ಪರ್ಶಿಸಿ ಅವರೊಂದಿಗೆ ಬಹಳ ಆದರದಿಂದ ಮಾತನಾಡುತ್ತಾರೆ.
ಸಮಾಜದ ಗಣ್ಯ ವ್ಯಕ್ತಿಗಳು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಸತ್ಸಂಗದಲ್ಲಿ ಅನುಭವಿಸಿದ ಭಾವಸ್ಥಿತಿ !
೧. ಮಹಾರಾಷ್ಟ್ರದ ಸಂಭಾಜಿನಗರದ ನಾಥಸಂಪ್ರದಾಯದ ಸಂತರಾದ ಪೂ. ಯಶವಂತ ಶಿವನಗಿರೀಕರ ಮಹಾರಾಜರ ಪತ್ನಿ ಸೌ. ವನಿತಾ ಶಿವನಗಿರೀಕರ (ದೇವಿಭಕ್ತೆ) ಇವರ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರೊಂದಿಗೆ ಆದ ಭಾವಸ್ಪರ್ಶಿ ಭೇಟಿ
೧ ಅ. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ಭೇಟಿಯಾದ ನಂತರ ಸೌ. ಶಿವನಗಿರೀಕರ ಇವರಿಗೆ ಭಾವಾಶ್ರುಗಳನ್ನು ತಡೆಯಲು ಆಗಲಿಲ್ಲ : ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಸಂಭಾಜಿನಗರದ ಓರ್ವ ನಾಥ ಸಂಪ್ರದಾಯದ ಸಂತರಾದ ಪೂ. ಯಶವಂತ ಶಿವನಗಿರೀಕರ ಮಹಾರಾಜರ ಪತ್ನಿ ಸೌ. ವನಿತಾ ಶಿವನಗಿರೀಕರ (ದೇವಿಭಕ್ತೆ) ಇವರ ಮೊದಲ ಭೇಟಿಯಲ್ಲಿ ಅವರ ಪರಸ್ಪರರೊಂದಿಗೆ ಮಾತುಕತೆಯಾದ ನಂತರ ಸೌ. ಶಿವನಗಿರೀಕರ ಇವರಿಗೆ ಭಾವಾಶ್ರುಗಳನ್ನು ತಡೆಯಲು ಆಗಲಿಲ್ಲ.
೧ ಆ. ಸೌ. ಶಿವನಗಿರೀಕರ ಇವರಿಗೆ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಭೇಟಿಯಾದಾಗ ದೇವಿಯನ್ನು ಭೇಟಿ ಯಾದಂತಹ ಆನಂದವಾಗುವುದು : ಅವರು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರನ್ನು ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿದ್ದರು (ಅವರ ಭಾವ ಜಾಗೃತವಾಗಿತ್ತು). ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಅವರ ಬೆನ್ನ ಮೇಲೆ ಪ್ರೀತಿಯಿಂದ ಕೈಯಾಡಿಸು ತ್ತಿದ್ದರು. ಆಗ ಸೌ. ಶಿವನಗಿರೀಕರ ಇವರು, ”ಆಶ್ರಮಕ್ಕೆ ಬಂದ ನಂತರ ‘ನಾನು ತವರುಮನೆಗೆ ಬಂದಿದ್ದೇನೆ’, ಎಂದು ಅನಿಸುತ್ತದೆ ಮತ್ತು ಇಲ್ಲಿಂದ ಹೋಗಬೇಕು ಎಂದೆನಿಸುವುದಿಲ್ಲ”, ಎಂದು ಹೇಳಿದರು. ಸೌ. ಶಿವನಗಿರೀಕರ ಇವರಿಗೆ ದೇವಿಯ ದೃಷ್ಟಾಂತವಾಗಿದೆ ಮತ್ತು ಅವರಿಗೆ ದೇವಿಯ ಆಶೀರ್ವಾದ ಲಭಿಸಿದೆ. ಸೌ. ಶಿವನಗಿರೀಕರ ಇವರಿಗೆ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಭೇಟಿಯಾದಾಗ ಅವರಿಗೆ ದೇವಿಯೇ ಭೇಟಿಯಾದಂತೆ ಆನಂದವಾಗುತ್ತಿತ್ತು. ಅದನ್ನು ನೋಡಿ ಸಾಧಕರದ್ದೂ ಭಾವಜಾಗೃತಿಯಾಗುತ್ತಿತ್ತು.
೧ ಇ. ಸೌ. ಶಿವನಗಿರೀಕರ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಭೇಟಿ : ಕೆಲವು ವರ್ಷಗಳ ಹಿಂದೆ ಪೂ. ಯಶವಂತ ಶಿವನಗಿರೀಕರ ಮಹಾರಾಜ ಹಾಗೂ ಸೌ. ವನಿತಾ ಶಿವನಗಿರೀಕರ ಇವರು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ‘ಅವರು ಅನೇಕ ವರ್ಷಗಳಿಂದ ಆತ್ಮೀಯರಾಗಿದ್ದಾರೆ’, ಎಂದು ಅನಿಸುತ್ತಿತ್ತು.
– ಕು. ಮೇಘಾ ಚವ್ಹಾಣ, ಸನಾತನ ಆಶ್ರಮ, ರಾಮನಾಥಿ, ಗೋವಾ.