ಆಧ್ಯಾತ್ಮಿಕ ಉನ್ನತಿ ಸಾಧಿಸಿದರೆ, ದೇಹದಿಂದ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಪ್ರಕ್ಷೇಪಿತವಾಗತೊಡಗುತ್ತದೆ ಇವುಗಳಲ್ಲಿರುವ ತೇಜತತ್ವದಿಂದಾಗಿ ದೇಹದಿಂದ ಪ್ರಕಾಶವು ಪ್ರಕ್ಷೇಪಿತವಾಗುವುದು ಕಾಣಿಸುತ್ತದೆ. ಎದುರಿಗೆ ಕತ್ತಲಿರುವಾಗ ಕೈಯನ್ನು ಕತ್ತಲಿರುವ ದಿಕ್ಕಿನೆಡೆಗೆ ಮಾಡಿದೊಡನೆ, ಕೈ ಬೆರಳುಗಳಿಂದ ಬೆಳಕು ಹೊರಬರುವುದು ಕಾಣಿಸುತ್ತದೆ. ಈ ಬೆಳಕಿನ ಸಂದರ್ಭದಲ್ಲಿ ಮುಂದಿನ ವೈಶಿಷ್ಟ್ಯಗಳು ಗಮನಕ್ಕೆ ಬಂದವು.
ಟಾರ್ಚ್ ಬೆಳಕನ್ನು ಕತ್ತಲಿರುವಲ್ಲಿ ತೋರಿಸಿದರೆ ಸ್ವಲ್ಪ ಅಂತರದವರೆಗೆ ಅದು ಸ್ಪಷ್ಟವಾಗಿ ಕಾಣುತ್ತದೆ; ಆದರೆ ಅಂತರ ಹೆಚ್ಚಾದಾಗ ಬೆಳಕು ಮಂಜಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿನ ಉನ್ನತರ ಕೈ ಬೆರಳಿನಿಂದ ಹೊರಬರುವ ತೇಜತತ್ತ್ವರೂಪದ ಬೆಳಕು ಹತ್ತಿರದ ಕತ್ತಲೆಗಿಂತಲೂ ದೂರದ ಕತ್ತಲೆಯಲ್ಲಿ ಇನ್ನೂ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಇದಕ್ಕೆ ಕಾರಣವೆಂದರೆ ಅಂತರ ಹೆಚ್ಚಾದಂತೆ ಕೈ ಬೆರಳಿನಿಂದ ಪ್ರಕ್ಷೇಪಿತವಾಗುವ ತೇಜ ತತ್ತ್ವದ ವೇಗ ಮತ್ತು ವ್ಯಾಪ್ತಿ ಹೆಚ್ಚುತ್ತದೆ. ಆದ್ದರಿಂದ ಕಾಣಿಸುವ ಬೆಳಕು ಕೂಡ ಇನ್ನು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಅಧ್ಯಾತ್ಮದ ವೈಶಿಷ್ಟವಾಗಿದೆ !
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೫.೨೦೨೩)