ವಾಸ್ತುದೋಷ ನಿವಾರಣೆಗಾಗಿ ಮಾಡಿದ ರತ್ನಸಂಸ್ಕಾರ ವಿಧಿಯ ಸಂದರ್ಭದ ಸಂಶೋಧನೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಓರ್ವ ಸಾಧಕನ ಮನೆಯಲ್ಲಿ ೧೯.೮.೨೦೨೩ ರಂದು ವಾಸ್ತುದೋಷ ನಿವಾರಣೆಗಾಗಿ ರತ್ನಸಂಸ್ಕಾರ ವಿಧಿಯನ್ನು ಮಾಡಲಾಯಿತು. ಈ ವಿಧಿಯ ಸಂಶೋಧನೆಯನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯು.ಎ.ಎಸ್. ಉಪಕರಣದಿಂದ ಮಾಡಲಾಯಿತು. ಈ ಉಪಕರಣದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆಯನ್ನು ಮೀಟರ್‌ನಲ್ಲಿ ಅಳೆಯಲು ಬರುತ್ತದೆ. ರತ್ನ ಸಂಸ್ಕಾರ ವಿಧಿಯನ್ನು ಮಾಡಿದರೆ ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ, ಎಂಬುದು ಈ ಸಂಶೋಧನೆಯಿಂದ ಸಿದ್ಧವಾಯಿತು. ಈ ಸಂಶೋಧನೆಯ ಅಂತರ್ಗತ ಮಾಡಿದ ಪರಿಶೀಲನೆಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಇಲ್ಲಿ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು (ಟಿಪ್ಪಣಿ) ಮಾಡಿದ್ದರಿಂದ ರತ್ನಗಳ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ದೂರವಾಗಿ ರತ್ನದಲ್ಲಿನ ಸಕಾರಾತ್ಮಕ ಸ್ಪಂದನಗಳು ತುಂಬಾ ಹೆಚ್ಚಾಗುವುದು

ಕಲಿಯುಗದಲ್ಲಿನ ವಾತಾವರಣ ರಜ-ತಮಪ್ರಧಾನವಾಗಿರುವುದರಿಂದ ರತ್ನಗಳ ಮೇಲೆ ತೊಂದರೆದಾಯಕ ಸ್ಪಂದನಗಳ ಆವರಣ ಇರುತ್ತದೆ. ಆದ್ದರಿಂದ ರತ್ನಗಳ ಮೇಲೆ ಆಧ್ಯಾತ್ಮಿಕ ಉಪಾಯ ಮಾಡಿ ಅವುಗಳ ಶುದ್ಧೀಕರಣ ಮಾಡಿಯೇ ಅವುಗಳನ್ನು ವಿಧಿಯಲ್ಲಿ ಉಪಯೋಗಿಸಬೇಕು.

ಟಿಪ್ಪಣಿ : ಪರಿಶೀಲನೆಯಲ್ಲಿನ ರತ್ನಗಳಿಗೆ ಸಾತ್ತ್ವಿಕ ಊದುಬತ್ತಿಯ ಧೂಪವನ್ನು ತೋರಿಸುವುದು, ಅವುಗಳ ಮೇಲೆ ವಿಭೂತಿಯನ್ನು ಊದುವುದು, ಸಂತರ ಭಜನೆಗಳನ್ನು ಹಾಕಿಡುವುದು (ರತ್ನಗಳ ಸಮೀಪ ಸಂತರ ಧ್ವನಿಯಲ್ಲಿನ ಭಜನೆಗಳನ್ನು ಹಾಕಿಡುವುದರಿಂದ ಸಂತರ ಭಜನೆಗಳಲ್ಲಿನ ಚೈತನ್ಯ ರತ್ನಗಳಲ್ಲಿ ತುಂಬಿಕೊಳ್ಳುತ್ತದೆ.) ಇತ್ಯಾದಿ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಿದೆವು.

೨. ರತ್ನ ಸಂಸ್ಕಾರ ವಿಧಿಯನ್ನು ಮಾಡಿದ ಮೇಲೆ ಭೂಮಿಯಲ್ಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾಗಿ ಭೂಮಿಯಲ್ಲಿ ತುಂಬಾ ಸಾತ್ತ್ವಿಕತೆ ನಿರ್ಮಾಣವಾಗುವುದು

ರತ್ನ ಸಂಸ್ಕಾರ ವಿಧಿಯನ್ನು ಮಾಡುವ ಮೊದಲು ಮನೆಯಲ್ಲಿನ ಪ್ರತಿಯೊಂದು ದಿಕ್ಕಿನಲ್ಲಿನ ಭೂಮಿಯನ್ನು ನಿರೀಕ್ಷಣೆ ಮಾಡಲಾಯಿತು. ಆಗ ಭೂಮಿಯಲ್ಲಿ ಸಕಾರಾತ್ಮಕ ಸ್ಪಂದನಗಳು ಸ್ವಲ್ಪವೂ ಇರಲಿಲ್ಲ, ಅದಕ್ಕೆ ಬದಲು ತುಂಬಾ ನಕಾರಾತ್ಮಕ ಸ್ಪಂದನಗಳು ಕಂಡು ಬಂದವು. ರತ್ನ ಸಂಸ್ಕಾರ ವಿಧಿಯನ್ನು ಮಾಡಿದ ನಂತರ ಭೂಮಿಯಲ್ಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾಗಿ ಭೂಮಿಯಲ್ಲಿ ತುಂಬಾ ಸಾತ್ತ್ವಿಕತೆ ನಿರ್ಮಾಣವಾಯಿತು. ರತ್ನ ಸಂಸ್ಕಾರ ಮಾಡಿದ ಪ್ರತಿಯೊಂದು ದಿಕ್ಕಿನ ನಿರೀಕ್ಷಣೆಯನ್ನು ಈ ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

೩. ರತ್ನ ಸಂಸ್ಕಾರ ವಿಧಿಯಿಂದ ಮನೆಯಲ್ಲಿನ ನಕಾರಾತ್ಮಕ ಸ್ಪಂದನಗಳು ದೂರವಾಗಿ ಮನೆಯಲ್ಲಿ ತುಂಬಾ ಸಾತ್ತ್ವಿಕತೆ ನಿರ್ಮಾಣವಾಗುವುದು

‘ರತ್ನಸಂಸ್ಕಾರ ವಿಧಿಯಿಂದ ಮನೆಯ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎನ್ನುವುದನ್ನು ಅಧ್ಯಯನ ಮಾಡಲು ವಿಧಿಯ ಮೊದಲು ಮತ್ತು ನಂತರ ಮನೆಯ ಛಾಯಾಚಿತ್ರಗಳನ್ನು ತೆಗೆದು ಅದರ ನಿರೀಕ್ಷಣೆಯನ್ನು ಮಾಡಲಾಯಿತು. ಈ ನಿರೀಕ್ಷಣೆಯಿಂದ ಅರಿವಾಗಿದ್ದೇನೆಂದರೆ, ವಿಧಿಯ ಮೊದಲು ಮನೆಯಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಆದರೆ ೭೪೧.೫೦ ಮೀಟರ್‌ ನಕಾರಾತ್ಮಕ ಊರ್ಜೆಯಿತ್ತು. ವಿಧಿಯ ನಂತರ ಮಾತ್ರ ಮನೆಯಲ್ಲಿನ ನಕಾರಾತ್ಮಕ ಊರ್ಜೆ ಸಂಪೂರ್ಣ ದೂರವಾಗಿ ಮನೆಯಲ್ಲಿ ೩೬೧.೫೦ ರಷ್ಟು ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಯಾವ ಉದ್ದೇಶದಿಂದ ಮನೆಯಲ್ಲಿ ರತ್ನಸಂಸ್ಕಾರ ವಿಧಿ ಮಾಡಲಾಯಿತೋ, ಅದು ಸಫಲವಾಯಿತು. ಈ ಸಂಶೋಧನೆ ಶ್ರೀಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಕೃಪೆಯಿಂದ ಯಶಸ್ವಿಯಾಯಿತು, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಶ್ರೀ. ಧನಂಜಯ ಕರ್ವೆ, ವಾಸ್ತು ಅಭ್ಯಾಸಕ, ಫೋಂಡಾ, ಗೋವಾ ಮತ್ತು ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೮.೨೦೨೩)

ವಿ-ಅಂಚೆ : [email protected]