‘ಚಂದ್ರಯಾನ’ ಅಭಿಯಾನ : ಪ್ರಾಚೀನ ಜ್ಞಾನಸೃಷ್ಟಿ ಮತ್ತು ಆಧುನಿಕ ವಿಜ್ಞಾನದೃಷ್ಟಿ ಇವುಗಳ ಮಿಲನ !

೧. ಜಾಗತಿಕ ಬಾಹ್ಯಾಕಾಶ ಸಂಶೋಧನೆಯ ಅಭಿಯಾನದಲ್ಲಿ ಭಾರತದ ದಾಪುಗಾಲು

ಭಾರತದ ‘ಚಂದ್ರಯಾನ-೩’ ಚಂದ್ರನ ಮೇಲೆ ಇಳಿಯುವಾಗ ಭಾರತ ಸಹಿತ ಇಡೀ ಜಗತ್ತು ಅದನ್ನು ನೋಡಿತು. ಅದರ ಬಗ್ಗೆ ಭಾರತೀಯರಿಗೆ ಬಹಳ ಅಭಿಮಾನವೆನಿಸಿತು. ‘ಇಸ್ರೋ’ ತನ್ನ ಜಾಲತಾಣದ ಮೂಲಕ ಅದರ ನೇರ ಪ್ರಕ್ಷೇಪಣೆಯನ್ನು ಮಾಡಿತ್ತು. ಅದಕ್ಕೆ ‘ಯು ಟ್ಯೂಬ್‌’ನಲ್ಲಿ ಕೋಟ್ಯಂತರ ವೀಕ್ಷಕರು ಲಭಿಸಿದರು. ಅದರಿಂದ ಈ ಅಭಿಯಾನದ ಕಡೆಗೆ ಇಡೀ ಜಗತ್ತು ಹೇಗೆ ನೋಡುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಚಂದ್ರಯಾನವು ಚಂದ್ರನಲ್ಲಿ ಇಳಿದÀ ದಕ್ಷಿಣ ಧ್ರುವದ ಮೇಲೆ ಇಂದಿನ ವರೆಗೆ ಯಾವುದೇ ದೇಶದ ಯಾನಕ್ಕೆ ಇಳಿಯಲು ಸಾಧ್ಯವಾಗಿಲ್ಲ್ಲ. ಚಂದ್ರಯಾನ ಇಂತಹ ಸ್ಥಳದ ಮೇಲೆ ಚಂದ್ರನ ನೆಲದಲ್ಲಿ ಇಳಿಯುವುದು ಮಹತ್ವದ್ದಾಗಿತ್ತು. ಅಲ್ಲಿನ ಭೂಮಿ, ಹವಾಮಾನ, ಚಂದ್ರನ ಉದರದಲ್ಲಿನ ಖನಿಜಗಳು, ಜಲಾಂಶ ಅಥವಾ ಇತರ ಅನೇಕ ಘಟಕಗಳ ಅಧ್ಯಯನ ಮುಂದುವರಿಯುವುದು. ಈ ಅಧ್ಯಯನದ ಲಾಭವು ಕೇವಲ ಭಾರತಕ್ಕೆ ಆಗದೇ ಇಡೀ ಜಗತ್ತಿಗೇ ಆಗುವುದು. ಪ್ರಧಾನಿ ನರೇಂದ್ರ ಮೋದಿಯವರು ಜೊಹಾನ್ಸಬರ್ಗ್‌ನಿಂದ ಈ ಪರಾಕ್ರಮವನ್ನು ನೋಡಿದರು. ಆ ಸಮಯದಲ್ಲಿ ಅವರು ಮಾಡಿದ ಭವಿಷ್ಯ ದಲ್ಲಿನ ‘ಸೌರ’ ಮತ್ತು ‘ಶುಕ್ರ’ ಅಭಿಯಾನಗಳ ಉಲ್ಲೇಖವು ಮಹತ್ವದ್ದಾಗಿತ್ತು. ಈ ಯಶಸ್ಸಿನಿಂದ ಭಾರತೀಯ ವಿಜ್ಞಾನಿಗಳ ಆತ್ಮವಿಶ್ವಾಸವು ಬಹಳಷ್ಟು ಹೆಚ್ಚಾಗಿದೆ. ಇಡೀ ಜಗತ್ತಿನಲ್ಲಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ದೇಶಗಳು, ಸಂಸ್ಥೆಗಳು ಮತ್ತು ವಿಜ್ಞಾನಿಗಳು ಈಗ ಭಾರತದ ಕಡೆಗೆ ಬೇರೆ ದೃಷ್ಟಿಯಿಂದ ನೋಡುವರು. ಆದುದರಿಂದ ಭಾರತದ ಸೌರ ಮತ್ತು ಶುಕ್ರ ಅಭಿಯಾನಗಳು ಮಹತ್ವದ್ದಾಗುವವು. ಅನೇಕ ದೇಶಗಳ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಉಡಾವಣೆ ಮಾಡುವುದು ಅಥವಾ ಒಂದೇ ಸಲಕ್ಕೆ ದಾಖಲೆ ಸಂಖ್ಯೆಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಉಡಾವಣೆ ಮಾಡುವುದು, ಈ ವಿಷಯಗಳು ಭಾರತೀಯ ವಿಜ್ಞಾನಿಗಳಿಗೆ ನಿತ್ಯದ್ದಾಗಿವೆ. ಆದರೂ ಈ ಯಶಸ್ಸಿನಿಂದ ಭಾರತವು ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗ್ರಸ್ಥಾನದಲ್ಲಿನ ಮೊದಲ ೩-೪ ದೇಶಗಳ ಸಾಲಿನಲ್ಲಿ ಈಗ ಅಧಿಕಾರದಿಂದ ಹೋಗಿ ಕುಳಿತುಕೊಂಡಿದೆ.

ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ

೨. ‘ಇಸ್ರೋ’ದ ವಿಜ್ಞಾನಿಗಳೆಂದರೆ ಆಧುನಿಕ ಋಷಿಗಳು !

ಈಗ ಜಗತ್ತಿನಲ್ಲಿನ ಅನೇಕ ದೇಶ, ಸಮಾಜ ಮತ್ತು ಬಂಡವಾಳದಾರರಿಗೆ ಭಾರತದ ಕಡೆಗೆ ನೋಡುವ ದೃಷ್ಟಿಯನ್ನು ಬದಲಾಯಿಸಬೇಕಾಗುವುದು. ಅದೇ ರೀತಿ ಸ್ವತಃ ಭಾರತದ ಅನೇಕ ಜನರಿಗೆ ದೇಶದ ಈ ಸಾಮರ್ಥ್ಯದ ಅರಿವನ್ನು ಇಟ್ಟು ಕೊಂಡು ಯೋಗ್ಯ ರೀತಿಯಲ್ಲಿ ವಿಚಾರಮಾಡಿ ಮಾತನಾಡ ಬೇಕಾಗುವುದು. ನಕಾರಾತ್ಮಕ ದೃಷ್ಟಿಯನ್ನು ಇಟ್ಟುಕೊಳ್ಳುವ ಅನೇಕರಿಗೆ ಭಾರತದಲ್ಲಿ ನಡೆಯುವ ಯಾವುದೇ ಒಳ್ಳೆಯ, ಪರಾಕ್ರಮದ, ನವೀನ ಘಟನೆಗಳು ಕಾಣಿಸುವುದೇ ಇಲ್ಲ. ಈಗ ಅವರು ಈ ಬಣ್ಣಾಂಧತೆಯನ್ನು (ಕಲರ್‌ ಬ್ಲೈಂಡನೆಸ್) ಬಿಟ್ಟು ಬಿಡಬೇಕಾಗುವುದು. ಪಂಡಿತ ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರ ವರೆಗಿನ ಭಾರತಕ್ಕೆ ನೇತೃತ್ವವನ್ನು ನೀಡಿದ ಹೆಚ್ಚಿನ ಪ್ರಧಾನಿಗಳ ದೂರದರ್ಶಿ ದೃಷ್ಟಿಯಿಂದಾಗಿ ಇಂದು ನಮಗೆ ಈ ಪರಾಕ್ರಮವನ್ನು ಮಾಡಲು ಸಾಧ್ಯವಾಗಿದೆ. ಇಂತಹ ಸಮಯದಲ್ಲಿ ಹಳೆಯ ತಪ್ಪುಗಳನ್ನು ಹೇಳಿ ವಿಜ್ಞಾನಿಗಳ ಅಥವಾ ಹೆಮ್ಮೆಪಡುವ ನಾಗರಿಕರ ತೇಜೋಭಂಗ ಮಾಡಿ ಏನೂ ಉಪಯೋಗವಿಲ್ಲ. ಚಂದ್ರಯಾನದ ಈ ಯಶಸ್ಸಿನ ದಾಪುಗಾಲು ಪ್ರತಿಕಾತ್ಮಕವೂ ಅಲ್ಲ, ಹಾಗೆಯೇ ಅದೇನು ಮೈಮೇಲೆ ಹಾಕಿಕೊಂಡು ಮೆರೆಯಬೇಕಾದ ಆಭರಣವೂ ಅಲ್ಲ. ಈ ಯಶಸ್ಸು ದೇಶದ ಪ್ರಗತಿಗೆ ಸಹಾಯ ಮಾಡುವುದಾಗಿದೆ. ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡು ಹಿಡಿಯಬಹುದಾಗಿದೆ. ಇಂದಲ್ಲ ನಾಳೆ ಮಾನವ ಬಾಹ್ಯಾಕಾಶದಲ್ಲಿ ವಾಸ್ತವ್ಯ ಮಾಡುವ ಕನಸು ಸಹ ಕಾಣಬಹುದು. ಅವನಿಗೆ ಸಂಪೂರ್ಣ ಜಗತ್ತನ್ನು ತಿಳಿದುಕೊಳ್ಳುವುದಿದೆ. ಪ್ರಾಚೀನ ಭಾರತೀಯ ಋಷಿಗಳು ಜಗತ್ತನ್ನು ತಮ್ಮ ಅಂತರ್ದೃಷ್ಟಿಯಿಂದ ನೋಡಿ ತಿಳಿದುಕೊಂಡಿದ್ದಾರೆ. ಅದರಿಂದ ವಿಶ್ವಹಿತದ ಸಂಹಿತೆಯನ್ನು ನೀಡುವ ಉಪನಿಷತ್ತುಗಳು ಹುಟ್ಟಿದವು. ಇಂದು ಭಾರತೀಯ ವಿಜ್ಞಾನಿಗಳು ತಮ್ಮ ಅಪ್ರತಿಮ ಕರ್ತವ್ಯದಿಂದ ಇದೇ ಜಗತ್ತಿನ ಪರಿಶೋಧನೆಯನ್ನು ಮುಂದುವರಿದ ವಿಜ್ಞಾನದ ಪರಿಭಾಷೆಯಲ್ಲಿ ಪಡೆಯುತ್ತಿದ್ದಾರೆ. ಅವರು ಜಗತ್ತಿನಲ್ಲಿ ಯಾರ ಹಿಂದೆಯೂ ಇಲ್ಲ. ತದ್ವಿರುದ್ಧ ಅವರು ಕೆಲವು ವಿಷಯಗಳಲ್ಲಿ ಅನೇಕ ಅಭಿವೃದ್ಧಿ ಹೊಂದಿದ ದೇಶಗಳನ್ನು ಹಿಂದೆ ಹಾಕುತ್ತಿದ್ದಾರೆ. ಭಾರತದಲ್ಲಿನ ಈ ಪ್ರಾಚೀನ ಜ್ಞಾನಸೃಷ್ಟಿ ಮತ್ತು ಆಧುನಿಕ ವಿಜ್ಞಾನದೃಷ್ಟಿ ಇವುಗಳ ಸಮ್ಮಿಲನವೆಂದರೆ ಜಗತ್ತಿನ ಭವಿಷ್ಯದ ಶಾಶ್ವತ ಒಳಿತಿನ ರೂಪರೇಖೆಯಾಗಿದೆ. ಭಾರತೀಯ ವಿಜ್ಞಾನಿಗಳ ವಿಜಯದ ಮೌಲ್ಯವು ಜಗತ್ತಿನÀ ಇತರರ ಯಶಸ್ಸಿಗಿಂತ ಭಿನ್ನವಾಗಿದೆ.

೩. ಪಾಶ್ಚಾತ್ಯ ಜಗತ್ತಿಗೆ ದ್ರಾಕ್ಷಿ ಹುಳಿ !

ಪ್ರಸಾರಮಾಧ್ಯಮಗಳು ಈ ಅಭಿಯಾನಕ್ಕೆ ಬಹಳ ಒಳ್ಳೆಯ ಪ್ರಸಿದ್ಧಿಯನ್ನು ನೀಡಿದವು. ಕೇವಲ ದೇಶದ ಪ್ರಗತಿಯನ್ನು ನೋಡಲಾಗದ ಕೆಲವು ಜನರಿಗೆ ಇದು ಅನಾವಶ್ಯಕ ಖರ್ಚು ಎಂದೆನಿಸಿತು. ಅವರು, ಭಾರತಕ್ಕೆ ಚಂದ್ರನ ಮೇಲೆ ಹೋಗುವ ಆವಶ್ಯಕತೆ ಏನಿತ್ತು ? ಇದರಿಂದ ಏನು ಲಾಭ ? ಇತ್ಯಾದಿ ಟೀಕಿಸಿದರು. ‘ಇಸ್ರೋ’ದ ಸಂಚಾಲಕರು ಈ ಮೊದಲೇ ಈ ಅಭಿಯಾನದ ಅನೇಕ ಲಾಭಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್‌ನ ಒಬ್ಬಿಬ್ಬರು, ‘ಭಾರತ ಚಂದ್ರನ ಮೇಲೆ ಏಕೆ ಹೋಯಿತು ? ಭಾರತ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಅವರ ಬಳಿ ಸ್ವಚ್ಛತಾಗೃಹಗಳಿಲ್ಲ’, ಎಂದೆಲ್ಲ ಹೇಳಿದರು. ವಾಸ್ತವದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ದಿಂದ ಇಂದು ಎಲ್ಲರಿಗೂ ಈ ಸೌಲಭ್ಯಗಳು ದೊರಕಿವೆ. ಒಬ್ಬರು, ‘ಭಾರತಕ್ಕೆ ಸಾಲ ನೀಡುವುದನ್ನು ನಿಲ್ಲಿಸಬೇಕು; ಏಕೆಂದರೆ ಭಾರತ ತನ್ನ ಹಣವನ್ನು ಈ ರೀತಿ ವ್ಯರ್ಥ ಖರ್ಚು ಮಾಡುತ್ತಿದೆ’, ಎಂದರು. ತಾವು ರಾಜರು ಮತ್ತು ಭಾರತ ತಮ್ಮ ಗುಲಾಮ ಎಂಬ ಅವರ ಮಾನಸಿಕತೆ ದೂರವಾಗಿಲ್ಲ. ಯಾವ ಕೆಲಸವನ್ನು ಭಾರತ ಮಾಡುತ್ತದೆಯೋ, ಅದನ್ನು ಈಗ ಇಂಗ್ಲೆಂಡ್‌ವೂ ಮಾಡುತ್ತಿಲ್ಲ. ಸತ್ಯವೇನೆಂದರೆ, ಇಂಗ್ಲೆಂಡ್, ಯುರೋಪ್‌ ಅಥವಾ ಜಗತ್ತಿನ ಯಾವುದೇ ದೇಶವು ಈಗ ಭಾರತಕ್ಕೆ ಆರ್ಥಿಕ ಸಹಾಯ ಮಾಡುವುದಿಲ್ಲ. ೨೦೧೦ ರಿಂದಲೇ ಭಾರತ ಜಗತ್ತಿನಿಂದ ಆರ್ಥಿಕ ಸಹಾಯ ಪಡೆಯು ವುದನ್ನು ನಿಲ್ಲಿಸಿದೆ. ಈಗ ವ್ಯಾಪಾರ ಹೆಚ್ಚಿಸುವ ಉದ್ದೇಶದಿಂದ ಸ್ವಲ್ಪ ಸಹಾಯ ಪಡೆಯಲಾಗುತ್ತದೆ. ಅದರಲ್ಲಿ ಸಂಪೂರ್ಣ ವ್ಯಾಪಾರದ ಉದ್ದೇಶವಿರುತ್ತದೆ. ಆದುದರಿಂದ ಅವರ ಹೇಳಿಕೆ ಪೂರ್ತಿ ತಪ್ಪಾಗಿದೆ. ‘ಇಸ್ರೋ’ದ ಪ್ರಗತಿ ಬಹಳ ಚೆನ್ನಾಗಿದೆ. ಆದುದರಿಂದ ಜಗತ್ತಿಗೆ ಇದು ‘ನರಿಗೆ ದ್ರಾಕ್ಷಿ ಹುಳಿ’ ಎಂಬಂತಹÀ ಒಂದು ವಿಧವಾಗಿದೆ. ‘ಭಾರತವು ಇಷ್ಟೊಂದು ಅತ್ಯಾಧುನಿಕ ತಂತ್ರಜ್ಞಾನದ ಕ್ಲಬ್‌ನಲ್ಲಿ ಹೇಗೆ ಪ್ರವೇಶಿಸಿತು ?’, ಎಂಬುದು ಅವರ ಹೊಟ್ಟೆಶೂಲೆಯಾಗಿದೆ. ಅಧಿಕೃತವಾಗಿ ಅಮೇರಿಕಾ ಭಾರತಕ್ಕೆ ಅನುಕೂಲವಾಗಿತ್ತು; ಆದರೆ ಅವರ ‘ನ್ಯೂಯಾರ್ಕ್ ಟೈಮ್ಸ್‌’, ‘ವಾಶಿಂಗಟನ್‌ ಪೋಸ್ಟ್‌’ ಇವುಗಳಂತಹ ವಾರ್ತಾ ಪತ್ರಿಕೆಗಳಿಗೆ ಭಾರತ ತಮ್ಮ ಹೇಳಿಕೆಗನುಸಾರ ನಡೆದುಕೊಳ್ಳಬೇಕು, ಎಂದು ಅನಿಸುತ್ತದೆ. ಇಂಗ್ಲೆಂಡ್, ಫ್ರಾನ್ಸ್ ಅಥವಾ ಜರ್ಮನಿ ಈ ರೀತಿ ಏನೂ ಮಾಡುವುದಿಲ್ಲ. ರಷ್ಯಾದ ‘ರಾಕೇಟ್‌ ಲಾಂಚಿಂಗ್’ ಹಿಂದೆ ಬಿದ್ದಿದೆ. ಆದುದರಿಂದ ‘ಬಿಬಿಸಿ’ ವಾರ್ತಾವಾಹಿನಿಗೂ ಹೊಟ್ಟೆನೋವು ಆರಂಭವಾಗಿತ್ತು.

೪. ಚೀನಾದಿಂದ, ಚೀನಾ ಮತ್ತು ಭಾರತ ಬಾಹ್ಯಾಕಾಶ ಕಾರ್ಯಕ್ರಮಗಳ ತುಲನೆ !

ಚೀನಾ ಮತ್ತು ಅಮೇರಿಕಾದ ಆರ್ಥಿಕ ಸಾಮರ್ಥ್ಯ ಬಹಳಷ್ಟಿರುವುದರಿಂದ ಅವರು ಈ ಕೆಲಸವನ್ನು ಮಾಡುತ್ತಿರು ತ್ತಾರೆ. ಭಾರತ ಅವರಿಗೂ ಸರಿಯಾದ ಪ್ರತ್ಯುತ್ತರವನ್ನು ನೀಡಿದೆ. ಇದರಿಂದಾಗಿ ಚೀನಾ ಸಹ ತೀವ್ರ ಹೊಟ್ಟೆನೋವು ಅನುಭವಿಸಿದೆ. ಚಂದ್ರಯಾನವು ಇಳಿದ ನಂತರ ಮೊದಲ ೨ ದಿನ ಚೀನಾ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲಿಲ್ಲ. ಭಾರತ ಇದನ್ನು ಹೇಗೆ ಮಾಡಲು ಸಾಧ್ಯ ?, ಎಂದು ಅದಕ್ಕೂ ಆಶ್ಚರ್ಯವಾಯಿತು. ಭಾರತ ತಮ್ಮೊಂದಿಗೆ ಹೇಗೆ ಸ್ಪರ್ಧಿಸಬಹುದು ? ೩ ದಿನಗಳ ನಂತರ ಅವರ ಲೇಖನ ಪ್ರಕಟವಾಯಿತು, ಅದರಲ್ಲಿಯೂ ಭಾರತ ಮತ್ತು ಚೀನಾದ ಬಾಹ್ಯಾಕಾಶ ಕಾರ್ಯಕ್ರಮದ ತುಲನೆಯನ್ನು ಮಾಡಲಾಗಿತ್ತು. ಅದರಲ್ಲಿ ಚೀನಾ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕಿಂತಲೂ ಬಹಳ ಮುಂದಿದೆ ಎಂದು ತೋರಿಸಲಾಗಿತ್ತು. ಅದು ಸ್ವಲ್ಪ ಪ್ರಮಾಣದಲ್ಲಿ ಸತ್ಯವೂ ಇರಬಹುದು; ಆದರೆ ಭಾರತ ಇದೆಲ್ಲವನ್ನು ಅತಿ ಕಡಿಮೆ ಖರ್ಚಿನಲ್ಲಿ ಮಾಡುತ್ತಿದೆ. ಆದುದರಿಂದ ಮುಂಬರುವ ಕಾಲದಲ್ಲಿ ಬಾಹ್ಯಾಕಾಶದಲ್ಲಿ ವಿವಿಧ ಪ್ರಯೋಗ ಗಳನ್ನು ಮಾಡಲು ಭಾರತದಲ್ಲಿ ತಂತ್ರಜ್ಞಾನವು ವಿಕಸಿತವಾಗ ಬಹುದು. ಈ ತಂತ್ರಜ್ಞಾನವನ್ನು ಇತರ ಕ್ಷೇತ್ರಗಳಲ್ಲಿ ಬಳಸಿ ದೇಶದ ಪ್ರಗತಿಯಲ್ಲಿ ಕೈಜೋಡಿಸಬಹುದು. ಇದು ‘ಚಂದ್ರಯಾನ ಲ್ಯಾಂಡಿಂಗ್‌’ನ ಬಹುದೊಡ್ಡ ಯಶಸ್ಸಾಗಿದೆ. ಇದನ್ನು ಒಪ್ಪಿಕೊಳ್ಳಲು ಇತರ ದೇಶಗಳು ತಯಾರಿಲ್ಲ. ಭಾರತ ತನ್ನ ಕಾರ್ಯಕ್ರಮವನ್ನು ಮುಂದುವರಿಸಬೇಕು. ಈ ಪರಾಕ್ರಮದ ಬಗ್ಗೆ ಭಾರತೀಯರಿಗೆ ನಿಶ್ಚಿತವಾಗಿಯೂ ಅಭಿಮಾನವೆನಿಸುತ್ತಿದೆ. ‘ಇಸ್ರೋ’ದ ವಿಜ್ಞಾನಿಗಳನ್ನು ಪ್ರಶಂಸಿಸಲೇಬೇಕು. ‘ಮುಂಬರುವ ಕಾಲದಲ್ಲಿ ಅವರ ಅನೇಕ ಕಾರ್ಯಕ್ರÀಮಗಳು ಮುಂದುವರೆ ಯುವವು, ಅವುಗಳಿಗೂ ಯಶಸ್ಸು ಪ್ರಾಪ್ತವಾಗಲಿ’, ಎಂದು ಎಲ್ಲ ಭಾರತೀಯರ ಇಚ್ಛೆಯಾಗಿದೆ. – ಬ್ರಿಗೆಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ