ಸ್ಟೀಲ್‌ ಪಾತ್ರೆ ಬಳಸದೇ, ಹಿತ್ತಾಳೆ-ತಾಮ್ರದ ಪಾತ್ರೆಗಳನ್ನು ಬಳಸಿ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ

ಸೌ. ಮಧುರಾ ಧನಂಜಯ ಕರ್ವೆ

‘ಸುಮಾರು ೫೦ ರಿಂದ ೬೦ ವರ್ಷಗಳ ಹಿಂದೆ ಪ್ರತಿಯೊಂದು ಮನೆಯಲ್ಲಿ ಹಿತ್ತಾಳೆ ಮತ್ತು ತಾಮ್ರದಿಂದ ತಯಾರಿಸಿದ ಪಾತ್ರೆಗಳನ್ನು ಉಪ ಯೋಗಿಸಲಾಗುತ್ತಿತ್ತು. ಕಾಲಾಂತರ ದಲ್ಲಿ ಅವುಗಳ ಸ್ಥಾನವನ್ನು ಸ್ಟೀಲ್, ಅಲ್ಯುಮಿನಿಯಮ್‌ನಂತಹ ಧಾತು ಗಳಿಂದ ತಯಾರಿಸಿದ ಆಕರ್ಷಕ ಪಾತ್ರೆಗಳು ತೆಗೆದುಕೊಂಡವು. ಪಾತ್ರೆಗಳು ಉಪಯೋಗಿಸಲು ಸುಲಭ ಮತ್ತು ಆಕರ್ಷಕವಾಗಿರುವುದರ ಜೊತೆಗೆ ಅವು ಸಾತ್ತ್ವಿಕವಾಗಿರುವುದೂ ಮಹತ್ವದ್ದಾಗಿದೆ, ಇದನ್ನು ಎಲ್ಲರೂ ಮರೆತಿದ್ದಾರೆ. ‘ವಿವಿಧ ಧಾತುಗಳ ಲೋಟಗಳಲ್ಲಿ ನೀರನ್ನು ಇಟ್ಟಾಗ ನೀರಿನ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯುನಿವರ್ಸಲ್‌ ಔರಾ ಸ್ಕ್ಯಾನರ್‌’(ಯು.ಎ.ಎಸ್‌.) ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಿತು. ಪರೀಕ್ಷಣೆಯ ತುಲನಾತ್ಮಕ ಅಭ್ಯಾಸ ಮಾಡಿದಾಗ ಅಸಾತ್ತ್ವಿಕ ಧಾತುಗಳ ಲೋಟಗಳಲ್ಲಿನ ನೀರು ಕೆಲವೇ ಅವಧಿಯಲ್ಲಿ ಅತೀ ದೂಷಿತ ವಾಗುತ್ತವೆ ಎಂಬುದು ಗಮನಕ್ಕೆ ಬಂದಿತು. ತದ್ವಿರುದ್ಧ ಸಾತ್ತ್ವಿಕ ಧಾತುಗಳ ಲೋಟಗಳಲ್ಲಿನ ನೀರು ಅಲ್ಪಾವಧಿಯಲ್ಲಿಯೇ ಶುದ್ಧವಾಗುತ್ತವೆ ಎಂಬುದೂ ಗಮನಕ್ಕೆ ಬಂದಿತು.

೧. ವಿವಿಧ ಧಾತುಗಳ ಲೋಟಗಳ ನಿರೀಕ್ಷಣೆ

ವಿವಿಧ ಧಾತುಗಳ ಲೋಟಗಳಲ್ಲಿ ನೀರನ್ನು ಇಡುವ ಮೊದಲು ಆ ಲೋಟಗಳ ಪರೀಕ್ಷಣೆಯನ್ನು ಮಾಡಲಾಯಿತು. ಅವುಗಳ ನಿರೀಕ್ಷಣೆಯನ್ನು ಮುಂದೆ ಕೊಡಲಾಗಿದೆ.

೨. ವಿವಿಧ ಧಾತುಗಳ ಲೋಟಗಳಲ್ಲಿನ ನೀರಿನ ನಿರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಈ ಪ್ರಯೋಗಕ್ಕಾಗಿ ಒಂದು ಮನೆಯಲ್ಲಿನ ನಳ್ಳಿ ನೀರನ್ನು ಪ್ಲಾಸ್ಟಿಕ್‌ನ ಬಾಟ್ಲಿಯಲ್ಲಿ ತುಂಬಿಸಿ ತರಲಾಗಿತ್ತು. ಈ ನೀರನ್ನು ಲೋಟದಲ್ಲಿಡುವ ಮೊದಲು ಆ ನೀರಿನ ಪರೀಕ್ಷಣೆಯನ್ನು ಮಾಡಲಾಯಿತು. ಈ ನೀರನ್ನು ವಿವಿಧ ಧಾತುಗಳ ಲೋಟಗಳಲ್ಲಿಟ್ಟು ಆ ನೀರನ್ನು ಮುಂದಿನ ಹಂತಗಳಲ್ಲಿ ಪರಿಶೀಲಿಸಲಾಯಿತು.

ಅ. ಲೋಟದಲ್ಲ್ಲಿ ನೀರನ್ನು ಇಟ್ಟ ಕೂಡಲೇ

ಆ. ಲೋಟದಲ್ಲಿ ನೀರನ್ನು ಇಟ್ಟ ೧೦ ನಿಮಿಷಗಳ ನಂತರದ ಪರಿಣಾಮ

ಇ. ಲೋಟದಲ್ಲ್ಲಿ ನೀರನ್ನು ಇಟ್ಟ ೨೦ ನಿಮಿಷಗಳ ನಂತರದ ಪರಿಣಾಮ

ಈ ಪರಿಶೀಲನೆಯ ನಿರೀಕ್ಷಣೆಯನ್ನು ಮುಂದೆ ಕೊಡಲಾಗಿದೆ.

೩. ನಿರೀಕ್ಷಣೆಯ ನಿಷ್ಕರ್ಷ

ಅ. ಸ್ಟೀಲ್‌ನ ಲೋಟದಲ್ಲ್ಲಿ ನೀರನ್ನಿಟ್ಟಾಗ ನೀರಿನಲ್ಲಿನ ನಕಾರಾತ್ಮಕ ಊರ್ಜೆ ಹೆಚ್ಚಾಗುತ್ತಾ ಹೋಯಿತು, ನಂತರ ಅದು ತುಂಬಾ ಹೆಚ್ಚಾಯಿತು. ಇದರಿಂದ ‘ಸ್ಟೀಲ್‌ನ ಪಾತ್ರೆಯಲ್ಲಿ ನೀರಿಟ್ಟಾಗ ಅವು ದೂಷಿತವಾಗುತ್ತವೆ’, ಎಂಬುದು ಗಮನಕ್ಕೆ ಬಂದಿತು.

ಆ. ಹಿತ್ತಾಳೆ, ತಾಮ್ರ, ಬೆಳ್ಳಿ ಹಾಗೂ ಕಂಚು ಈ ಧಾತುಗಳು ಕ್ರಮ ವಾಗಿ ಹೆಚ್ಚೆಚ್ಚು ಸಾತ್ತ್ವಿಕವಾಗಿವೆ. ಈ ಧಾತುಗಳ ಲೋಟಗಳಲ್ಲಿ ೧೦ ರಿಂದ ೨೦ ನಿಮಿಷಗಳ ವರೆಗೆ ನೀರನ್ನು ಹಾಕಿಟ್ಟಾಗ ನೀರಿನಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಇದರಿಂದ ‘ಈ ಧಾತುಗಳ ಪಾತ್ರೆಗಳಲ್ಲಿ ನೀರನ್ನಿಟ್ಟರೆ ಅದು ಸ್ವಲ್ಪ ಸಮಯದಲ್ಲಿಯೆ ಶುದ್ಧವಾಗುತ್ತದೆ’, ಎಂಬುದು ಗಮನಕ್ಕೆ ಬಂದಿತು.’ – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೮.೨೦೨೩)
ವಿ-ಅಂಚೆ : [email protected]