ಮನಸ್ಸಿನಲ್ಲಿರುವ ವಿಚಾರಗಳು ಕಡಿಮೆಯಾಗಲು, ಭಾವಾವಸ್ಥೆಯಲ್ಲಿರುವುದು ಮತ್ತು ಅವುಗಳನ್ನು ಸಾಕ್ಷಿಭಾವದಲ್ಲಿ ನೋಡುವುದು ಆವಶ್ಯಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ತೀವ್ರ ಆಧ್ಯಾತ್ಮಿಕ ತೊಂದರೆಗಳಿದ್ದರೆ, ಮನಸ್ಸಿನಲ್ಲಿ ಬರುವ ವಿಚಾರಗಳ ಪ್ರಮಾಣವು ತೀವ್ರವಾಗಿರುತ್ತದೆ, ಅಂತಹ ಸಂದರ್ಭದಲ್ಲಿ, ಆ ವಿಚಾರಗಳು ಕಡಿಮೆಯಾಗಲು ಅವರು ಸ್ವಯಂಸೂಚನೆಗಳನ್ನು ನೀಡಿದರೆ ಉಪಯೋಗವಾಗುವುದಿಲ್ಲ. ಆ ವಿಚಾರಗಳಿಂದ ಹೊರಬರಲು ಸಾಧಕರು ಭಾವಾವಸ್ಥೆಯಲ್ಲಿರಬೇಕು. ಆದ್ದರಿಂದ ಸಾಧಕರು ತಮ್ಮ ಮನಸ್ಸಿನಲ್ಲಿ ವಿಚಾರಗಳು ಬಂದಾಕ್ಷಣವೇ ಭಾವಾವಸ್ಥೆಗೆ ಹೋಗಬೇಕು. ಇದರಿಂದ ಅವರಿಗೆ ವಿಚಾರಗಳನ್ನು ಸಾಕ್ಷಿಭಾವದಿಂದ ನೋಡುವುದು ಸುಲಭವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ