ಶ್ರೀ ಗಣೇಶಮೂರ್ತಿಯ ವಿವಿಧ ಭಾಗಗಳ ಅರ್ಥಗಳು

ಸೊಂಡಿಲು

ಹೆಚ್ಚಿನವರು ಸೊಂಡಿಲಿನ ತುದಿಯು ಯಾವ ಬದಿಯಲ್ಲಿ ಇದೆ ಅದರಿಂದ ನಿರ್ಧರಿಸುತ್ತಾರೆ. ಇದು ಅಯೋಗ್ಯವಾಗಿದೆ. ಸೊಂಡಿಲು ಆರಂಭವಾಗುವಾಗ ಅದು ಯಾವ ಬದಿಗೆ ತಿರುಗುತ್ತದೆ, ಅದರಿಂದ ಬಲಮುರಿ ಅಥವಾ ಎಡಮುರಿ ಗಣಪತಿಯೋ ನಿರ್ಧರಿತವಾಗುತ್ತದೆ.

ಬಲಗಡೆಯ ಸೊಂಡಿಲು

ಬಲಬದಿಗೆ ಸೊಂಡಿಲಿರುವ (ಬಲ ಮುರಿ) ಗಣೇಶಮೂರ್ತಿ ಎಂದರೆ ದಕ್ಷಿಣಾಭಿಮುಖಿಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲ ಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯ ನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ’ ಗಣಪತಿ ಎಂದು ಹೇಳುತ್ತಾರೆ. ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರಿಶೋಧನೆ ಆಗುತ್ತದೆ, ಆದುದರಿಂದ ದಕ್ಷಿಣ ದಿಕ್ಕು ನಮಗೆ ಬೇಡವೆನಿಸುತ್ತದೆ. ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ ಯಾವ ರೀತಿಯ ಪರಿಶೋಧನೆಯಾಗುತ್ತದೆಯೋ, ಅದೇ ರೀತಿಯ ಪರಿಶೋಧನೆಯು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತರೆ ಅಥವಾ ಕಾಲುಚಾಚಿ ಮಲಗಿದರೆ ಆಗುತ್ತದೆ ದಕ್ಷಿಣಾಭಿಮುಖಿಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿ ಯಂತೆ ಮಾಡುವುದಿಲ್ಲ. ಏಕೆಂದರೆ, ದಕ್ಷಿಣದಿಂದ ‘ತಿರ್ಯಕ್’ (ರಜ-ತಮ) ಲಹರಿಗಳು ಬರುತ್ತವೆ. ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಅದರಿಂದ ಸಾತ್ತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.

ಎಡಗಡೆಯ ಸೊಂಡಿಲು

ಎಡಬದಿಗೆ ಸೊಂಡಿಲಿರುವ ಮೂರ್ತಿ (ಎಡಮುರಿ ಎಂದರೆ ವಾಮಮುಖಿ ಗಣಪತಿ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು. ಎಡಬದಿಗೆ ಚಂದ್ರನಾಡಿಯು ಇರುತ್ತದೆ ಮತ್ತು ಅದು ಶೀತಲತೆಯನ್ನು ಕೊಡುತ್ತದೆ, ಹಾಗೆಯೇ ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕ ವಾಗಿದೆ, ಆನಂದದಾಯಕ ವಾಗಿದೆ; ಎಂದು ವಾಮಮುಖಿ (ಎಡಮುರಿ) ಗಣಪತಿಯನ್ನು ಪೂಜೆಯಲ್ಲಿ ಇಡುತ್ತಾರೆ. ಈ ಗಣಪತಿಯ ಪೂಜೆಯನ್ನು ನಿತ್ಯದ ಪೂಜೆಯಂತೆ ಮಾಡುತ್ತಾರೆ.

ಮೋದಕ : ‘ಮೋದ’ ಎಂದರೆ ಆನಂದ ಮತ್ತು ‘ಕ’ ಎಂದರೆ ಚಿಕ್ಕ ಭಾಗ. ಮೋದಕವೆಂದರೆ ಆನಂದದ ಚಿಕ್ಕ ಭಾಗ. ಮೋದಕದ ಆಕಾರವು ತೆಂಗಿನಕಾಯಿಯಂತೆ, ಎಂದರೆ ‘ಖ’ ಈ ಬ್ರಹ್ಮ ರಂಧ್ರದಲ್ಲಿನ ಟೊಳ್ಳಿನಂತಿರುತ್ತದೆ. ಕುಂಡಲಿನಿಯು ‘ಖ’ದÀವರೆಗೆ ತಲುಪಿದಾಗ ಆನಂದದ ಅನುಭೂತಿಯು ಬರುತ್ತದೆ. ಕೈಯಲ್ಲಿ ಹಿಡಿದ ಮೋದಕವೆಂದರೆ, ಆನಂದವನ್ನು ಪ್ರದಾನಿಸುವ ಶಕ್ತಿ.
ಮೋದಕವು ಜ್ಞಾನದ ಪ್ರತೀಕವಾಗಿರುವುದರಿಂದ ಅದನ್ನು ಜ್ಞಾನಮೋದಕವೆಂದೂ ಕರೆಯುತ್ತಾರೆ. ಮೊದಲು, ಜ್ಞಾನವು ಸ್ವಲ್ಪವಿದೆ ಎಂದೆನಿಸುತ್ತದೆ (ಮೋದಕದ ತುದಿಯು ಇದರ ಪ್ರತೀಕ); ಆದರೆ ಅಧ್ಯಯನ ಮಾಡಿದಾಗ ಜ್ಞಾನವು ವಿಶಾಲವಾಗಿದೆ ಎಂಬುದು ತಿಳಿಯುತ್ತದೆ. (ಮೋದಕದ ಕೆಳಭಾಗವು ಇದರ ಪ್ರತೀಕವಾಗಿದೆ) ಮೋದಕದಂತೆ ಜ್ಞಾನದ ಆನಂದವೂ ಸಿಹಿಯಾಗಿರುತ್ತದೆ.

ಅಂಕುಶ : ಆನಂದ ಮತ್ತು ವಿದ್ಯೆ ಗಳಿಸುವ ಮಾರ್ಗದಲ್ಲಿ ವಿಘ್ನ ತರುವ ಕೆಟ್ಟ ಶಕ್ತಿಗಳ ವಿನಾಶ ಮಾಡುವುದರ ಪ್ರತೀಕವಾಗಿದೆ

ಪಾಶ : ಶ್ರೀ ಗಣಪತಿಯು ಕೆಟ್ಟ ವಿಷಯಗಳನ್ನು ಪಾಶದ ಸಹಾಯದಿಂದ ದೂರ ಮಾಡುತ್ತಾನೆ.

ಸೊಂಟಕ್ಕೆ ಕಟ್ಟಿರುವ ನಾಗ : ವಿಶ್ವಕುಂಡಲಿನಿ ಮತ್ತು ನಾಗನ ಹೆಡೆ ಎಂದರೆ ಜಾಗೃತವಾಗಿರುವ ಕುಂಡಲಿನಿ

ಇಲಿ / ಮೂಷಿಕ : ಮೂಷಿಕ, ಇದರ ಅರ್ಥ ರಜೋಗುಣವು ಗಣಪತಿಯ ನಿಯಂತ್ರಣದಲ್ಲಿದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶ್ರೀ ಗಣಪತಿ’)