ಆಗಸ್ಟ್ ೨೦೧೪ ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಪಂತಪ್ರಧಾನ ಜನಧನ ಯೋಜನೆ’ ಯನ್ನು ಪ್ರಾರಂಭಿಸಿದರು. ಇದು ಅತ್ಯಂತ ಬಡವರು ಅಥವಾ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕಾರ್ಮಿಕರು, ಗ್ರಾಮೀಣ ಪ್ರದೇಶದ ನಾಗರಿಕರು ಮುಂತಾದವರಿಗಾಗಿ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯುವ ಯೋಜನೆಯಾಗಿತ್ತು. ‘ಆರಂಭಿಕ ಠೇವಣಿ ಇಲ್ಲದೆ ಖಾತೆಯನ್ನು ತೆರೆಯುವುದು (ಅಂದರೆ ‘ಶೂನ್ಯ ಹೂಡಿಕೆ’) ಈ ಯೋಜನೆಯ ವೈಶಿಷ್ಟ್ಯ ಮತ್ತು ತಿರುಳಾಗಿತ್ತು. ಸಾಮಾನ್ಯವಾಗಿ ನಾವು ಖಾತೆಯನ್ನು ತೆರೆಯಬೇಕಾಗಿದ್ದರೆ, ನಿರ್ದಿಷ್ಟ ಮೊತ್ತವನ್ನು ಪಾವತಿಸಿದ ನಂತರ ಖಾತೆಯನ್ನು ತೆರೆಯಬಹುದು ಮತ್ತು ಡೆಬಿಟ್ ಕಾರ್ಡ್ ಅಥವಾ ‘ಚೆಕ್‌ಬುಕ್’ ಪಡೆಯುವುದು ಇದು ಬ್ಯಾಂಕುಗಳ ನಿಯಮವಾಗಿದೆ. ಮೇಲಿನ ಹೊಸ ಕಲ್ಪನೆಯಿಂದಾಗಿ ಅನೇಕ ನಾಗರಿಕರು ಖಾತೆಗಳನ್ನು ತೆರೆದರು. ಬಹುಸಂಖ್ಯಾತ ಖಾತೆಗಳು ಸರಕಾರದ ವಿವಿಧ ಯೋಜನೆಗಳ ಮಾಧ್ಯಮದಿಂದ ರೈತರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಹಾಯ ಮಾಡುತ್ತಿರುತ್ತವೆ. ಈ ಸಹಾಯವೆಂದರೆ ಯೋಜನೆ ಗಳ ಹಣವನ್ನು ನೇರವಾಗಿ ಖಾತೆಗಳಿಗೆ ಜಮಾ ಮಾಡುವ ನೀತಿಯನ್ನು ರೂಪಿಸಲಾಗಿದ್ದರಿಂದ ಖಾತೆಗಳನ್ನು ತೆರೆಯ ಲಾಗಿತ್ತು. ಹೀಗೆ ಮಾಡುತ್ತಾ, ಪ್ರಾರಂಭದಲ್ಲಿ ಈ ಯೋಜನೆ ಯಲ್ಲಿ ಹೂಡಿಕೆಯಾದ ೧೫ ಸಾವಿರ ೬೭೦ ಕೋಟಿ ರೂಪಾಯಿಗಳು ಇಂದು ೯ ವರ್ಷ ಪೂರ್ಣಗೊಳ್ಳುತ್ತಿರುವಾಗ ಒಟ್ಟು ೨ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ವಿಶ್ವದ ಅತಿದೊಡ್ಡ ಹೂಡಿಕೆಯ ಯೋಜನೆಯಾಗಿದೆ. ಅದರಲ್ಲಿ ೫೦ ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಸಾದಾ ಮೊಬೈಲ್ ಖರೀದಿಸುವ ಸಾಮರ್ಥ್ಯವೂ ಇಲ್ಲದ ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಡಿಜಿಟಲ್ ಇಂಡಿಯಾ ದಂತಹ ಯೋಜನೆ ಜಾರಿಗೆ ತರುವುದು ಹಾಸ್ಯಾಸ್ಪದ’, ಎಂದು ಮೋದಿ ಸರಕಾರವನ್ನು ಟೀಕಿಸಿದವರಿಗೆ ”ಇಷ್ಟು ಹೆಚ್ಚಿನ ಸಂಖ್ಯೆಯ ಬಡ ನಾಗರಿಕರನ್ನು ಬ್ಯಾಂಕಿನ ಅರ್ಥವ್ಯವಸ್ಥೆಯೊಳಗೆ ತಂದಿರುವುದು’’ ಒಂದು ರೀತಿಯಲ್ಲಿ ಕಪಾಳಮೋಕ್ಷವೇ ಆಗಿದೆ. ಸರಕಾರ ನಿರ್ಧರಿಸಿದರೆ, ಯಾವ ರೀತಿ ಜನಸಾಮಾನ್ಯರನ್ನು ‘ಮೇಲಕ್ಕೆ’ ತರಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ಖಾತೆಗಳಿಗೆ ಕೇವಲ ೧೨ ರೂಪಾಯಿ ಆರೋಗ್ಯ ವಿಮೆಯನ್ನು ಪಾವತಿಸುವುದು ಸಾಮಾನ್ಯ ವ್ಯಕ್ತಿಗೂ ಕಷ್ಟವೇನಲ್ಲ. ಇಂದಿಗೆ ೯ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಈ ಯೋಜನೆಯಡಿಯಲ್ಲಿ ಅಪಘಾತ ಆರೋಗ್ಯ ವಿಮೆ ಮೊತ್ತವನ್ನು ಸರ್ಕಾರ ೨ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಅಷ್ಟೇ ಅಲ್ಲ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗ ಈ ಖಾತೆಯಡಿಯಲ್ಲಿ ೧೦ ಸಾವಿರದವರೆಗೆ ಸಾಲ ಪಡೆಯಬಹುದು ಎಂದು ಘೋಷಿಸಿದ್ದಾರೆ.
ಕೇವಲ ‘ಗರೀಬಿ ಹಟಾವೊ’ ಘೋಷಣೆಯಲ್ಲ !
೬ ದಶಕಗಳ ಕಾಲ ಕಾಂಗ್ರೆಸ್ ಕೇವಲ ‘ಗರೀಬಿ ಹಟಾವೊ’ ಎಂಬ ಘೋಷಣೆಯನ್ನು ಮಾತ್ರ ನೀಡಿತು ಮತ್ತು ವಾಸ್ತವದಲ್ಲಿ ಜನಸಾಮಾನ್ಯರ ಯೋಜನೆಗಳ ಹಣವನ್ನೆಲ್ಲ ಮಧ್ಯದಲ್ಲಿಯೇ ಕಬಳಿಸಲಾಗುತ್ತಿತ್ತು. ‘ಕೇಂದ್ರ ಸರಕಾರವು ೧೦೦ ರೂಪಾಯಿ ಕೊಟ್ಟರೆ ೧೫ ರೂಪಾಯಿ ಮಾತ್ರ ಜನರಿಗೆ ತಲುಪುತ್ತದೆ’ ಎಂದು ಸ್ವತಃ ರಾಜೀವ್ ಗಾಂಧಿಯವರೇ (ಕಾಂಗ್ರೆಸ್ ನ ಮಾಜಿ ಪ್ರಧಾನಿ) ಒಮ್ಮೆ ಹೇಳಿದ್ದರು. ಈಗ ಸರಕಾರವು ರೈತರಿಗೆ ಸಹಾಯ ಮಾಡಲು ಜಾರಿಗೊಳಿಸುವ ಯೋಜನೆಗಳ ಹಣ ನೇರವಾಗಿ ಜನಧನ ಖಾತೆಗೆ ಜಮೆ ಆಗುತ್ತದೆ. ಆರೋಗ್ಯ ಯೋಜನೆಗಳ ಹಣ, ಬಡವರಿಗೆ ಅಗ್ಗದ ಗ್ಯಾಸ್ ಸಿಲಿಂಡರ್ ಯೋಜನೆ ಹಣ ಇತ್ಯಾದಿಗಳು ನೇರವಾಗಿ ಈ ಜನಧನ ಖಾತೆಗೆ ಜಮಾ ಆಗುತ್ತವೆ. ಆರೋಗ್ಯ ರಕ್ಷಣೆಯ ಸಹಾಯದ ಸಂದರ್ಭದಲ್ಲಿ, ಆ ಹಣವು ಪಾವತಿಯಾಗಬೇಕಾದವರಿಗೆ ನೇರವಾಗಿ ಜಮೆಯಾಗುತ್ತದೆ ಇದರ ಬಹುದೊಡ್ಡ ಲಾಭವೆಂದರೆ ಹಣವನ್ನು ಬ್ಯಾಂಕಿನಲ್ಲಿಡಲು ಹೋಗದ ಜನಸಾಮಾನ್ಯರು ‘ಸಿದ್ಧ’ ಖಾತೆಯನ್ನು ಪಡೆದರು
ಮತ್ತು ಅದರ ಅಸಾಮಾನ್ಯ ಪ್ರಯೋಜನಗಳನ್ನು ಪಡೆದರು. ಖಾತೆಯಿಂದ ಹಣವನ್ನು ತೆಗೆಯುವಾಗ, ಒಬ್ಬ ವ್ಯಕ್ತಿಯು ಸ್ವಲ್ಪ ಯೋಚಿಸುತ್ತಾನೆ ಅಥವಾ ಅಗತ್ಯವಿರುವಷ್ಟೇ ಮೊತ್ತ ವನ್ನು ತೆಗೆಯುತ್ತಾನೆ, ಇದರಿಂದಾಗಿ ಅವನ ಹಣವು ತನ್ನಿಂದ ತಾನೇ ಉಳಿತಾಯವಾಗಿ ವೈಯಕ್ತಿಕ ಜೀವನಮಟ್ಟವನ್ನು ಸುಧಾರಿಸುವಲ್ಲಿ ಸಹಾಯವಾಯಿತು. ಖಾತೆ ಇದೆ ಎಂದು ಹೇಳಿದಾಗ ಕೆಲವೊಮ್ಮೆ ಅದರಲ್ಲಿ ಹಣ ಇಡುತ್ತಾರೆ. ಇದರಿಂದ ಹಣ ಕೂಡಿಡುವ ಅಭ್ಯಾಸವಾಗುತ್ತದೆ. ಇತರ ಸಮಯದಲ್ಲಿ ಉಳಿತಾಯದ ಮಹತ್ವ ತಿಳಿಸಿ ಎಷ್ಟೇ ಮನವಿ ಮಾಡಿದರೂ ಬಡ ನಾಗರಿಕರು ಖಾತೆಗಳನ್ನು ತೆರೆಯಲು ಮುಂದಾಗುತ್ತಿರಲಿಲ್ಲ. ‘ಶೂನ್ಯ ಹಣ ದಲ್ಲಿ ಖಾತೆ ತೆರೆಯಲು ಅನುಮತಿ ನೀಡುವುದು’ ಎಂಬ ಜಾಣ್ಮೆಯ ಯೋಜನೆಯನ್ನು ಕೈಗೆತ್ತಿಕೊಂಡು ಜನರಿಗೆ ಮತ್ತು ದೇಶಕ್ಕೆ ಹಣ ಕೂಡಿಡಲು ನೇರವಾಗಿ ಉಳಿತಾಯದಲ್ಲಿ ಸಕ್ರಿಯರನ್ನಾಗಿ ಮಾಡಿದೆ. ಇದರಿಂದ ಜನತೆ ಮತ್ತು ದೇಶದ ಹಿತ ಸಾಧಿಸಿದೆ. ಈ ಉಳಿತಾಯದಿಂದ ಸಾಮಾನ್ಯರ ಜೀವನ ಮಟ್ಟದಲ್ಲಿ ಸುಧಾರಣೆಯಾಗಿ ಕಷ್ಟದ ಸಮಯದಲ್ಲಿ ಅವರ ಕೈಯಲ್ಲಿ ಹಣವಿರುವಂತೆ ಸಹಾಯವಾಗಲಿದೆ. ಇದು ಕೇವಲ ಬಡತನ ನಿರ್ಮೂಲನೆಯ ಘೋಷಣೆಯಲ್ಲ; ಸರಕಾರದ ಕೃತಿಯ ಸ್ತರದ ವಿಶಿಷ್ಟ ಪ್ರಯತ್ನವಾಗಿದೆ.
ಜನಧನ ಯೋಜನೆಯಲ್ಲಿ ಶೇ. ೫೫.೫ ರಷ್ಟು ಮಹಿಳೆಯರು ತಮ್ಮ ಹೆಸರಿನಲ್ಲಿ ಖಾತೆ ತೆರೆದಿದ್ದಾರೆ. ಕುಟುಂಬ ಪೋಷಣೆಯ ಪರಿಣಾಮವಾಗಿ ಮಹಿಳೆಯರಲ್ಲಿ ಮಿತವ್ಯಯ ಮತ್ತು ದೂರದೃಷ್ಟಿ ಮೂಡಿರುತ್ತದೆ. ಈ ಯೋಜನಾ ಖಾತೆಯಲ್ಲಿ ಹಣ ಹೂಡಿಕೆಯು ಕುಟುಂಬದ ಸಬಲೀಕರಣಕ್ಕಾಗಿ ಖಂಡಿತವಾಗಿ ಅವರಿಗೆ ಲಾಭದಾಯಕವಾಗಿರಲಿದೆ.
ದೇಶದ ಲಾಭ
ಈ ಯೋಜನೆಯಲ್ಲಿ ಭಾಗವಹಿಸುವಿಕೆ ಹೆಚ್ಚಾಗಿದ್ದರಿಂದ ಬ್ಯಾಂಕುಗಳಿಗೆ ಆಂತರಿಕ ಲಾಭ ಮತ್ತು ದೇಶಕ್ಕೂ ಲಾಭವಾಗಿದೆ. ದೇಶೀಯ ಹೂಡಿಕೆಯು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದು ಉತ್ಪಾದನಾ ಕ್ಷಮತೆಯನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ ಮತ್ತು ಜನರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಚಕ್ರವನ್ನು ನಿರ್ಮಿಸಲು ಈ ಯೋಜನೆಯಿಂದ ಸಹಾಯವಾಗಲಿದೆ. ಅದೇ ರೀತಿ ಉಳಿತಾಯದಿಂದ ನಾಗರಿಕರ ಖರ್ಚು ಮಾಡುವ ಕ್ಷಮತೆ ಹೆಚ್ಚುತ್ತದೆ. ಬಡವರಿಗೆ ಸಮಾಧಾನ ಸಿಗುತ್ತದೆ ಮತ್ತು ದೇಶವೂ ಅಭಿವೃದ್ಧಿಯಾಗಿ ಹಣದ ಚಲಾವಣೆ ಆರಂಭವಾಗುತ್ತದೆ. ಈಗ ಸರಕಾರವು ಈ ಯೋಜನೆಯಲ್ಲಿ ಯಾವುದೇ ಹಗರಣ, ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಬೇಕಾಗಿದೆ; ಏಕೆಂದರೆ ಈ ಹಣ ಸಾಮಾನ್ಯ ಜನರಿಗೆ ಮತ್ತು ದೇಶಕ್ಕೆ ಸೇರಿದ್ದಾಗಿದೆ. ಇಂದಿಗೂ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಬ್ಯಾಂಕುಗಳಿಂದ ದೊಡ್ಡ ಮೊತ್ತದ ಸಾಲ ಪಡೆದು ಕೈ ಎತ್ತುತ್ತಿದ್ದಾರೆ. ಈ ಯೋಜನೆಯ ೨ ಲಕ್ಷ ಕೋಟಿ ರೂಪಾಯಿಗಳು ಈಗ ೪ ಲಕ್ಷ ಕೋಟಿ ರೂಪಾಯಿಗಳನ್ನಾಗಿಸಲು ಬ್ಯಾಂಕುಗಳ ಆಡಳಿತ ವರ್ಗ ಮತ್ತು ಸರಕಾರಗಳು ಪ್ರಯತ್ನಿಸಬೇಕು. ಬಡವರನ್ನು ಸ್ವಾವಲಂಬನೆಯ ಹಾದಿಯಲ್ಲಿ ಕೊಂಡೊಯ್ಯುವ ಈ ಯೋಜನೆಯು ದೀರ್ಘಾಯುಷಿಯಾಗಲಿ; ಇಂತಹ ವಿನೂತನ ಯೋಜನೆಗಳಿಂದ ಭಾರತದಲ್ಲಿ ಅಸಾಧ್ಯವೆಂದು ತೋರುವ ಸಂಗತಿಗಳು ಸಾಧ್ಯವಾಗಲಿ ಎಂಬುದು ಪ್ರತಿಯೊಬ್ಬ ದೇಶಭಕ್ತನ ಆಶಯವಾಗಿದೆ.