ಹಿಂದೂ ರಾಷ್ಟ್ರದಲ್ಲಿ ಭಾರತೀಯ ಭಾಷೆಗಳ ಸಂವರ್ಧನೆಯಾಗುತ್ತದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸ್ವಾತಂತ್ರ್ಯ ಪಡೆದು ೭೫ ವರ್ಷ ಕಳೆದರೂ ಈಗಲೂ ಸಹ ‘ಆಂಗ್ಲ ಭಾಷೆಯ ಗುಲಾಮಗಿರಿಯನ್ನು ತೊಡೆದುಹಾಕಬೇಕು’ ಎಂದು ಒಬ್ಬ ಶಾಸಕನಿಗೂ ಅನಿಸುತ್ತಿಲ್ಲ. ಭಾವೀ ಹಿಂದೂ ರಾಷ್ಟ್ರದಲ್ಲಿ ತಾಮಸಿಕ ಆಂಗ್ಲ ಭಾಷೆಯದ್ದಲ್ಲ, ಬದಲಾಗಿ ಸಾತ್ತ್ವಿಕ ಸಂಸ್ಕೃತ ಭಾಷೆ ಮತ್ತು ಅನ್ಯ ಭಾರತೀಯ ಭಾಷೆಗಳ ಸಂವರ್ಧನೆಯಾಗಲಿದೆ !’

ಶಾಲೆಗಳ ಶಿಕ್ಷಣ ನಿರುಪಯುಕ್ತ !

‘ಶಾಲೆಗಳಲ್ಲಿ ಗಣಿತ, ಭೂಗೋಳ, ಅರ್ಥಶಾಸ್ತ್ರ ಮುಂತಾದ ಅನೇಕ ವಿಷಯಗಳನ್ನು ಕಲಿಸಲಾಗುತ್ತದೆ. ಅವುಗಳಲ್ಲಿ ಎಷ್ಟು ವಿಷಯಗಳು ಜೀವನದಲ್ಲಿ ೧ ಶೇಕಡವಾದರೂ ಲಾಭವಾಗುತ್ತವೆ ? ಹೀಗಿರುವಾಗ ವಿದ್ಯಾರ್ಥಿಗಳ ಸಮಯದ ಉಪಯೋಗವನ್ನು ಆ ವಿಷಯಗಳನ್ನು ಕಲಿಸುವ ಬದಲು ಸಮಾಜಪ್ರೇಮ, ರಾಷ್ಟ್ರಪ್ರೇಮ, ಧರ್ಮಪ್ರೇಮ, ಅಧ್ಯಾತ್ಮಶಾಸ್ತ್ರ, ಸಾಧನೆಯ ವಿಷಯಗಳನ್ನು ಕಲಿಸಲು ಏಕೆ ಉಪಯೋಗಿಸುವುದಿಲ್ಲ ? ಹಿಂದೂ ರಾಷ್ಟ್ರದಲ್ಲಿ ಇಂತಹ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ