ಚಂದ್ರಯಾನ-3′ ಮಿಷನ್‌ ವೆಚ್ಚದ ಬಗ್ಗೆ ಭಾರತವನ್ನು ಟೀಕಿಸಿದ ‘ಬಿ.ಬಿ.ಸಿ’ಗೆ ಉದ್ಯಮಿ ಆನಂದ್ ಮಹೀಂದ್ರರಿಂದ ತಕ್ಕ ಪ್ರತ್ಯುತ್ತರ

ಬಿಬಿಸಿಗೆ ಉದ್ಯಮಿ ಆನಂದ್ ಮಹೀಂದ್ರಾರಿಂದ ಪ್ರತ್ಯುತ್ತರ ನೀಡಿ ಕಪಾಳಮೋಕ್ಷ !

ಮುಂಬಯಿ – ಭಾರತದ ಚಂದ್ರಯಾನ-3 ಮಿಷನ್ ಸಂದರ್ಭದಲ್ಲಿ ಸುದ್ದಿಯನ್ನು ಪ್ರಸಾರ ಮಾಡುವಾಗ, `ಬಿಬಿಸಿ’(ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್) ವಾರ್ತಾ ವಾಹಿನಿಯ ವರದಿಗಾರನು ಭಾರತದ ಬಡತನದ ಬಗ್ಗೆ ಟೀಕಿಸಿದನು. ಈ ಸುದ್ದಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ, ಭಾರತದ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ಬಿಬಿಸಿ ಮತ್ತು ಬ್ರಿಟಿಷರನ್ನು ತಕ್ಕ ಪ್ರತ್ಯುತ್ತರ ನೀಡುತ್ತಾ ಛೀಮಾರಿ ಹಾಕಿದರು.

ಬಿಬಿಸಿ ತನ್ನ ಸುದ್ದಿಯಲ್ಲಿ, ‘ಭಾರತದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅಲ್ಲಿ ಬಹಳ ಬಡತನವಿದೆ. ಭಾರತದ ಬಹುಸಂಖ್ಯೆ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ. ದೇಶದ 70 ಕೋಟಿಗೂ ಹೆಚ್ಚು ಜನರಿಗೆ ಶೌಚಾಲಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಂದ್ರಯಾನ-3 ನಂತಹ ದುಬಾರಿ ಯೋಜನೆಗೆ ಇಷ್ಟೊಂದು ಹಣ ಏಕೆ ಖರ್ಚು ಮಾಡಬೇಕು?’ ಭಾರತ ಈ ಮಿಷನ್ ಗೆ 615 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅಮೇರಿಕಾ, ರಷ್ಯಾ, ಚೀನಾಕ್ಕೆ ಹೋಲಿಸಿದರೆ ಅದು ಅರ್ಧಕ್ಕಿಂತ ಕಡಿಮೆ ಇದೆ.

ಬ್ರಿಟಿಷರ ಲೂಟಿಯಿಂದಾಗಿಯೇ ಭಾರತದಲ್ಲಿ ಬಡತನ ! – ಆನಂದ್ ಮಹೀಂದ್ರ

ಬಿಬಿಸಿ ವಿಡಿಯೋಗೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ ಇವರು, “ನಿಜವಾಗಲೂ? ನಮ್ಮ ದೇಶದಲ್ಲಿರುವ ಬಡತನವು ನೀವು ಹೇರಿದ ದಶಕಗಳ ವಸಾಹತುಶಾಹಿ ಆಡಳಿತದ ಪರಿಣಾಮವಾಗಿದೆ. ಈ ಆಡಳಿತವು ಇಡೀ ಉಪಖಂಡದ ಆಸ್ತಿಯನ್ನು ಪಿತೂರಿಯಂತೆ ಲೂಟಿ ಮಾಡಿತು. ನೀವು ನಮ್ಮಿಂದ ದೋಚಿರುವ ಅತ್ಯಮೂಲ್ಯ ಆಸ್ತಿ ಕೊಹಿನೂರ್ ವಜ್ರವಲ್ಲ. ಅದು ನಮ್ಮ ಹೆಮ್ಮೆ ಮತ್ತು ನಮ್ಮ ಸಾಮರ್ಥ್ಯಗಳ ಮೇಲಿನ ನಂಬಿಕೆಯಾಗಿತ್ತು. ಚಂದ್ರನ ಮೇಲೆ ಹೋಗುವುದು ನಮಗೆ ನಮ್ಮ ಅಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ವಿಜ್ಞಾನದ ಮೂಲಕ ಆಗುವ ಪ್ರಗತಿಯಲ್ಲಿ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ. ಇದು ಬಡತನದಿಂದ ಹೊರಬರಲು ನಮ್ಮನ್ನು ಪ್ರೇರೇಪಿಸುತ್ತದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಿಬಿಸಿಯ ಮನಃಸ್ಥಿತಿ ಭಾರತದ್ವೇಷಿಯಾಗಿದ್ದರಿಂದ ಅದರಿಂದ ಇದಕ್ಕಿಂತ ಭಿನ್ನವಾಗಿ ಏನು ನಿರೀಕ್ಷಿಸಬಹುದು ? ಇಂತಹ ವಾರ್ತಾ ವಾಹಿನಿಯನ್ನು ಭಾರತದಲ್ಲಿ ನಿರ್ಬಂಧಿಸುವುದು ಸೂಕ್ತವೇ ಆಗಿದೆ !