ಅಲ್ಪಸಂಖ್ಯಾತ ಸಚಿವಾಲಯವನ್ನು ಮುಚ್ಚಿರಿ!

ಕೇಂದ್ರ ಸರಕಾರದ ವಿದ್ಯಾರ್ಥಿವೇತನ ಯೋಜನೆಯ ರಾಷ್ಟ್ರೀಯ ಪೋರ್ಟಲ್‌ ಅನ್ನು ಸಿದ್ಧಪಡಿಸುವಾಗ ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನದ ಹಗರಣ ಬೆಳಕಿಗೆ ಬಂದಿದೆ. ೨೦೦೭ ರಿಂದ ೨೦೨೨ ರ ಕಾಲಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನಕ್ಕಾಗಿ ಕೇಂದ್ರದಿಂದ ೨೨ ಸಾವಿರದ ೫೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಅಲ್ಪಸಂಖ್ಯಾತ ಸಚಿವಾಲಯ ನಡೆಸಿದ ತನಿಖೆಯಲ್ಲಿ ೨೧ ರಾಜ್ಯಗಳ ೧ ಸಾವಿರದ ೫೭೨ ಸಂಸ್ಥೆಗಳಲ್ಲಿ ೮೩೦ ಸಂಸ್ಥೆಗಳು ಮತ್ತು ಶೇ. ೫೩ ರಷ್ಟು ವಿದ್ಯಾರ್ಥಿಗಳು ನಕಲಿ ಎಂದು ಕಂಡುಬಂದಿದೆ. ಇದರಿಂದ ೧೪೪ ಕೋಟಿ ೮೩ ಲಕ್ಷ ರೂಪಾಯಿಗಳ ಹಗರಣದ ಬೆಳಕಿಗೆ ಬಂದಿದೆ. ಹಾಗೆಯೇ ಕೇವಲ ಸಂಸ್ಥೆಯಷ್ಟೇ ನಕಲಿ ಎಂದು ಗಮನಕ್ಕೆ ಬರದೇ ಆ ಸಂಸ್ಥೆಯ ಅಧಿಕಾರಿಗಳು, ಇಲಾಖಾ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಯೂ ನಕಲಿ ಎಂದು ಕಂಡು ಬಂದಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಈ ಸಂದರ್ಭದಲ್ಲಿ ಕೇಂದ್ರ ತನಿಖಾ ದಳದಿಂದ (ಸಿ.ಬಿ.ಐ.’ ವತಿಯಿಂದ) ತನಿಖೆಗೆ ಆದೇಶಿಸಿದ್ದಾರೆ. ಇದು ಕೇವಲ ಈಗ ಬಹಿರಂಗವಾಗಿರುವ ಅಂಕಿ-ಅಂಶಗಳಾಗಿದ್ದು, ಈ ಹಗರಣ ಖಂಡಿತವಾಗಿಯೂ ಕೋಟ್ಯಾವಧಿ ರೂಪಾಯಿಗಳದ್ದಾಗಿರಬಹುದು. ಇದರಲ್ಲಿ ಸಂಶಯವೇ ಇಲ್ಲ. ಒಂದೆಡೆ ದೇಶದ ೭೬ ನೇ ಸ್ವಾತಂತ್ರ್ಯದಿನವನ್ನು ಆಚರಿಸುತ್ತಿರುವಾಗಲೇ ದಿನಕ್ಕೊಂದು ಹೊಸ ಹೊಸ ಹಗರಣಗಳು ಬೆಳಕಿಗೆ ಬರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದ ‘ಸ್ವರಾಜ್ಯ ಸಿಕ್ಕಿದೆ; ಆದರೆ ಸುರಾಜ್ಯ ಸಿಕ್ಕಿದೆಯೇ?’ ಎನ್ನುವ ಪ್ರಶ್ನೆ ಸದಾ ಎದುರಾಗುತ್ತದೆ.

ಹಗರಣದ ವಿಸ್ತಾರ

ಆಗಿನ ಕಾಂಗ್ರೆಸ್‌ ನೇತೃತ್ವದ ‘ಸಂಯುಕ್ತ ಪ್ರಜಾಸತ್ತಾತ್ಮಕ ಒಕ್ಕೂಟ’ದ (ಯುಪಿಎ) ಸರ್ಕಾರದ ಅಡಿಯಲ್ಲಿ ವರ್ಷ ೨೦೦೭ ರಲ್ಲಿ ಅಲ್ಪಸಂಖ್ಯಾತ ಸಚಿವಾಲಯ ಅಸ್ತಿತ್ವಕ್ಕೆ ಬಂದಿತು. ಈ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ, ಬೌದ್ಧ, ಸಿಖ್, ಪಾರ್ಸಿಗಳಿಗೆ ಸೇರಿದ ೧ ಲಕ್ಷದ ೮೦ ಸಾವಿರ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಯಿತು. ಇದರಲ್ಲಿ ಮದರಸಾಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ೪ ಸಾವಿರದಿಂದ ೨೫ ಸಾವಿರದವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅಲ್ಪಸಂಖ್ಯಾತರಲ್ಲಿ ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಇದ್ದರೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯುವಲ್ಲಿ ಮುಸಲ್ಮಾನರೇ ಮುಂದಿದ್ದಾರೆ.

ಈ ಹಗರಣದಲ್ಲಿ ಛತ್ತೀಸ್‌ಗಢ-೬೨, ರಾಜಸ್ಥಾನ-೯೯, ಅಸ್ಸಾಂ-೬೮, ಕರ್ನಾಟಕ-೬೪, ಉತ್ತರಾಖಂಡ-೬೦, ಮಧ್ಯಪ್ರದೇಶ-೪೦, ಬಂಗಾಲ-೩೯ ಮತ್ತು ಉತ್ತರ ಪ್ರದೇಶದಲ್ಲಿ ೪೪ ನಕಲಿ ಅಧಿಕಾರಿಗಳು ಪತ್ತೆಯಾಗಿದ್ದಾರೆ. ೨೦೨೦ ರಲ್ಲಿ, ಅಸ್ಸಾಂನ ಅಲ್ಪಸಂಖ್ಯಾತರ ಮಂಡಳಿಯು ಈ ವಿಷಯವನ್ನು ಬಹಿರಂಗಪಡಿಸಿತು ಮತ್ತು ಅದರ ಬಗ್ಗೆ ಕೇಂದ್ರ ಸಚಿವಾಲಯಕ್ಕೆ ಮಾಹಿತಿಯನ್ನು ನೀಡಿತು. ತದ ನಂತರ ತನಿಖೆ ಮುಂದುವರಿದಂತೆ ಕ್ರಮೇಣ ಒಂದೊಂದು ವಿಷಯ ಬೆಳಕಿಗೆ ಬರತೊಡಗಿತು. ಪ್ರಾಥಮಿಕ ತನಿಖೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಷಯಗಳು ಕಂಡು ಬಂದಿವೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಶಾಲೆಯೊಂದರಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೫ ಸಾವಿರವಿದೆ. ಆದರೆ ಅಲ್ಲಿ ೭ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ. ಒಬ್ಬ ದಂಪತಿಗಳ ಒಂದೇ ಮೊಬೈಲ್‌ ಸಂಖ್ಯೆಯಿಂದ ೨೨ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಮತ್ತು ಅವರೆಲ್ಲರೂ ೯ ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಪಂಜಾಬ್‌ ರಾಜ್ಯದಲ್ಲಿ ಯಾವತ್ತೂ ಶಾಲೆಗೆ ಹಾಜರಾಗಿರಲ್ಲದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿದೆ. ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ೮ ಲಕ್ಷ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ೧೦ ಮತ್ತು ೧೨ ನೇ ಪರೀಕ್ಷೆಯಲ್ಲಿ ೨ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೊಂದಣಿ ಸಂಖ್ಯೆ ಒಂದೇ ಆಗಿತ್ತು. ೧ ಲಕ್ಷದ ೩೨ ಸಾವಿರ ವಿದ್ಯಾರ್ಥಿಗಳಿಗೆ ವಸತಿಗೃಹದ ವೆಚ್ಚವನ್ನು ನೀಡಲಾಗುತ್ತಿತ್ತು, ಆದರೆ ವಿಚಾರಣೆ ನಡೆಸಿದಾಗ ಸ್ಥಳದಲ್ಲಿ ಒಂದೇ ಒಂದು ವಸತಿಗೃಹ ಇರಲಿಲ್ಲ. ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ, ಶೇ.೯೫ ರಷ್ಟು ವಿದ್ಯಾರ್ಥಿವೇತನವನ್ನು ‘ಸೈಬರ್‌ ಸೆಂಟರ್’ ಮಾಲೀಕನು ತೆಗೆದುಕೊಂಡಿದ್ದಾನೆ. ಅಸ್ಸಾಂ ರಾಜ್ಯದಲ್ಲಿ ಒಂದೇ ಜಿಲ್ಲೆಯ ಒಂದು ಬ್ಯಾಂಕಿನ ಒಂದು ಶಾಖೆಯಲ್ಲಿ ೬೬ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಈ ಹಗರಣದಲ್ಲಿ ಅಲ್ಪಸಂಖ್ಯಾತ ಸಂಸ್ಥೆ, ಕೆಲವು ಸರಕಾರಿ ಮತ್ತು ಬ್ಯಾಂಕಿನ ಕೆಲವು ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಹಲವು ಇಲಾಖೆಗಳಲ್ಲಿ ನಡೆದಿರುವ ಹಗರಣಗಳು ಬೆಳಕಿಗೆ ಬಂದವು. ಇದರಲ್ಲಿ ಪ್ರಮುಖವಾಗಿ ‘ಟೂ ಜಿ’ ಹಗರಣ, ರಾಷ್ಟ್ರೀಯ ಕಾಮನ್‌ವೆಲ್ತ ಹಗರಣ, ಕಲ್ಲಿದ್ದಲು ಹಗರಣ ಬಯಲಿಗೆ ಬಂದಿತು ಮತ್ತು ಈಗ ಅಲ್ಪಸಂಖ್ಯಾತ ಸಚಿವಾಲಯದ ಭ್ರಷ್ಟಾಚಾರ!

ಅಲ್ಪಸಂಖ್ಯಾತರನ್ನು ಅನಾವಶ್ಯಕವಾಗಿ ಓಲೈಸುವುದನ್ನು ನಿಲ್ಲಿಸಿರಿ !

ಸ್ವಾತಂತ್ರ್ಯದ ನಂತರ ಕಾಂಗ್ರೆಸ್‌ ಮುಸ್ಲಿಮರ ಓಲೈಕೆ ರಾಜಕಾರಣ ಮಾಡಿತು. ಈ ಹಿಂದೂಬಹುಸಂಖ್ಯಾತ ದೇಶದಲ್ಲಿ ಬಡ ಹಿಂದೂಗಳಿಗೆ ಅತ್ಯಲ್ಪ; ಆದರೆ ಮುಸ್ಲಿಮ ಅಲ್ಪಸಂಖ್ಯಾತರ ಹೆಸರಿನಲ್ಲಿ ದಾನ ಹಂಚಿದಂತೆ ಸೌಲಭ್ಯಗಳನ್ನು ನೀಡಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಗೆ ಬಳಕೆಯಾಗುತ್ತಿರುವ ಹಣವು ಸಾಮಾನ್ಯ ಜನರ ಶ್ರಮದ ತೆರಿಗೆ ರೂಪದಲ್ಲಿದೆ. ಈ ಕಾರಣದಿಂದಾಗಿ, ಪ್ರತಿ ಹಗರಣದಲ್ಲಿಯೂ ಸಾಮಾನ್ಯ ಜನರ ಹಣವೇ ದುರುಪಯೋಗ ಆಗಿರುತ್ತದೆ. ಹಜ್‌ ಯಾತ್ರಾ ಅನುದಾನ, ಸಚ್ಚರ್‌ ಆಯೋಗದ ಯೋಜನೆಗಳು, ೧೫-ಅಂಶಗಳ ವಿಶೇಷ ಅನುದಾನಗಳಲ್ಲದೇ, ಹಲವು ರಿಯಾಯಿತಿಗಳನ್ನು ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರಿಗೆ ನೀಡಲಾಗುತ್ತದೆ. ಜಗತ್ತಿನ ಯಾವ ದೇಶದಲ್ಲಿ ಸಿಗದಷ್ಟು ಸೌಲಭ್ಯಗಳನ್ನು ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರಿಗೆ ನೀಡಲಾಗುತ್ತಿದೆ ಮತ್ತು ಇಷ್ಟು ಸೌಲಭ್ಯಗಳನ್ನು ಒದಗಿಸಿದ ನಂತರವೂ ಅದರಿಂದ ದೇಶಕ್ಕೆ ಎಷ್ಟು ಪ್ರಯೋಜನವಾಗಿದೆ ? ಈ ಬಗ್ಗೆ ಪ್ರಶ್ನೆ ಚಿಹ್ನೆಯೇ ಇದೆ. ಪತ್ತೆ ಆಗುತ್ತಿರುವ ಹಲವು ಉಗ್ರರು ಮದರಸಾಗಳಿಂದ ಸಿದ್ಧರಾಗಿ ಬರುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಇನ್ನೆಷ್ಟು ಕಾಲ ಅಲ್ಪಸಂಖ್ಯಾತರ ಸಚಿವಾಲಯವನ್ನು ಮುಂದುವರಿಸುತ್ತೀರಿ? ಅಲ್ಪಸಂಖ್ಯಾತರ ಓಲೈಕೆಗೆ ಸರ್ಕಾರ ಇನ್ನೆಷ್ಟು ಕೋಟಿ ರೂಪಾಯಿಗಳನ್ನು ಅವರ ಬಾಯಿಗೆ ಹಾಕಲಿದೆ? ಇದರಿಂದ ದೇಶಕ್ಕೆ ಏನಾದರೂ ಒಳ್ಳೆಯದಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ಸಾಮಾನ್ಯ ಹಿಂದೂಗಳೂ ಸರಕಾರಕ್ಕೆ ಕೇಳುವುದು ಆವಶ್ಯಕವಾಗಿದೆ.

ಕೇಂದ್ರೀಯ ತನಿಖಾ ದಳ ಕಾಲಮಿತಿಯನ್ನು ನಿಗದಿಪಡಿಸಿ ಈ ಎಲ್ಲ ಹಗರಣಗಳ ಬಗ್ಗೆ ಬುಡವನ್ನು ಅಗಿದು ತೆಗೆಯುವುದು ಆವಶ್ಯಕವಾಗಿದೆ. ಹಾಗೆಯೇ ಈ ಎಲ್ಲಾ ಪ್ರಕರಣಗಳನ್ನು ತ್ವರಿತಗತಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿ, ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗುವವರೆಗೆ ಬೆಂಬತ್ತುವಿಕೆ ಮಾಡುವುದು ಆವಶ್ಯಕವಿದೆ. ಪ್ರಸ್ತುತ, ಕೇಂದ್ರ ಸರ್ಕಾರ ಎಲ್ಲಾ ಹಳೆಯ ಕಾನೂನುಗಳನ್ನು ಪರಿಷ್ಕರಿಸುತ್ತಿದೆ. ಅದರದೇ ಒಂದು ಭಾಗವೆಂದು ಸರಕಾರ ಅಲ್ಪಸಂಖ್ಯಾತ ಸಚಿವಾಲಯ, ಅಲ್ಪಸಂಖ್ಯಾತ ಆಯೋಗವನ್ನು ಮುಚ್ಚುವ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಆಗ ಮಾತ್ರ ಸಾಮಾನ್ಯ ಹಿಂದೂಗಳಿಗೆ ನ್ಯಾಯ ಸಿಗುತ್ತದೆ ಮತ್ತು ಭ್ರಷ್ಟಾಚಾರದ ಈ ಹಣ ದೇಶದ ಅಭಿವೃದ್ಧಿಗೆ ಬಳಸಬಹುದು!
ಹಿಂದೂಬಹುಸಂಖ್ಯಾತ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಸೌಲಭ್ಯಗಳನ್ನು ನೀಡಿ ದೇಶಕ್ಕೆ ನಿಜವಾಗಿಯೂ ಒಳ್ಳೆಯದಾಗಿದೆಯೇ? ಎನ್ನುವುದರ ವಿಚಾರ ಮಾಡುವ ಸಮಯ ಇದೀಗ ಬಂದಿದೆ.