‘ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಹೇಳಿದ ಮೂಲಭೂತ ಸಿದ್ಧಾಂತದಲ್ಲಿ ಯಾರೂ ಯಾವುದೇ ರೀತಿಯ ಪರಿವರ್ತನೆ ಮಾಡಲು ಸಾಧ್ಯವಿಲ್ಲ; ಏಕೆಂದರೆ ಅವರು ಚಿರಂತನ ಸತ್ಯವನ್ನು ಪ್ರತಿಪಾದಿಸಿದ್ದಾರೆ. ಈ ಕಾರಣದಿಂದ ಅದರಲ್ಲಿ ‘ಸಂಶೋಧನೆ’ ಎಂಬುದೇನೂ ಇರುವುದಿಲ್ಲ. ತದ್ವಿರುದ್ಧ ಬುದ್ಧಿಪ್ರಾಮಾಣ್ಯವಾದಿಗಳ ವಿಜ್ಞಾನದಲ್ಲಿ ನಿರಂತರ `ಸಂಶೋಧನೆ’ ಮಾಡಬೇಕಾಗುತ್ತದೆ; ಏಕೆಂದರೆ ಅವರ ಸಿದ್ಧಾಂತವು ಕೆಲವು ವರ್ಷಗಳಲ್ಲಿ ಪರಿವರ್ತನೆಯಾಗುತ್ತಿರುತ್ತದೆ.’