ಭವಿಷ್ಯದಲ್ಲಿ ‘ರೂಪಾಯಿ’ಯು ಅಂತಾರಾಷ್ಟ್ರೀಯ ಚಲಾವಣೆಯ ಕರೆನ್ಸಿಯಾಗುತ್ತಿರುವುದು ದೇಶದ ಆರ್ಥಿಕ ಭದ್ರತೆಯ ಮಹತ್ವದ ಹೆಜ್ಜೆ !

‘ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಫ್ರಾನ್ಸ್ ಪ್ರವಾಸಕ್ಕೆ ಹೋಗಿದ್ದರು. ಆಗ ಅಲ್ಲಿ ಅತ್ಯಂತ ಮಹತ್ವದ ಘಟನೆಯಾಯಿತು. ಅದೇನೆಂದರೆ ಭಾರತ ಮತ್ತು ಫ್ರಾನ್ಸ್ ನಡುವೆ ಇನ್ನು ಮುಂದೆ ಭಾರತೀಯ ರೂಪಾಯಿಗಳಲ್ಲಿ ವ್ಯಾಪಾರ ನಡೆಯಲಿದೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಅತ್ಯಂತ ಒಳ್ಳೆಯ ಪರಿಣಾಮವಾಗುತ್ತದೆ. ಸ್ವಲ್ಪದರಲ್ಲಿ ಭಾರತದ ‘ರೂಪಾಯಿ’ಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಎಂದು ಬಳಸ ಲಾಗುವುದು. ಭಾರತದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಾದ ಒಂದು ಚರ್ಚೆಯನ್ನು ಇಲ್ಲಿ ನೀಡಲಾಗಿದೆ.

೧. ಜಗತ್ತಿನ ವ್ಯಾಪಾರದಲ್ಲಿ ‘ಡಾಲರ್‌’ನ ಸ್ಥಾನ

ಪ್ರಸ್ತುತ ಯುರೋಪ್‌ ಅಥವಾ ಅಮೇರಿಕಾ ಇವು ಗಳೊಂದಿಗೆ ಭಾರತ ‘ಡಾಲರ್’ ರೂಪದಲ್ಲಿ ವ್ಯಾಪಾರ ಮಾಡುತ್ತದೆ. ‘ಡಾಲರ್’ (ಅಮೇರಿಕಾದ ಕರೆನ್ಸಿ) ಇದು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಅತ್ಯಧಿಕ ಬಳಸಲಾಗುವ ಕರೆನ್ಸಿಯಾಗಿದೆ. ಅನಂತರ ಸ್ವಲ್ಪ ಪ್ರಮಾಣದಲ್ಲಿ ‘ಯುರೋ’ (ಯುರೋಪಿಯನ್‌ ಒಕ್ಕೂಟದ ಕರೆನ್ಸಿ)ವನ್ನು ಬಳಸಲಾಗುತ್ತದೆ. ಇನ್ನೂ ಕಡಿಮೆ ಪ್ರಮಾಣದಲ್ಲಿ ಚೀನಾದ ಕರೆನ್ಸಿ ‘ಯುಆನ್’ ಅನ್ನು ಬಳಸಲಾಗುತ್ತದೆ ಮತ್ತು ಅನಂತರ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಇತರ ಕರೆನ್ಸಿಗಳನ್ನು ಬಳಸಲಾಗುತ್ತದೆ; ಆದರೆ ಅಂತಾರಾಷ್ಟ್ರೀಯ ಸ್ತರದಲ್ಲಿ ಕರೆನ್ಸಿ ಎಂದು ಡಾಲರ್‌ನ ಸ್ಥಾನ ಬಹಳ ಮಹತ್ವದ್ದಾಗಿದೆ. ಆದುದರಿಂದ ಭಾರತದೊಂದಿಗೆ ಎಲ್ಲ ದೇಶಗಳು ತಮ್ಮಲ್ಲಿ ಡಾಲರ್ಸ್‌ನ ಅಪಾರ ಸಂಗ್ರಹ ಇಟ್ಟುಕೊಳ್ಳಬೇಕಾಗುತ್ತದೆ.

೨. ರೂಪಾಯಿ, ಡಾಲರ್‌ ಮತ್ತು ಇತರ ಕರೆನ್ಸಿಗಳ ತುಲನೆ

ರೂಪಾಯಿ, ಇದು ‘ಸೆಮಿಕನ್ವರ್ಟೆಬಲ್’ (ಅರೆಪರಿವರ್ತನೀಯ) ಆಗಿದೆ, ಅಂದರೆ ಯಾರೂ ತಮಗೆ ಬೇಕಾದಷ್ಟು ಪ್ರಮಾಣದಲ್ಲಿ ರೂಪಾಯಿಗಳನ್ನು ವಿನಿಮಯ ಮಾಡಲು ಆಗುವುದಿಲ್ಲ. ಅದರ ಮೇಲೆ ರಿಝರ್ವ್ ಬ್ಯಾಂಕ್‌ನ ನಿಯಂತ್ರಣವಿದೆ. ರೂಪಾಯಿ ಅಂತಾರಾಷ್ಟ್ರೀಯ ಸ್ತರದ ಕರೆನ್ಸಿಯಾಗಿದೆ. ಹಾಗಾಗಿ ಯಾರು ಬೇಕಾದರೂ ರೂಪಾಯಿಗಳ ಬದಲು ಎಷ್ಟೇ ಡಾಲರ್ಸ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಮಾರುಕಟ್ಟೆಯು ರೂಪಾಯಿಗಳ ಮೌಲ್ಯವನ್ನು ನಿರ್ಧರಿಸುತ್ತದೆ. ಸದ್ಯ ೧ ಡಾಲರ್‌ ಖರೀದಿಸಲು ೮೨ ರಿಂದ ೮೩ ರೂಪಾಯಿಗಳ ಆವಶ್ಯಕತೆ ಇದೆ. ೧ ಯುಆನ್‌ ಪಡೆಯಲು ೧೬ ರಿಂದ ೧೭ ರೂಪಾಯಿಗಳು ಬೇಕಾಗುತ್ತವೆ. ಒಂದು ಬ್ರಿಟಿಷ್‌ ಪೌಂಡ್‌ಗಾಗಿ ೩೦ ರಿಂದ ೪೦ ರೂಪಾಯಿಗಳು ಬೇಕಾಗುತ್ತವೆ. ಮಾರುಕಟ್ಟೆಯು ಈ ಮೌಲ್ಯವನ್ನು ನಿರ್ಧರಿಸುತ್ತದೆ. ಆದುದರಿಂದ ಇಡೀ ಜಗತ್ತು ಡಾಲರ್‌ ಮೇಲೆ ಕೇಂದ್ರೀಕೃತವಾಗಿದೆ. ರೂಪಾಯಿ ಸಹ ಅಂತಾರಾಷ್ಟ್ರೀಯ ಕರೆನ್ಸಿಯಾಗಬೇಕೆಂದು ಭಾರತ ಸರಕಾರವು ಪ್ರಯತ್ನಿಸುತ್ತಿದೆ.

೩. ರೂಪಾಯಿಯ ಅಂತಾರಾಷ್ಟ್ರೀಕರಣದಿಂದಾಗುವ ಲಾಭ !

ಅ. ಪ್ರಸ್ತುತ ಭಾರತದ ವ್ಯಾಪಾರ (ಆಮದು-ರಫ್ತು) ಹೆಚ್ಚಾಗಿದೆ. ಆದುದರಿಂದ ಅನೇಕ ದೇಶಗಳು ಭಾರತದೊಂದಿಗೆ ರೂಪಾಯಿಗಳಲ್ಲಿ ವ್ಯಾಪಾರ ಮಾಡತೊಡಗಿವೆ, ಉದಾ. ಭಾರತ ಭೂತಾನ, ಭಾರತ-ನೇಪಾಳ, ಭಾರತ-ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ರೂಪಾಯಿಗಳ ಮಾಧ್ಯಮದಿಂದಲೇ ವ್ಯಾಪಾರ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಈಗ ೧೨ ದೇಶಗಳು ರೂಪಾಯಿಗಳಲ್ಲಿ ‘ಪೆಮೆಂಟ್’ ಸ್ವೀಕರಿಸಲು ಆರಂಭಿಸಿವೆ. ಅದರಲ್ಲಿ ‘ರಷ್ಯಾ’ ಪ್ರಮುಖ ದೇಶವಾಗಿದೆ. ಭಾರತ ರಷ್ಯಾದಿಂದ ಖರೀದಿಸಿದ ಕಚ್ಚಾ ತೈಲದ ಅತಿ ಹೆಚ್ಚು ಮೌಲ್ಯವನ್ನು ರೂಪಾಯಿಗಳಲ್ಲಿ ಪಾವತಿಸಿದೆ. ಈಗ ಫ್ರಾನ್ಸ್ ಸಹ ರೂಪಾಯಿಗೆ ‘ಕರೆನ್ಸಿ’ ಎಂದು ಮಾನ್ಯತೆ ನೀಡಿದೆ. ಆದುದರಿಂದ ಫ್ರಾನ್ಸ್‌ನಲ್ಲಿರುವ ಭಾರತೀಯರು ಅಲ್ಲಿ ರೂಪಾಯಿಗಳಲ್ಲಿ ವ್ಯವಹಾರ ಮಾಡಬಹುದು. ಫ್ರಾನ್ಸ್‌ನಿಂದ ಭಾರತಕ್ಕೆ ಬರುವ ಪ್ರವಾಸಿಗರೂ ಫ್ರೆಂಚ್‌ ಕರೆನ್ಸಿಯನ್ನು ತಕ್ಷಣ ರೂಪಾಯಿಗಳಲ್ಲಿ ರೂಪಾಂತರಿಸಬಹುದು.

ಆ. ವಿವಿಧ ದೇಶಗಳಲ್ಲಿ (ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುರೋಪ್) ನೆಲೆಸಿರುವ ೩-೪ ಕೋಟಿ ಭಾರತೀಯರು ಸಾವಿರಾರು ಕೋಟಿ ರೂಪಾಯಿಗಳನ್ನು ಭಾರತಕ್ಕೆ ಕಳುಹಿಸುತ್ತಾರೆ. ೨-೩ ಕೋಟಿ ಭಾರತೀಯರು ಇತರ ದೇಶಗಳಿಗೆ ಪ್ರವಾಸಿಗ ರೆಂದು ಹೋಗುತ್ತಾರೆ. ೨-೩ ಲಕ್ಷ ವಿದ್ಯಾರ್ಥಿಗಳು ವಿದೇಶಗಳಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಅವರಿಗೆ ಭಾರತೀಯ ರೂಪಾಯಿ ಗಳನ್ನು ಆಯಾ ದೇಶಗಳ ಕರೆನ್ಸಿಗಳಲ್ಲಿ ಪರಿವರ್ತಿಸಬೇಕಾಗುತ್ತದೆ. ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿಯಾದ ನಂತರ ಅವರಿಗೂ ಲಾಭವಾಗಲಿದೆ. ಸ್ವಲ್ಪ ಪ್ರಮಾಣದಲ್ಲಿ ಅಮೇರಿಕಾ, ಯುರೋಪ್, ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ರೂಪಾಯಿಯ ಬಳಕೆ ಆರಂಭವಾಗಿದೆ. ಭಾರತದ ಪ್ರಧಾನಿ ಸಂಯುಕ್ತ ಅರಬ್‌ ಒಕ್ಕೂಟಕ್ಕೆ ಹೋಗಿದ್ದರು. ಅಲ್ಲಿಯೂ ೩೦ ರಿಂದ ೪೦ ಲಕ್ಷಗಳಿಗಿಂತ ಹೆಚ್ಚು ಭಾರತೀಯರಿದ್ದಾರೆ. ಅವರು ಸಹ ರೂಪಾಯಿಗಳನ್ನು ಮುಕ್ತವಾಗಿ ಪರಿವರ್ತಿಸಬಹುದು. ಈ ಹಿಂದೆ ಅಲ್ಲಿನ ಕರೆನ್ಸಿಯನ್ನು ರೂಪಾಯಿಗಳಲ್ಲಿ ಪರಿವರ್ತಿಸಲು ಬಹಳಷ್ಟು ‘ಕಮಿಶನ್’ ನೀಡಬೇಕಾಗುತ್ತಿತ್ತು. ಈಗ ಪ್ರವಾಸಿಗರ ಅನಿವಾಸಿ ಭಾರತೀಯರು (ಓಒಟಿ ಡಿಎಸಿಜಎಟಿಣೈಚಿಟ ಈಟಿಜೈಚಿಟಿ) ಮತ್ತು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಡಾಲರ್ಸ್‌ಗಳನ್ನು ಖರೀದಿಸುವ ಹಾಗೆಯೇ ಡಾಲರ್ಸ್‌ನ ಸಂಗ್ರಹವನ್ನು ಇಟ್ಟುಕೊಳ್ಳುವ ಆವಶ್ಯಕತೆಯಿಲ್ಲ. ಇದು ಬಹಳ ಒಳ್ಳೆಯ ಸಂಗತಿಯಾಗಲಿದೆ.

೪. ರೂಪಾಯಿಯ ಅಂತಾರಾಷ್ಟ್ರೀಕರಣವಾಗಲು ಆರ್ಥಿಕವ್ಯವಸ್ಥೆ ಸದೃಢವಾಗಿರಬೇಕು !

ಯಾವ ರೀತಿ ಯಾರು ಎಷ್ಟೇ ಡಾಲರ್ಸ್‌ಗಳನ್ನು ಖರೀದಿಸ ಬಹುದೋ ಅಥವಾ ಮಾರಾಟ ಮಾಡಬಹುದೋ, ಅದೇ ರೀತಿ ರೂಪಾಯಿಗಳದ್ದು ಏಕೆ ಸಾಧ್ಯವಿಲ್ಲ ? ಏಕೆಂದರೆ ಸದ್ಯ ಭಾರತದ ಆರ್ಥಿಕ ಶಕ್ತಿ ಜಗತ್ತಿನ ಶೇ. ೨ ರಷ್ಟು ಮಾತ್ರ ಇದೆ. ತಜ್ಞರ ಅಭಿಪ್ರಾಯಕ್ಕನುಸಾರ ಭಾರತದ ‘ಜಿಡಿಪಿ’ (ಒಟ್ಟು ದೇಶಿಯ ಉತ್ಪನ್ನ) ಜಗತ್ತಿನ ಶೇ. ೧೫ ರಿಂದ ೨೦ ರಷ್ಟು ತಲುಪಬೇಕಾಗಿದೆ. ಸದ್ಯ ಚೀನಾ, ಅಮೇರಿಕಾ ಮತ್ತು ಯುರೋಪಿಯನ್‌ ಒಕ್ಕೂಟಗಳದ್ದು ಮಾತ್ರ ಇಷ್ಟು ‘ಜಿಡಿಪಿ’ ಇದೆ. ಭಾರತ ಇಷ್ಟು ‘ಜಿಡಿಪಿ’ ಪಡೆದರೆ ಭಾರತ ರೂಪಾಯಿಯನ್ನು ಸಂಪೂರ್ಣವಾಗಿ ಪರಿವರ್ತಿಸಬಹುದು. ಅಲ್ಲಿಯವರೆಗೆ ಭಾರತವು ಸ್ವಲ್ಪ ನಿಯಂತ್ರಣವನ್ನು ಕಾಯ್ದುಕೊಳ್ಳಬೇಕಾಗಲಿದೆ. ‘ಕೆವೈಸಿ’ ಈ ಪ್ರಕಾರದಲ್ಲಿ ನಮ್ಮ ಆಧಾರಕಾರ್ಡ್‌, ಪ್ಯಾನ್‌ ಕಾರ್ಡ್ನ್ನು ಜೋಡಿಸ ಬೇಕಾಗುತ್ತದೆ. ಇಷ್ಟೇ ಅಲ್ಲದೇ, ಭಾರತದಲ್ಲಿ ಹಣಹೂಡಿಕೆ ಮಾಡುವ ಹಣಕಾಸು ಸಂಸ್ಥೆಗಳು ಸಹ ತಮ್ಮ ಗುರುತನ್ನು ನೀಡಬೇಕಾಗುತ್ತದೆ. ಯಾವಾಗ ರೂಪಾಯಿ ಬಹಳಷ್ಟು ಬಳಕೆ ಯಾಗುವ ಅಂತಾರಾಷ್ಟ್ರೀಯ ಕರೆನ್ಸಿಯಾಗುವುದೋ, ಆಗ ಅನೇಕÀರು ರೂಪಾಯಿಗಳನ್ನು ಸಂಗ್ರಹಿಸಿಡುವರು. ಅದರಿಂದ ಭಾರತೀಯ ರೂಪಾಯಿಯ ಮೌಲ್ಯ ಹೆಚ್ಚಾಗುವುದು. ಮುಂದಿನ ಕಾಲದಲ್ಲಿ ರೂಪಾಯಿಗಳ ಬಳಕೆ ಹೆಚ್ಚಾಗಲು ಭಾರತದ ಆಮದು-ರಫ್ತು ಮತ್ತು ಅರ್ಥಿಕವ್ಯವಸ್ಥೆಗಳಲ್ಲಿ ಹೆಚ್ಚಳವಾಗಬೇಕಿದೆ.

೫. ಹೂಡಿಕೆಯ ಹೆಚ್ಚಿನ ಆದಾಯ ಮತ್ತು ಲಾಭದ ದೃಷ್ಟಿಯಿಂದ ಜಗತ್ತಿನಲ್ಲಿ ಭಾರತವು ವಿಶ್ವಾಸ ಮೂಡಿಸುವುದು ಆವಶ್ಯಕ !

ರೂಪಾಯಿಯ ಅಂತರರಾಷ್ಟ್ರೀಕರಣ, ಸರಕಾರವು ತೆಗೆದು ಕೊಂಡ ಒಂದು ಪ್ರಮುಖ ಹೆಜ್ಜೆಯಾಗಿದೆ. ಆದುದರಿಂದ ಜಗತ್ತಿಗೆ ಭಾರತ ಸರಕಾರ, ಆರ್ಥಿಕ ವ್ಯವಸ್ಥೆ, ವಿಧಾನ ಇವುಗಳ ಬಗ್ಗೆ ಆತ್ಮವಿಶ್ವಾಸವೆನಿಸುತ್ತದೆ, ಇದು ನಮ್ಮ ದೇಶಕ್ಕೆ ಲಭಿಸಿದ ದೊಡ್ಡ ಕೊಡುಗೆಯಾಗಿದೆ. ರೂಪಾಯಿಗಳ ಅಂತರರಾಷ್ಟ್ರೀಕರಣದ ವೇಗ ಹೆಚ್ಚಾಗಬೇಕು. ಆದುದರಿಂದ ಭಾರತಕ್ಕೆ ಕಡಿಮೆ ದರದಲ್ಲಿ ಅಂತರರಾಷ್ಟ್ರೀಯ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಅದರಿಂದ ಹೆಚ್ಚು ಲಾಭವಾಗುತ್ತದೆ. ಜಗತ್ತಿನಾದ್ಯಂತದ ಜನರಿಗಾಗಿ ಹೂಡಿಕೆಯ ಹೆಚ್ಚು ಆದಾಯ ಮತ್ತು ಲಾಭವನ್ನು ನೀಡುವಲ್ಲಿ ಅಮೇರಿಕಾದ ಡಾಲರ್‌ ಮತ್ತು ಚಿನ್ನ ಇವು ಸುಭದ್ರ ಸಾಧನವಾಗಿದೆ. ವಾಸ್ತವದಲ್ಲಿ ಈ ವಿಶ್ವಾಸವು ಅಲ್ಲಿನ ಆರ್ಥಿಕ, ರಾಜಕೀಯ, ಸಾಮಾಜಿಕ, ನ್ಯಾಯ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ನೇತೃತ್ವದಂತಹ ಶಕ್ತಿಯುತ ವ್ಯವಸ್ಥೆ ಮತ್ತು ಸಂಸ್ಥೆಗಳ ಮೇಲಿರುತ್ತದೆ. ಈ ವಿಶ್ವಾಸವನ್ನು ಭಾರತವು ಸಂಪೂರ್ಣ ಜಗತ್ತಿನಾದ್ಯಂತ ಸೃಷ್ಟಿಸಬೇಕಾಗುವುದು. ಆಗ ಜಗತ್ತಿನ ಎಲ್ಲರೂ ಭಾರತೀಯ ರೂಪಾಯಿಗೆ ಬೇಡಿಕೆ ಇಡುತ್ತಾರೆ.’- ಬ್ರಿಗೆಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ.