ಆಗಸ್ಟ್ ೨೦೨೨ ರಲ್ಲಿ ನಾನು ಖಜುರಾಹೋ (ಮಧ್ಯಪ್ರದೇಶ) ದಿಂದ ದೆಹಲಿಗೆ ವಿಮಾನ ಪ್ರವಾಸ ಮಾಡುವವಳಿದ್ದೆ. ಖಜುರಾಹೋ ವಿಮಾನ ನಿಲ್ದಾಣ ಸಣ್ಣದಾಗಿರುವುದರಿಂದ ವಿಮಾನವನ್ನೇರಲು ಪ್ರವಾಸಿಗಳು ನಡೆದುಕೊಂಡು ಹೋಗುತ್ತಿರುವಾಗ ನನ್ನ ಪಕ್ಕದಲ್ಲಿದ್ದ ಓರ್ವ ಮಹಿಳೆಯು ಒಬ್ಬ ವ್ಯಕ್ತಿಯತ್ತ ಸಂಕೇತ ಮಾಡಿ ಪಿಸುಮಾತಿನಲ್ಲಿ ನನಗೆ ಹೇಳಿದಳು, ”ನಾವು ತುಂಬಾ ಭಾಗ್ಯಶಾಲಿಗಳಾಗಿದ್ದೇವೆ, ನಮ್ಮ ಜೊತೆಗೆ ಬಾಗೇಶ್ವರ ಧಾಮದ ಮಹಾರಾಜರು ಪ್ರವಾಸ ಮಾಡುವವರಿದ್ದಾರೆ. ಅವರ ದರ್ಶನಕ್ಕಾಗಿ ಸಾವಿರಾರು ಜನರು ಬರುತ್ತಾರೆ, ಆದರೆ ಈಗ ನಾವು ಅವರ ಸಮೀಪದಲ್ಲಿದ್ದೇವೆ.’’ ನಾನು ಈ ಹಿಂದೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳ ವಿಷಯದಲ್ಲಿ ಕೇಳಿರಲಿಲ್ಲ; ಆದರೆ ನಾನು ಮನೆಗೆ ಬಂದಾಗ ನಾನು ತೆಗೆದ ಛಾಯಾಚಿತ್ರವನ್ನು ನನ್ನ ಪಕ್ಕದ ಮನೆಯ ಮಹಿಳೆಗೆ ತೋರಿಸಿದೆ. ಆಗ ಅವಳು ‘ನಿಮ್ಮ ಅದೃಷ್ಟ ತುಂಬಾ ಚೆನ್ನಾಗಿದೆ. ಆದ್ದರಿಂದ ನೀವು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಯಿತು. ಅವರ ಧ್ವನಿಚಿತ್ರಸುರುಳಿ ನೋಡಲು ನನಗೆ ಇಷ್ಟವಾಗುತ್ತದೆ’, ಎಂದು ಹೇಳಿದಳು.
೧. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳ ಬಗ್ಗೆ ಪ್ರಸಿದ್ಧಿಮಾಧ್ಯಮಗಳು ಮತ್ತು ನಾಸ್ತಿಕವಾದಿ ಸಂಘಟನೆಗಳಿಂದ ಅಪಪ್ರಚಾರ !
ಅನಂತರ ಆಗಸ್ಟ್ ೨೦೨೨ ರ ನಂತರ ಕೆಲವು ತಿಂಗಳಲ್ಲಿ ಈ ಯುವ ಸ್ವಾಮೀಜಿಯವರು ಸುಮಾರು ೩೦೦ ಕ್ರೈಸ್ತ ವ್ಯಕ್ತಿಗಳನ್ನು ಮರಳಿ ಹಿಂದೂ ಧರ್ಮಕ್ಕೆ (ಘರವಾಪಸಿ) ತಂದ ವಿಷಯವು ಪ್ರಸಿದ್ಧವಾಯಿತು. ಕ್ರೈಸ್ತ ಮಿಶನರಿಗಳು ಲಕ್ಷಾವಧಿ ಹಿಂದೂಗಳನ್ನು ನಿಯಮಿತವಾಗಿ ಮತಾಂತರಿ ಸುತ್ತಿರುವಾಗ ಅದನ್ನು ಪ್ರಸಿದ್ಧಿಮಾಧ್ಯಮಗಳು ಆಕ್ಷೇಪಿಸುತ್ತಿರುವುದು ಎಲ್ಲಿಯೂ ಕಾಣಿಸುವುದಿಲ್ಲ; ಆದರೆ ಈ ಪ್ರಸಿದ್ಧಿ ಮಾಧ್ಯಮಗಳೇ ‘ಘರವಾಪಸಿ’ ಎಂದೊಡನೆ ವಿವಾದಾತ್ಮಕವೆಂಬಂತಹ ಚಿತ್ರಣವನ್ನು ಮುಂದಿಡುತ್ತವೆ. ವಾಸ್ತವದಲ್ಲಿ ಹಿಂದೂಗಳನ್ನು ಮತಾಂತರಿಸು ವುದನ್ನು ಪ್ರಸಿದ್ಧಿ ಮಾಧ್ಯಮಗಳು ತೋರಿಸಬೇಕು. ಅನಂತರ ತಕ್ಷಣ ಅಂಧಶ್ರದ್ಧೆಯ ಹೆಸರಿನಲ್ಲಿ ಕಾರ್ಯನಿರತವಾಗಿರುವ ಒಂದು ಸಂಘಟನೆಯು ಆಶ್ಚರ್ಯಜನಕ ಶಕ್ತಿಯಿರುವ ಪಂಡಿತ ಧೀರೇಂದ್ರ ಶಾಸ್ತ್ರಿಯವರ ಹಿಂದೆ ಬೀಳುತ್ತದೆ. ಅವರು ಪೊಲೀಸರಲ್ಲಿ ದೂರನ್ನೂ ದಾಖಲಿಸುತ್ತದೆ; ಆದರೆ ಈ ದೂರಿನಲ್ಲಿ ಯಾವುದೇ ಸತ್ಯ ಕಾಣಿಸದ ಕಾರಣ ಅದನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಪ್ರಸಿದ್ಧಿಮಾಧ್ಯಮಗಳು ವಾರ್ತೆ ನೀಡುವಾಗ ತಪ್ಪು ಶೀರ್ಷಿಕೆಯನ್ನು ನೀಡಿ ‘ಧೀರೇಂದ್ರ ಶಾಸ್ತ್ರಿಯವರು ತನ್ನನ್ನು ಹನುಮಂತನ ಭಕ್ತನೆಂದು ಹೇಳುತ್ತಾ ಅವರಲ್ಲಿ ಹನುಮಂತನ ಶಕ್ತಿ ಇದೆ’, ಎಂದು ಹೇಳುತ್ತಿದ್ದಾರೆ, ಅವರು ಸ್ವಯಂಘೋಷಿತ ಈಶ್ವರ ಆಗಿದ್ದಾರೆ’, ಎನ್ನುತ್ತಾರೆ ಎಂದು ಅಪಪ್ರಚಾರ ಮಾಡಲು ಪ್ರಯತ್ನಿಸಿದವು.
೨. ಪಂಡಿತ ಧೀರೇಂದ್ರ ಶಾಸ್ತ್ರಿಯವರನ್ನು ವಿರೋಧಿಸುವ ರಾಜಕಾರಣಿಗಳ ಮನಸ್ಸಿನಲ್ಲಿರುವ ಭಯ !
ಜೂನ್ ೨೦೨೩ ರಲ್ಲಿ ಧೀರೇಂದ್ರ ಶಾಸ್ತ್ರಿಯವರು ಬಿಹಾರ ದಲ್ಲಿ ಹನುಮಂತನ ಕಥಾವಾಚನ ಕಾರ್ಯಕ್ರಮವನ್ನು ಘೋಷಣೆ ಮಾಡಿದರು. ಆಗ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಹಾಗೂ ತೇಜಸ್ವಿ ಯಾದವರಂತಹ ರಾಜ ಕಾರಣಿಗಳು ಈ ಕಾರ್ಯಕ್ರಮವನ್ನು ವಿರೋಧಿಸಿ ಶಾಸ್ತ್ರಿಯವರ ಚರಿತ್ರೆಯನ್ನು ಕಳಂಕಿಸಲು ಪ್ರಯತ್ನಿಸಿದರು. ಆದರೂ ೨೭ ವರ್ಷದ ಧೀರೇಂದ್ರಶಾಸ್ತ್ರಿಯವರಿಗೆ ಬಿಹಾರದಲ್ಲಿ ಅಪಾರ ಪ್ರೋತ್ಸಾಹ ಸಿಕ್ಕಿತು. ಅವರ ಕಥೆ ಕೇಳಲು ಸುಮಾರು ೧೦ ಲಕ್ಷ ಜನಸಮೂಹ ಸೇರಿತ್ತು. ಆಗ ಧೀರೇಂದ್ರ ಶಾಸ್ತ್ರಿ ಇವರು ಜನರನ್ನು ಉದ್ದೇಶಿಸಿ ‘ಯಾರು ಮೊದಲ ದಿನ ಕಥೆ ಕೇಳಿದ್ದೀರೊ, ಅವರು ಮರುದಿನ ಪುನಃ ಬರದೆ ಇತರರಿಗೆ ಬರಲು ಅವಕಾಶ ಮಾಡಿಕೊಡಬೇಕೆಂದು ಕರೆ ನೀಡಿದರು. ನಾನು ಅವರ ಕಥೆಯ ಕಾರ್ಯಕ್ರಮವನ್ನು ವಾಹಿನಿಯ ಮೂಲಕ ನೋಡಿದೆ. ಅವರು ಉಳಿದುಕೊಂಡ ಹೊಟೇಲ್‌ನ ಮುಂದೆ ಕೂಡ ಜನಸಂದಣಿ ಇರುತ್ತಿತ್ತು. ಇದರಿಂದ ಶಾಸ್ತ್ರಿಯವರನ್ನು ತೀವ್ರವಾಗಿ ವಿರೋಧಿಸುವ ರಾಜಕಾರಣಿಗಳ ಮನಸ್ಸಿನಲ್ಲಿ ಭಯ ಹುಟ್ಟಿರಬಹುದು.
೩. ಧೀರೇಂದ್ರಶಾಸ್ತ್ರಿಯವರ ವೈಶಿಷ್ಟ್ಯ !
ಯಾರ ಶ್ರದ್ಧೆ ಉದ್ದೇಶಪೂರ್ವಕ ಅಥವಾ ತಿಳುವಳಿಕೆಯಿಲ್ಲದೆ ಕೆಳಮಟ್ಟಕ್ಕೆ ಹೋಗಿದೆಯೋ, ಅಂತಹ ಹಿಂದೂಗಳನ್ನು ಎಬ್ಬಿಸುವ ಕಾರ್ಯವನ್ನು ಧೀರೇಂದ್ರ ಶಾಸ್ತ್ರಿಯವರು ಮಾಡುತ್ತಿದ್ದಾರೆ. ಹಿಂದೂಗಳ ಶ್ರದ್ಧೆಯನ್ನು ಹೀನವೆಂದು ಪರಿಗಣಿಸುವವರಲ್ಲಿ ಹಿಂದೂ ಹೆಸರನ್ನಿಟ್ಟು ಕೊಂಡಿರುವ ಜನರೂ ಸೇರಿಕೊಂಡಿದ್ದಾರೆ. ಪ್ರಾಚೀನವಾಗಿರುವ ಹಿಂದೂ ಧರ್ಮದ ಪರವಾಗಿ ದೃಢವಾಗಿ ನಿಲ್ಲುವವರು ಯಾರಾದರೂ ಇರಬೇಕು, ಎಂಬುದು ಸಾಮಾನ್ಯ ಹಿಂದೂಗಳ ಉತ್ಕಟ ಇಚ್ಛೆಯಾಗಿತ್ತು. ಇಷ್ಟು ಮಾತ್ರವಲ್ಲ, ಧೀರೇಂದ್ರ ಶಾಸ್ತ್ರಿ ಯವರಲ್ಲಿ ಆಧ್ಯಾತ್ಮಿಕ ಶಕ್ತಿಯೂ ಇದೆ. ರಾಜಕಾರಣಿಗಳನ್ನು ಕಡೆಗಣಿಸಿ ಸತ್ಯವನ್ನೇ ಮುಂದಿಟ್ಟುಕೊಂಡು ಹಾಗೂ ಇತರ ಧರ್ಮಕ್ಕಿಂತ ಮಾನವತೆಗಾಗಿ ಹೆಚ್ಚು ಲಾಭದಾಯಕವಾಗಿರುವ ಹಿಂದೂ ಧರ್ಮದ ವಿಷಯದಲ್ಲಿ ಮಾತನಾಡುವವರು ಯಾರಾದರೂ ಇರಬೇಕು, ಎಂದು ಸಮಸ್ತ ಹಿಂದೂಗಳ ಇಚ್ಛೆಯಾಗಿತ್ತು. ‘ತಮ್ಮ ಬಳಿಗೆ ಬರುವ ವ್ಯಕ್ತಿಗಳು ತಮ್ಮ ಸಮಸ್ಯೆಗಳನ್ನು ಹೇಳುವ ಮೊದಲೇ ಅದನ್ನು ಗುರುತಿಸುವ ಅದ್ಭುತ ಶಕ್ತಿ ಹಾಗೂ ಆ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಅವರ ಆಶೀರ್ವಾದದ ಸಾಮರ್ಥ್ಯ ಇವೆಲ್ಲವೂ ಹನುಮಂತನ ಕೃಪೆಯಿಂದಲೇ ಆಗು ತ್ತಿದೆ’, ಎಂದು ಅವರು ದಾವೆ ಮಾಡುತ್ತಾರೆ. ಅದರಿಂದಲೇ ಈಗ ಅವರಿಗೆ ಎಲ್ಲ ಕಡೆಗಳಲ್ಲಿ ಪ್ರಸಿದ್ಧಿ ಸಿಕ್ಕಿದೆ.
೪. ಪಂಡಿತ ಧೀರೇಂದ್ರ ಶಾಸ್ತ್ರಿಯವರು ‘ಹಿಂದೂ ರಾಷ್ಟ್ರ’ ಮತ್ತು ‘ಘರವಾಪಸಿ’ಯ ವಿಷಯದಲ್ಲಿ ಬಹಿರಂಗವಾಗಿ ಮಾಡುತ್ತಿರುವ ಕಾರ್ಯ !
ಪಂಡಿತ ಧೀರೇಂದ್ರಶಾಸ್ತ್ರಿ ಇವರು ‘ಭಾರತ ಹಿಂದೂ ರಾಷ್ಟ್ರವಾಗಿತ್ತು, ಈಗ ಇದೆ ಹಾಗೂ ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರಲಿದೆ’, ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಹಾಗೂ ಅಧಿಕೃತವಾಗಿ ‘ಭಾರತವು ಹಿಂದೂ ರಾಷ್ಟ್ರವಾಗಬೇಕು’, ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಇದರ ಹೊರತು ‘ಭಾರತದ ಮೇಲೆ ಆಕ್ರಮಣ ಮಾಡಿದವರಿಂದಾಗಿ ಯಾವ ಹಿಂದೂಗಳು ಇಸ್ಲಾಮ್ ಮತ್ತು ಕ್ರೈಸ್ತ ಪಂಥವನ್ನು ಸ್ವೀಕರಿಸಿ ದ್ದಾರೋ, ಅವರು ಘರವಾಪಸಿ ಮಾಡಬೇಕು’, ಎಂದು ಕರೆ ನೀಡುತ್ತಿದ್ದಾರೆ. ಬಿಹಾರದ ನಂತರ ಗುಜರಾತದಲ್ಲಿನ ಕಥಾವಾಚನದ ಸಮಯದಲ್ಲಿ ಅವರು ಅಲ್ಲಿನ ಆದಿವಾಸಿ ಜನರಿಗೆ ‘ಕೇವಲ ಪ್ರಭು ಶ್ರೀರಾಮ ಮತ್ತು ಹನುಮಂತನ ಕಥೆ ಕೇಳಲು ಬರಬೇಡಿ. ಪ್ರಾಚೀನ ಪರಂಪರೆಯಿರುವ ಸ್ವಗೃಹಕ್ಕೆ ಹಿಂತಿರುಗಿ ಬನ್ನಿ’, ಎಂದು ಕರೆ ನೀಡಿದರು. ಇಲ್ಲಿ ಕ್ರೈಸ್ತ ಮಿಶನರಿಗಳು ಆದಿವಾಸಿಗಳನ್ನು ಜೀವನಾವಶ್ಯಕ ವಸ್ತುಗಳನ್ನು ನೀಡಿ ಹಾಗೂ ನರಕದ ಭೀತಿಯನ್ನು ತೋರಿಸಿ ಅಲ್ಲಿ ನುಸುಳಿದ್ದಾರೆ. ಆದ್ದರಿಂದ ಹೀಗೆ ಕರೆ ನೀಡುವುದು ಸಾರ್ಥಕವೆನಿಸುತ್ತದೆ; ಆದರೆ ಇಂದಿನ ವರೆಗೆ ಕೆಮೆರಾದ ಮುಂದೆ ಹೀಗೆ ಯಾರೂ ಕರೆ ನೀಡಿದವರಿಲ್ಲ. ಮೂಲ ಹಿಂದೂ ಧರ್ಮದವರಾಗಿರುವವರು ಹಾಗೂ ವಿಸ್ತಾರವಾದಿ ಧರ್ಮದ ನಕಾರಾತ್ಮಕ ಪರಿಣಾಮವನ್ನು ತಿಳಿದವರೂ ಇಂದಿನ ವರೆಗೆ ಏನೂ ಮಾತನಾಡುವುದಿಲ್ಲ, ಎಂಬುದು ವಿಚಿತ್ರವೆನಿಸುತ್ತದೆ. ಅನೇಕ ಮಹತ್ವದ ಕಾರಣಗಳಿಂದಾಗಿ ಹಿಂದೂ ಧರ್ಮವು ಶ್ರೇಷ್ಠವಾಗಿದೆ, ಇದರ ಕಾರಣವನ್ನು ನಾನು ನನ್ನ ಇನ್ನೊಂದು ಲೇಖನದಲ್ಲಿ ಕೊಟ್ಟಿದ್ದೇನೆ. ಅದೇ ರೀತಿ ‘ಕ್ರೈಸ್ತ ಮತ್ತು ಮುಸಲ್ಮಾನ ರಾಷ್ಟ್ರಗಳಿಗಿಂತ ಹಿಂದೂ ರಾಷ್ಟ್ರ ಹೆಚ್ಚು ಉತ್ತಮವಾಗಿದೆ’, ಎಂಬುದನ್ನು ನಾನು ನನ್ನ ಮತ್ತೊಂದು ಲೇಖನದಲ್ಲಿ ಬರೆದಿದ್ದೇನೆ. ಆದರೂ ತುಂಬಾ ಅನುಯಾಯಿ ಗಳಿರುವ, ಜಾಗತಿಕ ಸ್ತರದಲ್ಲಿ ಪ್ರಸಿದ್ಧರಾಗಿರುವ ಸ್ವಾಮಿಗಳು ಸಹ ಈ ರೀತಿ ಕರೆ ನೀಡಿಲ್ಲ. ತದ್ವಿರುದ್ಧ ‘ಕೆಲವೊಮ್ಮೆ ಕ್ರೈಸ್ತರು ಇನ್ನೂ ಒಳ್ಳೆಯ ಕ್ರೈಸ್ತರು ಹೇಗಾಗುವರು ಅಥವಾ ಮುಸಲ್ಮಾನರು ಇನ್ನೂ ಒಳ್ಳೆಯ ಮುಸಲ್ಮಾನರು ಹೇಗಾಗುವರು’, ಎಂಬುದನ್ನು ಅವರು ಪ್ರೋತ್ಸಾಹಿಸುತ್ತಾರೆ. ‘ಈ ಧರ್ಮಗಳಲ್ಲಿ ಕಟ್ಟರತೆ ಇರುವುದರಿಂದಲೇ ಹಿಂದೂ ಧರ್ಮಕ್ಕೆ ಅವು ಹೆಚ್ಚು ಅಪಾಯಕಾರಿಯಾಗಿದೆ, ಎಂಬುದು ಅವರಿಗೆ ಅರಿವಾಗುವು ದಿಲ್ಲ; ಈ ಜನರ ಧರ್ಮ ಅವರಿಗೆ ಹಿಂದೂಗಳನ್ನು ತಿರಸ್ಕರಿಸಲು ಕಲಿಸುತ್ತದೆ. ಬೈಬಲ್ ಮತ್ತು ಕುರಾನ್ ಈ ಗ್ರಂಥಕ್ಕನುಸಾರ ಹಿಂದೂಗಳೆಂದರೆ ‘ಕಾಫೀರ್’ (ಅಲ್ಲಾಹನನ್ನು ನಂಬದವರು) ಆಗಿದ್ದಾರೆ. ಹಿಂದೂ ಧರ್ಮದ ಸ್ವಾಮಿಗಳು ಮತಾಂತರ ವಾದವರನ್ನು ಪುನಃ ಹಿಂದೂ ಧರ್ಮಕ್ಕೆ ಬನ್ನಿರಿ’, ಎಂದು ಹೇಳಲು ಹಿಂಜರಿಯುವುದೇಕೆ ? ಅವರ ಮೇಲೆ ಇನ್ನೂ ವಸಾಹತುವಾದಿ ಮಾನಸಿಕತೆಯ ಪ್ರಭಾವವಿದೆಯೇ ? ಅಥವಾ ಹೀಗೆ ಕರೆ ನೀಡುವುದು ‘ಸೆಕ್ಯುಲರಿಸಮ್’ನ ವಿರುದ್ಧ ವಾಗಿದೆಯೆಂದು ಅವರಿಗೆ ಭಯವಾಗುತ್ತದೆಯೇ ?
೫. ಇಸ್ಲಾಮ್ ಮತ್ತು ಕ್ರೈಸ್ತರಿಂದಾಗುವ ದಬ್ಬಾಳಿಕೆ ಹಾಗೂ ಹಿಂದೂ ಧರ್ಮದ ಶ್ರೇಷ್ಠತೆ !
ದುರದೃಷ್ಟವಶಾತ್ ಭಾರತ ಸ್ವತಂತ್ರವಾದ ನಂತರ ಇಲ್ಲಿನ ರಾಜಕಾರಣ ಹಾಗೂ ಶೈಕ್ಷಣಿಕ ಪಠ್ಯಕ್ರಮ ಹಿಂದೂ ಪರಂಪರೆಗಿಂತ ಇತರ ಧರ್ಮಗಳಿಗೆ ಪೂರಕವಾಗಿದೆ. ಸ್ವತಂತ್ರ ಭಾರತದಲ್ಲಿ ಕಾನ್ವೆಂಟ್ ಶಾಲೆಗಳಿಗೆ ಕಲಿಸಲು ಅನುಮತಿ ನೀಡ ಲಾಯಿತು. ಬಹುಶಃ ಹಿಂದೂ ಆಡಳಿತದವರಿಗೆ ಕ್ರೈಸ್ತ ಶಿಕ್ಷಕ ಹಿಂದೂ ಧರ್ಮವನ್ನು ತಿರಸ್ಕರಿಸುತ್ತಾನೆ ಹಾಗೂ ಅವನು ಅದರ ಸಂದೇಶವನ್ನು ರಹಸ್ಯವಾಗಿ ಹಿಂದೂ ವಿದ್ಯಾರ್ಥಿಗಳಿಗೆ ತಲುಪಿಸುತ್ತಾನೆ, ಎಂಬುದು ತಿಳಿದಿಲ್ಲವೆನಿಸುತ್ತದೆ. ‘ಹಿಂದೂ ಧರ್ಮವೆಂದರೇನು ?’, ಎಂಬ ವಿಷಯದಲ್ಲಿ ಪ್ರವಚನ ಅಥವಾ ಹೆಚ್ಚು ಚರ್ಚೆಯಾಗುವುದು ಕಾಣಿಸುವುದಿಲ್ಲ. ವೇದಗಳಲ್ಲಿನ ‘ಈ ಜಗತ್ತಿನಲ್ಲಿ ಕಾಣಿಸುವ ವಿವಿಧ ವಿಷಯಗಳು ತಾತ್ಕಾಲಿಕವಾಗಿದೆ.
ಅನಂತಕಾಲ ಇರುವ ಬ್ರಹ್ಮನೆಂದರೆ ಶುದ್ಧ ಆನಂದವಾಗಿದೆ’, ಎಂಬ ಗಹನವಾದ ತತ್ತ್ವಜ್ಞಾನದ ವಿಷಯದಲ್ಲಿ ಚರ್ಚೆ ನಡೆಯು ವುದಿಲ್ಲ. ವೇದಗಳು ಕೇವಲ ಪಾಶ್ಚಿಮಾತ್ಯ ತತ್ತ್ವಜ್ಞಾನಿಗಳಿಗೆ ಮಾತ್ರವಲ್ಲ, ಅದು ಭೌತಿಕಶಾಸ್ತ್ರವನ್ನು ಅಭ್ಯಾಸಕರಾದ ವಿಜ್ಞಾನಿ ಗಳಿಗೂ ಪ್ರೇರಣೆ ನೀಡಿದೆ. ಆದರೂ ಭಾರತೀಯ ವಿದ್ಯಾರ್ಥಿಗಳಿಗೆ ‘ಹಿಂದೂ ಧರ್ಮವು ಅಬ್ರಾಹ್ಮಿಕ (ಬ್ರಹ್ಮನನ್ನು ನಂಬದಿರುವ ಅಂದರೆ ಇಸ್ಲಾಮ್, ಕ್ರೈಸ್ತ ಹಾಗೂ ಜ್ಯೂ) ಧರ್ಮಕ್ಕಿಂತ ಹೀನವಾಗಿದೆ’, ಎಂದು ಕಲಿಸಲಾಗುತ್ತದೆ. ಇಲ್ಲಿ ಮೋಸಗಾರಿಕೆಯಿಂದಾಗುವ ಮತಾಂತರವನ್ನು ಸಹಿಸಿಕೊಳ್ಳಲಾಗುತ್ತದೆ.
ಹೇಗೆ ಹೆಚ್ಚೆಚ್ಚು ಹಿಂದೂಗಳು ಸ್ವಧರ್ಮದ ವಿಷಯದಲ್ಲಿ ಉದಾಸೀನತೆ ತೋರಿಸಲು ಪ್ರಾರಂಭಿಸಿದರೊ, ಹಾಗೆಯೇ ಮಾನವೀ ಧರ್ಮಕ್ಕಾಗಿರುವ ಹಿಂದೂ ಧರ್ಮದ ಮಹತ್ವ ಕಡಿಮೆಯಾಗುತ್ತಾ ಹೋಯಿತು ಹಾಗೂ ಕೆಲವರು ಧರ್ಮವನ್ನೇ ಮರೆತರು. ಅವರು ಕೇವಲ ದೇವತೆಗಳ ಪೂಜೆ ಮಾಡುತ್ತಾ ಉಳಿದರು ಹಾಗೂ ಅಬ್ರಾಹ್ಮಿಕ ಧರ್ಮ ಏನು ಹೇಳುತ್ತದೋ, ಅದರ ಮೇಲೆ ವಿಶ್ವಾಸವಿಡಲು ಆರಂಭಿಸಿದರು. ಆದರೆ ಈಗ ಹಿಂದೂಗಳಲ್ಲಿ ಬದಲಾವಣೆಯಾಗುತ್ತಿದೆ ಹಾಗೂ ಇದರಲ್ಲಿ ಹಿಂದೂ ಯುವಕರ ಸಮಾವೇಶವಿದೆ. ವಿಭಜನೆಗೊಳಿಸುವ ಹಾಗೂ ತರ್ಕರಹಿತ ಮಾನಸಿಕತೆಯ ಇತರ ಪಂಥಗಳ ಕೊರತೆ ಗಳು ಅವರ ಗಮನಕ್ಕೆ ಬರುತ್ತಿವೆ. ಇತರ ಧರ್ಮಗಳು ಹೇಳು ತ್ತವೆ, ‘ನೀವು ನಮ್ಮ ದೇವರ ಮೇಲೆ ವಿಶ್ವಾಸವಿಡದಿದ್ದರೆ ನೀವು ಅನಂತ ಕಾಲ ನರಕದಲ್ಲಿರಬೇಕಾಗುತ್ತದೆ; ತದ್ವಿರುದ್ಧ ಸರ್ವಸಮಾವೇಶಕವಾಗಿರುವ ಹಿಂದೂ ಧರ್ಮ ಹೇಳುತ್ತದೆ, ‘ದೇವರ ಉದ್ಯಾನವನದಲ್ಲಿ ವಿವಿಧ ಹೂವುಗಳಿವೆ ಹಾಗೂ ದೇವರಲ್ಲಿಗೆ ಹೋಗುವ ವಿವಿಧ ಮಾರ್ಗಗಳಿವೆ. ಅವುಗಳು ಯಾರನ್ನೂ ನರಕಕ್ಕೆ ಹೋಗಲು ಬಿಡುವುದಿಲ್ಲ.’ ವಾಸ್ತವದಲ್ಲಿ ಎಲ್ಲರೂ ದೇವರಲ್ಲಿಯೇ ಸಮಾವೇಶವಾಗಿದ್ದಾರೆ ಹಾಗೂ ಪ್ರತಿಯೊಬ್ಬರಿಗೂ ಜನ್ಮಜನ್ಮಾಂತರದಲ್ಲಿ ಅವಕಾಶವನ್ನು ನೀಡ ಲಾಗುತ್ತದೆ. ಭಾರತ ‘ಕ್ರೈಸ್ತ ರಾಷ್ಟ್ರವಾಗಬೇಕು’, ಎಂದು ಕ್ರೈಸ್ತರಿಂದ, ಮುಸಲ್ಮಾನ ಸಂಘಟನೆಗಳಿಂದ ಭಾರತವನ್ನು ‘ಇಸ್ಲಾಂ ರಾಷ್ಟ್ರ’ವನ್ನಾಗಿಸುವ ನಿಯೋಜನೆಯಾಗುತ್ತಿದೆÉ. ತಮ್ಮ ಧರ್ಮವನ್ನು ಹಿಂದೂಗಳ ಮೇಲೆ ಹೇರುವುದೇ ಅವರ ಏಕೈಕ ಉದ್ದೇಶವಾಗಿದೆ; ಏಕೆಂದರೆ ಅದು ‘ಅವರ ದೇವರ ಹುಕೂಮ್ ಆಗಿದೆ’, ಎಂಬುದು ಅವರ ವಿಶ್ವಾಸವಾಗಿದೆ. ತಮ್ಮ ಧರ್ಮದ ಸಂಸ್ಥಾಪಕನು ಸಿದ್ಧಪಡಿಸಿದ ಧರ್ಮವನ್ನೇ ಇತರ ಧರ್ಮದವರು ಪಾಲಿಸಬೇಕೆಂದು ಸೃಷ್ಟಿಯ ನಿರ್ಮಾಪಕನಿಗೆ ಅನಿಸುತ್ತದೆ’, ಎಂಬುದು ಅವರ ದಾವೆ (ಇದಕ್ಕೆ ಯಾವುದೇ ಪುರಾವೆಯಿಲ್ಲ.) ಹಾಗೂ ‘ಒಂದು ವೇಳೆ ಅವರು ಧರ್ಮವನ್ನು ಪಾಲಿಸದಿದ್ದರೆ, ಸೃಷ್ಟಿಯ ನಿರ್ಮಾಪಕನು ಅವರನ್ನು ನರಕಕ್ಕೆ ತಳ್ಳುತ್ತಾನೆ’, ಎಂಬುದು ಅವರ ವಿಶ್ವಾಸವಾಗಿದೆ. ‘ಪ್ರಾಚೀನ ಹಿಂದೂ ಧರ್ಮ ಉರುಳುವುದು’, ಎಂಬ ನಿರಾಧಾರ ದಾವೆ ಹೂಡುವವರಿಗೆ ಸವಾಲೊಡ್ಡುವ ಅವಶ್ಯಕತೆಯಿದೆ.
೬. ಪಂಡಿತ ಧೀರೇಂದ್ರ ಶಾಸ್ತ್ರಿ ಮಾಡುತ್ತಿರುವ ಕಾರ್ಯವು ಕಾಲಕ್ಕೆ ಪೂರಕವಾಗಿದೆ !
‘ನಮ್ಮ ನಿರ್ಮಾಪಕನಾದ ಈಶ್ವರನು ನಮ್ಮಲ್ಲಿ ಕೋಟ್ಯಾವಧಿ ಜನರನ್ನು ನರಕಕ್ಕೆ ತಳ್ಳಿ ಯಾವುದೋ ಪುಸ್ತಕದ ಮೇಲೆ ವಿಶ್ವಾಸವಿಡುವವರನ್ನು ಮಾತ್ರ ಕಾಪಾಡುತ್ತಾನೆ’, ಎಂದಾಗಲು ಸಾಧ್ಯವಿದೆಯೇ ? ಇದರ ಹೊರತು ಕ್ರೈಸ್ತ ಹಾಗೂ ಇಸ್ಲಾಮ್ ಧರ್ಮದ ಬೈಬಲ್ ಆಥವಾ ಕುರಾನ್ ಈ ಗ್ರಂಥಗಳಲ್ಲಿ ಯಾವ ಧರ್ಮಗ್ರಂಥ ನರಕದಿಂದ ರಕ್ಷಿಸಬಹುದು ? ಎಂಬುದನ್ನು ಸಹ ಈ ಧರ್ಮಗಳು ನಿರ್ಧರಿಸಿಲ್ಲ. ಆದರೂ ಈಗ ಭಾರತ ಹಾಗೂ ಸಂಪೂರ್ಣ ಜಗತ್ತನ್ನು ಹಿಂಸಾಚಾರ ಹಾಗೂ ನೈತಿಕ ಅವನತಿಯ ದುಷ್ಟಚಕ್ರದಿಂದ ರಕ್ಷಿಸಲು ಹಿಂದೂ ಧರ್ಮವನ್ನು ಸಕ್ಷಮಗೊಳಿಸುವ ತುರ್ತು ಅವಶ್ಯಕತೆಯಿದೆ. ಇಲ್ಲದಿದ್ದರೆ ಕ್ರೈಸ್ತ ಹಾಗೂ ಇಸ್ಲಾಮ್ ಧರ್ಮದವರ ಪೃಥ್ವಿಯ ಮೇಲಿಂದ ಹಿಂದೂ ಧರ್ಮವನ್ನು ನಾಶಗೊಳಿಸುವ ಧ್ಯೇಯ ಸಾಧ್ಯವಾಗುವುದು ಹಾಗೂ ಅದು ಸಂಪೂರ್ಣ ಮಾನವಜಾತಿಗೆ ಕಂಟಕವಾಗಬಹುದು. ಆದ್ದರಿಂದ ಭಾರತದ ಹಿಂದೂಗಳು ಉಳಿಯಬೇಕಾದರೆ ಯಾರು ಮತಾಂತರವಾಗಿದ್ದಾರೆಯೋ, ಅವರು ಆ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡುವುದು ಆವಶ್ಯಕವಾಗಿದೆ. ಆದ್ದರಿಂದ ಪಂಡಿತ ಧೀರೇಂದ್ರ ಶಾಸ್ತ್ರಿ ಹಿಂದೂ ರಾಷ್ಟ್ರ ಹಾಗೂ ಘರ್‌ವಾಪಸಿಗಾಗಿ ನೀಡುತ್ತಿರುವ ಕರೆಯು ಕಾಲಕ್ಕನುಸಾರ ಶುದ್ಧ ವಾತಾವರಣದಲ್ಲಿ ವಾಯುವಿಹಾರ ಮಾಡಿದಷ್ಟು ಯೋಗ್ಯವೆನಿಸುತ್ತದೆ. ಆದರೂ ಇನ್ನೊಂದು ಸಮಸ್ಯೆಯನ್ನು ನಿವಾರಿಸುವ ಅವಶ್ಯಕತೆಯಿದೆ. ಋಷಿಮುನಿಗಳು ಗಳಿಸಿದ ಜ್ಞಾನವನ್ನು ಪುನಃ ಸಾಮಾನ್ಯ ಜನರಿಗೆ ತಲುಪಿಸಬೇಕು. ‘ಹಿಂದೂ ಧರ್ಮ ನಿಜವಾಗಿಯೂ ಶ್ರೇಷ್ಠವಾಗಿದೆ’, ಎಂಬುದು ಯಾವಾಗ ಸ್ಪಷ್ಟವಾಗುವುದೋ, ಆಗ ಮತಾಂತರವಾದವರಿಗೆ ಹಿಂತಿರುಗÀÄವ ಇಚ್ಛೆಯಾಗುವುದು. ಪಂಡಿತ ಧೀರೇಂದ್ರ ಶಾಸ್ತ್ರಿಯವರು ಇದನ್ನೇ ಮಾಡುತ್ತಿದ್ದಾರೆ.
೭. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ವಿರುದ್ಧ ಷಡ್ಯಂತ್ರ ರಚಿಸುವ ಸಾಧ್ಯತೆ !
‘ಸತ್ಯದ ಶೋಧನೆಯಲ್ಲಿರುವ ನಮ್ಮ ಮೇಲೆ ಮಾಯೆ ಹೇಗೆ ಆವರಣವನ್ನು ತರುತ್ತದೆ ?’, ಎಂಬುದನ್ನು ಅವರು ಸಹಜ ಸುಲಭ ಭಾಷೆಯಲ್ಲಿ ಹೇಳುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಸರ್ವಶ್ರೇಷ್ಠವಾದ ಜ್ಞಾನವಿದೆ. ‘ವಿಶೇಷವಾಗಿ ಪ್ರತಿಯೊಬ್ಬರ ಆತ್ಮವು ಅನಂತನಾಗಿರುವ ಈಶ್ವರ ಅಥವಾ ಬ್ರಹ್ಮನೊಂದಿಗೆ ಏಕರೂಪವಾಗುತ್ತದೆ’, ಎಂದು ಹಿಂದೂ ತತ್ತ್ವಜ್ಞಾನವು ಹೇಳು ತ್ತದೆ. ಯಾರು ಮಾನವ ಜಾತಿಯನ್ನು ನಿಯಂತ್ರಿಸಲು ಇಚ್ಛಿಸು ತ್ತಾರೆಯೋ, ಅವರಿಗೆ ಈ ಜ್ಞಾನ ಸಾಮಾನ್ಯ ಜನರಿಗೆ ತಲುಪ ಬಾರದೆಂದು ಅನಿಸುತ್ತದೆ; ಏಕೆಂದರೆ ‘ಅವನಿಗೆ ಜ್ಞಾನ ಲಭಿಸಿದರೆ ಅವನು ಭಯಮುಕ್ತನಾಗುವನು ಹಾಗೂ ನಿಯಂತ್ರಣದಲ್ಲಿ ಇರುವುದಿಲ್ಲ’, ಎಂದು ಅವರಿಗೆ ಅನಿಸುತ್ತದೆ. ಇಂತಹ ಜನರಲ್ಲಿ ತುಂಬಾ ಶಕ್ತಿಯಿದೆ. ಅದೇ ರೀತಿ ಮುಖ್ಯ ಪ್ರಸಿದ್ಧಿ ಮಾಧ್ಯಮಗಳು ಅವರ ಮುಷ್ಟಿಯಲ್ಲಿವೆ. ಆದ್ದರಿಂದ ಈ ಯುವ ಸ್ವಾಮಿಯವರ ವಿರುದ್ಧ ಸುಳ್ಳು ಆರೋಪವನ್ನು ಹರಡಿಸಬಹುದು. ಹೀಗೆ ಅನ್ಯಾಯಕ್ಕೊಳಗಾಗುವವರು ಅವರು ಒಬ್ಬರೇ ಅಲ್ಲ. ‘ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ತಮ್ಮ ವಿರುದ್ಧದ ಅಪಪ್ರಚಾರ ವನ್ನು ಸಹಿಸಿಕೊಳ್ಳಬೇಕಾಯಿತು. ಹನುಮಂತನ ಕೃಪೆಯಿಂದ ಹಾಗೇನೂ ಆಗಲಿಕ್ಕಿಲ್ಲ ಹಾಗೂ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಅನಂತವಾಗಿರುವ ಹಿಂದೂ ಧಮದ ಪ್ರಚಾರ ಮಾಡುವುದರಲ್ಲಿ ಯಶಸ್ವಿಯಾಗುವರು’, ಎಂದು ಆಶಿಸೋಣ.
ಲೇಖಕಿ : ಮಾರಿಯಾ ವರ್ಥ