ಆಗಸ್ಟ್ ೧೧ ರಂದು ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿ ಕೇಂದ್ರ ಸರಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಈಗ ಅದರಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು. ‘ಬ್ರಿಟಿಷರು ಕಾನೂನುಗಳ ಮೂಲಕ ಕೇವಲ ದಂಡ ವಿಧಿಸುವ ಕೆಲಸ ಮಾಡಿದ್ದರು; ಆದರೆ ಈಗ ಹೊಸ ಬದಲಾವಣೆಗಳ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರು ಹೇಳಿದ್ದಾರೆ. ಪ್ರಸ್ತಾಪಿತ ಕಾನೂನುಗಳಲ್ಲಿ ಹಲವಾರು ವೈಶಿಷ್ಟ್ಯಗಳಿವೆ; ಆದರೆ ಅದರಲ್ಲಿ ‘ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡುವವರಿಗೆ ಗಲ್ಲುಶಿಕ್ಷೆ, ಗುರುತನ್ನು ಮರೆಮಾಚಿ ಲೈಂಗಿಕ ಸಂಬಂಧ ಇಟ್ಟುಕೊಂಡರೆ ಅಪರಾಧವೆಂದು ನಿರ್ಧರಿಸುವುದು, ಮದುವೆ ಆಮಿಷ ತೋರಿಸಿ ಅಥವಾ ವಂಚಿಸಿ ಲೈಂಗಿಕ ಸಂಬಂಧ ಇಟ್ಟುಕೊಂಡರೆ ಶಿಕ್ಷೆ’ ಮುಂತಾದ ಅಂಶಗಳು ಅಷ್ಟೇ ಮಹತ್ವದ್ದು, ಗಮನ ಸೆಳೆಯುವಂತಹದ್ದು ಮತ್ತು ದೇಶದ ಭದ್ರತೆಗೆ ಆವಶ್ಯಕವಾಗಿವೆ. ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ಆರೋಪಿಗಳನ್ನು ಬಂಧಿಸಲಾಗುತ್ತದೆ ಮತ್ತು ಸ್ವಲ್ಪ ಸಮಯದ ಬಳಿಕ ಅವರು ಜಾಮೀನಿನಲ್ಲಿ ಹೊರಗೆ ಬರುತ್ತಾರೆ. ಅಂದರೆ ಅವರು ಮತ್ತೆ ಅತ್ಯಾಚಾರ ನಡೆಸಲು ಮುಕ್ತನಾಗುತ್ತಾರೆ. ‘ಈ ಸರಪಳಿ ಯಾವಾಗ ಮುರಿಯುತ್ತದೆ ? ಅದನ್ನು ಯಾರು ಮುರಿಯುತ್ತಾರೆ? ಇದನ್ನು ನಿಯಂತ್ರಿಸುವವರಾರು?’, ಇಂತಹ ಒಂದಲ್ಲ ಅನೇಕ ಪ್ರಶ್ನೆಗಳಿಗೆ ಮಹಿಳೆಯರು ಉತ್ತರಗಳನ್ನು ಹುಡುಕುತ್ತಿದ್ದಾರೆ; ಆದರೆ ಈಗ ಈ ಹೊಸ ಬದಲಾವಣೆಯ ಮೂಲಕ ಮಹಿಳೆಯರಿಗೆ ಸಮಾಧಾನ ನೀಡುವ ಸರಕಾರದ ಪ್ರಯತ್ನ ಖಂಡಿತವಾಗಿಯೂ ಸ್ತುತ್ಯರ್ಹ ಮತ್ತು ಆಶಾದಾಯಕವಾಗಿದೆ. ಇಲ್ಲಿಯವರೆಗೆ ಹಲವು ಪ್ರಕರಣಗಳಲ್ಲಿ ಮಹಿಳೆಯರನ್ನು ವಂಚಿಸಿ, ಅವರನ್ನು ದುರುಪಯೋಗಿಸಿ ಕೊಳ್ಳಲಾಗುತ್ತಿತ್ತು ಮತ್ತು ಈಗಲೂ ಆಗುತ್ತಿದೆ. ಅರ್ಥಾತ್ ಇಂತಹ ಕೃತ್ಯಗಳನ್ನು ಯಾವ ಸಮಾಜ ಮಾಡುತ್ತದೆ? ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಘಟನೆಗಳನ್ನು ವ್ಯಾಪಕವಾಗಿ ನಡೆಸಿ, ಮತಾಂಧರು ದೇಶದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಮಕ್ಕಳನ್ನು ತಮ್ಮ ಕಾಮತೃಷೆಗೆ ಬಲಿಪಶುಗಳನ್ನಾಗಿ ಮಾಡಿಕೊಂಡಿದ್ದಾರೆ. ಇದೆಲ್ಲವೂ ’ಲವ್ ಜಿಹಾದ್’ನಲ್ಲಿ ಅಂತ್ಯಗೊಳ್ಳುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ಚೆನ್ನಾಗಿ ತಿಳಿದಿದ್ದರೂ, ‘ಇಷ್ಟು ವರ್ಷಗಳಿಂದ ಈ ಅಂಶವನ್ನು ಸರಕಾರ ಸ್ವಲ್ಪಮಟ್ಟಿಗೆ ನಿರ್ಲಕ್ಷಿಸಿತ್ತು’ ಎಂದು ಹಿಂದೂಗಳಿಗೆ ಅನಿಸುತ್ತಿತ್ತು. ಆದರೆ ಈಗ ‘ಇದೆಲ್ಲ ಎಲ್ಲೋ ಒಂದುಕಡೆ ಮುಗಿಯಲಿದೆ’ ಎಂದು ಅವರಿಗೆ ಅನಿಸುತ್ತದೆ. ಒಂದು ಪ್ರಮುಖ ಅಂತಾರಾಷ್ಟ್ರೀಯ ಷಡ್ಯಂತ್ರದ ವಿರುದ್ಧ ತೆಗೆದುಕೊಂಡ ಹೆಜ್ಜೆ ನಿಸ್ಸಂದೇಹವಾಗಿ ಮಹತ್ವದ್ದಾಗಲಿದೆ. ಇದರಲ್ಲಿ ಸಂಶಯವೇ ಇಲ್ಲ. ಈ ಹಿಂದೆ ಕೆಲವು ಅಪರಾಧಗಳು ಅತ್ಯಾಚಾರ ಸಂಬಂಧಿತ ಕಾನೂನಿನ ವ್ಯಾಪ್ತಿಗೆ ಬರುತ್ತಿರಲಿಲ್ಲ. ಹಾಗಾಗಿ ಅವರಿಗೆ ತಕ್ಕ ಶಿಕ್ಷೆಯಾಗುತ್ತಿರಲಿಲ್ಲ. ಈಗ ಮೇಲಿನ ರೀತಿಯ ಅಪರಾಧಗಳನ್ನು ಮೊದಲ ಬಾರಿಗೆ ಕಾನೂನಿನ ಪರಿಧಿಯಲ್ಲಿ ತಂದಿರುವುದರಿಂದ ಈ ಮೂಲಕ ಅವರ ಮೇಲೆ ಸಹಜವಾಗಿಯೇ ಕಡಿವಾಣ ಬರಲಿದೆ. ‘ಗಲ್ಲುಶಿಕ್ಷೆ, ಮರಣದಂಡನೆಗಳಂತಹ ಶಿಕ್ಷೆಯ ಭಯದಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಆಶಿಸುವುದರಲ್ಲಿ ತಪ್ಪೇನಿಲ್ಲ. ಹೊಸ ಮಸೂದೆಯಲ್ಲಿ ಭಯೋತ್ಪಾದನೆಯ ವ್ಯಾಖ್ಯೆಯನ್ನು ನೀಡಲಾಗಿದ್ದು ಭಯೋತ್ಪಾದಕರ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಏರ್ಪಾಡನ್ನು ಸಹ ಮಾಡಲಾಗಿದೆ. ‘ಎಲ್ಲ ಶಿಕ್ಷೆಗಳನ್ನು ಆದಷ್ಟು ಬೇಗನೆ ಜಾರಿಗೊಳಿಸುವ ಮೂಲಕ ಸರಕಾರ ಜನತೆಗೆ ಸುರಕ್ಷಿತ ಹಾಗೂ ಸಮಾಧಾನದ ವಾತಾವರಣವನ್ನು ಕಲ್ಪಿಸಬೇಕು’ ಎಂಬುದು ಜನರ ಆಗ್ರಹವಾಗಿದೆ.
ಬ್ರಿಟಿಷ್ ರ ಬಗ್ಗೆ ಏಕೆ ಒಲವು ?
ಬ್ರಿಟಿಷರ ಗುಲಾಮಗಿರಿಯ ಹೆಜ್ಜೆಗುರುತುಗಳನ್ನು ಅಳಿಸಿ ಹಾಕುವ ಸರಕಾರದ ಪ್ರಯತ್ನಗಳು ಸ್ತುತ್ಯರ್ಹವಾಗಿವೆ. ಎಷ್ಟು ಕಾಲ ನಾವು ಬ್ರಿಟಿಷರ ವ್ಯವಸ್ಥೆಯಲ್ಲಿರುವುದು? ಇದಕ್ಕೂ ಕೆಲವು ಇತಿಮಿತಿಗಳಿರುತ್ತವೆ; ಆದರೆ ಅದನ್ನು ಉಲ್ಲಂಘಿಸಲು ಈಗ ಕೇಂದ್ರ ಸರಕಾರ ಪ್ರಯತ್ನಿಸಿದೆ. ಅರ್ಥಾತ್ ಸರಕಾರ ಪರಿಣಾಮಕಾರಿ ಹೆಜ್ಜೆ ಇಟ್ಟರೆ, ಅದಕ್ಕೆ ವಿರೋಧ ವ್ಯಕ್ತವಾಗದಿದ್ದರೆ, ಬಹಳ ಆಶ್ಚರ್ಯವೇ ಪಡಬೇಕಾಗುವುದು! ಅದೇ ರೀತಿ ಈ ಸಲವೂ ಅನೇಕ ಜನರು ಕಾನೂನಿನಲ್ಲಿ ಆಗಿರುವ ಬದಲಾವಣೆಗಳನ್ನು ಸ್ವಾಗತಿಸುವ ಬದಲು ವಿರೋಧಿಸುವ ಮೂಲಕ ತಮ್ಮಲ್ಲಿರುವ ಭಾರತ ದ್ವೇಷ ಮತ್ತು ಬ್ರಿಟಿಷರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಯಾರಿಗೆ ಬ್ರಿಟಿಷರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆಯೋ, ಅವರು ಭಾರತದಲ್ಲಿ ವಾಸಿಸುವುದಾದರೂ ಏಕೆ? ಅಂತಹ ಜನರು ಭಾರತದಲ್ಲಿ ಉಳಿಯದಿರುವುದೇ ಒಳ್ಳೆಯದು! ಯಾವುದೇ ಪರಿವರ್ತನೆಯು ಈ ಹೆಸರಿನಿಂದಾಗಿಯೇ ಪ್ರಾರಂಭವಾಗುತ್ತದೆ. ಹೆಸರನ್ನು ಬದಲಾಯಿಸಿದ ತಕ್ಷಣ ಪರಿವರ್ತನೆಯಾಗ ತೊಡಗುತ್ತದೆ. ನಮ್ಮ ರಾಷ್ಟ್ರ ಭಾಷೆ ಹಿಂದಿಯಾಗಿದ್ದರೂ ಕಾನೂನುಗಳಿಗೆ ಹಿಂದಿಯಲ್ಲಿ ಹೆಸರಿಟ್ಟಾಗ ಸರಕಾರವನ್ನು ವಿರೋಧಿಸಲಾಗುತ್ತದೆ. ‘ಹಿಂದಿಯನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ’ ಎಂದು ಕೋಲಾಹಲವೆಬ್ಬಿಸಿ ತಮ್ಮಅಸ್ತಿತ್ವ ಅಪಾಯದಲ್ಲಿದೆಯೆಂದು ಸುಖಾಸುಮ್ಮನೆ ಗದ್ದಲ ಮಾಡಲಾಗುತ್ತದೆ ಮತ್ತು ಬ್ರಿಟಿಷರ ‘ಇಂಗ್ಲಿಷ್’ ಮೇಲೆ ಮಾತ್ರ ಪ್ರೀತಿಯ ಸುರಿಮಳೆಯಾಗುತ್ತದೆ. ಇದು ಸರಕಾರದ ವಿರುದ್ಧದ ಷಡ್ಯಂತ್ರವಾಗಿದೆ. ಈ ಮೊದಲು ದೇಶದ ರಸ್ತೆಗಳು, ನಗರಗಳು ಮತ್ತು ಜಿಲ್ಲೆಗಳಿಗೆ ಮೊಘಲರ ಹೆಸರನ್ನು ಇಡಲಾಯಿತು, ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಯಿತು, ಆಗ ಅಂತಹ ಘಟನೆಗಳನ್ನು ಪ್ರತಿಪಕ್ಷಗಳು ಯಾವತ್ತೂ ವಿರೋಧಿಸಲಿಲ್ಲ. ‘ಮೊಗಲರು, ಕ್ರೈಸ್ತರು ಅಥವಾ ಬ್ರಿಟಿಷರು ನಡೆಯುತ್ತದೆ; ಆದರೆ ನಾವು ಎಂದಿಗೂ ನಿಜವಾದ ಭಾರತೀಯರಾಗುವುದೇ ಇಲ್ಲ’ ಎಂದು ಇಂತಹ ದ್ವೇಷಿಗಳು ಪ್ರತಿಜ್ಞೆಯನ್ನೇ ಮಾಡಿರುವಂತೆ ತೋರುತ್ತದೆ. ಭಾರತದಲ್ಲಿ ಆಂಗ್ಲೀಕರಣವು ಸಾರಾಸಗಟಾಗಿ ಬೇಕು; ಆದರೆ ಹಿಂದಿಕರಣ, ಮರಾಠಿಕರಣ, ಕನ್ನಡಿಕರಣ, ಭಾರತೀಕರಣವನ್ನು ಮಾತ್ರ ವಿರೋಧಿಸುತ್ತಿರುವುದು ಮಾತ್ರ ವಿಪರ್ಯಾಸವೇ !
ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಕೂಡಲೇ ಎಲ್ಲೆಡೆ ಮೇಣದಬತ್ತಿಯ ಮೆರವಣಿಗೆಗಳು ಮತ್ತು ಸರಕಾರದ ವಿರುದ್ಧ ಘೋಷಣೆಗಳು ನಡೆಯುತ್ತವೆ; ಆದರೆ ಸರಕಾರ ಅತ್ಯಾಚಾರದ ವಿರುದ್ಧ ಒಂದು ಹೆಜ್ಜೆ ಇಟ್ಟರೂ ಅಥವಾ ಒಂದು ಅಭಿಯಾನವನ್ನು ಕೈಗೊಂಡರೂ, ಅದನ್ನು ಸ್ವಾಗತಿಸುವವರು ಕೈಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ. ಸರಕಾರವು ಈ ಕಾನೂನುಗಳನ್ನು ಬದಲಾಯಿಸಲು ೪ ವರ್ಷಗಳ ಕಾಲ ಅಧ್ಯಯನಶೀಲ ಕಾನೂನು ತಜ್ಞ ವ್ಯಕ್ತಿಗಳ, ಜವಾಬ್ದಾರಿಯುತ ಅಧಿಕಾರಿಗಳ ಮತ್ತು ಪ್ರಮುಖ ಹುದ್ದೆಯಲ್ಲಿರುವ ಜನರ ಸಹಾಯವನ್ನು ತೆಗೆದುಕೊಂಡಿತು, ೧೫೮ ಸಭೆಗಳನ್ನು ನಡೆಸಿ ಅವುಗಳ ಮಾಧ್ಯಮದಿಂದ ಅವುಗಳ ಉಪಯೋಗ/ ದುರುಪಯೋಗಗಳ ಬಗ್ಗೆ ಶ್ರಮ ವಹಿಸಿ ಸರಕಾರದಿಂದ ರಚಿಸಲಾಗಿರುವ ಕಾನೂನುಜಗತ್ತಿಗೆ ಸಂಬಂಧಿತ ಈ ನಿರ್ಧಾರ ಹೇಗೆ ತಪ್ಪಾಗುತ್ತದೆ? ಎನ್ನುವ ಬಗ್ಗೆಯೂ ವಿರೋಧಿಗಳೂ ವಿಚಾರ ಮಾಡಬೇಕು. ಕೇವಲ ವಿರೋಧಕ್ಕಾಗಿ ವಿರೋಧಿಸಿ, ಭಾರತೀಯತೆಯನ್ನು ಅವಮಾನಿಸುತ್ತಾ ಎಷ್ಟು ಕಾಲ ಭಾರತದ್ವೇಷಿಯಾಗಿ ಇರುವರು?
ಅಭಿವೃದ್ಧಿಹೊಂದುತ್ತಿರುವುದರಿಂದ ಅಭಿವೃದ್ಧಿಯ ಕಡೆಗೆ! (ವಿಕಾಸಶೀಲದಿಂದ ವಿಕಸನದೆಡೆಗೆ)
ವಿಕಾಸಶೀಲದಿಂದ ಅಭಿವೃದ್ಧಿಯತ್ತ ಸಾಗುತ್ತಿರುವ ಆರ್ಥಿಕವ್ಯವಸ್ಥೆಯಲ್ಲಿಯೂ ಪ್ರಗತಿಪಥದಲ್ಲಿರುವ ಭಾರತವು ಅಪರಾಧ ಜಗತ್ತಿನ ಕಾರಣದಿಂದ ಹಿಂದುಳಿದು ಪದೇಪದೇ ಕಳಂಕಿತವಾಗುತ್ತಿದೆ. ದೇಶಕ್ಕೆ ತಗುಲಿದ ಅಪರಾಧದ ಕಪ್ಪು ಚುಕ್ಕೆಯನ್ನು ನಿವಾರಿಸಲು ಎಲ್ಲರೂ ಮುಂದಾಗಬೇಕು. ಬದಲಾವಣೆಯ ಮುಂಜಾವು ಆರಂಭವಾಗಿದೆ. ಈ ಮಾರ್ಗಕ್ರಮಣದಲ್ಲಿ ಪ್ರತಿಯೊಬ್ಬ ನಾಗರಿಕನೂ ಭಾಗವಹಿಸಬೇಕು. ಕೇಂದ್ರ ಸರಕಾರವು ಈ ಎಲ್ಲ ಕ್ರಮಗಳನ್ನು ಮೊದಲೇ ತೆಗೆದುಕೊಳ್ಳಬೇಕಿತ್ತು ಎನ್ನುವುದೂ ಅಷ್ಟೇ ಸತ್ಯವಾಗಿದೆ; ಆದರೆ ಈಗ ತಡವಾಗಿಯಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಇನ್ನೂ ದೇಶದ ಹಿತಕ್ಕೆ ಸಂಬಂಧಿಸಿದ; ಆದರೆ ನಿರ್ಲಕ್ಷಿಸಿರುವ ಯಾವುದೇ ನಿರ್ಧಾರಗಳು ಬಾಕಿ ಉಳಿದಿದ್ದರೂ, ಸರಕಾರ ಅವುಗಳತ್ತ ಗಮನ ಹರಿಸಬೇಕು ಮತ್ತು ಭಾರತವು ಸಮಸ್ಯೆಗಳಿಂದ ಮುಕ್ತವಾಗಿರುವ ಹಿಂದೂ ರಾಷ್ಟ್ರದತ್ತ ಸಾಗಬೇಕು’ ಎಂದು ಪ್ರಜ್ಞಾವಂತ ನಾಗರಿಕರಿಗೆ ಅನಿಸುತ್ತದೆ. ಹೊಸ ಬದಲಾವಣೆಯನ್ನು ಸ್ವಾಗತಿಸಿ, ಅದರೊಂದಿಗೆ ಸಾಗೋಣ ಮತ್ತು ಅಪರಾಧ ಮುಕ್ತ ಭಾರತವನ್ನು ರಚಿಸೋಣ!
ಭಾರತದಲ್ಲಿ ಹಿಂದಿಕರಣ, ಮರಾಠಿಕರಣ,ಕನ್ನಡಿಕರಣ ಮತ್ತು ಭಾರತಿಕರಣಗಳನ್ನು ವಿರೋಧಿಸುವುದು ಮತ್ತು ಆಂಗ್ಲಭಾಷೆಯನ್ನು ಓಲೈಸುವುದು ದುರದೃಷ್ಟಕರವಾಗಿದೆ!