೧. ಮೃತ್ಯುಪತ್ರದಲ್ಲಿನ ಲೋಪಗಳಿಂದಾಗಿ ಆಗುವ ತೊಂದರೆ
‘ಮೃತ್ಯು ಪತ್ರ’ದ ವಿಷಯದಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ಮಾತು ನಿಂತಾಗ, ಅವನ ಮೃತ್ಯುಪತ್ರ ಮಾತನಾಡಲು ಪ್ರಾರಂಭಿಸುತ್ತದೆ ಎನ್ನುತ್ತಾರೆ. ಮೃತ್ಯುಪತ್ರ ಏನು ಮಾತನಾಡುತ್ತದೆ ? ಅಂದರೆ ಅದರಲ್ಲಿ ಏನು ಬರೆಯಲಾಗಿದೆಯೋ ಅದನ್ನು ಓದಿ ಹೇಳಲಾಗುತ್ತದೆ. ಇದರಿಂದ ಗಡಿಬಿಡಿಯಲ್ಲಿ ಅದರಲ್ಲಿ ಏನಾದರೂ ತಪ್ಪುಗಳಾದರೆ ಮತ್ತು ಕರಡುಪ್ರತಿಯನ್ನು ಸಿದ್ಧಪಡಿಸುವಾಗ ಮಹತ್ವದ ವಿಷಯಗಳ ವಿವರಗಳನ್ನೇ ಅದರಲ್ಲಿ ಬರೆಯದಿದ್ದರೆ, ಅದೇ ಮೃತ್ಯುಪತ್ರ ತಪ್ಪು ವಿವರಗಳನ್ನು ಹೇಳಲು ಪ್ರಾರಂಭಿಸುತ್ತದೆ; ಆದರೆ ಅಲ್ಲಿಯವರೆಗೆ ಆ ವಿಷಯಗಳು ಗಮನಕ್ಕೆ ಬಾರದೇ ಇದ್ದಿದ್ದರಿಂದ ಬಹಳ ತಡವಾಗಿರುತ್ತದೆ. ಮೃತ್ಯುಪತ್ರ ಬರೆಯುವ ವ್ಯಕ್ತಿ ಒಂದು ವೇಳೆ ಜೀವಂತವಾಗಿದ್ದರೆ ಮತ್ತು ಸೂಕ್ತಸಮಯದಲ್ಲಿ ಅವನಿಗೆ ಮೃತ್ಯುಪತ್ರದಲ್ಲಿನ ತಪ್ಪು ಗಮನಕ್ಕೆ ಬಂದರೆ, ಸಕಾಲದಲ್ಲಿ ತಪ್ಪನ್ನು ತಿದ್ದಿಕೊಳ್ಳಬಹುದು; ಆದರೆ ಒಂದು ವೇಳೆ ತಪ್ಪು ಅವನ ಗಮನಕ್ಕೆ ಬಾರದೇ ಇದ್ದರೆ, ಅವನ ಮರಣದ ನಂತರ ಅವನ ಉತ್ತರಾಧಿಕಾರಿಗೆ ಒಳಗಿಂದೊಳಗೆ ತೊಂದರೆ ಮತ್ತು ಸಂಕಟವನ್ನು ಸಹಿಸಿಕೊಳ್ಳಬೇಕಾಗುತ್ತದೆ; ಏಕೆಂದರೆ ಒಮ್ಮೆ ಮಾಡಿದ ಮೃತ್ಯು ಪತ್ರವನ್ನು ಮರಣದ ನಂತರ ಬದಲಾಯಿಸಲು ಸಾಧ್ಯವಾಗುವು ದಿಲ್ಲ ಮತ್ತು ಇದರಿಂದ ಕಾರಣವಿಲ್ಲದೆ ಆಸ್ತಿ ತೊಂದರೆಯಲ್ಲಿ ಸಿಲುಕುತ್ತದೆ. ಆಸ್ತಿಯ ಹಂಚಿಕೆ ಸರಿಯಾಗಿ ಆಗುವುದಿಲ್ಲ ಮತ್ತು ಬಹಳಷ್ಟು ಸಲ ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ ಮತ್ತು ಮೃತ್ಯುಪತ್ರ ಮಾಡುವವನಿಗೆ (ಟೆಸ್ಟೇಟರ) ಹೇಗೆ ಮತ್ತು ಯಾರಿಗೆ ಸಂಪತ್ತು ನೀಡಬೇಕಾಗಿತ್ತೋ, ಆ ಮೂಲಭೂತ ಸಂಜ್ಞೆಗೆ ಬಿರುಕು ಮೂಡುತ್ತದೆ ಮತ್ತು ಅನಿವಾರ್ಯವಾಗಿ ಇಚ್ಛೆಯಿಲ್ಲದೇ ‘ಸಕ್ಸೇಶನ ಆಕ್ಟ’ (ಉತ್ತರಾಧಿಕಾರಿ ಕಾಯಿದೆ) ಅನ್ವಯವಾಗುತ್ತದೆ. ಮತ್ತು ನಂತರ ಕಾನೂನುಬದ್ಧ ಉತ್ತರಾಧಿಕಾರಿಗೆ ಅದರ ಮಾಲೀಕತ್ವ ಸಿಗುತ್ತದೆ.
೨. ಮೃತ್ಯುಪತ್ರವನ್ನು ಮಾಡುವುದರ ಹಿಂದಿನ ಉದ್ದೇಶ
ಇಲ್ಲಿ ಮೂಲ ಉದ್ದೇಶಕ್ಕೆ ಬಿರುಕು ಮೂಡುತ್ತದೆ; ಏಕೆಂದರೆ ಮೃತ್ಯುಪತ್ರ ಅಂದರೆ ಮೃತರ ಇಚ್ಛೆಯಂತೆ ಆಸ್ತಿಯ ಹಂಚಿಕೆಯು ಅವನ ಮರಣದ ನಂತರ ಆಗುತ್ತದೆ. ಬಹುತೇಕವಾಗಿ ಮೃತ್ಯು ಪತ್ರ ಬರೆಯುವ ವ್ಯಕ್ತಿ ತನಗೆ ಬೇಕಾಗಿರುವ, ಗೆಳೆಯ, ಗೆಳತಿ, ಬಡವರು, ಕೆಲಸದಾಕೆ, ಹಳೆಯ ನೌಕರ, ಬಾಲ್ಯದ ಆದರೆ ಈಗ ಪ್ರಸ್ತುತ ತೊಂದರೆಯಲ್ಲಿರುವ ಸ್ನೇಹಿತ ಅಥವಾ ಆವಶ್ಯಕತೆಯಿರುವ ವಿದ್ಯಾರ್ಥಿಗೆ; ಯಾರು ಯಾರಿಗೆ ಸಹಾಯ ಮಾಡುವ ಇಚ್ಛೆ ಯಿದೆಯೋ, ಅವರಿಗೆ ತನ್ನ ಆಸ್ತಿಯನ್ನು ನೀಡಬಹುದು. ಇದೊಂದು ರೀತಿಯ ‘ಹ್ಯೂಮನ ರೈಟ’ (ಮಾನವ ಹಕ್ಕು) ನಮಗೆ ನೀಡಲಾಗಿದೆ.
ಈ ಆಸೆಯು ಕೇವಲ ಮೃತ್ಯುಪತ್ರ ಮಾಡಿದಾಗಲೇ ಪೂರ್ಣವಾಗುತ್ತದೆ. ಕೆಲವು ಜನರು ಆಸ್ತಿಯ ಕೆಲವು ಭಾಗವನ್ನು ಹಂಚುವಾಗ,ಕೆಲವು ಭಾಗ ಮೊಮ್ಮಕ್ಕಳಿಗೆ, ಇನ್ನು ಕೆಲವು ಭಾಗ ಆ ಮನುಷ್ಯನ ಜೀವನದಲ್ಲಿ ತೊಂದರೆಯಲ್ಲಿರುವಾಗ ಸಹಾಯ ಮಾಡಿರುವ ವ್ಯಕ್ತಿಗೆ ನೀಡುತ್ತಾರೆ. ಇದನ್ನು ನಾವು ‘ಪರೋಪಕಾರ’ ಎಂದು ಹೇಳಬಹುದು. ‘ಗುರುಚರಿತ್ರೆ’ಯಲ್ಲಿ ಇಂತಹ ಪುಣ್ಯದ ಮತ್ತು ಪ್ರತ್ಯುಪಕಾರದ ವಿವರಗಳನ್ನು ನೀಡಲಾಗಿದೆ. ಮೃತ್ಯಪತ್ರವು ಒಂದು ಆಧ್ಯಾತ್ಮಿಕ ಪರ್ಯಾಯವೆಂದು ಆಗಬಹುದು.ಇದರಲ್ಲಿ ಹಿಂದಿನ ಜನ್ಮದ ಸುಸಂಸ್ಕಾರದ ಮರುಪಾವತಿಯ ಅವಕಾಶ ಸಿಗುತ್ತದೆ. ‘ಮೃತ್ಯುಪತ್ರ’ ಮಾಡುವವನಿಗೆ ಈ ಎಲ್ಲ ಆಸೆಗಳನ್ನು ಪೂರ್ಣಗೊಳಿಸುವ ಏಕೈಕ ಉದ್ದೇಶ ಇರುತ್ತದೆ; ಆದರೆ ಮೃತ್ಯುಪತ್ರದ ಕರಡುಪ್ರತಿಯಲ್ಲಿ ಏನಾದರೂ ತಪ್ಪುಗಳಾಗಿದ್ದರೆ, ಮುಂದೆ ಅದನ್ನು ಸರಿಪಡಿಸಲು ಬಹಳ ಪ್ರಯತ್ನಿಸಬೇಕಾಗುತ್ತದೆ.
೩. ಮೃತ್ಯುಪತ್ರದಲ್ಲಿ ಬದಲಾವಣೆ ಮಾಡದಿದ್ದರೆ, ಅನ್ವಯವಾಗುವ ಕಾನೂನುಗಳು ಮತ್ತು ನಿಯಮಗಳು
ಕೆಲವು ಮೃತ್ಯುಪತ್ರದ ಕರಡುಗಳಲ್ಲಿ ಹೆಸರಿನ ಅಕ್ಷರಗಳಲ್ಲಿ ತಪ್ಪುಗಳಾಗುತ್ತವೆ, ಆಧಾರಕಾರ್ಡ ಕ್ರಮಾಂಕ ತಪ್ಪಾಗಿ ಬರೆಯಲಾಗುತ್ತದೆ, ಆಸ್ತಿಯ ಸರ್ವೆ ಸಂಖ್ಯೆ ಒಂದು ವೇಳೆ ತಪ್ಪಾದರೆ, ಮುಂದೆ ನೋಂದಣಿಗಾಗಿ ಬಹಳ ತೊಂದರೆಯಾಗುತ್ತದೆ. ಕೆಲವು ಜನರು ಕೇವಲ ನೋಟರಿಯವರ ಬಳಿ ಹೋಗಿ ಮೃತ್ಯುಪತ್ರವನ್ನು ಮಾಡುತ್ತಾರೆ ಮತ್ತು ಇದರಿಂದ ಹಗರಣಗಳಾಗುತ್ತವೆ. ಕೆಲವೊಮ್ಮೆ ಸ್ವಂತ ಮಾಲೀಕತ್ವ ಇಲ್ಲದಿರುವ ಆಸ್ತಿಯ ಉಲ್ಲೇಖವನ್ನು ಮಾಡಲಾಗುತ್ತದೆ ಮತ್ತು ಮುಂದೆ ಹಗರಣಗಳಾಗುತ್ತವೆ. ಯಾವ ವ್ಯಕ್ತಿಗೆ ಆಸ್ತಿಯನ್ನು ನೀಡುವ ಆಸೆಯನ್ನು ವ್ಯಕ್ತಪಡಿಸಿರುತ್ತಾರೆಯೋ, ಒಂದು ವೇಳೆ ಆ ವ್ಯಕ್ತಿಯು ಮೊದಲೇ ಮರಣಿಸಿದರೆ ಮತ್ತು ತದನಂತರ ಆ ಮೃತ್ಯುಪತ್ರದಲ್ಲಿ ಬದಲಾವಣೆಯನ್ನು (ಕೊಡಿಸಿಲ್) ಮಾಡದೇ ಮೃತ್ಯುಪತ್ರ ಮಾಡುವವನು ನಿಧನ ಹೊಂದಿದರೆ, ಆ ಆಸ್ತಿಗೆ ‘ಭಾರತೀಯ ಉತ್ತರಾಧಿಕಾರ ಕಾನೂನು’ ಅನ್ವಯ ಆಗುತ್ತದೆ. ಕೆಲವೊಮ್ಮೆ ಮೃತ್ಯುಪತ್ರವನ್ನು ಮಾಡುವ ವ್ಯಕ್ತಿಗೆ ಒಂದು ವೇಳೆ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ ಆಸ್ತಿಯನ್ನು ನೀಡುವ ಇಚ್ಛೆಯಿಲ್ಲದಿದ್ದರೆ ಮತ್ತು ಆ ಸಂಬಂಧಿಕರು ಮೃತ್ಯುಪತ್ರ ಮಾಡುವ ವ್ಯಕ್ತಿಗೆ ಜೀವನದಲ್ಲಿ ತೊಂದರೆ ನೀಡಿದ್ದರೂ, ಮೃತ್ಯು ಪತ್ರದ ವಿವರಗಳಲ್ಲಿನ ತಪ್ಪಿನಿಂದಾಗಿ ಆ ಸಂಬಂಧಿಸಿದ ವ್ಯಕ್ತಿಗೆ ಆ ಆಸ್ತಿಯ ಮಾಲೀಕತ್ವದ ಹಕ್ಕಿನಿಂದ ಅಥವಾ ಅನುವಂಶಿಕ ಹಕ್ಕಿನಿಂದ ಸಿಗುತ್ತದೆ.
೪. ಮೃತ್ಯುಪತ್ರ ಮತ್ತು ಆಧ್ಯಾತ್ಮಿಕ ದೃಷ್ಟಿ
ಇಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಕೆಲವು ಗಡಿಬಿಡಿಯಾಗಬಹುದು. ಮೃತ್ಯುಪತ್ರ ಮಾಡುವ ವ್ಯಕ್ತಿ ಆಧ್ಯಾತ್ಮಿಕ ಚಿಂತನೆಯುಳ್ಳವನಾಗಿದ್ದರೆ ಮತ್ತು ಅವನಿಗೆ ಇಷ್ಟವಿಲ್ಲದಿರುವ ವ್ಯಕ್ತಿಗೆ ಆಸ್ತಿ ಹೋಗುತ್ತಿದ್ದರೆ, ಮತ್ತು ಅವನು (ಮೃತ್ಯುಪತ್ರ ಮಾಡುವ) ಜೀವಂತವಾಗಿರುವ ವರೆಗೆ ಅವನ ಇಚ್ಛೆ ಆ ವ್ಯಕ್ತಿಗೆ ಸಿಗಬಾರದು ಎಂದಾಗಿದ್ದರೆ, ಇಲ್ಲಿ ಅವನ ಆತ್ಮದ ಮುಂದಿನ ಪ್ರವಾಸದಲ್ಲಿ ತೊಂದರೆಯಾಗಬಹುದು. ಅರ್ಥಾತ್ ಇದು ಪ್ರತಿಯೊಬ್ಬ ವ್ಯಕ್ತಿಯ ನಿಲುವಿನ ಭಾಗವಾಗಿದೆ. ಆದ್ದರಿಂದ, ನೈತಿಕದೃಷ್ಟಿ, ವಿವೇಕದೃಷ್ಟಿಯಿಂದ, ಭಾವನಾತ್ಮಕ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಸರಿಯಾಗಿ ಮತ್ತು ಅಚ್ಚುಕಟ್ಟಾಗಿ ಮೃತ್ಯುಪತ್ರ ಮಾಡುವುದು ಬಹಳ ಆವಶ್ಯಕವಾಗಿದೆ; ಆದರೆ ಅದರಲ್ಲಿ ತಪ್ಪುಗಳಾದರೆ ಬಹಳ ಹಾನಿಯಾಗುತ್ತದೆ.
– ನ್ಯಾಯವಾದಿ ಶೈಲೇಶ ಕುಲಕರ್ಣಿ, ಫೋಂಡಾ, ಕುರ್ಟಿ, ಗೋವಾ.

ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಮಾಲೆಗಾಂವ್ ನಲ್ಲಿ ಬಕ್ರೀದ್ ಸಂದರ್ಭದಲ್ಲಿ 906 ಗೋವುಗಳಿಗೆ ಜೀವದಾನ : 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲು !
ಮನೆಗೆ ವಿದ್ಯುತ್ ಬರಲಿಲ್ಲವೆಂದು ಇಡೀ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನ್ಯಾಯಾಧೀಶರು : Judge Cut Off Electricity
ಉಚ್ಚ ನ್ಯಾಯಾಲಯಗಳು 3 ತಿಂಗಳಿಗಿಂತ ಹೆಚ್ಚು ಕಾಲ ತೀರ್ಪನ್ನು ಕಾಯ್ದಿರಿಸಬಾರದು! – ಸರ್ವೋಚ್ಚ ನ್ಯಾಯಾಲಯ
ವಿಯೆನ್ನಾ (ಆಸ್ಟ್ರಿಯಾ) ಇಲ್ಲಿ ದಾಳಿ ಮಾಡಲು ಸಂಚು ರೂಪಿಸಿದ್ದ ಯುವಕನಿಗೆ ೧೫ ವರ್ಷಗಳ ಶಿಕ್ಷೆ