ಲವ್ ಜಿಹಾದ್ ನ ಹೆಸರು ಹೇಳದೆ ಕಾನೂನಿನಲ್ಲಿ ‘ಗುರುತು ಮರೆಮಾಚಿ ಮಾಡಿಕೊಂಡ ವಿವಾಹ ಅಪರಾಧ’ವಾಗುವುದು, ಎಂದು ಉಲ್ಲೇಖ; ಕನಿಷ್ಠ ೧೦ ವರ್ಷಗಳ ಶಿಕ್ಷೆ !
ನವ ದೆಹಲಿ – ಬ್ರಿಟಿಷರ ಕಾಲದಲ್ಲಿನ ಕಾನೂನು ರದ್ದುಪಡಿಸಲಾಗುವುದು ಅದರ ಬದಲು ಜನರಿಗೆ ದಂಡಿಸದೆ, ನ್ಯಾಯ ನೀಡುವ ಕಾನೂನು ರೂಪಿಸಲಾಗುವುದು, ಎಂದು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಆಗಸ್ಟ್ ೧೧ ರಂದು ಲೋಕಸಭೆಯಲ್ಲಿ ಮಾಹಿತಿ ನೀಡಿದರು. ಅದೇ ಪ್ರಕಾರ ಹುಡುಗಿಯರು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದ ಹಿನ್ನೆಲೆಯಲ್ಲಿ ಅತ್ಯಂತ ಕಠಿಣ ಕಾನೂನು ರೂಪಿಸಲಾಗುವುದೆಂದು ಶಹಾ ಇವರು ಹೇಳಿದರು. ತನ್ನ ಗುರುತು ಎಂದರೆ ಧರ್ಮ ಮರೆಮೋಚಿ ಯಾವುದೇ ಮಹಿಳೆಯ ಜೊತೆಗೆ ವಿವಾಹ ಮಾಡಿಕೊಂಡಿರುವ ಅಪರಾಧಿ ಪುರುಷನಿಗೆ ಕಠಿಣ ಶಿಕ್ಷೆ ನೀಡಲಾಗುವುದೆಂದು, ಕೂಡ ಶಹಾ ಹೇಳಿದರು.
‘लव-जिहाद’ के खिलाफ मोदी सरकार लेकर आई कानून! अब पहचान छिपाकर बनाया यौन संबंध तो मिलेगी ये सजाhttps://t.co/UALAyO0jjq
— Zee Bihar Jharkhand (@ZeeBiharNews) August 12, 2023
೧. ಸಧ್ಯ ಲವ್ ಜಿಹಾದ್ ದಿಂದ ದೇಶಾದ್ಯಂತ ಹಾಹಾಕಾರವೆದ್ದಿದೆ. ಈ ದೃಷ್ಟಿಯಿಂದ ಕೇಂದ್ರ ಸರಕಾರ ತರುತ್ತಿರುವ ಈ ಕಾನೂನಿನಿಂದ ಲವ್ ಜಿಹಾದಿಗೆ ಅಂಕುಶ ಇಡಲು ಸಹಾಯವಾಗುವುದು, ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ತನ್ನ ಗುರುತು ಮರೆಮಾಚಿ ನೌಕರಿ ಅಥವಾ ಉನ್ನತ ಸ್ಥಾನ ನೀಡುವ ಹೆಸರಿನಲ್ಲಿ ವಿವಾಹ ಮಾಡಿಕೊಂಡರೂ ಅದರಲ್ಲಿ ಶಿಕ್ಷೆಗೆ ಅವಕಾಶ ಇರುವುದು.
೨. ಈಗ ಯಾವ ಮಹಿಳೆಯ ಜೊತೆ ವಿವಾಹ ಮಾಡುವುದಾಗಿ ಕಾರಣ ನೀಡಿ ದೈಹಿಕ ಸಂಬಂಧ ಇಡುವವನಿಗೆ ಬಲಾತ್ಕಾರದ ಅಪರಾಧ ಎಂದು ಹೇಳಲಾಗುವುದಿಲ್ಲ; ಆದರೆ ಹೊಸ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ. ಅದರ ಜೊತೆಗೆ ಕನಿಷ್ಠ ೧೦ ವರ್ಷದ ಶಿಕ್ಷೆ ಸಹಿತ ದಂಡ ಕೂಡ ವಿಧಿಸಲಾಗುವುದು.
೩. ‘ಭಾರತೀಯ ದಂಡ ಸಂಹಿತೆ ೧೮೬೦’ ರ ಬದಲು ‘ಭಾರತೀಯ ನ್ಯಾಯ ಸಂಹಿತೆ ೨೦೨೩’ ರಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ವಿರುದ್ಧ ಕಾನೂನು ಇರಲಿದೆ.
ಮಹಿಳೆಯರ ಮೇಲಿನ ಅತ್ಯಾಚಾರದ ಬಗ್ಗೆ ವಿಧಿಸಲಿರುವ ಶಿಕ್ಷೆ !
|
ಸಂಪಾದಕೀಯ ನಿಲುವುಲವ್ ಜಿಹಾದ್ ನಂತಹ ಹಿಂದೂಗಳ ಅಸ್ತಿತ್ವವನ್ನೆ ನಾಶಗೊಳಿಸುವ ಷಡ್ಯಂತ್ರದ ವಿರುದ್ಧ ಕೇಂದ್ರ ಸರಕಾರದಿಂದ ತೆಗೆದುಕೊಂಡುರುವ ನಿರ್ಣಯ ಶ್ಲಾಘನೀಯ ! ಉತ್ತರಪ್ರದೇಶ, ಮಧ್ಯಪ್ರದೇಶದಂತಹ ಭಾಜಪ ಆಡಳಿತ ಇರುವ ರಾಜ್ಯಗಳಲ್ಲಿ ಯಾವ ರೀತಿ ‘ಲವ್ ಜಿಹಾದ್ ವಿರೋಧಿ ಕಾನೂನು’ ಎಂಬ ಹೆಸರಿಸಿ ಕಾನೂನು ರೂಪಿಸಿದರೋ, ಅದೇ ಮಾದರಿಯಲ್ಲಿ ಕೇಂದ್ರ ಸರಕಾರ ಕೂಡ ರೂಪಿಸಬೇಕು, ಎಂದು ಹಿಂದುಗಳಿಗೆ ಅಪೇಕ್ಷಿತವಾಗಿದೆ. ಕೇವಲ ಇದರಿಂದ ‘ಲವ್ ಜಿಹಾದ್’ನ ದುಷ್ಕೃತ್ಯ ನಡೆಸುವ ಮತ್ತು ಅದನ್ನು ಸುಳ್ಳು ಎನ್ನುವ ಎಲ್ಲರಿಗೂ ಅಂಕುಶ ಇಡಲು ಸಹಾಯವಾಗುವುದು ! |