ಜ್ಞಾನವಾಪಿಯ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಮುಸಲ್ಮಾನ ಪಕ್ಷದ ಅರ್ಜಿ ವಜಾ !

ನವ ದೆಹಲಿ – ಅಲಹಾಬಾದ್ ಉಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ನಂತರ ಮುಸಲ್ಮಾನ ಪಕ್ಷದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಒತ್ತಾಯಿಸಲಾಗಿತ್ತು. ಆಗಸ್ಟ್ ೪ ರಂದು ನಡೆದಿರುವ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಎರಡು ಪಕ್ಷಗಳ ಪರವಿರೋಧ ಕೇಳಿದ ನಂತರ ಮುಸಲ್ಮಾನ ಪಕ್ಷದ ಅರ್ಜಿಯನ್ನು ತಿರಸ್ಕರಿಸಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಸಮೀಕ್ಷೆಗೆ ಆಕ್ಷೇಪ ಏಕೆ ? – ಸರ್ವೋಚ್ಚ ನ್ಯಾಯಾಲಯದಿಂದ ಮುಸಲ್ಮಾನ ಪಕ್ಷಕ್ಕೆ ಪ್ರಶ್ನೆ

ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷಕ್ಕೆ, ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶದಲ್ಲಿ ನಾವು ಹಸ್ತಕ್ಷೇಪ ಏಕೆ ಮಾಡಬೇಕು ? ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯ ಪ್ರಕರಣದಲ್ಲಿ ಕೂಡ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿತ್ತು, ಜ್ಞಾನವಾಪಿ ಸಮೀಕ್ಷೆಗೆ ಆಕ್ಷೇಪ ಏಕೆ ? ಜಿಲ್ಲಾ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಇವರು ಸಮೀಕ್ಷೆಗೆ ಅನುಮತಿ ನೀಡಿರುವಾಗ ಆಕ್ಷೇಪ ಏಕೆ ? ಈ ಸಮೀಕ್ಷೆಯಿಂದ ಜ್ಞಾನವಾಪಿ ಪರಿಸರದಲ್ಲಿ ನಂತರ ಸುಧಾರಿಸಲು ಸಾಧ್ಯವಿಲ್ಲದಂತಹ ಯಾವುದೇ ಹಾನಿ ಆಗುವುದಿಲ್ಲ, ಪುರಾತತ್ವ ಇಲಾಖೆಯು, ಸಮೀಕ್ಷೆಯಿಂದ ಪರಿಸರದಲ್ಲಿ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಅಲ್ಲಿ ಯಾವುದೇ ರೀತಿಯ ಉತ್ಖನನ ಮಾಡಲಾಗುವುದಿಲ್ಲ. ಉತ್ಖನನ ನಡೆಯದ ಹಾಗೆ ಅದರ ಕಡೆಗೆ ಗಮನ ನೀಡುತ್ತೇವೆ. ಸಮೀಕ್ಷೆಯ ವರದಿ ಮೊಹರು ಹಾಕಿ ಇಡಲಾಗುವುದು. ಸಮೀಕ್ಷೆಯಿಂದ ಯಾರ ಅಧಿಕಾರದ ಹನನವಾಗುವುದಿಲ್ಲ ಎಂದು ಭರವಸೆ ನೀಡಿದೆ.

ಆಗಸ್ಟ್ ೧೫, ೧೯೪೭ ರಂದು ಜ್ಞಾನವಾಪಿಯ ಗುರುತು ಏನಾಗಿತ್ತು ? – ನ್ಯಾಯಾಲಯದ ಮುಸಲ್ಮಾನ ಪಕ್ಷಕ್ಕೆ ಪ್ರಶ್ನೆ

ವಿಚಾರಣೆಯ ಸಮಯದಲ್ಲಿ ಮುಸಲ್ಮಾನ ಪಕ್ಷದಿಂದ ಧಾರ್ಮಿಕ ಪೂಜಾ ಸ್ಥಳ ಕಾನೂನು ೧೯೯೧ ಪ್ರಕಾರ. ಯುಕ್ತಿವಾದ ಮಂಡಿಸಲಾಯಿತು. ಮುಸಲ್ಮಾನ ಪಕ್ಷದ ನ್ಯಾಯವಾದಿ, ಈ ಕಾನೂನಿನ ಕಲಂ ೨(ಬ) ಅಡಿಯಲ್ಲಿ ಆಗಸ್ಟ್ ೧೫, ೧೯೪೭ ರಂದು ಧಾರ್ಮಿಕ ಸ್ಥಳದ ಯಾವ ಸ್ಥಿತಿ ಇತ್ತು, ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದರು.
ಇದರ ಬಗ್ಗೆ ಮುಖ್ಯ ನ್ಯಾಯಾಧೀಶರು, ನೀವು ಹೇಳಿರುವುದು ಯೋಗ್ಯವೇ ಆಗಿದೆ; ಆದರೆ ಈ ಕಲಂನ ಅರ್ಥ ವ್ಯಾಪಕವಾಗಿದೆ. ಆಗಸ್ಟ್ ೧೫, ೧೯೪೭ ರಂದು ಜ್ಞಾನವಾಪಿಯ ಗುರುತು ಏನಾಗಿತ್ತು ? ಎಂದು ಹೇಳಿದರು.

ಬರುವ ನಾಲ್ಕು ವಾರದಲ್ಲಿ ಸಮೀಕ್ಷೆಯ ವರದಿ ಪ್ರಸ್ತುತಪಡಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶ

ಸರ್ವೋಚ್ಚ ನ್ಯಾಯಾಲಯದಲ್ಲಿ ಸಮೀಕ್ಷೆಯಿಂದ ವಿಚಾರಣೆ ನಡೆಯುತ್ತಿರುವಾಗ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಕೂಡ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಜುಲೈ ೨೧ ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆ ಆದೇಶ ನೀಡಿತ್ತು. ಇದರ ವಿರುದ್ಧ ಮುಸಲ್ಮಾನ ಪಕ್ಷದವರು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದನಂತರ ನ್ಯಾಯಾಲಯವು ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಹೋಗಲು ಹೇಳಿದ ನಂತರ ಉಚ್ಚ ನ್ಯಾಯಾಲಯದಿಂದ ಸಮೀಕ್ಷೆಗೆ ಅನುಮತಿ ನೀಡಿದ್ದರು. ವಾರಣಾಸಿ ಜಿಲ್ಲಾ ನ್ಯಾಯಾಲಯವು ಸಮೀಕ್ಷೆಯ ವರದಿ ಆಗಸ್ಟ್ ೪ ರಂದು ಪ್ರಸ್ತುತಪಡಿಸುವ ಆದೇಶ ನೀಡಿದ್ದಾರೆ; ಆದರೆ ಇದಕ್ಕೆ ವಿರೋಧ ವ್ಯಕ್ತವಾದ ನಂತರ ಈ ಅವಧಿ ಮುಗಿದಿರುವುದರಿಂದ ಹಿಂದೂ ಪಕ್ಷದಿಂದ ಅವಧಿ ಹೆಚ್ಚಿಸಲು ಅರ್ಜಿ ಸಲ್ಲಿಸಲಾಗಿತ್ತು. ಇದರ ಬಗ್ಗೆ ನ್ಯಾಯಾಲಯದಿಂದ ವಿಚಾರಣೆ ನಡೆಸುತ್ತಾ ಮುಂದಿನ ೪ ವಾರದಲ್ಲಿ ಸಮೀಕ್ಷೆಯ ವರದಿ ಪ್ರಸ್ತುತಪಡಿಸಲು ಹೊಸ ಆದೇಶ ನೀಡಿದೆ. ಆದ್ದರಿಂದ ಈ ತಿಂಗಳ ಕೊನೆಗೆ ಈ ವರದಿ ಪ್ರಸ್ತುತಪಡಿಸಬಹುದು.