ವಿವಾಹವನ್ನು ನಿಶ್ಚಯಿಸುವಾಗ ವಧು-ವರರ ಜಾತಕಗಳು ಹೊಂದುವುದರ ಮಹತ್ವ, ಹಾಗೆಯೇ ವೈವಾಹಿಕ ಜೀವನ ಸುಖಕರವಾಗಲು ‘ಸಾಧನೆಯನ್ನು ಮಾಡುವುದರ ಮಹತ್ವ !

‘ಹಿಂದೂ ಧರ್ಮದಲ್ಲಿ ಧರ್ಮ, ಅರ್ಥ,ಕಾಮ ಮತ್ತು ಮೋಕ್ಷ ಈ ನಾಲ್ಕು ಪುರಾಷಾರ್ಥಗಳನ್ನು ಹೇಳಲಾಗಿದೆ. ಅವುಗಳಲ್ಲಿ ‘ಕಾಮ ಈ ಪುರುಷಾರ್ಥವನ್ನು ಸಾಧಿಸಿ ನಿಧಾನವಾಗಿ ‘ಮೋಕ್ಷ ಎಂಬ ಪುರುಷಾರ್ಥದ ಕಡೆಗೆ ಹೋಗಬೇಕೆಂದು ವಿವಾಹ ಸಂಸ್ಕಾರವನ್ನು ಹೇಳಲಾಗಿದೆ. ಸ್ತ್ರೀ-ಪುರುಷರ ಜೀವನದ ಅನೇಕ ಮಹತ್ವಪೂರ್ಣ ವಿಷಯಗಳು ವಿವಾಹಕ್ಕೆ ಸಂಬಂಧಪಟ್ಟಿರುತ್ತವೆ, ಉದಾ. ಸ್ತ್ರೀ-ಪುರುಷರಲ್ಲಿನ ಪ್ರೇಮ, ಅವರ ಸಂಬಂಧ, ಸಂತತಿ, ಜೀವನದಲ್ಲಿನ ಇತರ ಸುಖಗಳು, ಸಮಾಜದಲ್ಲಿನ ಸ್ಥಾನಮಾನ ಮತ್ತು ಜೀವನದಲ್ಲಿನ ಉನ್ನತಿ ಇತ್ಯಾದಿ. ವಿವಾಹವನ್ನು ನಿಶ್ಚಿತಗೊಳಿಸುವ ಮೊದಲು ಭಾವಿ ವಧು-ವರರ ಜಾತಕಗಳು ಹೊಂದುತ್ತವೆಯೇ, ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇದಕ್ಕಾಗಿ ಇಬ್ಬರ ಜಾತಕಗಳೂ ಯೋಗ್ಯವಾಗಿರಬೇಕು, ಹಾಗೆಯೇ ಜಾತಕಗಳನ್ನು ಹೊಂದಾಣಿಕೆ ಮಾಡುವ ಜ್ಯೋತಿಷಿಯೂ ಜ್ಞಾನಿಯಾಗಿರಬೇಕು. ವಧು-ವರರ ಜಾತಕಗಳು ಹೊಂದಿಕೆ ಆಗುವುದರ ಮಹತ್ವ, ಹಾಗೆಯೇ ವೈವಾಹಿಕ ಜೀವನ ಸುಖಮಯವಾಗಲು ಏನು ಮಾಡಬೇಕು ಎಂಬುದನ್ನು ಪ್ರಸ್ತುತ ಲೇಖನದಲ್ಲಿ ನೀಡಲಾಗಿದೆ.

ಶ್ರೀ. ರಾಜ ಕರ್ವೆ

೧. ವಧು-ವರರ ಜಾತಕಗಳ ಹೊಂದಾಣಿಕೆಯ ಮಹತ್ವ

ವಿವಾಹದ ನಂತರ ಪತಿ-ಪತ್ನಿ ಜೀವನವನ್ನು ಒಳ್ಳೆಯ ರೀತಿಯಿಂದ ನಡೆಸಬೇಕೆಂದು ಅವರ ಸ್ವಭಾವಗಳ ಹೊಂದಾಣಿಕೆ, ಪರಸ್ಪರ ಹೊಂದಾಣಿಕೆ, ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು, ಮುಂತಾದವುಗಳು ಅತ್ಯಂತ ಮಹತ್ವದ್ದಾಗಿರುತ್ತವೆ, ಹಾಗೆಯೇ ಅವರ ಜೀವನದಲ್ಲಿನ ಅರ್ಥಿಕ ಸ್ಥಿತಿ, ಗೃಹಸುಖ, ಸಂತತಿ ಸುಖ, ಆರೋಗ್ಯ ಮುಂತಾದ ವಿಷಯಗಳು ಮಹತ್ವದ್ದಾಗಿರುತ್ತವೆ; ಆದರೆ ಈ ಎಲ್ಲ ವಿಷಯಗಳು ಭವಿಷ್ಯಕ್ಕೆ ಸಂಬಂಧಿಸಿರುವುದರಿಂದ ವಿವಾಹವನ್ನು ನಿಶ್ಚಯಿಸುವಾಗ ಅವುಗಳ ಅಂದಾಜು ಮಾಡುವುದು ಕಠಿಣವಾಗಿದೆ. ಆಗ ಜ್ಯೋತಿಷ್ಯಶಾಸ್ತ್ರದ ಆಧಾರವನ್ನು ತೆಗೆದು ಕೊಳ್ಳಲಾಗುತ್ತದೆ. ಜನ್ಮ, ವಿವಾಹ ಮತ್ತು ಮೃತ್ಯು ಇವು ಪ್ರಾರಬ್ಧಕ್ಕನುಸಾರವಾಗಿರುತ್ತವೆ. ಜಾತಕವು ನಮ್ಮ ಪೂರ್ವ ಸುಕೃತದ (ಪ್ರಾರಬ್ಧದ) ಕನ್ನಡಿಯಾಗಿರುವುದರಿಂದ ಅದರಿಂದ ಪ್ರಾರಬ್ಧಾಧೀನ ವಿಷಯಗಳು ತಿಳಿಯುತ್ತವೆ.

೨. ವಧು-ವರರ ಜಾತಕಗಳನ್ನು ಹೊಂದಿಸುವಾಗ ಗುಣ, ಗ್ರಹ ಮತ್ತು ಪತ್ರಿಕೆಗಳ ಹೊಂದಾಣಿಕೆ ಮಾಡುವುದರ ಮಹತ್ವ

೨ ಅ. ಗುಣಮಿಲನ : ವಧು-ವರರ ಸ್ವಭಾವಗಳು ಪರಸ್ಪರ ಪೂರಕವಾಗಿರಬೇಕು, ಎಂಬುದು ಗುಣಮೇಲನದ ಮುಖ್ಯ ಉದ್ದೇಶ ವಾಗಿದೆ. ಪತಿ-ಪತ್ನಿ ತೀರಾ ವಿರುದ್ಧ ಪ್ರಕೃತಿಯವರಾಗಿದ್ದರೆ, ಜೀವನದಲ್ಲಿ ಹೆಜ್ಜೆಹೆಜ್ಜೆಗೆ ಅಸಮಾಧಾನ ಪಾಲಿಗೆ ಬರುತ್ತದೆ, ಉದಾ. ಗುಣಮೇಲನದಲ್ಲಿ ಯಾವ ರಾಶಿಯ ವ್ಯಕ್ತಿಗೆ ಯಾವ ರಾಶಿಯ ವ್ಯಕ್ತಿಯ ಜೊತೆಗೆ ಹೊಂದಾಣಿಕೆಯಾಗುತ್ತದೆ ಅಥವಾ ಆಗುವುದಿಲ್ಲ, ಎಂಬುದನ್ನು ಕೊಟ್ಟಿರುತ್ತಾರೆ, ಉದಾ. ಕರ್ಕ ಮತ್ತು ಕುಂಭ ಈ ರಾಶಿಗಳ ವ್ಯಕ್ತಿಗಳಲ್ಲಿ ಪರಸ್ಪರರಲ್ಲಿ ಹೊಂದಾಣಿಕೆ ಆಗುವುದಿಲ್ಲ. ಕರ್ಕ ರಾಶಿಯ ವ್ಯಕ್ತಿಯು ಸಾಮಾನ್ಯವಾಗಿ ಕಲಾ ಪ್ರಿಯ, ಭಾವನಾಶೀಲ ಮತ್ತು ನಿಸರ್ಗಪ್ರಿಯನಾಗಿರುತ್ತಾನೆ. ತದ್ವಿರುದ್ಧ ಕುಂಭ ರಾಶಿಯ ವ್ಯಕ್ತಿಯು ವಿರಕ್ತ, ತನ್ನ ಕೆಲಸವನ್ನು ಬಿಟ್ಟು ಇತರ ಯಾವುದರಲ್ಲಿಯೂ ರುಚಿ ಇಲ್ಲದ ಮತ್ತು ಸಂಶೋಧಕ ವೃತ್ತಿಯವನಾಗಿರುತ್ತಾನೆ. ಇದರಿಂದಾಗಿ ಅವರ ಆಚಾರ-ವಿಚಾರ, ಬೇಕು-ಬೇಡ, ಜೀವನಶೈಲಿ ಮುಂತಾದವುಗಳು ಪರಸ್ಪರರ ಸಂಪೂರ್ಣ ವಿರುದ್ಧವಾಗಿರುವುದರಿಂದ ಅವರಲ್ಲಿ ಹೊಂದಾಣಿಕೆ ಆಗುವುದಿಲ್ಲ. ತದ್ವಿರುದ್ಧ ಪತಿ-ಪತ್ನಿಯ ಪ್ರಕೃತಿ ಪರಸ್ಪರ ಅನುಕೂಲವಾಗಿದ್ದರೆ ಅವರಲ್ಲಿ ಸಾಮರಸ್ಯವಿರುತ್ತದೆ. ಹಾಗೆಯೇ ಜೀವನದಲ್ಲಿ ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ, ಅವರು ಪರಸ್ಪರ ಅರ್ಥೈಸಿಕೊಂಡು ಆಧಾರವನ್ನು ಕೊಡುತ್ತಾರೆ.

೨ ಆ. ಗ್ರಹಮೇಲನ ಮತ್ತು ಪತ್ರಿಕಾಮೇಲನ : ಇದರಲ್ಲಿ ಅರ್ಥಿಕ ಸ್ಥಿತಿ, ಗೃಹಸೌಖ್ಯ, ಸಂತತಿಸೌಖ್ಯ, ಆರೋಗ್ಯ ಇತ್ಯಾದಿ ವಿಷಯಗಳ ವಿಚಾರವನ್ನು ಮಾಡಿ ‘ವೈವಾಹಿಕ ಜೀವನವು ಎಷ್ಟು ಪ್ರಮಾಣದಲ್ಲಿ ಯಶಸ್ವಿ ಆಗಬಹುದು ?’, ಎಂಬುದರ ವಿಚಾರವನ್ನು ಮಾಡಲಾಗುತ್ತದೆ.

೩. ಮಂಗಳ ದೋಷ ಮಂಗಳದೋಷದ ಬಗ್ಗೆ ಸಮಾಜದಲ್ಲಿ ಅವಾಸ್ತವ ಹೆದರಿಕೆ ಮತ್ತು ತಪ್ಪುಕಲ್ಪನೆಗಳಿರುವುದು ಕಂಡುಬರುತ್ತದೆ.

ಮಂಗಳವು ದಾಹಕ ಗ್ರಹವಾಗಿರುವುದರಿಂದ ವೈವಾಹಿಕ ಜೀವನದಲ್ಲಿ ಸಂಕಟಗಳನ್ನುಂಟು ಮಾಡುತ್ತದೆ; ಆದರೆ ಪಂಚಾಂಗದಲ್ಲಿ ಮಂಗಳದೋಷದ ಅನೇಕ ಅಪವಾದಗಳನ್ನು ಕೊಡಲಾಗಿದೆ, ಇದರಿಂದ ಸುಮಾರು ಶೇ. ೯೦ ರಷ್ಟು ಮಂಗಳದೋಷವಿರುವ ಜಾತಕಗಳಲ್ಲಿನ ಮಂಗಳಗ್ರಹವು ನಿರ್ದೋಷವಾಗಿರುತ್ತದೆ. ಆದುದರಿಂದ ಮಂಗಳದೋಷದ ಸಂದರ್ಭದಲ್ಲಿ ಅಲ್ಲಿ ಇಲ್ಲಿ ಕೇಳಿದ ಮಾಹಿತಿಯನ್ನು ಸ್ವೀಕರಿಸದೇ ‘ಜಾತಕದಲ್ಲಿ ಮಂಗಳ ದೋಷವಿದೆಯೇ ?’ ಮತ್ತು ಇದ್ದರೆ ‘ಮಂಗಳವು ಯಾವ ಕಾರಣದಿಂದ ನಿರ್ದೋಷವಾಗುತ್ತದೆ ?’, ಎಂಬುದನ್ನೂ ಜ್ಯೋತಿಷಿಗಳಿಂದ ಕೇಳಿಕೊಳ್ಳಬೇಕು.

೪. ಸದ್ಯದ ವಿಜ್ಞಾನಯುಗದಲ್ಲಿ ವಧು-ವರರ ಜಾತಕಗಳನ್ನು ಹೊಂದಿಸಿಕೊಳ್ಳುವುದು ಹೆಚ್ಚು ಶ್ರೇಯಸ್ಕರ !

ಸದ್ಯ ಭಾರತೀಯ ಸಮಾಜದ ಮೇಲೆ ಪಾಶ್ಚಾತ್ಯ (ಕು)ಸಂಸ್ಕೃತಿಯ ಪ್ರಭಾವವಿರುವುದರಿಂದ ಅದರ ಅಂಧಾನು ಕರಣೆಯಾಗುತ್ತಿದೆ. ಇದರಿಂದಾಗಿ ಒಂದು ಕಾಲದಲ್ಲಿ ವಿಶ್ವಗುರು ಸ್ಥಾನದಲ್ಲಿದ್ದ ಭಾರತವು, ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಅಧೋಗತಿಯಾಗುತ್ತಿರುವುದು ಕಂಡುಬರುತ್ತದೆ. ವಿವಾಹದ ವಿಚಾರ ಮಾಡಿದರೆ ಭಾರತದಲ್ಲಿ ವಿವಾಹ ವಿಚ್ಛೇದನೆಗಳ ಪ್ರಮಾಣವೂ ಬಹಳ ಹೆಚ್ಚಾಗಿದೆ. ಪ್ರೇಮ ವಿವಾಹದ ಸಂದರ್ಭದಲ್ಲಿ ವಧು ಮತ್ತು ವರ ಇವರಲ್ಲಿ ಪರಸ್ಪರ ಮೊದಲಿ ನಿಂದಲೇ ಪರಿಚಯವಿರುವುದರಿಂದ ‘ಜಾತಕವನ್ನು ನೋಡುವ ಆವಶ್ಯಕತೆ ಇದೆಯೇ ?’, ಎಂಬ ಪ್ರಶ್ನೆ ಅನೇಕ ಜನರಿಗೆ ಬರುತ್ತದೆ. ಇದರ ಉತ್ತರ ಆವಶ್ಯ ನೋಡಲೇಬೇಕು’ ಎಂದಾಗಿದೆ. ಏಕೆಂದರೆ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಗನುಸಾರ ‘ಪ್ರಾರಂಭದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರಲ್ಲಿಯೂ ಹೊಂದಿಕೆ ಆಗುತ್ತದೆ’, ಹೀಗೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ, ಪ್ರತ್ಯಕ್ಷದಲ್ಲಿ ಸ್ಥಿತಿ ಬೇರೆಯೇ ಇರುತ್ತದೆ. ವಿವಾಹದ ನಂತರ ಬರುವ ಅಡಚಣೆಗಳನ್ನು ಎದುರಿಸುವಾಗ ಅವರಿಗೆ ಪರಸ್ಪರರ ಪ್ರಕೃತಿಯಲ್ಲಿನ ದೋಷಗಳು ಕಾಣಿಸ ತೊಡಗುತ್ತವೆ. ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲು ಸಾಧ್ಯ ವಾಗದಿರುವುದರಿಂದ ಅವರಲ್ಲಿ ಪದೇಪದೇ ಜಗಳಗಳು ಪ್ರಾರಂಭವಾಗುತ್ತವೆ. ಇದರಿಂದಾಗಿ ‘ನಮ್ಮಿಬ್ಬರಲ್ಲಿ ಹೊಂದಾಣಿಕೆ ಆಗದಿದ್ದರೆ ನಾವು ಬೇರೆಯಾಗೋಣ’, ಎಂಬ ಪರಾಕಾಷ್ಠೆಯ ನಿರ್ಣಯವನ್ನು ಗಡಿಬಿಡಿಯಿಂದ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ಸದ್ಯದ ಯುವಾಪೀಳಿಗೆಯು ಅನೇಕ ಬಾರಿ ‘ಬಾಹ್ಯ ಆಕರ್ಷಣೆ’ಯನ್ನೇ ಪ್ರೇಮ ಎಂದು ನಂಬುತ್ತದೆ. ಪ್ರೇಮ ಪ್ರಕರಣಗಳಲ್ಲಿ ಕೆಲವು ಬಾರಿ ಮೋಸಹೋಗುವ ಸಾಧ್ಯತೆಯೂ ಇರುತ್ತದೆ. ಆದುದರಿಂದ ಜ್ಯೋತಿಷಿಗಳ ಅಭಿಪ್ರಾಯವನ್ನು ಪಡೆಯುವುದು ಯಾವಾಗಲೂ ಶ್ರೇಯಸ್ಕರವಾಗಿದೆ !

೫. ವೈವಾಹಿಕ ಜೀವನ ಸುಖಮಯ ಮತ್ತು ಆನಂದಿಯಾಗಲು ಸಾಧನೆಯನ್ನು ಮಾಡಿರಿ !

ಸದ್ಯದ ಯುಗವು ಕಲಿಯುಗವಾಗಿರುವುದರಿಂದ ಮನುಷ್ಯನ ಪಾಲಿಗೆ ಸುಖಕ್ಕಿಂತ ದುಃಖಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಮನುಷ್ಯನ ಜೀವನಶೈಲಿಯು ನಿಸರ್ಗಕ್ಕೆ ಪ್ರತಿಕೂಲವಾಗಿರುವುದರಿಂದ ಅವನು ‘ಆನಂದ’ದಲ್ಲಿಲ್ಲ. ವೈವಾಹಿಕ ಜೀವನದ ಸಂದರ್ಭದಲ್ಲಿ ನೋಡಿದರೆ ಇಂದು ಸುಖ ದಿಂದ ಜೀವನವನ್ನು ನಡೆಸುವ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟು ಕಂಡುಬರುತ್ತವೆ. ವೈಹಾಹಿಕ ಜೀವನ ಆನಂದಮಯವಾಗಲು ‘ಸಾಧನೆಯನ್ನು ಮಾಡುವುದೇ’ ಉತ್ತಮ ಮಾರ್ಗವಾಗಿದೆ. ‘ಸಾಧನೆ’ ಎಂದರೆ ಈಶ್ವರಪ್ರಾಪ್ತಿ ಅಂದರೆ ಈಶ್ವರನಲ್ಲಿರುವ ಗುಣಗಳನ್ನು ನಮ್ಮಲ್ಲಿ ತರುವುದು ಮತ್ತು ನಮ್ಮಲ್ಲಿನ ದೋಷಗಳನ್ನು ದೂರಗೊಳಿಸುವುದು. ವೈವಾಹಿಕ ಜೀವನದಲ್ಲಿನ ಬಹುದೊಡ್ಡ ಅಡಚಣೆ ಎಂದರೆ ಪತಿ-ಪತ್ನಿಯರಿಗೆ ಪರಸ್ಪರರಿಂದ ಮತ್ತು ಕುಟುಂಬದವರಿಂದ ಇರುವ ಅಪೇಕ್ಷೆಗಳು ! ಪ್ರತಿಯೊಬ್ಬ ಮನುಷ್ಯನಲ್ಲಿ ಅಹಂಕಾರ ಇರುವುದರಿಂದ ಪ್ರತಿಯೊಂದು ಪ್ರಸಂಗದಲ್ಲಿ ಅವನು ‘ನಾನು ಹೇಗೆ ಸರಿಯಿದ್ದೇನೆ ಮತ್ತು ನನ್ನ ಎದುರಿನ ವ್ಯಕ್ತಿ ಹೇಗೆ ತಪ್ಪುತ್ತಿದ್ದಾನೆ ಎಂದು ವಿಚಾರ ಮಾಡುತ್ತಿರುತ್ತಾನೆ. ನಾವು ನಮ್ಮನ್ನು ಬದಲಾಯಿಸಬಹುದು, ಆದರೆ ಇತರರನ್ನು ಬದಲಾಯಿಸಲು ಆಗುವುದಿಲ್ಲ, ಇದನ್ನು ನಾವು ಗಮನದಲ್ಲಿಡ ಬೇಕು. ಪತಿ-ಪತ್ನಿ ಇಬ್ಬರೂ ‘ನಾವು ಎಲ್ಲಿ ಕಡಿಮೆ ಬೀಳುತ್ತೇವೆ ?,

ನಾವು ನಮ್ಮ ಎದುರಿಗಿನ ವ್ಯಕ್ತಿಗೆ (ಪತಿ/ಪತ್ನಿಗೆ) ಏನು ಮತ್ತು ಹೇಗೆ ಸಹಾಯ ಮಾಡಬಹುದು ?’, ಎಂಬ ವಿಚಾರವನ್ನು ಮಾಡಿದರೆ ಕೌಟುಂಬಿಕ ವಾತಾವರಣ ತುಂಬಾ ಸುಧಾರಿಸಬಹುದು. ನಮ್ಮಲ್ಲಿರುವ ಸ್ವಭಾವದೋಷಗಳನ್ನು ಮತ್ತು ಅಹಂಅನ್ನು ದೂರಗೊಳಿಸಲು ಪ್ರಯತ್ನಿಸುವುದೇ ಸಾಧನೆಯಾಗಿದೆ. ‘ಜೀವನದಲ್ಲಿ ಆನಂದಪ್ರಾಪ್ತಿಯನ್ನು ಹೇಗೆ ಮಾಡಿ ಕೊಳ್ಳಬೇಕು ?’, ಇದನ್ನು ವಿಜ್ಞಾನವಲ್ಲ, ಅಧ್ಯಾತ್ಮಶಾಸ್ತ್ರವೇ ಕಲಿಸುತ್ತದೆ. ಜೀವನದಲ್ಲಿನ ಪ್ರತಿಯೊಂದು ವಿಷಯದ ಆಧ್ಯಾತ್ಮೀಕರಣ ಮಾಡಿದರೆ ಜೀವನವು ನಿಜವಾದ ಅರ್ಥದಲ್ಲಿ ಆನಂದಮಯವಾಗುತ್ತದೆ.’

– ಶ್ರೀ. ರಾಜ ಧನಂಜಯ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೨.೨೦೧೯)

ವಾಚಕರಿಗೆ ಸವಿನಯ ಕರೆ !

ಸನಾತನ ಸಂಸ್ಥೆಯ ಕಿರುಗ್ರಂಥ ‘ವಿವಾಹಸಂಸ್ಕಾರಗಳ-ಶಾಸ್ತ್ರ ಮತ್ತು ಸದ್ಯದ ಅಯೋಗ್ಯ ಪದ್ಧತಿ’ ಇದರಲ್ಲಿ ವಿವಾಹದಲ್ಲಿನ ಧಾರ್ಮಿಕ ವಿಧಿಗಳ ಹಿಂದಿನ ಶಾಸ್ತ್ರ, ವಿವಾಹದಲ್ಲಿನ ತಪ್ಪು ಆಚರಣೆಗಳು, ವಿವಾಹವನ್ನು ಆದರ್ಶ ರೀತಿಯಲ್ಲಿ ಹೇಗೆ ಮಾಡಬೇಕು, ಎಂಬ ದಿಶಾದರ್ಶನವನ್ನು ಮಾಡಲಾಗಿದೆ. ಈ ಗ್ರಂಥ sanatanshop.com ಈ ಜಾಲತಾಣದಲ್ಲಿ ಉಪಲಬ್ಧವಿದೆ.