ಸುಸಂಸ್ಕಾರಗಳು ಬೇಕೆ ಬೇಕು !

ಚಿತ್ರನಟ ಅಭಿಷೇಕ ಬಚ್ಚನ್‌ ಮತ್ತು ನಟಿ ಐಶ್ವರ್ಯ ರಾಯ್‌-ಬಚ್ಚನ್‌ ಇವರ ಪುತ್ರಿ ಆರಾಧ್ಯ ಇವಳು ಸದಾ ತನ್ನ ತಾಯಿಯೊಂದಿಗಿರುವ ವಿಡಿಯೋಗಳು ಭಿತ್ತರವಾಗುತ್ತಿರುತ್ತವೆ. ಪ್ರಶಸ್ತಿ ಸಮಾರಂಭವಿರಲಿ ಅಥವಾ ವಿದೇಶ ಪ್ರವಾಸವಿರಲಿ ಆರಾಧ್ಯಳು ಯಾವಾಗಲೂ ತನ್ನ ತಾಯಿಯ ಜೊತೆಯಲ್ಲಿರುತ್ತಾಳೆ. ಇತ್ತೀಚೆಗೆ ದುಬೈನಲ್ಲಿ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಎಸ್‌.ಐ.ಎಮ್‌.ಎ.) ಸಮಾರಂಭ ನೆರವೇರಿತು. ಅದರಲ್ಲಿನ ಆರಾಧ್ಯಳ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ, ಅದನ್ನು ನೋಡಿ ಎಲ್ಲರೂ ಆರಾಧ್ಯಳನ್ನು ಪ್ರಶಂಸಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಐಶ್ವರ್ಯ ಇವಳು ನಟ ಶಿವರಾಜಕುಮಾರ ಮತ್ತು ಚಿಯಾನ ವಿಕ್ರಮ ಇವರನ್ನು ಭೇಟಿಯಾಗಲು ಆರಾಧ್ಯಳನ್ನು ಕರೆದುಕೊಂಡು ಹೋದಳು. ಅವರಿಬ್ಬರೂ ಕೈಕುಲುಕಲು (ಶೇಕ ಹ್ಯಾಂಡ್) ಕೈಯನ್ನು ಮುಂದೆ ಮಾಡಿದಾಗ, ಆರಾಧ್ಯಳು ಮೊದಲು ಅವರಿಗೆ ಕೈ ಜೋಡಿಸಿ ನಮಸ್ಕಾರ ಮಾಡಿದಳು ಮತ್ತು ನಂತರ ಅವರ ಕಾಲನ್ನು ಸ್ಪರ್ಶ ಮಾಡಿ ಆಶೀರ್ವಾದವನ್ನು ಪಡೆದಳು. ಶಿವರಾಜಕುಮಾರ ಇವರೂ ಆರಾಧ್ಯಳಿಗೆ ಆಶೀರ್ವಾದ ಮಾಡಿದರು. ಆರಾಧ್ಯಳ ಈ ಕೃತಿಯು ಪತ್ರಕರ್ತರ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲಿಲ್ಲ. ಈ ಹಿಂದೆಯೂ ಒಮ್ಮೆ ವಿಮಾನನಿಲ್ದಾಣದಲ್ಲಿ ಐಶ್ವರ್ಯ ರಾಯ್‌ ಇವರ ತಾಯಿ-ತಂದೆಯವರು ಬಂದಾಗ ಅವಳು ಅವರಿಗೆ ವಿಮಾನ ನಿಲ್ದಾಣದಲ್ಲಿ ಬಗ್ಗಿ ನಮಸ್ಕಾರ ಮಾಡಿದ್ದಳು.

ಐಶ್ವರ್ಯ ಮತ್ತು ಆರಾಧ್ಯ ಬಚ್ಚನ್‌ ಇವರು ಇತ್ತೀಚೆಗೆ ಮೇ ೨೦೨೪ ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ತಾಯಿಗೆ ಕೈಗೆ ಪೆಟ್ಟಾಗಿದ್ದರಿಂದ ಆರಾಧ್ಯಳು ತಾಯಿಗೆ ಸಹಾಯ ಮಾಡುತ್ತಿರುವುದರ ವಿಡಿಯೋ ಕೂಡ ಪ್ರಸಾರವಾಗಿತ್ತು. ೧೩ ವರ್ಷದ ಆರಾಧ್ಯಳಿಂದಾಗುವ ಈ ಕೃತಿಗಳನ್ನು ಪತ್ರಕರ್ತರು ರೆಕಾರ್ಡ ಮಾಡುತ್ತಿದ್ದಾರೆ. ೩ ವರ್ಷದವಳಿದ್ದಾಗ ಐಶ್ವರ್ಯ ಇವರು ಅವಳಿಗೆ ಮಂತ್ರ ಮತ್ತು ಶ್ರೀ ಗಣೇಶನ ಆರತಿಯನ್ನು ಕಲಿಸಿದ ವಿಡಿಯೋ ಕೂಡ ಪ್ರಸಾರವಾಗಿತ್ತು. ಇದು ಬಚ್ಚನ್‌ ಕುಟುಂಬವನ್ನು ಸುತ್ತುವರೆದಿರುವುದರಿಂದ ಈ ವಿಡಿಯೋಗಳು ಭಾರೀ ಪ್ರಮಾಣದಲ್ಲಿ ಪ್ರಸಾರವಾಗುತ್ತವೆ. ಇದರಲ್ಲಿ ಅವರ ಪ್ರಸಿದ್ಧಿ, ಹಣ ಅಥವಾ ಇನ್ನೂ ಕೆಲವು ಉದ್ದೇಶಗಳನ್ನು ಬದಿಗೆ ಇಟ್ಟರೂ ಇದರಿಂದ ಸಂದೇಶ ಮಾತ್ರ ಯೋಗ್ಯವಾಗಿದೆ, ಇದು ಕಂಡುಬರುತ್ತದೆ !

ಇಂದಿನ ದಿನಗಳಲ್ಲಿ ವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಅಜ್ಜಿ-ಅಜ್ಜನವರು ಮನೆಯಲ್ಲಿ ಇರುವುದಿಲ್ಲ ಅಥವಾ ಮನೆಯಲ್ಲಿದ್ದರೂ, ಅವರ ಅಭಿಪ್ರಾಯಕ್ಕೆ ಗೌರವ ಸಿಗುತ್ತದೆ ಎಂದೇನಿಲ್ಲ. ಮನೆಯ ಕುಟುಂಬ, ಸಾಂಸ್ಕೃತಿಕ, ಧಾರ್ಮಿಕ ವಾತಾವರಣದ ಪರಿಣಾಮವೂ ಮಕ್ಕಳ ಮೇಲೆ ಆಗುತ್ತಿರುತ್ತದೆ. ಇದರಿಂದ ಮಕ್ಕಳ ಮೇಲೆ ಸಂಸ್ಕಾರಗಳು ಆಗುತ್ತಿರುತ್ತವೆ. ಮಕ್ಕಳ ಸರ್ವತೋಮುಖ ವಿಕಾಸದ ಮುಖ್ಯ ಜವಾಬ್ದಾರಿಯು ಪಾಲಕರ ಮೇಲೆ ಮತ್ತು ಕುಟುಂಬದಲ್ಲಿನ ಇತರ ವ್ಯಕ್ತಿಗಳ ಮೇಲೆಯೂ ಇರುತ್ತದೆ. ಗರ್ಭಧಾರಣೆಯಿಂದ ವಿವಾಹದ ಅವಧಿಯ ವರೆಗೆ ಪುತ್ರ ಅಥವಾ ಕನ್ಯೆ ಇವರಿಂದ ಸಾತ್ತ್ವಿಕ ಕೃತಿಯಾಗಬೇಕು; ಆದ್ದರಿಂದ ತಾಯಿ, ತಂದೆ ಮತ್ತು ಆಚಾರ್ಯ ವೈದಿಕ ಪದ್ಧತಿಯಿಂದ ಯಾವ ವಿಧಿಗಳನ್ನು ಮಾಡಿಸಿಕೊಳ್ಳುತ್ತಾರೆಯೋ, ಅವುಗಳಿಗೆ ‘ಧರ್ಮಸಂಸ್ಕಾರ’ ಎಂದು ಕರೆಯುತ್ತಾರೆ. ಹಿರಿಯರನ್ನು ಗೌರವಿಸುವುದು, ಇತರರಿಗೆ ಸಹಾಯ ಮಾಡುವುದು, ತ್ಯಾಗ, ಸಂಯಮ, ನಿಜ ಮಾತನಾಡುವುದು, ನೈತಿಕತೆ, ಉಪಾಸನೆ ಮಾಡುವುದು ಮುಂತಾದ ಉತ್ತಮ ವ್ಯಕ್ತಿ ಮತ್ತು ನಾಗರಿಕನಾಗುವ ಸಂಸ್ಕಾರವು ಹೊಸ ಪೀಳಿಗೆಯ ಮೇಲಾಗುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ಪಾಲಕರು ಪ್ರಯತ್ನಿಸಬೇಕು.

– ಶ್ರೀ. ನಿಲೇಶ ಪಾಟೀಲ, ಜಳಗಾವ