ಇತ್ತೀಚೆಗೆ ಪ್ರತಿದಿನ ಹಿಂದೂ ಹುಡುಗಿಯರ ಮೇಲೆ ಮತ್ತು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿರುವುದರ ವಾರ್ತೆಗಳು ಓದಲು ಸಿಗುತ್ತಿವೆ. ಇದಕ್ಕೆ ವೃದ್ಧ ಮಹಿಳೆಯರೂ ಸುರಕ್ಷಿತರಾಗಿಲ್ಲ. ‘ಲವ್ ಜಿಹಾದ್’ ಜಾಲದಲ್ಲಿ ಅನೇಕ ಹಿಂದೂ ಹುಡುಗಿಯರು ಮೋಸ ಹೋಗುತ್ತಿದ್ದಾರೆ. ಬೆಳಗ್ಗೆ ಮನೆಯಿಂದ ಹೊರಗೆ ಹೋದ ಹುಡುಗಿ ಹಿಂದಿರುಗಿ ಮನೆಗೆ ಬರುವಳು ಎನ್ನುವ ಭರವಸೆಯನ್ನು ಪಾಲಕರಿಗೆ ಕೊಡಲು ಬರುವುದಿಲ್ಲ. ಪಾಲಕರು ೨೪ ಗಂಟೆ ತಮ್ಮ ಮಗಳ ಜೊತೆಗೆ ಇರಲು ಸಾಧ್ಯವಿಲ್ಲ, ಸಾಧ್ಯವಾದರೂ ಅವರು ತಮ್ಮ ಮಗಳನ್ನು ರಕ್ಷಿಸಬಹುದು ಎನ್ನುವುದೂ ಸಂಶಯಪಡುವ ವಿಷಯವಾಗಿದೆ. ಇಂತಹ ಸ್ಥಿತಿಯಲ್ಲಿ ಧರ್ಮಾಚರಣೆ ಮಾಡುವುದು, ಸಾಧನೆಯೆಂದು ತಮ್ಮ ಉಪಾಸ್ಯದೇವತೆಯ ನಾಮಜಪವನ್ನು ಅಖಂಡವಾಗಿ ಮಾಡುವುದು, ಇತ್ಯಾದಿ ಸ್ವರಕ್ಷಣೆಯ ಏಕೈಕ ಮಾರ್ಗವಾಗಿದೆ. ಈಗ ಕೆಲವರಿಗೆ ಇದು ಹೇಗೆ ಸಾಧ್ಯ ? ಎನ್ನುವ ಸಂಶಯವೂ ಬರಬಹುದು. ಅದಕ್ಕಾಗಿ ನಾವು ಇತಿಹಾಸದಲ್ಲಿನ ಕೆಲವು ದಾಖಲೆಗಳನ್ನು ನೋಡೋಣ…
೧. ಅಸುರರ ಮುತ್ತಿಗೆಯಲ್ಲಿದ್ದರೂ ಪವಿತ್ರತೆಯಿಂದಾಗಿ ಸೀತಾಮಾತೆಯ ರಕ್ಷಣೆ ಆಯಿತು !
ತ್ರೇತಾಯುಗದಲ್ಲಿ ರಾವಣ ಸೀತಾಮಾತೆಯನ್ನು ಅಪಹರಣ ಮಾಡಿದನು. ಆ ಅವಧಿಯಲ್ಲಿ ಸೀತೆ ಶ್ರೀಲಂಕೆಯಲ್ಲಿ ಅನೇಕ ಅಸುರರ ನಡುವೆ ಒಬ್ಬಳೆ ಇದ್ದಳು. ಆಗ ಅವಳನ್ನು ಯಾರು ರಕ್ಷಿಸಿದರು ? ಎಂಬುದರ ಬಗ್ಗೆ ನಾವು ಚಿಂತನೆ ಮಾಡಿದರೆ, ನಮಗೆ ಅರಿವಾಗುವುದೇನೆಂದರೆ, ಅವಳಲ್ಲಿ ಧರ್ಮಾಚರಣೆ ಅಥವಾ ರಾಮನಾಮದ ಶಕ್ತಿ ಇರುವುದರಿಂದ ಅಸುರರಿಗೆ ಅವಳನ್ನು ಸ್ಪರ್ಶ ಮಾಡಲು ಸಾಧ್ಯವಾಗಲಿಲ್ಲ. ತಾವು ರಾಮಾಯಣದಲ್ಲಿನ ಆ ಪ್ರಸಂಗವನ್ನು ನೋಡಿರಬಹುದು, ಯಾವಾಗ ರಾವಣ ಸೀತೆಯನ್ನು ಭೇಟಿಯಾಗಲು ಬರುತ್ತಿದ್ದನೋ, ಆಗ ಸೀತೆಯ ಕೈಯಲ್ಲಿ ಒಂದು ಹುಲ್ಲುಕಡ್ಡಿ ಇರುತ್ತಿತ್ತು. ಆ ಕಡ್ಡಿಯನ್ನು ಅವಳು ರಾವಣನಿಗೆ ತೋರಿಸುತ್ತಿದ್ದಳು ಹಾಗೂ ರಾವಣನು ಆ ಕಡ್ಡಿಗೆ ಹೆದರುತ್ತಿದ್ದನು. ಆ ಹುಲ್ಲುಕಡ್ಡಿಯೆಂದರೆ ಸಾಧಾರಣ ಹುಲ್ಲಾಗಿರದೆ ಅದು ದರ್ಭೆ ಹುಲ್ಲಾಗಿತ್ತು. ದರ್ಭೆ ಪವಿತ್ರತೆಯ, ಶುಚಿತ್ವದ, ಸಾತ್ತ್ವಿಕತೆಯ ಸಂಕೇತವಾಗಿದೆ. ಇದರ ಅರ್ಥ ರಾವಣ ಸೀತೆಯಲ್ಲಿನ ಸಾತ್ತ್ವಿಕತೆ ಮತ್ತು ಅವಳ ಶುದ್ಧತೆಗೆ ಹೆದರುತ್ತಿದ್ದನು. ಆದ್ದರಿಂದಲೇ ಸೀತೆಯನ್ನು ಸ್ಪರ್ಶ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಧರ್ಮಾಚರಣೆಯ ಮಹತ್ವ ಗಮನಕ್ಕೆ ಬರುತ್ತದೆ.
೨. ದ್ವಾಪರಯುಗದಲ್ಲಿ ಸ್ವತಃ ಭಗವಾನ ಶ್ರೀಕೃಷ್ಣನು ದ್ರೌಪದಿಯ ಸಹಾಯಕ್ಕೆ ಧಾವಿಸಿ ಬಂದನು !
ದ್ವಾಪರಯುಗದಲ್ಲಿ ದ್ಯೂತದಲ್ಲಿ ಪಾಂಡವರು ಎಲ್ಲವನ್ನು ಸೋತಾಗ ದ್ರೌಪದಿಯ ವಸ್ತ್ರಹರಣದ ಸಮಯದಲ್ಲಿ ಅವಳು ಶ್ರೀಕೃಷ್ಣನಿಗೆ ಮೊರೆಯಿಡುತ್ತಾಳೆ. ಆಗ ಶ್ರೀಕೃಷ್ಣ ತಕ್ಷಣ ಧಾವಿಸಿ ಬಂದು ದ್ರೌಪದಿಗೆ ವಸ್ತ್ರವನ್ನು ಪೂರೈಸುತ್ತಾನೆ. ದ್ರೌಪದಿ ಧರ್ಮಾಚರಣೆಯ ಜೀವಂತ ಸಾಕ್ಷಿಯಾಗಿದ್ದಳು, ಸತಿ ಆಗಿದ್ದಳು. ಅವಳಲ್ಲಿಯೂ ಶುದ್ಧತೆ, ಪವಿತ್ರತೆ ಇತ್ಯಾದಿ ಎಲ್ಲ ಗುಣಗಳಿದ್ದ ಕಾರಣ ಅವಳು ಭಗವಾನ ಶ್ರೀಕೃಷ್ಣನ ಪರಮಭಕ್ತೆ ಆಗಿದ್ದ ಕಾರಣ ಭಗವಂತನು ಅವಳಿಗಾಗಿ ತಕ್ಷಣ ಧಾವಿಸಿ ಬಂದನು.
೩. ಕಲಿಯುಗದಲ್ಲಿಯೂ ನಿರ್ದಯಿ ನಿಜಾಮ ಸರದಾರನಿಂದ ಸಂತ ಕಾನ್ಹೋಪಾತ್ರಾಳ ರಕ್ಷಣೆಗಾಗಿ ವಿಠ್ಠಲನು ಅವಳನ್ನು ತನ್ನಲ್ಲಿ ಸಮಾವೇಶಗೊಳಿಸಿಕೊಂಡನು
ಕಲಿಯುಗದಲ್ಲಿನ ಉದಾಹರಣೆಯನ್ನು ನೋಡುವುದಾದರೆ ನಾವು ಮಹಾರಾಷ್ಟ್ರದ ಸಂತ ಕಾನ್ಹೋಪಾತ್ರಳ ಉದಾಹರಣೆಯನ್ನು ನೋಡಬಹುದು. ಯಾವಾಗ ನಿಜಾಮನ ಸರದಾರನು ಕಾನ್ಹೋಪಾತ್ರೆಯ ಮಾನಭಂಗ ಮಾಡಲು ಅವಳನ್ನು ಹಿಂಬಾಲಿಸಿದನೋ, ಆಗ ಅವಳು ವಿಠ್ಠಲನಿಗೆ ಮೊರೆ ಹೋದಳು. ಆಗ ವಿಠ್ಠಲನು ಕಾನ್ಹೋಪಾತ್ರಾಳನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡನು ಹಾಗೂ ನಿಜಾಮನ ಸರದಾರನಿಂದ ಅವಳನ್ನು ರಕ್ಷಣೆ ಮಾಡಿದನು.
೪. ಸತಿ ಅನುಸೂಯಾಳ ಸತ್ತ್ವಪರೀಕ್ಷೆಯಿಂದ ತ್ರಿದೇವರು ಧರ್ಮಾಚರಣೆಯ ಮಹತ್ವವನ್ನು ವಿವರಿಸಿದರು !
‘ದತ್ತ’ ಚರಿತ್ರೆಯಲ್ಲಿ ನೀವು ಓದಿರಬಹುದು, ಸತಿ ಅನುಸೂಯಾಳ ಸತ್ತ್ವಪರೀಕ್ಷೆ ಮಾಡಲು ತ್ರಿದೇವರು ಅವಳಿಗೆ ದಿಗಂಬರ ಅವಸ್ಥೆಯಲ್ಲಿ ಭಿಕ್ಷೆ ನೀಡಬೇಕೆಂದು ಹೇಳಿದರು. ಆಗ ಅವಳಲ್ಲಿನ ಸತಿತ್ವದ ಪ್ರಭಾವದಿಂದ ತ್ರಿದೇವರು ೩ ಬಾಲಕರಾಗಿ ರೂಪಾಂತರವಾದರು. ಈ ಪ್ರಸಂಗದಿಂದ ಭಗವಂತ ನಮಗೆ ಏನು ಕಲಿಸುತ್ತಾನೆ ? ಎಂಬುದನ್ನು ಅರ್ಥ ಮಾಡಿಕೊಂಡು ಧರ್ಮಾಚರಣೆಯಲ್ಲಿ ಎಷ್ಟು ಸಾಮರ್ಥ್ಯವಿದೆ, ಎಂಬುದನ್ನು ಸಾಮಾನ್ಯರಾದ ನಾವು ತಿಳಿದುಕೊಳ್ಳಬೇಕು.
ಲೇಖನದಲ್ಲಿ ಮೇಲೆ ಉಲ್ಲೇಖಿಸಿದ ಎಲ್ಲ ಪ್ರಸಂಗಗಳು ನಮ್ಮ ಇತಿಹಾಸದಲ್ಲಿ ನಡೆದುಹೋಗಿವೆ, ಅವುಗಳು ನಮಗೆ ಧರ್ಮಾಚರಣೆಯ ಮತ್ತು ಸಾಧನೆಯ ಸಾಮರ್ಥ್ಯವನ್ನು ಸ್ಪಷ್ಟವಾಗಿ ವಿವರಿಸಿ ಹೇಳುತ್ತವೆ.
೫. ಧರ್ಮಾಚರಣೆಯಿಂದ ರಕ್ಷಣೆ ಹೇಗೆ ಆಗುತ್ತದೆ ?
ಈಗ ಕೆಲವರ ಮನಸ್ಸಿನಲ್ಲಿ, ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಪ್ರಶ್ನೆ ಉದ್ಭವಿಸಬಹುದು ? ಯಾವಾಗ ನಾವು ಧರ್ಮಾಚರಣೆ ಮಾಡುತ್ತೇವೆಯೋ, ಆಗ ನಮ್ಮಲ್ಲಿನ ಸತ್ತ್ವಗುಣ ಹೆಚ್ಚಾಗುತ್ತದೆ. ಆ ಸತ್ತ್ವಗುಣದ ಸಂರಕ್ಷಕ ಕವಚ ನಮ್ಮ ಸುತ್ತಲೂ ಸಿದ್ಧವಾಗುತ್ತದೆ. ಅಸುರಿ ವೃತ್ತಿಯ ಜನರು ರಜ-ತಮಪ್ರಧಾನ ವೃತ್ತಿಯವರಾಗಿರುತ್ತಾರೆ. ಇಂದು ರಜ-ತಮದ ಪ್ರಭಾವ ಹೆಚ್ಚಿರುವುದರಿಂದ ಆ ಜನರು ನಮ್ಮ ಮೇಲೆ ವರ್ಚಸ್ವವನ್ನು ಬೀರುತ್ತಿದ್ದಾರೆ; ಆದರೆ ಯಾವಾಗ ಧರ್ಮಾಚರಣೆಯಿಂದ ನಮ್ಮ ಸಾತ್ತ್ವಿಕತೆ ಹೆಚ್ಚಾಗುವುದೋ, ಆಗ ರಜ-ತಮದ ಪ್ರಭಾವ ಕಡಿಮೆಯಾಗುತ್ತದೆ. ನಮ್ಮ ಸತ್ತ್ವಗುಣದ ಪ್ರಭಾವದಿಂದ ರಜ-ತಮಪ್ರಧಾನದ ಜನರು ನಮ್ಮ ಮೇಲೇರಿ ಬರಲು ಸಾಧ್ಯವಿಲ್ಲ.
೬. ಧರ್ಮಾಚರಣೆ ಮಾಡುವುದರಿಂದ ಈಶ್ವರನ ಆಶೀರ್ವಾದ ದೊರೆತು ಅವನು ರಕ್ಷಣೆಯನ್ನು ಮಾಡಿಯೇ ಮಾಡುತ್ತಾನೆ !
ಈ ಮೇಲಿನ ಪ್ರಸಂಗಗಳ ಮೂಲಕ ನಮಗೆ ಏನು ಕಲಿಯಲು ಸಿಗುತ್ತದೆಯೆಂದರೆ, ತನ್ನ ಭಕ್ತರಿಗಾಗಿ ಭಗವಂತ ಸ್ವತಃ ಓಡಿ ಬರುತ್ತಾನೆ. ಇಂದಿನ ಕಲಿಯುಗದಲ್ಲಿ ನಮಗೆ ಅಷ್ಟು ಶ್ರದ್ಧೆ ಇಲ್ಲದಿರಬಹುದು, ಆದ್ದರಿಂದ ಭಗವಂತನು ನಮ್ಮ ಸಹಾಯಕ್ಕಾಗಿ ಧಾವಿಸಿ ಬಂದರೂ ನಮಗೆ ತಿಳಿಯುವುದಿಲ್ಲ; ಆದರೆ ಒಂದಲ್ಲ ಒಂದು ರೀತಿಯಲ್ಲಿ ಮಾನವನ ಅಥವಾ ಪಶುಗಳ ರೂಪದಲ್ಲಿ ಅವನು ಬಂದು ಸಹಾಯ ಮಾಡಿ ಹೋಗುತ್ತಾನೆ, ಎನ್ನುವ ವಿಷಯದಲ್ಲಿ ಸಂಶಯಪಡುವ ಅವಶ್ಯಕತೆಯಿಲ್ಲ. ಇದರ ಅನೇಕ ದಾಖಲೆಗಳು ನಮಗೆ ಇಂದು ಕೂಡ ಓದಲು, ಕೇಳಲು ಸಿಗುತ್ತವೆ. ಕೆಲವೇ ದಿನಗಳ ಹಿಂದೆ ಗುಜರಾತದಲ್ಲಿ ಕೆಲವು ಜೈನ ಸಾಧ್ವಿಯರು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬ ಮತಾಂಧನು ಅವರ ಮೇಲೆ ದಾಳಿ ಮಾಡಿದನು. ಆಗ ಒಬ್ಬ ವ್ಯಕ್ತಿ ಬಂದು ಅವರನ್ನು ರಕ್ಷಿಸಿದನು. ಈ ಪ್ರಸಂಗದಲ್ಲಿ ಆ ವ್ಯಕ್ತಿಯ ರೂಪದಲ್ಲಿ ಭಗವಂತನೆ ಸಾಧ್ವಿಯರನ್ನು ರಕ್ಷಿಸಲು ಓಡಿ ಬಂದನು, ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲಿ ಮಾದರಿಗಾಗಿ ಸನಾತನದ ಇಬ್ಬರು ಸಾಧಕಿಯರ ಉದಾಹರಣೆಯನ್ನು ನೀಡುತ್ತಿದ್ದೇನೆ.
ಒಮ್ಮೆ ಓರ್ವ ಸಾಧಕಿಯ ಬಸ್ ತಪ್ಪಿ ಹೋದ ಕಾರಣ ಅವಳು ಬಸ್‌ನಿಲ್ದಾಣದಲ್ಲಿ ಇನ್ನೊಂದು ಬಸ್‌ಗಾಗಿ ಕಾಯುತ್ತಾ ನಿಂತಿದ್ದಳು. ತಡರಾತ್ರಿಯಾಗಿತ್ತು. ಬಸ್‌ನಿಲ್ದಾಣದಲ್ಲಿ ಜನಸಂದಣಿಯೂ ಕಡಿಮೆಯಿತ್ತು. ಅದೇ ವೇಳೆಗೆ ಕೆಲವು ಗೂಂಡಾ ಪ್ರವೃತ್ತಿಯ ಜನರು ಸಾಧಕಿಯ ಸಮೀಪ ಬರುತ್ತಿದ್ದರು. ಆಗ ಸಾಧಕಿ ಸ್ವಲ್ಪ ಹೆದರಿದಳು; ಆದರೆ ತಕ್ಷಣ ಅವಳಿಗೆ ಓರ್ವ ಸಂತರು ಪ್ರಸಾದವೆಂದು ಚಾಕಲೇಟ್ ಕೊಟ್ಟಿರುವುದು ನೆನಪಾಯಿತು; ಅವಳು ಚಾಕಲೇಟ್ ತಿಂದು ಅದರ ಹೊದಿಕೆಯನ್ನು ಪರ್ಸ್‌ನಲ್ಲಿ ಇಟ್ಟುಕೊಂಡಿದ್ದಳು. ಅವಳು ಆ ಚಾಕಲೇಟಿನ ಹೊದಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ದೇವರಿಗೆ ಮೊರೆ ಹೋದಳು. ಏನಾಯಿತೊ ಏನೋ, ಅಷ್ಟರಲ್ಲಿಯೆ ಆ ಗೂಂಡಾ ಪ್ರವೃತ್ತಿಯ ಜನರು ಹಿಂತಿರುಗಿ ಹೊರಟು ಹೋದರು. ಮೇಲ್ನೋಟಕ್ಕೆ ನಮಗೆ ಈ ಪ್ರಸಂಗ ವಿಚಿತ್ರ ಹಾಗೂ ಮೋಜೆನಿಸಬಹುದು; ಆದರೆ ಆ ಸಾಧಕಿಯ ಶ್ರದ್ಧೆಯಿಂದ ಭಗವಂತನೆ ಅವಳನ್ನು ರಕ್ಷಣೆ ಮಾಡಿದನು’, ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಇನ್ನೊಂದು ಪ್ರಸಂಗದಲ್ಲಿ ಇಬ್ಬರು ಸಾಧಕಿಯರು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆ ಬಸ್‌ನಲ್ಲಿ ಕೆಲವು ಪುಂಡರು ಬೇರೆ ಹುಡುಗಿಯರಿಗೆ ಹಾಸ್ಯ ಮಾಡುತ್ತಿದ್ದರು. ಆದರೆ ಅದೇ ಬಸ್‌ನಲ್ಲಿ ಕುಳಿತ ಸಾಧಕಿಯರಿಗೆ ಆ ಹುಡುಗರು ಏನೂ ಹೇಳುತ್ತಿರಲಿಲ್ಲ. ಬಸ್ ಊರಿಗೆ ತಲುಪಿದ ನಂತರ ಆ ಹುಡುಗರಿಗೆ ಅವರ ಉಳಿದ ಮಿತ್ರರು, ”ನೀನು ಆ ಇಬ್ಬರು ಹುಡುಗಿಯರಿಗೆ ಏಕೆ ಪೀಡಿಸಲಿಲ್ಲ ?” ಎಂದು ಕೇಳಿದರು, ”ಆ ಇಬ್ಬರು ಹುಡುಗಿಯರ ಕೈಗಳಲ್ಲಿ ಹಸಿರು ಬಳೆಗಳಿದ್ದವು. ಹಣೆಯ ಮೇಲೆ ಕುಂಕುಮದ ಬೊಟ್ಟು ಇತ್ತು. ಆದ್ದರಿಂದ ಅವರಿಗೆ ಪೀಡಿಸುವ ಮನಸ್ಸೇ ಆಗಲಿಲ್ಲ” ಎಂದನು. ಇಲ್ಲಿ ಸಾಧಕಿಯರು ಧರ್ಮಾಚರಣೆ ಮಾಡುತ್ತಿರುವುದರಿಂದ ದೇವರು ಅವರ ರಕ್ಷಣೆ ಮಾಡಿದರು, ಎಂಬುದು ಗಮನಕ್ಕೆ ಬರುತ್ತದೆ.
೭. ಧರ್ಮಾಚರಣೆ ಹೇಗಿರಬೇಕು ?
ಇಂದಿನ ಕೆಲವು ಬುದ್ಧಿಜೀವಿ ಭಗಿನಿಯರಿಗೆ ‘ಕೇವಲ ಕುಂಕುಮ ಹಚ್ಚುವುದು, ಬಳೆ ತೊಡುವುದೆಂದರೆ ಧರ್ಮಾಚರಣೆಯಾಗುತ್ತದೆಯೇ ? ಎಂದು ಅನಿಸಬಹುದು. ನಾವು ಆಧುನಿಕರಾಗಿರುತ್ತೇವೆ’, ಅಂದರೆ ಧರ್ಮಾಚರಣೆ ಮಾಡುವುದಿಲ್ಲ ಎಂದಾಗುವುದಿಲ್ಲ, ಧರ್ಮಾಚರಣೆಯು ಆಡಂಬರವಲ್ಲ; ಆದರೆ ಕುಂಕುಮ ಹಚ್ಚುವುದು, ಬಳೆ ತೊಡುವುದು, ಇದು ಧರ್ಮಾಚರಣೆಯ ಒಂದು ಮಹತ್ವದ ಅಂಗವಾಗಿದೆ ಹಾಗೂ ಅದರಿಂದ ಲಾಭವಾಗುತ್ತದೆ, ಎಂಬುದನ್ನು ಅನೇಕ ಜನರು ಅನುಭವಿಸಿದ್ದಾರೆ. ನಾವು ಮಾಡುವ ಧರ್ಮಾಚರಣೆ ಅಪೂರ್ಣವಾಗಿದ್ದರೆ ಅದರಿಂದ ಲಾಭವಾಗುವುದಿಲ್ಲ, ನಾವು ಅದನ್ನು ಮನಃಪೂರ್ವಕ, ಶಾಸ್ತ್ರಾನುಸಾರ ಮಾಡಬೇಕು. ಆಗ ಮಾತ್ರ ಈಶ್ವರೀ ಶಕ್ತಿ ನಮ್ಮ ರಕ್ಷಣೆ ಮಾಡುತ್ತದೆ.
೮. ಧರ್ಮಾಚರಣೆಯಿಂದ ಶೌರ್ಯ ನಿರ್ಮಾಣವಾಗುತ್ತದೆ !
ಧರ್ಮಾಚರಣೆಯಿಂದ ಸಾತ್ತ್ವಿಕ ಶಕ್ತಿ ಹೆಚ್ಚಾದರೆ ನಮ್ಮಲ್ಲಿ ಒಂದು ರೀತಿಯ ದೃಢತೆ ನಿರ್ಮಾಣವಾಗುತ್ತದೆ, ಭಯ ದೂರವಾಗುತ್ತದೆ. ‘ನಾವು ಅಬಲೆಯರಲ್ಲ, ಸಕ್ಷಮರಾಗಿದ್ದೇವೆ’, ಎನ್ನುವ ಅರಿವು ಮೂಡುತ್ತದೆ. ನಮ್ಮಲ್ಲಿ ಆತ್ಮಬಲ ಹೆಚ್ಚಾಗುತ್ತದೆ. ಇವೆಲ್ಲದರ ಜೊತೆಗೆ ಧರ್ಮಾಚರಣೆಯದ್ದೆ ಒಂದು ಭಾಗವೆಂದು ಸ್ವರಕ್ಷಣೆಯ ಕೆಲವು ಪ್ರಕಾರಗಳನ್ನು ಕಲಿತುಕೊಂಡರೆ ಯಾವುದೇ ದುಷ್ಟ ಪ್ರವೃತ್ತಿಯ ಮನುಷ್ಯ ನಮ್ಮತ್ತ ಕಣ್ಣೆತ್ತಿ ನೋಡಲು ಸಾಹಸ ಮಾಡಲಿಕ್ಕಿಲ್ಲ !
– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ. (೩.೬.೨೦೨೪)