೧. ಹದಗೆಟ್ಟ ಕುಟುಂಬವ್ಯವಸ್ಥೆ ಮತ್ತು ನಿರ್ಮಾಣವಾದ ಒತ್ತಡಗ್ರಸ್ತ ಸ್ಥಿತಿ
೧ ಅ. ಅವಿಭಕ್ತ ಕುಟುಂಬಪದ್ಧತಿಯು ಇಲ್ಲವಾಗಿ ವಿಭಕ್ತ ಕುಟುಂಬಪದ್ಧತಿಯು ರೂಢಿಯಲ್ಲಿ ಬರುವುದು ಮತ್ತು ಸ್ವಾರ್ಥದಿಂದ ಕುಟುಂಬದ ಸದಸ್ಯರಲ್ಲಿ ಸಂಘಭಾವ ಮತ್ತು ಪ್ರೀತಿ ಕಣ್ಮರೆಯಾಗುವುದು : ‘ಈಗ ಹಿಂದಿನ ಅವಿಭಕ್ತ ಕುಟುಂಬವ್ಯವಸ್ಥೆ ನಿಂತು ಹೋಗಿದೆ. ಇಬ್ಬರ-ಮೂರು ಜನರ ವಿಭಕ್ತ ಕುಟುಂಬದಲ್ಲಿಯೂ ದಿನವಿಡಿ ಒಟ್ಟಿಗೆ ಇರುವುದು, ಮುಕ್ತ ಮಾತುಕತೆ, ನಗುತ್ತಾ ಹರಟೆ ಹೊಡೆಯುವುದು, ವಿಚಾರಗಳನ್ನು ಹಂಚಿಕೊಳ್ಳುವುದು ಕುಟುಂಬದಲ್ಲಿ ಒಗ್ಗಟ್ಟು, ಪ್ರೀತಿ ಮತ್ತು ಆನಂದವನ್ನು ಹೆಚ್ಚಿಸುವುದು, ಇವೆಲ್ಲವೂ ಕಡಿಮೆ ಆಗಿವೆ. ‘ಇತರರ ವಿಚಾರವಾಗದ ಕಾರಣ ಸಂಬಂಧಪಟ್ಟವರು ತಮ್ಮ ನೌಕರಿ, ಕೆಲಸ, ಸ್ನೇಹಿತರು-ಸ್ನೇಹಿತೆಯರು, ಸಹಚರರೊಂದಿಗೆ ಮಾತನಾಡುವುದು ಮುಂತಾದವುಗಳಲ್ಲಿ ತೊಡಗಿರುತ್ತಾರೆ. ಆದುದರಿಂದ ‘ಕುಟುಂಬದ ಸದಸ್ಯರೊಂದಿಗೆ ಮಾತನಾಡಬೇಕು, ಅವರಿಗೆ ಸ್ವಲ್ಪ ಸಮಯ ನೀಡಬೇಕು, ಪ್ರೀತಿ ಮತ್ತು ಆನಂದವನ್ನು ಹಂಚಿಕೊಳ್ಳಬೇಕು’, ಎಂಬುದರ ಅರಿವು ಯಾರಲ್ಲಿಯೂ ಉಳಿದಿಲ್ಲ. ಸದಾ ಸಂಚಾರವಾಣಿಯಲ್ಲಿ ಮಾತನಾಡುವುದು ಮತ್ತು ಮನೆ ಮತ್ತು ಕಚೇರಿಯ ಕೆಲಸಗಳಲ್ಲಿ ವ್ಯಸ್ತವಾಗಿರುವ ದೃಶ್ಯ ಎಲ್ಲ ಮನೆಗಳಲ್ಲಿ ಕಂಡು ಬರುತ್ತದೆ.
೧. ಆ. ಪತಿ-ಪತ್ನಿಯರಿಬ್ಬರೂ ನೌಕರಿ ಮಾಡುತ್ತಿರುವುದರಿಂದ ಒತ್ತಡಮಯ ಜೀವನವನ್ನು ನಡೆಸುತ್ತಿರುವುದು ಮತ್ತು ಮನಃಶಾಂತಿ ನಶಿಸಿ ಹೋಗಿ ವ್ಯಕ್ತಿಯ ಸ್ವಾರ್ಥಿ ವಿಚಾರ ಬಲಗೊಳ್ಳುವುದು : ಪತಿ-ಪತ್ನಿಯರಿಬ್ಬರೂ ದಿನವಿಡಿ ನೌಕರಿ ಮಾಡುತ್ತಾರೆ. ಮಕ್ಕಳಿದ್ದರೆ, ಅವರನ್ನು ಶಿಶುಸಂಗೋಪನಾ ಕೇಂದ್ರದಲ್ಲಿ ಇಡುತ್ತಾರೆ ಅಥವಾ ಮಗುವನ್ನು ನೋಡಿಕೊಳ್ಳಲು ಒಬ್ಬ ದಾದಿಯನ್ನು ನೇಮಿಸುತ್ತಾರೆ. ದಿನವಿಡಿ ಗಡಿಯಾರದ ಮುಳ್ಳುಗಳ ಕಡೆಗೆ ಗಮನವಿಟ್ಟು ಎಲ್ಲರ ಧಾವಂತ ನಡೆದಿರುತ್ತದೆ. ಆದುದರಿಂದ ಕುಟುಂಬದಲ್ಲಿ ‘ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು, ಇತರರ ವಿಚಾರ ಮಾಡಿ ಅವರಿಗೆ ಸಹಾಯ ಮಾಡುವುದು, ಮಾನಸಿಕ ಮತ್ತು ಇತರ ರೀತಿಯಲ್ಲಿ ಆಧಾರ ನೀಡುವುದು, ಇತರರಿಗೆ ಆನಂದ ಮತ್ತು ಪ್ರೀತಿಯನ್ನು ನೀಡುವುದು ಈ ರೀತಿ ವಿಚಾರವೇ ಆಗುವುದಿಲ್ಲ.
ಪ್ರತಿಯೊಬ್ಬರು ಒತ್ತಡ-ಸಂಘರ್ಷದಲ್ಲಿಯೇ ಬದುಕುವುದರಿಂದ ಮನಃಶಾಂತಿ ಕದಡುತ್ತದೆ. ವ್ಯಕ್ತಿಯ ಒಂಟಿತನ ಹೆಚ್ಚಾಗುತ್ತದೆ ಮತ್ತು ಸ್ವಾರ್ಥದ ವಿಚಾರಗಳು ಬಲಗೊಳ್ಳುತ್ತವೆ. ಆದುದರಿಂದ ‘ಪ್ರೇಮಭಾವ, ತ್ಯಾಗ, ಸಹಜೀವನದ ಆನಂದವನ್ನು ಅನುಭವಿಸುವುದು’, ಇವುಗಳನ್ನು ಅವರು ಮರೆತುಬಿಡುತ್ತಾರೆ. ಸಂಘರ್ಷದಿಂದ ಜೀವನದ ಆನಂದವು ಕಳೆದು ಹೋಗಿ ನಕಾರಾತ್ಮಕತೆಯ ಆಧಾರ ಪಡೆಯಲಾಗುತ್ತದೆ. ಸಂಯಮದ ಕಟ್ಟೆ ಒಡೆದು ಹೋಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಅತಿರೇಕದ ವಿಚಾರ ಮಾಡಿ ಅವಿವೇಕದಿಂದ ಮತ್ತು ಗಡಿಬಿಡಿಯಿಂದ ಅಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.
೧ ಇ. ಸ್ವಕೇಂದ್ರಿತ ಒಂದು ನಿಶ್ಚಿತ ಜೀವನಕ್ರಮದಿಂದಾಗಿ ಪರಸ್ಪರರ ಸಂಬಂಧ ಹದಗೆಟ್ಟು ಸಂಬಂಧಗಳಲ್ಲಿ ಅಂತರ ಮೂಡುವುದು ಮತ್ತು ಉದ್ವಿಗ್ನ ಜೀವನವನ್ನು ಎದುರಿಸಬೇಕಾಗುವುದು : ಕುಟುಂಬದಲ್ಲಿ ತನ್ನತನ ಮತ್ತು ಪ್ರೇಮ ನಾಶವಾಗಿ ಮನೆಗೆ ‘ಲಾಡ್ಜಿಂಗ್’ನ ಒಂದು ಕೋಣೆಯಂತಾಗಿದೆ. ದಿನದ ಯಾವುದೋ ಸಮಯಕ್ಕೆ ಮನೆಗೆ ಬರುವುದು, ತಿನ್ನು-ಕುಡಿ, ಮಲಗು ಮತ್ತು ಹೊರಟುಹೋಗು ! ಪ್ರತಿಯೊಬ್ಬರು ತಮ್ಮ ವೈಯಕ್ತಿಕ ದೈನಂದಿನ ಜೀವನದಲ್ಲಿ ಸಕ್ರಿಯಗೊಂಡಿದ್ದಾರೆ. ಒಂದು ಚೌಕಟ್ಟುಬದ್ಧ ಜೀವನಕ್ರಮದಿಂದ ಹೊರಗೆ ಬಂದು ಕೌಟುಂಬಿಕ ಜೀವನದ ಆನಂದವನ್ನು ಪಡೆಯಲು ಯಾರೂ ಪ್ರಯತ್ನಿಸುವುದೇ ಇಲ್ಲ. ಇದರಿಂದ ಪರಸ್ಪರರ ಸಂಬಂಧ ಹದಗೆಟ್ಟು ಸಂಬಂಧಗಳು ದೂರವಾಗುತ್ತವೆ. ಕೆಲವೊಮ್ಮೆ ಸಂಬಂಧಗಳು ಕಡಿದು ಹೋಗುತ್ತವೆ, ಕುಟುಂಬಗಳು ಒಡೆಯುತ್ತವೆ ಮತ್ತು ವ್ಯಕ್ತಿಗೆ ನಿರಾಶೆ ಬರುತ್ತದೆ. ಒತ್ತಡಯುಕ್ತ ಜೀವನವನ್ನು ಎದುರಿಸಬೇಕಾಗುತ್ತದೆ.
೨. ಕುಸಿಯುತ್ತಿರುವ ಕುಟುಂಬ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸಲು ಉಪಾಯ
೨. ಅ. ಪರಸ್ಪರರಲ್ಲಿ ಉತ್ತಮ ಪ್ರೀತಿಯ ಸಂಬಂಧವಿರುವ ಮತ್ತು ಆದರ್ಶ ಪದ್ದತಿಯಿಂದ ಜೀವನವನ್ನು ನಡೆಸುವ ಕುಟುಂಬಗಳು ತಯಾರಾಗಲು ಪ್ರಯತ್ನಗಳು ಆವಶ್ಯಕ ! : ಆದಷ್ಟು ಬೇಗನೆ ಇದಕ್ಕಾಗಿ ಪರಿಹಾರ ಕಂಡು ಹಿಡಿಯಬೇಕಾಗುವುದು. ಪರಸ್ಪರರಲ್ಲಿ ಪ್ರೀತಿಯ ಸಂಬಂಧವಿರುವ, ಮಾತುಕತೆ ನಡೆಸುವ, ಮನೆಯನ್ನು ಆನಂದದಿಂದಿಡಲು ಪ್ರಯತ್ನಿಸಿ ಆದರ್ಶ ರೀತಿಯಲ್ಲಿ ಜೀವನವನ್ನು ನಡೆಸುವ ಕುಟುಂಬಗಳನ್ನು ತಯಾರಿಸಬೇಕಾಗುವುದು. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜವನ್ನು ಅಭಿವೃದ್ಧಿಗೊಳಿಸುವತ್ತ ಪ್ರಯತ್ನವಾಗಬೇಕು.
ಈ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾರ್ಯವನ್ನು ಆರಂಭಿಸಿದೆ. ನಾವು ಸಹ ಆ ಕಾರ್ಯಕ್ಕೆ ವೇಗ ನೀಡಲು ಸ್ವಲ್ಪ ಕೈಜೋಡಿಸಬೇಕು, ಹೀಗಾದರೆ ಮಾತ್ರ ‘ಪರಸ್ಪರರಿಂದ ಪ್ರೇರಣೆ ಪಡೆದು ಸಮಾಜವು ಮುಂದೆ ಮುಂದೆ ಹೋಗುವುದು’, ಎಂಬುದರಲ್ಲಿ ಸಂದೇಹವಿಲ್ಲ. ಕುಟುಂಬದಲ್ಲಿ ಉತ್ತಮ ಪರಿವರ್ತನೆಯಾದರೆ ಭಾರತದ ಮುಂದಿನ ಪೀಳಿಗೆ ಭಾರತದ ಸಮೃದ್ಧ ಮತ್ತು ದೃಢವಾದ ಬುನಾದಿಯನ್ನು ರಚಿಸುತ್ತದೆ ! ಇಲ್ಲದಿದ್ದರೆ ಒಂದರ ಹಿಂದೆ ಇನ್ನೊಂದು ಪೀಳಿಗೆ ಹಾಳಾಗಿ ಮನುಷ್ಯನ ಜೀವನದಲ್ಲಿ ಸ್ವಾರಸ್ಯ ಉಳಿಯುವುದಿಲ್ಲ.
೨ ಆ. ಆದರ್ಶ ಕುಟುಂಬವನ್ನು ಹೇಗೆ ರೂಪಿಸಬೇಕು ? : ಮುಂದಿನ ಕೆಲವು ಅಂಶಗಳನ್ನು ಮಂಡಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಎಲ್ಲರೂ ಆ ಬಗ್ಗೆ ವಿಚಾರ ಮಾಡಿ ಪ್ರಚಾರ ಮತ್ತು ಪ್ರಸಾರ ಮಾಡೋಣ, ಹಾಗಾದರೆ ಮಾತ್ರ ಕೆಲವು ಸಕಾರಾತ್ಮಕ ವಿಷಯಗಳು ಮನುಷ್ಯನ ಕೈಗೆ ಬರುವವು !
೨ ಆ ೧. ಕುಟುಂಬದವರು ಪ್ರತಿದಿನ ೧ ಗಂಟೆ ಒಟ್ಟುಗೂಡಿ ಇತರರಿಗೆ ಪ್ರೀತಿಯಿಂದ ಆಧಾರ ನೀಡಬೇಕು ! : ಮನೆಯಲ್ಲಿರುವವರೆಲ್ಲರೂ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಒಟ್ಟಿಗೆ ಸೇರಬೇಕು. ಈ ಸಮಯದಲ್ಲಿ ಪರಸ್ಪರರ ಶಾರೀರಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ವಿಚಾರಣೆ ಮಾಡಬೇಕು. ಶಾಲೆ, ಹಾಗೆಯೇ ಕಚೇರಿಯಲ್ಲಿನ ವಾತಾವರಣದ ಮಾಹಿತಿ ಪಡೆಯಬೇಕು. ಪರಸ್ಪರರನ್ನು ಅರ್ಥ ಮಾಡಿಕೊಂಡು ಮಾನಸಿಕ ಮತ್ತು ಪ್ರೀತಿಯ ಆಧಾರ ನೀಡಬೇಕು. ವಾರದ ಆಯೋಜನೆ, ಕುಳಿತುಕೊಂಡು ಆಟ, ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳುವುದು, ಕಲೆಗಳ ಪ್ರಸ್ತುತೀಕರಣ ಇತ್ಯಾದಿ ಕಾರ್ಯಕ್ರಮ, ಈ ಎಲ್ಲವುಗಳಲ್ಲಿ ಎಲ್ಲರ ಸಹಭಾಗವಿರುವಂತಹ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
೨ ಆ ೨. ಸುಸಂಸ್ಕಾರಗಳ ಸಂವರ್ಧನೆ : ಪ್ರತಿದಿನ ಸಾಯಂಕಾಲ ಎಲ್ಲರೂ ಒಟ್ಟು ಸೇರಿ ಪ್ರಾರ್ಥನೆ, ಭಜನೆ ಮತ್ತು ನಾಮಸ್ಮರಣೆಯನ್ನು ಮಾಡಬೇಕು. ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಹೇಳಿ ‘ಅವರಲ್ಲಿ ಆಧ್ಯಾತ್ಮಿಕ ಸಂಸ್ಕಾರಗಳಾಗುವಂತೆ ಪ್ರಯತ್ನಿಸಬೇಕು. ‘ಮಕ್ಕಳಲ್ಲಿ ನಮ್ರತೆ’, ‘ದೊಡ್ಡವರನ್ನು ಗೌರವಿಸುವುದು’, ‘ಗೌರವಾತಿಥ್ಯ ಮಾಡುವುದು’, ಇವುಗಳಂತಹ ಭಾರತೀಯ ಸಂಸ್ಕಾರ ಮತ್ತು ಗುಣಗಳ ಹೆಚ್ಚಳ, ಹಾಗೆಯೇ ಸಂವರ್ಧನೆ ಆಗುವಂತೆ ನೋಡಿಕೊಳ್ಳಬೇಕು.
೨ ಆ ೩. ಕೆಲಸಗಳ ಸುನಿಯೋಜನೆ : ಮನೆಯಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನು ಹಂಚಿಕೊಂಡು ಮಾಡಬೇಕು. ಪರಸ್ಪರರ ಕೆಲಸಗಳು ಬೇಗ ಆಗಲು ಅವರಿಗೆ ಕೈಜೋಡಿಸಿದರೆ ಆತ್ಮೀಯತೆ, ಪ್ರೇಮಭಾವ ಮತ್ತು ತ್ಯಾಗದ ಭಾವನೆ ಹೆಚ್ಚಾಗಲು ಸಹಾಯವಾಗುತ್ತದೆ !
೨ ಆ ೪. ಭೋಜನ : ಮನೆಯಲ್ಲಿ ಎಲ್ಲರೂ ರಾತ್ರಿಯ ಭೋಜನವನ್ನು ಒಟ್ಟಿಗೆ ಮಾಡಬೇಕು. ಈ ಸಮಯದಲ್ಲಿ ದೂರಚಿತ್ರವಾಹಿನಿ ಉಪಕರಣ (ಟಿ.ವಿ.), ಹಾಗೆಯೇ ಸಂಚಾರವಾಣಿ (ಮೊಬೈಲ್) ಬಂದ್ ಮಾಡಿ ಇಡಬೇಕು.
೨ ಆ ೫. ಇತರರೊಂದಿಗೆ ಗೌರವದಿಂದ ವರ್ತಿಸಬೇಕು : ನಿಯಮಿತವಾಗಿ ನಮ್ಮನ್ನು ಭೇಟಿಯಾಗುವ ಸ್ವಚ್ಛತಾ ಸಿಬ್ಬಂದಿ, ಪತ್ರಿಕೆ ಮತ್ತು ಹಾಲು ವಿತರಕರು, ತರಕಾರಿ ಮಾರಾಟಗಾರರು ಮುಂತಾದವರನ್ನು ಗೌರವಿಸಬೇಕು. ಅವರ ಕುಶಲೋಪರಿಯನ್ನು ವಿಚಾರಿಸಬೇಕು. ಮನೆಯ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಬೇಕು.
೨ ಆ ೬. ಇತರ ಕುಟುಂಬದವರೊಂದಿಗೆ ಸ್ನೇಹ ಬೆಳೆಸಿ ಸುಖ-ದುಃಖವನ್ನು ಹಂಚಿಕೊಳ್ಳುವುದು : ನಮಗೆ ಇಷ್ಟವಾಗುವ ೩-೪ ಕುಟುಂಬಗಳನ್ನು ಆಯ್ದು ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ತಿಂಗಳಲ್ಲಿ ಒಂದು ಬಾರಿಯಾದರೂ ಅವರ ಮನೆಗೆ ಸಹಪರಿವಾರದೊಂದಿಗೆ ಹೋಗುವುದು, ಅವರನ್ನು ನಮ್ಮ ಮನೆಗೆ ಕರೆಯುವುದು, ಹೀಗೆ ಮಾಡಬೇಕು. ಇಂತಹ ನಿಯಮಿತ ಭೇಟಿಗಳಿಂದ ಸುಖ-ದುಃಖವನ್ನು ಹಂಚಿಕೊಳ್ಳಲು ಸಾಧ್ಯವಾಗಿ ಪರಸ್ಪರರಿಗೆ ಸಹಾಯ ಮಾಡುವುದು ಹೆಚ್ಚಾಗುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲೂ ಸಹಾಯವಾಗುತ್ತದೆ.
೩. ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ತೆಗೆದುಕೊಳ್ಳಬೇಕಾದ ಕಾಳಜಿ
೩ ಅ. ಪ್ರಾಣಾಯಾಮ, ಯೋಗಾಸನಗಳು, ವ್ಯಾಯಾಮ ಇತ್ಯಾದಿ ಮಾಡುವುದು : ಪ್ರತಿದಿನ ಸ್ನಾನ, ಪ್ರಾಣಾಯಾಮ, ಯೋಗಾಸನ ಗಳು, ವ್ಯಾಯಾಮ ಇತ್ಯಾದಿ ಮಾಡಬೇಕು ಮತ್ತು ಇತರರು ಮಾಡಬೇಕು, ಎಂಬುದಕ್ಕಾಗಿ ಅವರನ್ನು ಒತ್ತಾಯಿಸಬೇಕು. ‘ಶರೀರಮಾಧ್ಯಂ ಖಲು ಧರ್ಮಸಾಧನಮ್ |’, ಅಂದರೆ ‘ಧರ್ಮಾಚರಣೆಗಾಗಿ ಶರೀರವೇ ಮೊದಲ ಸಾಧನವಾಗಿದೆ’, ಅಂದರೆ ‘ಸಾಧನೆ ಮಾಡಲು ಶರೀರವು ಉತ್ತಮವಾಗಿರುವುದು ಆವಶ್ಯಕವಾಗಿದೆ’, ಎಂದು ಎಲ್ಲರೂ ಗಮನದಲ್ಲಿಡಬೇಕು.
೩ ಆ. ಲಂಘನ (ಉಪವಾಸ) : ೧೫ ದಿನಗಳಿಗೊಮ್ಮೆ ಬರುವ ಏಕಾದಶಿಯ ನಿಮಿತ್ತ ಮಾಡಿ ಲಘು ಉಪಹಾರ ಸೇವಿಸಿ ಉಪವಾಸ ಮಾಡಬೇಕು.
೩ ಇ. ಅಭ್ಯಂಗಸ್ನಾನ : ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ಅಭ್ಯಂಗಸ್ನಾನ ಮಾಡಬೇಕು.
೩ ಈ. ತಿಂಗಳಲ್ಲಿ ಒಂದು ಸಲ ಹೊಟ್ಟೆ ಸ್ವಚ್ಛವಾಗಲು ಹರಳೆಣ್ಣೆ ಅಥವಾ ತ್ರಿಫಲಾ ಚೂರ್ಣವನ್ನು ತೆಗೆದುಕೊಳ್ಳಬೇಕು.
೩ ಉ. ಭಾರತೀಯ ಆಹಾರ ಸೇವಿಸುವುದು : ಭೋಜನ ಮಾಡುವಾಗ ಭಾರತೀಯ ಭೋಜನಪದಾರ್ಥಗಳನ್ನೇ ಸೇವಿಸಬೇಕು. ಋತುಗಳಿಗನುಸಾರ ಅದರಲ್ಲಿ ಬದಲಾವಣೆ ಮಾಡಬೇಕು. ಸ್ವತಃ ಶಾಸ್ತ್ರವನ್ನು ತಿಳಿದುಕೊಂಡು ಮುಂದಿನ ಪೀಳಿಗೆಗೆ ಆಹಾರದ ಮಹತ್ವವನ್ನು ತಿಳಿಸಿ ಹೇಳಬೇಕು.’
– ಶ್ರೀ. ಅಶೋಕ ಲಿಮಕರ (ವಯಸ್ಸು ೭೩ ವರ್ಷಗಳು), ಸನಾತನ ಆಶ್ರಮ, ದೇವದ, ಪನವೆಲ. (೨.೮.೨೦೨೪)
ಕುಟುಂಬದವರಲ್ಲಿ ಉತ್ತಮ ಸಂಸ್ಕಾರಗಳಾಗುವ ದೃಷ್ಟಿಯಿಂದ ಮಾಡಬೇಕಾದ ಕೆಲವು ಕೃತಿಗಳು೧. ದೇವರ ದರ್ಶನಕ್ಕೆ ಹೋಗುವುದು : ೩, ೬ ಅಥವಾ ೯ ತಿಂಗಳುಗಳಿಗೊಮ್ಮೆ ಎಲ್ಲರೂ ಒಟ್ಟುಗೂಡಿ ಕುಲದೇವತೆ ಅಥವಾ ಇತರ ದೇವತೆಗಳ ದರ್ಶನಕ್ಕೆ ಹೋಗಬೇಕು. ೨. ರೂಢಿ ಮತ್ತು ಸಂಪ್ರದಾಯಗಳನ್ನು ಶ್ರದ್ಧೆಯಿಂದ ಪಾಲಿಸುವುದು : ಹಿಂದೂ ಧರ್ಮಶಾಸ್ತ್ರವನ್ನು ತಿಳಿದುಕೊಂಡು ಎಲ್ಲ ರೂಢಿ ಮತ್ತು ಸಂಪ್ರದಾಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು. ಮಕ್ಕಳಿಗೆ ಅದರ ಹಿಂದಿನ ಶಾಸ್ತ್ರವನ್ನು ತಿಳಿಸಿ ಹೇಳಬೇಕು. ೩. ಕಾರ್ಯಕ್ರಮಗಳಲ್ಲಿ ಭಾರತೀಯ ಉಡುಪು ಧರಿಸಬೇಕು : ವರ್ಷದಲ್ಲಿ ಬರುವ ಎಲ್ಲ ಹಬ್ಬಗಳಂದು, ಹಾಗೆಯೇ ಮಹತ್ವದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುವಾಗ ತಪ್ಪದೇ ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು. ಮಕ್ಕಳಿಗೆ ಅದರ ಮಹತ್ವ ಹೇಳಿ ಅವರಿಗೆ ಆ ವಿಷಯದಲ್ಲಿ ಆಸಕ್ತಿ ಹುಟ್ಟಿಸಬೇಕು. ೪. ಚೈತನ್ಯಮಯ ಮಾತೃಭಾಷೆಯಲ್ಲಿ ಮಾತನಾಡುವುದು : ಪ್ರತಿಯೊಬ್ಬರು ತಮ್ಮ ಶುದ್ಧ ಮಾತೃಭಾಷೆಯಲ್ಲಿ ಮಾತನಾಡಬೇಕು. ಇತರ ಯಾವುದೇ ಭಾಷೆಗಳಿಗಿಂತ ಸ್ವಭಾಷೆಯಲ್ಲಿ ಹೆಚ್ಚು ಚೈತನ್ಯವಿದ್ದು ಅದರಲ್ಲಿ ಜ್ಞಾನಗ್ರಹಣ ಚೆನ್ನಾಗಿ ಆಗುತ್ತದೆ. – ಶ್ರೀ. ಅಶೋಕ ಲಿಮಕರ (೨.೮.೨೦೨೪) |