ಸ್ಪೃಶ್ಯ-ಅಸ್ಪೃಶ್ಯತೆಯ ಸುಳ್ಳು ಆರೋಪವನ್ನು ಹೊರಿಸಿ ಬ್ರಾಹ್ಮಣರನ್ನು ಕಲಂಕಿತಗೊಳಿಸಲಾಗುತ್ತದೆ !

ಡಾ. ಶಂಕರ ಶರಣ

ಹಿಂದೂ ವಿಚಾರಗಳ ತಪ್ಪು ವ್ಯಾಖ್ಯೆಗಳನ್ನು ಮಾಡುವುದು ಮತ್ತು ಅವುಗಳಿಗೆ ಸುಳ್ಳು ವಿಷಯಗಳನ್ನು ಸೇರಿಸುವುದು, ಈ ಕೆಲಸವನ್ನು ವಿದೇಶಿ ಜನರು ತಿಳಿದೂ ಅಥವಾ ತಿಳಿಯದೇ ಆರಂಭಿಸಿದ್ದಾರೆ. ಅದರಲ್ಲಿ ಚರ್ಚ್‌ನ ಧರ್ಮಪ್ರಚಾರಕರು ಪ್ರಮುಖ ಪಾತ್ರವನ್ನು ವಹಿಸಿದರು. ನಂತರ ಸ್ವತಂತ್ರ ಭಾರತದಲ್ಲಿ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಅದನ್ನು ತಮ್ಮ ಮನಸ್ಸಿನಂತೆ ದುರುಪಯೋಗಿಸಿಕೊಂಡು ಅಪಪ್ರಚಾರವನ್ನು ಹೆಚ್ಚಿಸಿದವು, ಹಾಗೆಯೇ ಪ್ರಾಮಾಣಿಕ ವಿಷಯಗಳನ್ನು ಹತ್ತಿಕ್ಕಲಾಯಿತು; ಏಕೆಂದರೆ ಅವು ಆ ಪಕ್ಷದ ಸ್ವಾರ್ಥಕ್ಕೆ ಪ್ರತಿಕೂಲವಾಗಿದ್ದವು. ಈ ಪದ್ಧತಿಯಿಂದ ನಾವೇ ನಮ್ಮ ಕೈಯಾರೆ ಹಿಂದೂ ಸಮಾಜದ ಒಂದು ಭಾಗವನ್ನು ಇನ್ನೊಂದು ಭಾಗದ ವಿರೋಧಿಯನ್ನಾಗಿ ಮಾಡುತ್ತಿದ್ದೇವೆ. ಇದೇ ರೀತಿ ‘ಸ್ಪೃಶ್ಯ-ಅಸ್ಪೃಶ್ಯ’ ಶಬ್ದಗಳ ಸ್ಥಿತಿಯನ್ನು ಮಾಡಲಾಗಿದೆ. ಭಾರತದ ಮೇಲೆ ಮುಸಲ್ಮಾನರ ಆಕ್ರಮಣಗಳ ನಂತರ ದೇಶದಲ್ಲಿ ಮುಸ್ಲಿಂ ಸಮಾಜ ತಯಾರಾದ ನಂತರ ಈ ಶಬ್ದಗಳ ಬಳಕೆ ಆರಂಭವಾಯಿತು. ಅದಕ್ಕೂ ಮೊದಲು ಲೌಕಿಕ ವ್ಯವಹಾರದಲ್ಲಿ ಈ ಶಬ್ದಗಳು ಇರಲಿಲ್ಲ. ಇಲ್ಲಿ ಸ್ಪರ್ಶಾಸ್ಪರ್ಶದ (ಸ್ಪೃಶ್ಯ-ಅಸ್ಪೃಶ್ಯ) ಆರಂಭ ಹೇಗಾಯಿತು? ಎಂಬುದನ್ನು ಕಂಡು ಹಿಡಿಯುವುದು ಆವಶ್ಯಕವಾಗಿತ್ತು; ಆದರೆ ಇಸ್ಲಾಮಿ ಇತಿಹಾಸದ ವಾಸ್ತವಿಕತೆಯನ್ನು ಅಡಗಿಸಲು ಆ ಕಾಲದಲ್ಲಿ ಅದರ ಅಧ್ಯಯನ ಮಾಡಲು ಪ್ರೋತ್ಸಾಹವನ್ನು ನೀಡಲಿಲ್ಲ. ಇದಕ್ಕೆ ಬದಲು ಹಿಂದೂಗಳನ್ನು ನಿಂದಿಸುವ ಯೋಜನೆಯನ್ನು ಮಾಡಲಾಯಿತು, ಇದರ ಉದಾಹರಣೆ ಎಂದರೇನೇ ಸ್ಪರ್ಶಾಸ್ಪರ್ಶ, ಇದಕ್ಕೆ ವೇದಗಳನ್ನು ಮತ್ತು ಮನುಸ್ಮೃತಿಯನ್ನು ದೂರಲಾಯಿತು.

೧. ಸ್ಪೃಶ್ಯ-ಅಸ್ಪೃಶ್ಯತೆಯೇ ಇಲ್ಲದ ಹಿಂದೂ ಸಮಾಜ

ವಾಸ್ತವದಲ್ಲಿ ಧ್ಯಾನಯೋಗದಲ್ಲಿ ಯಮ-ನಿಯಮಗಳಿವೆ. ಅದಕ್ಕಾಗಿ ಹಿಂದೂಗಳು ಕೆಲವು ಸ್ಥಳಗಳನ್ನು ವಿಶೇಷ ಪವಿತ್ರವನ್ನಾಗಿ ಇಡುತ್ತಿದ್ದರು ಮತ್ತು ಕೆಲವು ವಿಷಯಗಳಿಂದ ರಕ್ಷಿಸುತ್ತಿದ್ದರು. ಇದರಲ್ಲಿ ಹೊರಗಿನ ಹಾಗೂ ಮನೆಯಲ್ಲಿನ ಸದಸ್ಯರೊಂದಿಗಿನ ಕೆಲವು ವ್ಯವಹಾರಗಳು ಒಳಗೊಂಡಿದ್ದವು. ವಿದೇಶಿಯರು ಇದಕ್ಕೆ ಸ್ಪೃಶ್ಯ-ಅಸ್ಪೃಶ್ಯ ಎಂದು ತಿಳಿಯುತ್ತಾರೆ. ಉದಾ. ಭೋಜನವನ್ನು ಎಂಜಲು ಮಾಡಬಾರದು, ಎಂಜಲು ಅನ್ನವನ್ನು ತಿನ್ನಬಾರದು ಅಥವಾ ಎಂಜಲು ನೀರನ್ನು ಕುಡಿಯಬಾರದು, ಸ್ನಾನ ಮಾಡದೇ ಅಡುಗೆಮನೆಯೊಳಗೆ ಪ್ರವೇಶಿಸಬಾರದು, ಹೊರಗಿನಿಂದ ಬಂದ ನಂತರ ಕೈ-ಕಾಲುಗಳನ್ನು ತೊಳೆದುಕೊಂಡು ಮನೆಯೊಳಗೆ ಬರಬೇಕು, ಚಪ್ಪಲಿಗಳನ್ನು ಮನೆಯ ಹೊರಗೆ ತೆಗೆದಿಡಬೇಕು ಇತ್ಯಾದಿ. ಅನೇಕ ಹಿಂದೂಗಳು ತಮ್ಮ ಅಡುಗೆಯನ್ನು ತಾವೇ ಮಾಡಿ ಕೊಳ್ಳುತ್ತಿದ್ದರು, ಅಂದರೆ ತಮ್ಮ ಕೈಯಿಂದ ತಯಾರಿಸಿದ್ದನ್ನೇ ತಿನ್ನುತ್ತಿದ್ದರು. ಮಹಾಕವಿ ನಿರಾಲಾ (ಸೂರ್ಯಕಾಂತ ತ್ರಿಪಾಠಿ) ಇವರು ಅದರ ಸಮಕಾಲೀನ ಉದಾಹರಣೆಯಾಗಿದ್ದಾರೆ. ಹೀಗೆ ಮಾಡುವುದು ಸ್ವಂತಕ್ಕೆ ಹಾಕಿಕೊಂಡ ಶಿಸ್ತಾಗಿತ್ತು; ಆದರೆ ಹಿಂದೂಗಳ ಈ ಶಿಸ್ತನ್ನು ಇತರ ಪಂಥದವರು ನೋಡಿದಾಗ ಸ್ಪೃಶ್ಯ-ಅಸ್ಪೃಶ್ಯತೆ ಇದೆ, ಎಂದು ಅವರಿಗೆ ಅನಿಸುತ್ತದೆ. ಹಾಗೆ ನೋಡಿದರೆ ಹಿಂದೂ ಸಮಾಜದ ಸಾಮಾಜಿಕ ವ್ಯವಹಾರದಲ್ಲಿ ಸ್ಪೃಶ್ಯ-ಅಸ್ಪೃಶ್ಯತೆಯು ಮೊದಲಿನಿಂದಲೂ ಇರಲಿಲ್ಲ. ಇದರ ಒಂದು ಸ್ಪಷ್ಟ ದಾಖಲೆಯೆಂದರೆ ವಿದೇಶಿ ಜನರು ಭಾರತದಲ್ಲಿ ಉಳಿದುಕೊಂಡ ನಂತರ ಬರೆದ ಪ್ರತ್ಯಕ್ಷದರ್ಶಿ ವಿವರಣೆಯಿದೆ.

೨. ಇಸವಿ ಕ್ರಿ.ಶಕಗಿಂತ ಹಿಂದಿನಿಂದಲೂ ಮುಂದೆ ೨ ಸಾವಿರ ವರ್ಷಗಳ ವರೆಗೆ ಸ್ಪರ್ಶಾಸ್ಪರ್ಶದ (ಸ್ಪಶ್ಯ-ಅಸ್ಪೃಶ್ಯದ) ಉಲ್ಲೇಖ ಸಿಗದಿರುವುದು

ಇಸವಿ ಕ್ರಿ.ಶಕಗಿಂತ ಮೊದಲು ಮೂರನೇ ಶತಮಾನದಲ್ಲಿ ಮೇಗಾಸ್ಥನೀಜ್, ಹುಯೆನ್ ಸಾಂಗ್, ಅಲ್ ಬರುನಿ, ಇಬ್ನ್ ಬತೂತಾ ಇವರಿಂದ ಹಿಡಿದು ೧೭ ನೇ ಶತಕದ ಚಾರ್ಲ್ಸ್ ಬರ್ನಿಯರ್‌ರು ಮಾಡಿದ ೨ ಸಾವಿರ ವರ್ಷಗಳಲ್ಲಿ ಭಾರತೀಯ ಜೀವನದ ವಿವರಣೆಯನ್ನು ನೋಡಿರಿ, ಅವರು ಬ್ರಾಹ್ಮಣ ಮತ್ತು ಹಿಂದೂ ಸಮಾಜದ ಚಿಕ್ಕ ಚಿಕ್ಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ; ಆದರೆ ಯಾರೂ ಇಲ್ಲಿ ಸ್ಪರ್ಶಾಸ್ಪರ್ಶವನ್ನು ನೋಡಿಲ್ಲ, ಆದುದರಿಂದ ಬರೆದಿಟ್ಟಿಲ್ಲ. ಇದಲ್ಲದೇ ನಮ್ಮಲ್ಲಿ ಅಪಾರ ಸಾಹಿತ್ಯವಿದೆ. ನಮ್ಮ ದೇಶದಲ್ಲಿನ ಸಾಹಿತ್ಯವನ್ನು ನೋಡಿದರೂ ಅದರಲ್ಲಿಯೂ ಎಲ್ಲಿಯೂ ಸ್ಪಶ್ಯ-ಅಸ್ಪೃಶ್ಯ ಶಬ್ದ ಬಂದಿಲ್ಲ. ಪ್ರಸಿದ್ಧ ಭಾಷಾಶಾಸ್ತ್ರಜ್ಞ ಮತ್ತು ‘ಎನ್‌ಸೈಕ್ಲೊಪಿಡಿಯಾ ಆಫ್ ಹಿಂದುಯಿಸಮ್’ನ ೧೧ ಖಂಡಗಳನ್ನು ಬರೆದ ಲೇಖಕ ಪ್ರಾಧ್ಯಾಪಕ ಕಪಿಲ ಕಪೂರ ಇವರು ಭಾರತದ ೧ ಸಾವಿರ ವರ್ಷಗಳ ಭಕ್ತಿ ಸಾಹಿತ್ಯದ ಅಧ್ಯಯನವನ್ನು ಮಾಡಿದ್ದಾರೆ. ಅವರಿಗೆ, ಹೆಚ್ಚಿನ ಭಕ್ತರು, ಕವಿಗಳು, ಬ್ರಾಹ್ಮಣರು ಅಥವಾ ಅದೇ ಜಾತಿಯವರಾಗಿರಲಿಲ್ಲ ಎಂಬುದು ಕೂಡ ಕಂಡು ಬಂದಿತು; ಆದರೆ ಇಡೀ ಹಿಂದೂ ಸಮಾಜವು ಅವರನ್ನು ಪೂಜಿಸಿತು. ಆ ಕವಿಗಳು ನಮ್ಮ ಅನೇಕ ಸಾಮಾಜಿಕ ಕೊರತೆಗಳನ್ನು ದೂಷಿಸಿದರು; ಆದರೆ ಯಾರೂ ಸ್ಪರ್ಶಾಸ್ಪರ್ಶದ ಉಲ್ಲೇಖ ಮಾಡಿಲ್ಲ.

೩. ಅಸಾತ್ತ್ವಿಕ ಪದಾರ್ಥಗಳನ್ನು ತಿನ್ನದಿರುವುದು ಅಥವಾ ಕುಡಿಯದಿರುವುದು ಎಂಬ ಹಿಂದೂಗಳ ಪದ್ಧತಿಯಿಂದ ಅವರನ್ನು ಅಸಹಿಷ್ಣು ಎಂದು ಕರೆಯುವುದು

ಪ್ರತ್ಯೇಕ ಜೀವನಪದ್ದತಿ ಅಥವಾ ತಿನ್ನುವುದು-ಕುಡಿಯುವುದು ಈ ಕಾರಣದಿಂದ ಕೆಲವು ಸಮೂಹಗಳು ಪ್ರತ್ಯೇಕವಾಗಿ ವಾಸಿಸುವ ಬಗೆಗಿನ ಮಾಹಿತಿ ಸಿಗುತ್ತದೆ; ಆದರೆ ಇದರಲ್ಲಿ ಎಲ್ಲಿಯೂ ಬಲವಂತವಿರಲಿಲ್ಲ. ಬೇರೆ ವಸತಿಗಳಲ್ಲಿರುವುದು, ಇದು ಬೇರೆ ವಿಷಯವಾಗಿದೆ. ಇಂದಿಗೂ ವನವಾಸಿಗಳು, ಮೀನುಗಾರರು ಅಥವಾ ಅಸಾಮಾನ್ಯ ಭೋಜನವನ್ನು ಮಾಡುವವರು ಪ್ರತ್ಯೇಕವಾದ ವಸತಿಗಳಲ್ಲಿರುತ್ತಾರೆ; ಆದರೆ ಇಂದು ಹಿಂದೂಗಳ ಸಾತ್ತ್ವಿಕ ಆಹಾರವನ್ನು ತಿನ್ನುವುದು ಅಥವಾ ಕುಡಿಯುವುದು ಇದನ್ನು ಅವರ ವಿರುದ್ಧದ ಅಸ್ತ್ರವನ್ನಾಗಿ ಮಾಡಿ ಅವರ ವಸತಿಗಳನ್ನು ವಶಪಡಿಸಿಕೊಳ್ಳುವ ತಂತ್ರವಾಗಿ ಮಾರ್ಪಟ್ಟಿದೆ. ಉದಾ. ಗೋಮಾಂಸ ತಿನ್ನುವುದು ಮತ್ತು ಬೇಯಿಸುವುದನ್ನು ಬೇಕೆಂದೇ ಪ್ರದರ್ಶಿಸಿ ಅಕ್ಕಪಕ್ಕದ ಹಿಂದೂಗಳನ್ನು ಅಲ್ಲಿಂದ ಓಡಿಹೋಗುವಂತೆ ಮಾಡುವುದು, ಈ ದೃಶ್ಯವು ಜಮ್ಮುವಿನಿಂದ ಮೈಸೂರಿನವರೆಗೆ ಅನೇಕ ನಗರಗಳಲ್ಲಿ ಕಂಡು ಬಂದಿದೆ. ದೆಹಲಿಯಲ್ಲಿ ಕಳೆದ ೩ ದಶಕಗಳಲ್ಲಿ ಅನೇಕ ಹಿಂದೂಗಳು ತಮ್ಮ ವಸತಿಗಳನ್ನು ಖಾಲಿ ಮಾಡಿದ್ದಾರೆ; ಆದರೆ ಇದರ ಬಗ್ಗೆ ಯಾರೂ ಆಕ್ಷೇಪವನ್ನು ಎತ್ತುವುದಿಲ್ಲ ಮತ್ತು ಯಾರಾದರೂ ಆಕ್ಷೇಪವನ್ನು ಎತ್ತಿದರೆ (ವಿರೋಧಿಸಿದರೆ), ಯಾರಾದರೊಬ್ಬರ ತಿನ್ನುವ ಹವ್ಯಾಸದ ಬಗ್ಗೆ ಅಸಹಿಷ್ಣುತೆ ಇದೆ ಎಂದು ಹಿಂದೂಗಳನ್ನೇ ದೂಷಿಸಲಾಗುತ್ತದೆ. ಆದುದರಿಂದ ಪ್ರಾಚೀನ, ಹಾಗೆಯೇ ಪ್ರಸ್ತುತ ಸ್ಥಿತಿಯಲ್ಲಿನ ಎಲ್ಲ ಉದಾಹರಣೆಗಳು ಹಿಂದೂ ಜೀವನಪದ್ಧತಿಯಲ್ಲಿನ ಸ್ವಚ್ಛತೆಯ ನಿಯಮದ ಬಗ್ಗೆ ಸಂಕೇತವನ್ನು ನೀಡುತ್ತವೆ; ಆದರೆ ಮಹಾಭಾರತದಲ್ಲಿ ಅಶ್ವತ್ಥಾಮನು ಪಾಂಡವರ ಮಕ್ಕಳನ್ನು ಕೊಂದನೆಂದು, ಅವನನ್ನು ಬ್ರಾಹ್ಮಣರು ‘ಅಸ್ಪೃಶ್ಯ’ನೆಂದು ಕರೆಯುತ್ತಿದ್ದರು, ಎಂಬ ಉಲ್ಲೇಖವಿದೆ. ಇಂದಿಗೂ ನಮ್ಮ ಜಾತಿಯಲ್ಲಿನ ಯಾರಾದರೂ ಅಯೋಗ್ಯ ಕೆಲಸವನ್ನು ಮಾಡಿದರೆ ಅವರಿಗೆ ದಂಡವೆಂದು (ಶಿಕ್ಷೆಯೆಂದು) ಅವರನ್ನು ಬಹಿಷ್ಕರಿಸುವ (ಜಾತಿಯಿಂದ ಹೊರಗಿಡುವ) ಉದಾಹರಣೆಗಳು ಸಿಗುತ್ತವೆ. ಈ ಕಾಲದಲ್ಲಿಯೇ ಸ್ಪರ್ಶಾಸ್ಪರ್ಶದ ಜನ್ಮವಾಯಿತು.

೪. ಪರಕೀಯ ಆಕ್ರಮಣಕಾರರ ಕಾಲದಲ್ಲಿ ಹಿಂದೂಗಳಿಗೆ ಮಲ ಎತ್ತುವ ಪ್ರಸಂಗ ಬಂದುದರಿಂದ ಹಿಂದೂ ಸಮಾಜವು ದೂರವಾಗುವುದು

ಇದಕ್ಕೆ ಮುಖ್ಯ ಕಾರಣ ಮುಸಲ್ಮಾನರು ಆಕ್ರಮಣ ಮಾಡಿದ ನಂತರ ಅವರು ನಡೆಸಿದ ಹಿಂದೂ ಜೀವನದ ಭೀಕರ ವಿಧ್ವಂಸ. ಆಕ್ರಮಣಕಾರರಿಗೆ ಬಲಿಯಾದ ಅನೇಕ ಹಿಂದೂಗಳಿಗೆ ತಮ್ಮದೇ ಸಮಾಜದಿಂದ ನಿರ್ಲಕ್ಷವನ್ನು (ದುರ್ಲಕ್ಷ) ಅನುಭವಿಸ ಬೇಕಾಯಿತು. ಅನೇಕ ಸ್ಥಳಗಳಲ್ಲಿ ಚಿತ್ರಹಿಂಸೆ ಮತ್ತು ಬ್ರಾಹ್ಮಣರ ಹತ್ಯೆಯಾದುರಿಂದ ಹಿಂದೂಗಳು ತಮ್ಮ ಸಹಜ ಜೀವನ ಮತ್ತು ಮಾರ್ಗದರ್ಶನಗಳಿಂದ ವಂಚಿತರಾದರು. ಹೆಚ್ಚಿನ ಜನರು ಹೇಗಾದರೂ ಮಾಡಿ ಧರ್ಮಕುಟುಂಬವನ್ನು ಉಳಿಸಬೇಕೆಂದು ಚಿಂತಿಸಿದರು. ಬಹಳಷ್ಟು ಸಲ ಅವಮಾನ, ಬಲಾತ್ಕಾರ ಮತ್ತು ಅಪಹರಣ ಇವುಗಳ ಬೆದರಿಕೆಯಿಂದ ಅವರಿಗೆ ತಾವು ಮುಸಲ್ಮಾನರ ಗುಲಾಮರಾಗಿ ಇರಬೇಕಾಗ ಬಹುದು ಎಂಬ ಭಯವಿತ್ತು. ಕೆಲವರಿಗೆ ಇತರ ಜಾತಿಗಳ ಆಡಳಿತದವರ ಮಲವನ್ನು ಹೊತ್ತೊಯ್ಯು ವಂತಹ ಕೆಲಸವನ್ನು ಮಾಡಿದರೆ ಅವರಿಗೆ ಹಿಂದೂಗಳಾಗಿ ಉಳಿಯಲು ಅನುಮತಿ ಸಿಕ್ಕಿತು. ಇದರ ಪರಿಣಾಮವೆಂದರೆ ಅವರು ಹಿಂದೂಗಳಾಗಿ ಉಳಿದರು; ಆದರೆ ಇತರ ಸಮಾಜದಿಂದ ದೂರ ಹೋದರು. ಅಮೃತಲಾಲ ನಾಗರ ಇವರ ‘ನಾಚ್ಯೊ ಬಹುತ ಗೋಪಾಲ(ಮರಾಠಿ) ಈ ಕಾದಂಬರಿಯಲ್ಲಿ ಓರ್ವ ಬ್ರಾಹ್ಮಣ ಸ್ತ್ರೀಯ ಕಥೆ ಇದೇ ಹಿನ್ನೆಲೆ ಯಲ್ಲಿದೆ. ಇಂದಿಗೂ ಈ ದೃಶ್ಯವನ್ನು ನಾವು ಪಾಕಿಸ್ತಾನದಲ್ಲಿ ನೋಡಬಹುದು. ಭಾರತದ ವಿಭಜನೆಯ ನಂತರ ಪಾಕಿಸ್ತಾನವು ಅಲ್ಲಿನ ಹಿಂದೂಗಳನ್ನು ಭಾರತಕ್ಕೆ ಬರದಂತೆ ಬಲವಂತವಾಗಿ ತಡೆಯಿತು. ಅವರ ಹೇಳಿಕೆ ಏನಿತ್ತು ಎಂದರೆ, ನೀವು ಹೋದರೆ ನಮ್ಮ ಮಲವನ್ನು ಯಾರು ಹೊರುವರು ? ಸ್ವತಃ ಮುಸಲ್ಮಾನರು ತಮ್ಮ ಮಲವನ್ನು ಹೊರುವುದಿಲ್ಲ. ಈ ಪ್ರತ್ಯಕ್ಷ ಉದಾಹರಣೆಯ ನಂತರ ಹಿಂದೂಸಮಾಜವನ್ನು ದೂಷಿಸುವುದು, ಮೂರ್ಖತನ ಅಥವಾ ಕ್ರೂರತನವಾಗಿದೆ.

೫. ಹಿಂದೂವಿರೋಧಿಗಳು ಅಥವಾ ಸಾಮ್ಯವಾದಿಗಳು ‘ರಾಮಚರಿತಮಾನಸ’ದಲ್ಲಿನ ಶ್ಲೋಕದ ಮೇಲಿನಿಂದ ಹಿಂದೂ ಧರ್ಮದ ಮೇಲೆ ಆರೋಪ ಮಾಡುವುದು

ಯಾವುದೇ ಹಿಂದೂ ಶಾಸ್ತ್ರ ಅಥವಾ ಪುರಾಣದಲ್ಲಿ ಜಾತಿಯ ಮೇಲಾಧಾರಿತ ಸ್ಪೃಶ್ಯ-ಅಸ್ಪೃಶ್ಯ ಎಂಬ ಉಲ್ಲೇಖವಿಲ್ಲ. ಹಾಗಿರುತ್ತಿದ್ದರೆ, ಎಲ್ಲ ಹಿಂದೂವಿರೋಧಿಗಳು ಅಥವಾ ಎಡ ಪಂಥೀಯರು (ಸಾಮ್ಯವಾದಿಗಳು) ತಮ್ಮ ಫಲಕವನ್ನು ಲಕ್ಷಾವಧಿ ಬಾರಿ ಹಾರಿಸುತ್ತಿದ್ದರು. ಇದರ ಬದಲು ಅವರು ಶಂಬೂಕ ಅಥವಾ ಏಕಲವ್ಯ ಇವರ ಕಥೆಗಳನ್ನು ಬಳಸುತ್ತಾರೆ ಅಥವಾ ಇಂತಹ ಇತರ ಪ್ರಸಂಗಗಳನ್ನು ಬಳಸಿ ಅವುಗಳಿಗೆ ಬೇರೆಯೇ ಬಣ್ಣವನ್ನು ಹಚ್ಚಿ ಹಿಂದೂ ಧರ್ಮದ ಮೇಲೆ ಆರೋಪಗಳನ್ನು ಹೊರಿಸಲು ಪ್ರಯತ್ನಿಸುತ್ತಾರೆ.

ಸಂತ ತುಳಸಿದಾಸರು ಬರೆದ ದ್ವಿಪದಿಗಳ ಸಾಲು

ಡೋಲ, ಗಂವಾರ, ಶುದ್ರ, ಪಶು, ನಾರಿ |
ಸಫಲ ತಾಡನಾ ಕೆ ಅಧಿಕಾರಿ ||

(ಭಾವಾರ್ಥ : ಡೋಲು, ಅವಿದ್ಯಾವಂತ, ಶುದ್ರ, ಪಶು ಮತ್ತು ಸ್ತ್ರೀ ಇವರೆಲ್ಲರೂ ಶಿಕ್ಷಣಕ್ಕೆ ಪಾತ್ರರಾಗಿದ್ದಾರೆ) ಭಗವಂತನು ನನಗೆ ಯಾವ ಶಿಕ್ಷೆಯನ್ನು ಮಾಡಿದನೋ ಅದು ಬಹಳ ಒಳ್ಳೆಯದಾಯಿತು, ಭಗವಂತನು ಒಳ್ಳೆಯ ಮಾರ್ಗವನ್ನು ತೋರಿಸಿದನು. ನಾವೇ ಎಲ್ಲ ಜೀವಗಳ ಮಿತಿಯನ್ನು (ಸ್ವಭಾವವನ್ನು) ನಿರ್ಮಿಸಿದ್ದೇವೆ. ಇದು ಅಂತಹುದೇ ಒಂದು ಉದಾಹರಣೆಯಾಗಿದೆ, ಇದರ ಅರ್ಥವನ್ನು ಮನಸ್ಸಿಗೆ ಬಂದಂತೆ ನೀಡಲಾಗಿದೆ. ‘ರಾಮಚರಿತಮಾನಸ ಈ ಗ್ರಂಥದಲ್ಲಿನ ‘ಸುಂದರಕಾಂಡದಲ್ಲಿನ ೫೯ ನೇ ದ್ವಿಪದಿಯಲ್ಲಿ ಈ ಎರಡು ಸಾಲುಗಳಿವೆ. ಯಾವಾಗ ರಾಮನ ಕೋಪದಿಂದ ಭಯಭೀತ ಸಮುದ್ರವು ಕ್ಷಮೆಯನ್ನು ಕೇಳುತ್ತಿದೆ; ಆದರೆ ಮೊದಲಿಗೆ ಈ ವಾಕ್ಯವು ನಾಯಕನ ಬಾಯಿಯಲ್ಲಿ ಅಲ್ಲ, ಅದು ಖಳನಾಯಕನ ಬಾಯಲ್ಲಿದೆ. ಎರಡನೇಯದೆಂದರೆ ಈ ದ್ವಿಪದಿಗಳ ಮೊದಲು ಸಮುದ್ರವು ‘ಗಗನ ಸಮೀರ ಅನಲ ಜಲ ಧರತಿ | ಇನ್ ಕಯೀ ನಾಥ ಸಹಜ ಜಡ ಕರನೀ’, ಎಂದೂ ಹೇಳಿದೆ, ಅಂದರೆ ಸಮುದ್ರವು ವಾಯು, ಅಗ್ನಿ, ಜಲ ಮತ್ತು ಭೂಮಿ ಇವುಗಳನ್ನು ಸ್ವಭಾವಕ್ಕನುಸಾರ ಜಡ ಎಂದು ಹೇಳಿದೆ. ಎರಡೂ ವಿಷಯಗಳು ಒಂದೇ ಪ್ರಕಾರ ದಲ್ಲಿ ಬರುತ್ತವೆ. ಅದೇ ಪ್ರಕಾರ ಈ ನಾಲ್ಕು ದೊಡ್ಡ ದೇವೀ ದೇವತೆಗಳೂ ಡೋಲು, ಅವಿದ್ಯಾವಂತ, ಶೂದ್ರ, ಪಶು, ಸ್ತ್ರೀ ಇವರ ಶ್ರೇಣಿಯಲ್ಲಿ ಬರುತ್ತಾರೆ. ಆದುದರಿಂದ ಪೂರ್ಣವರ್ಗವನ್ನು ‘ತಾಡನ್ ಕೆ ಅಧಿಕಾರಿ ಎಂದು ತಿಳಿದು ಅದನ್ನು ಖಳನಾಯಕನ ಕುತರ್ಕ (ತಪ್ಪು ಕಲ್ಪನೆ) ಎಂದು ತಿಳಿಯಬೇಕೋ ಅಥವಾ ಶೂದ್ರ, ಪಶು, ಸ್ತ್ರೀ ಇವರಿಗೆ ಭೂಮಿ, ಅಗ್ನಿ, ವಾಯು ಮತ್ತು ಜಲ ಇವುಗಳಂತೆ ಭೂತಕಾಲಕ್ಕೆ (ಆಗಿ ಹೋದ) ಸೇರಿದವುಗಳು ಎಂದು ಒಪ್ಪಿಕೊಳ್ಳಬೇಕು. ಕೇವಲ ಶೂದ್ರ ಮತ್ತು ಸ್ತ್ರೀ ಈ ವಿಷಯಗಳನ್ನು ತೆಗೆದುಕೊಂಡು ಅದಕ್ಕೆ ಮನಸ್ಸಿಗೆ ಬಂದಂತೆ ಬಣ್ಣವನ್ನು ಹಚ್ಚಲು ಇದನ್ನು ಮಾಡಲಾಗಿದೆ.

೬. ವೇದಗಳಿಂದ ಪ್ರೇರಣೆ ಪಡೆದ ಮಹಾಪುರುಷರು ಸ್ಪೃಶ್ಯ- ಅಸ್ಪೃಶ್ಯತೆಯನ್ನು ನಾಶಿಸಲು ಪ್ರಯತ್ನಿಸುವುದು

ಆದುದರಿಂದ ಶಾಸ್ತ್ರ ಅಥವಾ ಜನರು, ಭೂತಕಾಲ ಅಥವಾ ವರ್ತಮಾನಕಾಲ, ದೇಶ ಅಥವಾ ವಿದೇಶಗಳಲ್ಲಿ ಎಲ್ಲಿಯೂ ಸ್ಪೃಶ್ಯ-ಅಸ್ಪೃಶ್ಯತೆ ಹಿಂದೂ ಧರ್ಮದ ಅಂಗವಾಗಿರುವ ಅಥವಾ ಬ್ರಾಹ್ಮಣರ ದುಷ್ಟತನದ ಪುರಾವೆ ಎಲ್ಲಿಯೂ ಇಲ್ಲ. ನಂತರ ಈ ಸ್ಪೃಶ್ಯ-ಅಸ್ಪೃಶ್ಯತೆಯನ್ನು ನಾಶ ಮಾಡುವ ಕೆಲಸವು ಹಿಂದೂ ಸಮಾಜದಲ್ಲಾಯಿತು. ಸ್ವಾಮಿ ದಯಾನಂದ, ಸ್ವಾಮಿ ವಿವೇಕಾನಂದ, ಸ್ವಾಮಿ ಶ್ರದ್ಧಾನಂದ ಇವರಂತಹ ಮಹಾಪುರುಷ ಯೋಧರ ಪೂರ್ತಿ ಸರಪಳಿಯೇ ಇದೆ, ಅವರು ವಿದೇಶಿ ಪ್ರಕೋಪದಿಂದ ಬಂದ ಕೆಟ್ಟ ಪದ್ದತಿಗಳನ್ನು ದೂರಗೊಳಿಸಲು ಯಶಸ್ವಿಯಾದರು; ಏಕೆಂದರೆ ಅವರೆಲ್ಲರೂ ವೇದಗಳಿಂದ ಪ್ರೇರಣೆ ಪಡೆದಿದ್ದರು.

೭. ನೇತಾರರು ಮತ್ತು ಪ್ರಸಾರಮಾಧ್ಯಮಗಳು ಸ್ಪೃಶ್ಯ-ಅಸ್ಪೃಶ್ಯದ ಬಗ್ಗೆ ಮಾಡುತ್ತಿರುವ ಅಪಪ್ರಚಾರವನ್ನು ನಿಲ್ಲಿಸುವರೇ ?

ಸ್ಪಷ್ಟ ಹೇಳಬೇಕೆಂದರೆ ವೈದಿಕ ಧರ್ಮದಲ್ಲಿ ಸ್ಪೃಶ್ಯ-ಅಸ್ಪೃಶ್ಯಕ್ಕೆ ಯಾವುದೇ ಸ್ಥಾನವಿಲ್ಲ. ಅದನ್ನು ಬರೆದವರು ಅತ್ಯಂತ ವಿಚಾರವಂತ ಜನರನ್ನು ಮರುಳು ಮಾಡಲು ನಾಟಕ ಮಾಡುವ ಯಾವುದೇ ಪಕ್ಷದ ನಾಯಕರಾಗಿರಲಿಲ್ಲ. ಅವರು ಕೇವಲ ಬರಗಾಲದಲ್ಲಿ ಬಂದ ತಮ್ಮ ಧರ್ಮಕ್ಕೆ ವಿರುದ್ಧವಾಗಿರುವ ಕೆಟ್ಟ ರೂಢಿಗಳನ್ನು ನಾಶ ಮಾಡಿದರು. ಒಂದು ವೇಳೆ ಸ್ಪೃಶ್ಯ-ಅಸ್ಪೃಶ್ಯತೆಯು ಧರ್ಮಕ್ಕೆ ಅನುರೂಪವಾಗಿದ್ದರೆ, ಅಸಂಖ್ಯಾತ ಹಿಂದೂ ವಿದ್ವಾಂಸರು ಮತ್ತು ಸನ್ಯಾಸಿಗಳು ಅದರ ವಿರುದ್ಧ ನಿಲುವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ನಾವು ನಮ್ಮ ಪರಂಪರೆಗಳನ್ನು ನಮ್ಮ ಶಾಸ್ತ್ರಕ್ಕನುಸಾರ ಅರಿತುಕೊಳ್ಳಬೇಕು ಮತ್ತು ತಿಳಿದುಕೊಳ್ಳಬೇಕು. ಇಲ್ಲಿಯವರೆಗೆ ನಾವು ಇತರರಿಂದ ಆಗುವ ನಿಂದೆಗಳಿಂದಾಗಿ ನಾವೇ ನಮ್ಮ ಎದೆಯನ್ನು ಬಡಿದುಕೊಳ್ಳುತ್ತಿದ್ದೇವೆ. ನಮಗೆ ನಮ್ಮ ಶಾಸ್ತ್ರಗಳ ಸತ್ತ್ವಪರೀಕ್ಷೆಯೆಂದು ಅದರ ಕಡೆಗೆ ನೋಡಬೇಕು. ಕನಿಷ್ಠ ಪಕ್ಷ ಕೊರೊನಾ ಮಹಾಮಾರಿಯ ಭಯದ ನಂತರ ವಾದರೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವುದು, ಶಾರೀರಿಕ ಸ್ಪರ್ಶದಿಂದ ದೂರ ಇರುವುದು, ಚಪ್ಪಲಿಗಳನ್ನು ಮನೆಯ ಹೊರಗೆ ಇಡುವುದು, ಸಸ್ಯಹಾರವನ್ನು ಸ್ವೀಕರಿಸುವುದು, ಕ್ರೂರತೆಯಿಂದ ತಯಾರಿಸಿದ ‘ಹಲಾಲ್ ಮಾಂಸಾಹಾರದಿಂದ ದೂರ ಇರುವುದು ಇತ್ಯಾದಿ ಸೂಚನೆಗಳು ಸಂಪೂರ್ಣ ಜಗತ್ತಿಗೆ ದೊರಕಿವೆ. ಇದಾದ ನಂತರವಾದರೂ ನಮ್ಮ ನೇತಾರರು ಮತ್ತು ಪ್ರಸಾರಮಾಧ್ಯಮಗಳು ಸ್ಪೃಶ್ಯ-ಅಸ್ಪೃಶ್ಯತೆಯ ಬಗ್ಗೆ ಮಾಡಲಾಗುವ ಸುಳ್ಳು ಪ್ರಚಾರವನ್ನು ನಿಲ್ಲಿಸುವರೇ ?

– ಡಾ. ಶಂಕರ ಶರಣ, ದೆಹಲಿ. (೧.೩.೨೦೨೩)

(ಆಧಾರ : www.cisindus.org ಮತ್ತು ‘ನಯಾ ಇಂಡಿಯಾ)