‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೂದಲುಗಳಲ್ಲಿ ಅವರ ಉಗುರುಗಳಿಗಿಂತ ಹೆಚ್ಚು ಸಕಾರಾತ್ಮಕ ಊರ್ಜೆಯಿದೆ, ಇದು ಹಿಂದೂ ರಾಷ್ಟ್ರ ಸ್ಥಾಪನೆ ಎಂಬ ಅವರ ಮಹಾನ ಅವತಾರೀ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂಬ ಸೂಚನೆಯಾಗಿರುವುದು.
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಳೆದ ಕೆಲವು ವರ್ಷಗಳಿಂದ ತಮ್ಮ ಕೂದಲು ಮತ್ತು ಉಗುರುಗಳನ್ನು ಸಂಶೋಧನೆಗಾಗಿ ಕೊಡುತ್ತಿದ್ದಾರೆ. ಈ ಮೊದಲು ಅವರು ವರ್ಷದಲ್ಲಿ ೧-೨ ಬಾರಿಯೇ ತಮ್ಮ ಕೂದಲು ಮತ್ತು ಉಗುರುಗಳನ್ನು ಸಂಶೋಧನೆಗಾಗಿ ಕೊಡುತ್ತಿದ್ದರು; ಆದರೆ ೨೦೨೧ ರಿಂದ ಮಾತ್ರ ಅವರು ವರ್ಷದಲ್ಲಿ ೩-೪ ಬಾರಿ ಸಂಶೋಧನೆಗಾಗಿ ಕೊಡಲು ಆರಂಭಿಸಿದ್ದಾರೆ. ‘ಅವರ ಕೂದಲು ಮತ್ತು ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆ (ಚೈತನ್ಯ) ದಿನೇದಿನೇ ಹೆಚ್ಚಾಗುತ್ತಿದೆ. ವಿಶೇಷವೆಂದರೆ ಜನವರಿ ೨೦೨೩ ರಿಂದ ಇದರ ಅನುಪಾತದಲ್ಲಿ ಮಹತ್ತರವಾದ ಹೆಚ್ಚಳವಾಗಿದೆ. ಪರಾತ್ಪರ ಗುರು ಡಾಕ್ಟರರ ಕೂದಲು ಮತ್ತು ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆಯ ನೋಂದಣಿಯನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ ೧ – ಕೂದಲು ಮತ್ತು ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯದ ಅಳತೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ ಈ ಉಪಕರಣವನ್ನು ಉಪಯೋಗಿಸಲಾಯಿತು. ಜುಲೈ ೨೦೨೨ ರಿಂದ ಈ ಉಪಕರಣದಿಂದ ಕೂದಲು ಮತ್ತು ಉಗುರುಗಳ ಪ್ರಭಾವಲಯವನ್ನು ಅಳೆಯುವಾಗ ಅದು ೨,೩೩೭ ಮೀಟರಗಳಿಗಿಂತ ಹೆಚ್ಚಾಗಿರುವುದು ಗಮನಕ್ಕೆ ಬಂದಿತು. ಅದನ್ನು ಸರಿಯಾಗಿ ಅಳೆಯಲು ಹಿಂದೆ ಹೋಗಲು ಜಾಗವು ಕಡಿಮೆ ಬೀಳುತ್ತಿತ್ತು. ಆದ್ದರಿಂದ ಅದನ್ನು ನಿಖರವಾಗಿ ಅಳೆಯಲು ಲೋಲಕವನ್ನು ಬಳಸಲಾಯಿತು.
ಟಿಪ್ಪಣಿ ೨ – ಯಾವ ತಿಂಗಳಲ್ಲಿ ಕೂದಲುಗಳು ಅಥವಾ ಉಗುರುಗಳನ್ನು ಪರೀಕ್ಷಣೆಗಾಗಿ ಲಭ್ಯವಿಲ್ಲವೋ, ಅಲ್ಲಿ ‘- ಎಂದು ಬರೆಯಲಾಗಿದೆ. |
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆಯ (ಚೈತನ್ಯದ) ಪ್ರಮಾಣದಲ್ಲಿ ಪ್ರತಿವರ್ಷ ಉತ್ತರೋತ್ತರ ಹೆಚ್ಚಳವಾಗುತ್ತಿದೆ: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೂದಲು ಮತ್ತು ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಪ್ರತಿ ತಿಂಗಳಿನಲ್ಲಿ ಹೆಚ್ಚಳವಾಗಿದೆ. ಡಿಸೆಂಬರ್ ೨೦೨೧ ರಲ್ಲಿ ಅವರ ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆ ೬೬೫ ರಿಂದ ೯೫೬ ಮೀಟರಗಳಷ್ಟು ಇತ್ತು. ಜುಲೈ ೨೦೨೨ ರಲ್ಲಿ ಅದು ೫ ಸಾವಿರ ಮೀಟರಗಳಿಗಿಂತಲೂ ಹೆಚ್ಚಾಯಿತು. ಆಗಸ್ಟ್ ೨೦೨೨ರಲ್ಲಿ ಉಗುರುಗಳಲ್ಲಿನ ಸಕಾರಾತ್ಮಕ ಉರ್ಜೆಯಲ್ಲಿ ತುಂಬಾ ಹೆಚ್ಚಳವಾಗಿ ಅದು ೧೫ ರಿಂದ ೩೦ ಸಾವಿರ ಮೀಟರ ಗಳಿಗಿಂತಲೂ ಹೆಚ್ಚಾಯಿತು. ಜನವರಿ ೨೦೨೩ ರಿಂದ ಅವರ ಉಗುರುಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಕಲ್ಪನಾತೀತ ಹೆಚ್ಚಳವಾಯಿತು. ಅದು ಮಾರ್ಚ್‌ನಲ್ಲಿ ೪೪ ರಿಂದ ೮೧ ಸಾವಿರ ಮೀಟರಗಳಷ್ಟಾಯಿತು. ಇದರಿಂದ ‘ಪರಾತ್ಪರ ಗುರು ಡಾಕ್ಟರರ ಅವತಾರೀ ಕಾರ್ಯವು ಈಗ ಸಗುಣ ಸ್ತರದಲ್ಲಿ ಪ್ರಗಟವಾಗುತ್ತಿದೆ, ಎಂದು ಅರಿವಾಗುತ್ತದೆ.
೨. ಅಕ್ಟೋಬರ್ ೨೦೨೨ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಆಠವಲೆಯವರ ಬಲ ಕೈ-ಕಾಲುಗಳ ಉಗುರುಗಳಿಗಿಂತ ಅವರ ಎಡ ಕೈ-ಕಾಲುಗಳ ಉಗುರುಗಳಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಿರುವುದು: ಇದು ವೈಶಿಷ್ಟ್ಯಪೂರ್ಣವಾಗಿದೆ. ಇದರ ಕಾರಣವೆಂದರೆ, ಮೇ ೨೦೨೧ ರ ವರೆಗೆ ಅವರ ಉಗುರುಗಳ ಮೇಲೆ ಮಾಡಿದ ನಿರೀಕ್ಷಣೆಗಳಿಗಿಂತ ಇದು ಸಂಪೂರ್ಣ ವಿರುದ್ಧವಾಗಿದೆ. ಮೇ ೨೦೨೧ ರ ಮೊದಲು ಬಲ ಕೈ-ಕಾಲುಗಳ ಉಗುರುಗಳಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಕಂಡುಬರುತ್ತಿತ್ತು. ದೇಹದ ಬಲಬದಿಯು ಸೂರ್ಯನಾಡಿಗೆ ಮತ್ತು ಎಡ ಬದಿಯು ಚಂದ್ರನಾಡಿಗೆ ಸಂಬಂಧಪಟ್ಟಿದೆ. ಸೂರ್ಯನಾಡಿಯು ತೇಜಸ್ವಿ, ಮಾರಕ ಮತ್ತು ಪ್ರಭಾವಿಯಾಗಿದ್ದು ರಕ್ಷಣೆಯ ಕಾರ್ಯ ಮಾಡುತ್ತದೆ ಮತ್ತು ಚಂದ್ರನಾಡಿಯು ತಂಪು ಮತ್ತು ತಾರಕವಾಗಿದ್ದು ಪೋಷಣೆಯ ಕಾರ್ಯವನ್ನು ಮಾಡುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಲ ಕೈ-ಕಾಲುಗಳಿಂದ ಪ್ರಕ್ಷೇಪಿಸುವ ಚೈತನ್ಯ ದಿಂದ ಸಮಷ್ಟಿಯ ರಕ್ಷಣೆಯಾಗುತ್ತದೆ. ಮತ್ತು ಅವರ ಎಡ ಕೈ-ಕಾಲುಗಳಿಂದ ಪ್ರಕ್ಷೇಪಿಸುವ ಚೈತನ್ಯದಿಂದ ಸಮಷ್ಟಿಯ ಪೋಷಣೆಯಾಗುತ್ತದೆ. ಯಾವುದೇ ಘಟನೆಗಳು ಮೊದಲು ಸೂಕ್ಷ್ಮದಿಂದ ಘಟಿಸುತ್ತವೆ ಮತ್ತು ಸ್ವಲ್ಪ ಸಮಯದ ನಂತರ ಅವು ಸ್ಥೂಲದಿಂದ ಘಟಿಸುತ್ತವೆ. ಈ ತತ್ತ್ವಕ್ಕನುಸಾರ ಸೂಕ್ಷ್ಮ ದಲ್ಲಿನ ದೇವರ ಮತ್ತು ಅಸುರರ ಯುದ್ಧವು ಮುಗಿಯುತ್ತ ಬಂದಂತೆ ಆಪತ್ಕಾಲದ ರೂಪದಲ್ಲಿ ಅದು ಸ್ಥೂಲದಿಂದ ಪ್ರಕಟೀಕರಣವಾಗಲು ಪ್ರಾರಂಭವಾಗಿದೆ. ‘ಅಕ್ಟೋಬರ್ ೨೦೨೨ ರಿಂದ ಪರಾತ್ಪರ ಗುರು ಡಾಕ್ಟರರ ಬಲ ಕೈ-ಕಾಲುಗಳ ಉಗುರುಗಳಿಗಿಂತ ಅವರ ಎಡ ಕೈ-ಕಾಲುಗಳ ಉಗುರುಗಳಲ್ಲಿ ಸಕಾರಾತ್ಮಕ ಉರ್ಜೆ ಹೆಚ್ಚಾಗುವುದು, ಇದು ಅವರ ಅವತಾರಿ ಕಾರ್ಯವು ಪೂರ್ಣಗೊಂಡು ಹಿಂದೂ ರಾಷ್ಟ್ರವು ಸೂಕ್ಷ್ಮದಿಂದ ಉದಯವಾಗಿದೆ, ಈಗ ಕೇವಲ ಅದು ಸ್ಥೂಲದಲ್ಲಿ ಆಗಲು ಬಾಕಿಯಿದೆ, ಎಂಬುದರ ಸೂಚನೆಯಾಗಿದೆ. ಆದ್ದರಿಂದ ಆಪತ್ಕಾಲವು ಮುಗಿದ ಕೂಡಲೇ ಹಿಂದೂ ರಾಷ್ಟ್ರವೇ ಬರಲಿದೆ. ಎಂಬುದನ್ನು ಗಮನದಲ್ಲಿಟ್ಟು ಸಾಧಕರು ಆಪತ್ಕಾಲಕ್ಕೆ ಅಂಜದೇ, ಶ್ರೀಗುರುಗಳ ಮೇಲೆ ಶ್ರದ್ಧೆಯನ್ನಿಟ್ಟು ಅವರು ಆಪತ್ಕಾಲವನ್ನು ಎದುರಿಸಲು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಾಧಕರಿಗೆ ಮಾಡಲು ಹೇಳಿದ ಪ್ರಯತ್ನಗಳನ್ನು ಸಾಧಕರು ಸರಿಯಾಗಿ ಮಾಡುವುದು ಅಪೇಕ್ಷಿತವಾಗಿದೆ.
೩. ಜನವರಿ ೨೦೨೩ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉಗುರುಗಳಿಗಿಂತ ಅವರ ಕೂದಲುಗಳಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಿರುವುದು: ಕೂದಲುಗಳು ಪೃಥ್ವಿತತ್ತ್ವಕ್ಕೆ ಸಂಬಂಧಪಟ್ಟಿವೆ ಮತ್ತು ಉಗುರುಗಳು ತೇಜತತ್ತ್ವಕ್ಕೆ ಸಂಬಂಧಪಟ್ಟಿವೆ. ಉಗುರುಗಳಿಗಿಂತ ಕೂದಲುಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುವುದು, ಇದು ತೀವ್ರ ಆಪತ್ಕಾಲವು ಸಮೀಪ ಬಂದಿರುವುದರ ಸೂಚನೆಯಾಗಿದೆ. ಆಪತ್ಕಾಲವು ಮುಗಿದ ನಂತರ ಬರುವ ಕಾಲವೆಂದರೆ ಹಿಂದೂ ರಾಷ್ಟ್ರದ ಉದಯ. ಈ ವಿಷಯವು ಸ್ಥೂಲದಿಂದ ಘಟಿಸಲು ಸ್ವಲ್ಪ ವರ್ಷಗಳೇ ಉಳಿದಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಅವತಾರೀ ಕಾರ್ಯವು ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ಸೂಚನೆಯಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಈ ಅಲೌಕಿಕ ಸೇವೆಯ ಅವಕಾಶ ಸಿಕ್ಕಿತು ಮತ್ತು ಅವರೇ ಅದನ್ನು ಮಾಡಿಸಿಕೊಂಡರು ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! (೧೦.೬.೨೦೨೩)
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ವಿ-ಅಂಚೆ : [email protected]