‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಮಂಡಿಸಲಾದ ‘ವರ್ಷ ೨೦೨೪ ರ ಲೋಕಸಭಾ ಚುನಾವಣೆ ಮತ್ತು ಹಿಂದೂಗಳ ನಿಲುವು !
‘ಮುಂಬರುವ ಕೆಲವು ದಿನಗಳಲ್ಲಿ ದೇಶಾದ್ಯಂತ ವರ್ಷ ೨೦೨೪ ರ ಚುನಾವಣೆಯ ಗಾಳಿ ಬೀಸಲು ಪ್ರಾರಂಭವಾಗುವುದು. ಚುನಾವಣೆಯ ಪ್ರಚಾರ ಪ್ರಾರಂಭವಾದರೆ ನಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ, ಉದಾ. ಮತದಾನ ಮಾಡಬೇಕೇ ? ಮಾಡಿದರೆ ಯಾರಿಗೆ ಮತದಾನ ಮಾಡಬೇಕು ? – ಸದ್ಗುರು (ಡಾ.) ಚಾರುದತ್ತ ಪಿಂಗಳೆ
(ಕಳೆದ ವಾರ ಅದರ ಕೆಲವು ಅಂಶಗಳನ್ನು ಓದಿದೆವು ಇಂದು ಮುಂದಿನ ಭಾಗವನ್ನು ನೋಡೋಣ.)
೬. ಪ್ರಜಾಪ್ರಭುತ್ವದಲ್ಲಿ ಜನಸಂಖ್ಯೆ ಅಧಿಕವಿರುವವರ ಕೈಯಲ್ಲಿ ಆಡಳಿತಗಾರರನ್ನು ಚುನಾಯಿಸುವ ಅಧಿಕಾರವಿರುವುದು ಒಂದು ಅಪಾಯವಾಗಿದೆ !
ಪ್ರಜಾಪ್ರಭುತ್ವದಲ್ಲಿ ಬಹುಮತದ ಆಧಾರದಲ್ಲಿ ರಾಜಕಾರಣ ನಡೆಯುತ್ತದೆ. ಆದುದರಿಂದ ಜನಸಂಖ್ಯೆಯೇ, ಆಡಳಿತಗಾರರನ್ನು ನಿರ್ಧರಿಸುವ ನಿರ್ಣಾಯಕ ಘಟಕವಾಗಿದೆ. ಯಾವ ಸಮಾಜದ, ಪಂಥದ, ವಿಚಾರಸರಣಿಯ ಜನಸಂಖ್ಯೆ ಅಧಿಕ, ಅವರು ತಮ್ಮ ನೇತಾರರನ್ನು ಆಡಳಿತಗಾರರನ್ನಾಗಿ ಮಾಡಬಲ್ಲರು. ಇಂದು ಕೇರಳದಲ್ಲಿ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹಾಗೂ ನಿಷೇಧಿತ ‘ಪಿ.ಎಫ್.ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)ದ ರಾಜಕೀಯ ಸಂಘಟನೆ ‘ಎಸ್.ಡಿ.ಪಿ.ಐ. (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಅದೇ ರೀತಿ ಓವೈಸಿಯವರ ‘ಎಂ.ಐ.ಎಂ., ಆಸ್ಸಾಂನ ಬದರುದ್ದೀನ ಅಜಮಲ್ ನ ಪಕ್ಷ ‘ಎ.ಐ.ಯೂ.ಡಿ.ಎಫ್. ಹೀಗೆ ಕೇವಲ ಮುಸ್ಲಿಂ ಮತಗಳ ರಾಜಕಾರಣ ಮಾಡುವ ಮುಸ್ಲಿಂವಾದಿ ಪಕ್ಷಗಳು ಮುಸಲ್ಮಾನಬಹುಸಂಖ್ಯಾತವಿರುವ ಮತಕ್ಷೇತ್ರಗಳಿಂದ ತಮ್ಮ ಅಭ್ಯರ್ಥಿಯನ್ನು ಚುನಾಯಿಸುತ್ತಿದ್ದಾರೆ. ಅವರನ್ನು ಹೊರತು ಪಡಿಸಿ ಮುಸಲ್ಮಾನ ಮತಗಳ ಭಿಕ್ಷೆಗಾಗಿ ಯಾವುದೇ ಮಟ್ಟಕ್ಕೂ ಹೋಗುವ ಮತ್ತು ತಮ್ಮನ್ನು ‘ಸೆಕ್ಯುಲರ್ (ನಿಧರ್ಮಿ) ಎಂದು ಹೇಳಿಕೊಳ್ಳುವ ಪಕ್ಷಗಳ ಸಂಖ್ಯೆ ಬಹಳಷ್ಟಿದೆ. ಯಾವ ರೀತಿ ಮುಸಲ್ಮಾನರ ಜನಸಂಖ್ಯೆಯ ಹೆಚ್ಚಳದ ವೇಗದಲ್ಲಿಯೇ ಅವರ ಅಭ್ಯರ್ಥಿಗಳು ಸಹ ದೊಡ್ಡ ಸಂಖ್ಯೆಯಲ್ಲಿ ಚುನಾಯಿತರಾಗುತ್ತಿದ್ದಾರೆ. ಈ ತುಲನೆಯಲ್ಲಿ ರಾಜಕೀಯ ದೃಷ್ಟಿಯ ಅಭಾವದಿಂದ ಹಾಗೂ ಸೆಕ್ಯುಲರವಾದದ ಪ್ರಭಾವದಿಂದ ಹಿಂದೂಗಳಿಗೆ ಇವತ್ತಿನವರೆಗೂ ಬಹುಸಂಖ್ಯಾತರಾಗಿದ್ದರೂ ಹಿಂದುತ್ವದ ಹೆಸರಿನಲ್ಲಿ ತಮ್ಮ ‘ವೋಟ್ ಬ್ಯಾಂಕ್ (ಮತಪೆಟ್ಟಿಗೆ) ತಯಾರಿಸಲು ಸಾಧ್ಯವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಇನ್ನೆಷ್ಟು ಕಾಲದ ನಂತರ ಹಿಂದೂಗಳ ಮತಗಳ ಆಧಾರದಲ್ಲಿ ಆಡಳಿತದಾರನನ್ನು ಚುನಾಯಿಸಲಾಗುವುದು ? ೨೦೨೪ ರ ಚುನಾವಣೆ, ೨೦೨೯ ರ ಚುನಾವಣೆ ಬರುವವರೆಗೆ ಸರಿ ಇದೆ; ಆದರೆ ತದನಂತರದ ೨೦೩೪ ರ ಚುನಾವಣೆ ಪ್ರಜಾಪ್ರಭುತ್ವ ಪದ್ಧತಿಯಿಂದ ನಡೆಯಬಹುದು, ಎಂದು ನಿಮಗಾದರೂ ಖಾತ್ರಿ ಅನಿಸುತ್ತದೆಯೇ ?
ಅ. ಕಾಶ್ಮೀರದ ಉದಾಹರಣೆ ನಮ್ಮೆದುರಿಗಿದೆ. ಕಾಶ್ಮೀರದಲ್ಲಿಯೂ ಪ್ರಜಾಪ್ರಭುತ್ವ ಪದ್ಧತಿಯಿಂದಲೇ ಸರಕಾರ ಆರಿಸಿ ಬಂದಿತು; ಆದರೆ ಅಲ್ಲಿ ಮುಸಲ್ಮಾನರ ಜನಸಂಖ್ಯೆ ಅಧಿಕ ವಿರುವುದರಿಂದ ಆ ಸರಕಾರವು ಪೂರ್ಣ ರಾಜ್ಯವ್ಯವಸ್ಥೆಯನ್ನು ಹಿಂದೂ ಗಳ ವಿರುದ್ಧ ಉಪಯೋಗಿಸಿತು. ಹಿಂದೂಗಳ ಮನೆಗಳ ಮೇಲೆ ಬೆದರಿಕೆಯ ಪತ್ರಗಳನ್ನು ಅಂಟಿಸುತ್ತಿರುವಾಗ, ರಾಜಾರೋಷವಾಗಿ ಹಿಂದೂ ಮುಖಂಡರ ಹತ್ಯೆಗಳಾಗುತ್ತಿರುವಾಗ, ಹಿಂದೂ ಯುವತಿಯರ ಮೇಲೆ ಬಲಾತ್ಕಾರವಾಗುತ್ತಿರುವಾಗ, ಹಿಂದೂಗಳ ಅಪಹರಣವನ್ನು ಆಗುತ್ತಿರುವಾಗ, ಮಸೀದಿಯಿಂದ ಹಿಂದೂಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವಾಗ ಅಲ್ಲಿನ ಆಡಳಿತ ವ್ಯವಸ್ಥೆಯು ಹಿಂದೂಗಳ ರಕ್ಷಣೆಗಾಗಿ ಯಾವುದೇ ಉಪಾಯ ಯೋಜನೆಯನ್ನು ಮಾಡಲಿಲ್ಲ. ಹಿಂದೂಗಳ ಮೇಲೆ ಅತ್ಯಾಚಾರ, ಬಲಾತ್ಕಾರ, ಹಿಂದೂಗಳ ಹತ್ಯೆ ಮುಂತಾದ ಕಾರಣಗಳಿಗಾಗಿ ಯಾವುದೇ ದೂರನ್ನು ದಾಖಲಿಸಲಿಲ್ಲ. ಇದರ ವಿರುದ್ಧ ಭಯೋತ್ಪಾದನೆಗೆ ಕದ್ದುಮುಚ್ಚಿ ಸಮರ್ಥನೆ ಮತ್ತು ಸಂರಕ್ಷಣೆಯನ್ನು ನೀಡುವ ಕಾರ್ಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಆರಿಸಿ ಬಂದ ಸರಕಾರ ಮಾಡಿತು. ಇದರಿಂದ ಅತ್ಯಾಚಾರ ಮಾಡುವವರೇ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರದಲ್ಲಿ ರಾಜಕೀಯ ಮುಖಂಡರಾದರು. ಇದರ ಪರಿಣಾಮದಿಂದ ಹಿಂದೂಗಳಿಗೆ ಜೀವವನ್ನು ರಕ್ಷಿಸಿಕೊಳ್ಳಲು ಅಲ್ಲಿಂದ ಪಲಾಯನ ಮಾಡಬೇಕಾಯಿತು.
ಆ. ಪಂಜಾಬ ರಾಜ್ಯದ ಚುನಾವಣೆಯಲ್ಲಿ ಖಲಿಸ್ತಾನವಾದಿ ಪ್ರತ್ಯೇಕತಾವಾದಿಗಳು ದೊಡ್ಡ ಸಂಖ್ಯೆಯಲ್ಲಿ ಆರ್ಥಿಕ ಸಹಾಯ ವನ್ನು ಮಾಡಿರುವ ಆರೋಪಗಳಾದವು. ಇದರ ಪರಿಣಾಮ ದಿಂದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಖಲಿಸ್ತಾನ ವಾದಿಗಳಿಗೆ ಸ್ವಚ್ಛಂದತೆ ಸಿಕ್ಕಿತು. ಇಂದಿರಾ ಗಾಂಧಿಯವರು ಕಠೋರವಾಗಿ ಹತ್ತಿಕ್ಕಿದ್ದ ಖಲಿಸ್ತಾನವಾದಿಗಳು ರಸ್ತೆಯ ಮೇಲೆ ಬಹಿರಂಗವಾಗಿ ಕಾಣಿಸತೊಡಗಿದರು. ಆಪ್ ಸರಕಾರವು ಜೈಲಿನಲ್ಲಿರುವ ಅನೇಕ ಖಲಿಸ್ತಾನಿ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿತು. ಇದರ ಪರಿಣಾಮವೆಂದು ಹಿಂದೂ ದೇವಸ್ಥಾನಗಳ ಮೇಲೆ ಆಕ್ರಮಣಗಳು, ಹಿಂದೂ ಮುಖಂಡರ ಹತ್ಯೆ, ಪೊಲೀಸ್ ಠಾಣೆಗಳ ಮೇಲೆ ದಾಳಿ, ಖಲಿಸ್ತಾನದ ಬಾವುಟಗಳನ್ನು ಹಾರಿಸುವುದು, ಈ ಘಟನೆಗಳು ರಾಜಾರೋಷ ವಾಗಿ ಪ್ರಾರಂಭವಾದವು. ಒಂದು ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಅವರಿಗೆ ಹಿಂದೂವಿರೋಧಿ, ಭಾರತವಿರೋಧಿ ಕೃತ್ಯಗಳನ್ನು ಮಾಡಲು ರಾಜಾಶ್ರಯವೇ ಸಿಕ್ಕಿತು.
ಇ. ಈಗಿನ ಸರಕಾರದಿಂದ ದೇಶಾದ್ಯಂತ ರಸ್ತೆ, ಸೇತುವೆ (ಬ್ರಿಜ್), ಕಟ್ಟಡ, ಆಧುನಿಕ ರೈಲು ಇವುಗಳ ಒಳ್ಳೆಯ ವಿಕಾಸವಾಗುತ್ತಿದೆ; ಆದರೆ ಅಲ್ಪಸಂಖ್ಯಾತ ಸಮಾಜದ ಮತದಾನವು ವಿಕಾಸದ ಹೆಸರಿನಲ್ಲಿಯಲ್ಲ; ಮುಸಲ್ಮಾನ ಅಥವಾ ಕ್ರೈಸ್ತ ‘ವೋಟ್ ಬ್ಯಾಂಕ್ ನ ಹೆಸರಿನಲ್ಲಿ ಆಗುತ್ತದೆ. ಆದುದರಿಂದ ಇಂದು ನಾವು ಎಷ್ಟೇ ಅಭಿವೃದ್ಧಿಯ, ಸೌಲಭ್ಯಗಳ ಉಘೇ ಉಘೇ ಮಾಡಿದರೂ, ನಾಳೆ ರಸ್ತೆ, ಸೇತುವೆ (ಬ್ರಿಜ್), ಬುಲೆಟ್ ಟ್ರೇನ್ ಎಲ್ಲವೂ ಇರಲಿವೆ; ಆದರೆ ಹಿಂದೂಗಳೇ ಇಲ್ಲದಿದ್ದರೆ ? ಆದುದರಿಂದ ಈ ಸೌಲಭ್ಯಗಳ ಉಪಯೋಗವನ್ನು ಇನ್ನೂ ಕೆಲವು ವರ್ಷಗಳ ಬಳಿಕ ಹಿಂದೂಗಳೆಂದು ಮಾಡಬಹುದೇ ? ಇದರ ವಿಚಾರವನ್ನು ಇಂದೇ ಮಾಡಬೇಕು. ಇದಕ್ಕೆ ಉಪಾಯವೆಂದು ‘ಜನಸಂಖ್ಯೆ ನಿಯಂತ್ರಣ ಕಾನೂನು ಮಾಡಲು ಸರಕಾರ ಬಹಳ ಆಸಕ್ತಿಯನ್ನು ತೋರಿಸುವುದು ಕಂಡು ಬರುವುದಿಲ್ಲ. ಇದರಿಂದ ‘ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲಿದೆಯೇ ? ಈ ದೊಡ್ಡ ಪ್ರಶ್ನೆ ಮೂಡುತ್ತದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕೇವಲ ಮತದಾನ ಮತ್ತು ಪ್ರಜಾಪ್ರಭುತ್ವವನ್ನು ಅವಲಂಬಿಸಿ ಉಪಯೋಗವಿಲ್ಲ, ಹಿಂದೂಗಳು ಸ್ವಂತದ ಸಂಘಟನೆಗಳು, ಜಾಗೃತಿ, ಬಲಸಾಮರ್ಥ್ಯ, ಆಕ್ರಮಕರ ವಿರುದ್ಧ ಪ್ರತಿಕಾರದ ಕ್ಷಮತೆ ಇವುಗಳ ಬಗ್ಗೆಯೂ ದೊಡ್ಡ ಪ್ರಮಾಣದಲ್ಲಿ ಗಮನ ಹರಿಸುವುದು ಆವಶ್ಯಕವಾಗಿದೆ ಎಂದು ಅನಿಸುತ್ತದೆ.
೭. ಹಿಂದುತ್ವನಿಷ್ಠ ಸಂಘಟನೆಗಳು ಚುನಾವಣೆಗಳಲ್ಲಿ ಭಾಗವಹಿಸುವುದಕ್ಕಿಂತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಪ್ರಯತ್ನಿಸುತ್ತಿರಬೇಕು
ಸದ್ಯದ ಹೆಚ್ಚಿನ ‘ಸೆಕ್ಯುಲರ (ಜಾತ್ಯತೀತ) ರಾಜಕಾರಣಿಗಳು ಧರ್ಮವನ್ನೇ ನಂಬುವುದಿಲ್ಲ, ಆದುದರಿಂದ ಅವರು ‘ಹಿಂದೂ ರಾಷ್ಟ್ರ ಸಂಕಲ್ಪನೆಯನ್ನೇ ಒಪ್ಪುವುದಿಲ್ಲ. ಹಿಂದೂ ರಾಷ್ಟ್ರವು ಸನಾತನ ಧರ್ಮದ ಆದರ್ಶ ಸಂಕಲ್ಪನೆಯ ಮೇಲಾಧಾರಿತ ವಾಗಿದೆ. ಆದುದರಿಂದ ಭ್ರಷ್ಟ, ಅವಕಾಶವಾದಿ ರಾಜಕಾರಣಿ ಗಳಿಂದ ‘ರಾಷ್ಟ್ರರಚನೆ ಆಗುವುದು ಖಂಡಿತವಾಗಿಯೂ ಅಸಾಧ್ಯವಾಗಿದೆ. ಈ ಎಲ್ಲ ಸ್ಥಿತಿಯನ್ನು ನೋಡಿ ‘ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳೇ ಒಂದಾಗಿ ಚುನಾವಣೆಯನ್ನು ಎದುರಿಸಬೇಕು ಎಂದೂ ಒಂದು ಪರ್ಯಾಯದ ಚರ್ಚೆ ನಡೆಯುತ್ತಿದೆ; ಆದರೆ ‘ಅಧಿಕಾರಕ್ಕಾಗಿ ಯಾವುದೇ ಮಟ್ಟಕ್ಕೆ ಹೋಗುವ ರಾಜಕಾರಣಿಗಳೊಂದಿಗೆ ಸತ್ವನಿಷ್ಠ ಹಿಂದುತ್ವನಿಷ್ಠರು ರಾಜಕೀಯ ಹೋರಾಟವನ್ನು ಮಾಡಬಲ್ಲರೇ ? ಹಣ, ಹೆಂಡ, ಮಾಂಸದ ಆಧಾರದಲ್ಲಿ ಯಾರಿಗೆ ಬೇಕಾದರೂ ಮತ ನೀಡುವ ಹೆಚ್ಚಿನ ಮತದಾರರಿಗೆ ಸಾತ್ತ್ವಿಕ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಹೇಳಿದರೆ ಅವರು ಮತದಾನ ಮಾಡುವರೇ ? ಅದಕ್ಕಾಗಿ ೧೦೦ ಕೋಟಿ ಹಿಂದೂಗಳ ವರೆಗೆ ತಲುಪಿ ಅವರಿಗೆ ಸಾತ್ತ್ವಿಕ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಹೇಳುವ ಕ್ಷಮತೆ ಮತ್ತು ಅದಕ್ಕಾಗಿ ತಗಲುವ ಸಮಯ ಇಂದು ಹಿಂದೂಗಳ ಬಳಿ ಇದೆಯೇ ?
ತಮ್ಮನ್ನು ‘ಸೆಕ್ಯುಲರ್ ಎಂದು ತಿಳಿದುಕೊಳ್ಳುವ ಹಿಂದೂಗಳನ್ನು ಹಿಂದುತ್ವನಿಷ್ಠರನ್ನಾಗಿ ಮಾಡುವ ಪ್ರಯತ್ನ ಇಂದು ಸಾಧ್ಯವಿದೆಯೇ ? ಈ ಪ್ರಶ್ನೆಗಳ ಉತ್ತರ ನಕಾರಾತ್ಮಕವೇ ಆಗಿರುವುದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಇಂದು ಚುನಾವಣೆಯಲ್ಲಿ ಸಹಭಾಗಿಗಳಾಗುವುದಕ್ಕಿಂತ ಹಿಂದೂಗಳ ಸಂಘಟನೆಗಳನ್ನು ಮಾಡಿ ಅವರ ಒತ್ತಡಗುಂಪನ್ನು ಮಾಡುವುದು ಅವರಿಗೆ ಸಹಜ ಸಾಧ್ಯವಿದೆ. ‘ಕಿಂಗ್ ಆಗುವ ಕನಸನ್ನು ಕಾಣುವುದಕ್ಕಿಂತ ‘ಕಿಂಗ ಮೇಕರ ಆಗುವುದು ಅಧಿಕ ಉಪಯುಕ್ತವಾಗಿದೆ. ನಾವು ಎಷ್ಟೇ ಪ್ರಯತ್ನಿಸಿ ಪ್ರಜಾಪ್ರಭುತ್ವದಲ್ಲಿ ಅಧಿಕಾರವನ್ನು ಪಡೆದರೂ ಅದು ಕೇವಲ ೫ ವರ್ಷಗಳಿಗಾಗಿಯೇ ಇರಲಿದೆ. ಇದರಿಂದ ಪುನಃ ಮುಂದಿನ ಚುನಾವಣೆಯಲ್ಲಿ ಪ್ರಚಾರ ಮಾಡಿ ಮತಗಳನ್ನು ಪಡೆದು ಚುನಾಯಿಸಿ ಬರಬೇಕಾಗುತ್ತದೆ. ಹೀಗಿರುವಾಗ ಪ್ರತಿ ೫ ವರ್ಷಗಳಿಗೆ ಹಿಂದೂಹಿತಕ್ಕಾಗಿ ಹೋರಾಡುತ್ತಿರುವುದೋ ಅಥವಾ ದೀರ್ಘಕಾಲದ ದೃಷ್ಟಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸುವುದೋ ? ಎಂಬ ವಿಚಾರವನ್ನು ನಾವು ಮಾಡಬೇಕು.
೮. ರಾಜಕಾರಣದಲ್ಲಿ ಶತ್ರುಬೋಧದ ವಿಚಾರ ಮಾಡಬೇಕಾಗುತ್ತದೆ
ನಾವು ಇಂದು ಪ್ರಜಾಪ್ರಭುತ್ವದಲ್ಲಿನ ದೋಷ ಮತ್ತು ದುಷ್ಪರಿಣಾಮಗಳನ್ನು ಗಮನಿಸಿದರೂ, ನಾವು ನಮ್ಮ ಯಾವುದೇ ಕೃತಿಯಿಂದ ಶತ್ರುವಿಗೆ ಬಲ ಸಿಗದಂತೆ ಧೋರಣೆಗಳನ್ನು ಮಾಡಬೇಕು. ರಾಜ್ಯಾಧಿಕಾರ ಶತ್ರುವಿನ ನಿಯಂತ್ರಣಕ್ಕೆ ಹೋದರೆ ಅದು ಆ ಅಧಿಕಾರವನ್ನು ಹಿಂದೂವಿರೋಧಿ ಗಳಿಗೆ ಬಲ ನೀಡಲು ಮತ್ತು ಹಿಂದೂಗಳ ಶಕ್ತಿಯನ್ನು ನಾಶ ಮಾಡಲು ಉಪಯೋಗಿಸಬಹುದು. ಚುನಾವಣೆಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯಾಗದಿದ್ದರೂ, ಅಲ್ಲಿಯವರೆಗೆ ರಾಜಕೀಯ ವ್ಯವಸ್ಥೆ ಹಿಂದೂವಿರೋಧಿಗಳ ನಿಯಂತ್ರಣಕ್ಕೆ ಹೋಗಬಾರದು ಎಂಬುದಕ್ಕಾಗಿ ನಾವು ಪ್ರಯತ್ನಿಸಬೇಕಾಗುವುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಹಿಂದುತ್ವದ ದೃಷ್ಟಿಯಿಂದ ತೆಗೆದುಕೊಂಡಿದ್ದ ಹಿಂದಿನ ಭಾಜಪ ಸರಕಾರದ ಎಲ್ಲ ನಿರ್ಣಯಗಳನ್ನು ರದ್ದುಗೊಳಿಸಿತು; ಆದರೆ ಈ ಹಿಂದಿನ ಕಾಂಗ್ರೆಸ್ಸಿನ ನಾಯಕರಿಂದ ನಡೆಸಲಾಗುತ್ತಿದ್ದ ಟಿಪ್ಪು ಸುಲ್ತಾನನ ವೈಭವೀಕರಣ ಮಾಡಲು ಅವರಿಗೆ ಧೈರ್ಯ ಮಾಡುತ್ತಿಲ್ಲ. ಇದರಿಂದ ಗಮನಕ್ಕೆ ಬರುವುದೇನೆಂದರೆ, ಹಿಂದೂಗಳು ಯಾವುದಾದರೊಂದು ವಿಷಯವನ್ನು ಒಳ್ಳೆಯ ರೀತಿಯಿಂದ ಒತ್ತಡವನ್ನು ಹೇರಿ ಮಂಡಿಸಿದರೆ, ವಿರೋಧಿ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಆ ಸಂದರ್ಭದಲ್ಲಿ ವಿರೋಧದ ಭೂಮಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತದೆ. ಇದನ್ನೇ ನಾವು ಹಿಂದೂಗಳ ಒತ್ತಡ ಗುಂಪನ್ನು ರಚಿಸಿ ಮತಾಂತರ, ಲವ್ ಜಿಹಾದ್, ಗೋಹತ್ಯೆ, ಹಿಂದೂ ರಾಷ್ಟ್ರ ಇವುಗಳನ್ನು ಒಳ್ಳೆಯ ರೀತಿಯಲ್ಲಿ ಸಾಧ್ಯಗೊಳಿಸಬಹುದು.
೯. ಮುಸಲ್ಮಾನ ದೇಶವೋ ಅಥವಾ ಹಿಂದೂ ರಾಷ್ಟ್ರವೋ ?
೭೫ ವರ್ಷಗಳ ಹಿಂದೆ ನಮ್ಮ ದೇಶ ಧರ್ಮದ ಆಧಾರದಲ್ಲಿ ವಿಭಜಿಸಲ್ಪಟ್ಟಿತು. ಇಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ವಾಸಿಸುವ ಹಿಂದೂಗಳ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆಯ ಬಲದಿಂದ ಇಂದು ಪುನಃ ದೇಶದಲ್ಲಿ ಅಧಿಕಾರ ಕೇಳುವುದಲ್ಲ, ಬದಲಾಗಿ ಕಬಳಿಸಲು ಪ್ರಾರಂಭಿಸಿದ್ದಾರೆ. ಕೇಂದ್ರ ಸರಕಾರವು ನಿಷೇಧಿಸಿರುವ ‘ಪಿ.ಎಫ್.ಐ. ಭಯೋತ್ಪಾದಕರ ಬಳಿ ೨೦೪೭
ರಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಅಜೆಂಡಾ (ಕಾರ್ಯಸೂಚಿ) ಅಲ್ಲ, ಬದಲಾಗಿ ‘ಬ್ಲೂ ಪ್ರಿಂಟ ಸಿಕ್ಕಿತು. ಈಗಲೂ ಐಸಿಸ್ ಭಯೋತ್ಪಾದಕರ ಬಳಿ ಅಂತಹದೇ ಕಾಗದಪತ್ರಗಳು ಸಿಕ್ಕವು ಅಂದರೆ ಮುಂದಿನ ಕಾಲದಲ್ಲಿ ವಿಭಜನೆಯಂತಹ ಪರಿಸ್ಥಿತಿ ಭಾರತದಲ್ಲಿ ಉದ್ಭವಿಸುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಹಿಂದೂಗಳು ಚುನಾವಣೆಯ ಮೂಲಕ ೫-೫ ವರ್ಷಗಳ ವಿಚಾರವನ್ನು ಮಾಡುತ್ತಿದ್ದಾರೆ ಮತ್ತು ತಮ್ಮನ್ನು ರಾಜಕೀಯ ಪಕ್ಷಗಳ ಭರವಸೆಯಲ್ಲಿ ಬಿಟ್ಟು ಬಿಡುತ್ತಿದ್ದಾರೆ. ಆದರೆ ಇದರಿಂದ ಯಾವುದೇ ಉಪಾಯ ಸಿಗುವುದಿಲ್ಲ. ಆದುದರಿಂದ ಹಿಂದೂಗಳು ಈಗಲಾದರೂ ‘ಭಾರತವು ಭವಿಷ್ಯದ ಮುಸಲ್ಮಾನ ದೇಶವೋ ಹಿಂದೂ ರಾಷ್ಟ್ರವೋ ? ಎನ್ನುವ ದೃಷ್ಟಿಯಿಂದ ವಿಚಾರ ಮಾಡಿ ಹೆಜ್ಜೆಗಳನ್ನು ಇಡಬೇಕು.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ
ಹಿಂದೂಗಳು ಯಾವ ಕ್ಷಮತೆಯಿಂದ ರಾಮಮಂದಿರಕ್ಕಾಗಿ ಹೋರಾಡಿದರೋ, ಅದಕ್ಕಿಂತ ಅಧಿಕ ತೀವ್ರತೆಯಿಂದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಕೋರಿಕೆಗೆ ಎಲ್ಲ ಹಿಂದೂ ಜನಪ್ರತಿನಿಧಿಗಳ ಬೆಂಬತ್ತಬೇಕು. ಇದಕ್ಕಾಗಿ ೫ ವರ್ಷಗಳಿಗೊಮ್ಮೆ ಬರುವ ಚುನಾವಣೆಯ ದಾರಿಯನ್ನು ಕಾಯದೇ ಹಿಂದೂ ರಾಷ್ಟ್ರಕ್ಕಾಗಿ ಅಖಂಡವಾಗಿ ಕಾರ್ಯನಿರತವಾಗಬೇಕು. |