ಶ್ರಾವಣ ಮಾಸದಲ್ಲಿನ ವ್ರತಗಳನ್ನು ಅಧಿಕ ಮಾಸದಲ್ಲಿ ಮಾಡದೆ ನಿಜ ಮಾಸದಲ್ಲಿ ಮಾಡಬೇಕು !

ಈಗಿರುವ ‘ಅಧಿಕ ಮಾಸ’ದ ನಿಮಿತ್ತ. ….

ಈ ವರ್ಷ ಅಧಿಕ ಶ್ರಾವಣ ಮಾಸವಿದೆ. ಅಧಿಕ ಶ್ರಾವಣ ಮಾಸವು 18.7.2023 ರಿಂದ 16.8.2023 ಈ ಅವಧಿಯಲ್ಲಿ ಇದೆ. ಅನಂತರ ನಿಜ (ಶುದ್ದ) ಶ್ರಾವಣ ಮಾಸ 17.8.2023 ರಿಂದ 15.9.2023 ರ ವರೆಗೆ ಇದೆ. ಶ್ರಾವಣ ಮಾಸದಲ್ಲಿ ‘ಶ್ರಾವಣ ಸೋಮವಾರ’, ‘ಮಂಗಳಾಗೌರಿ ಪೂಜೆ’, ‘ಜೀವಂತಿಕಾಪೂಜೆ’ ಇತ್ಯಾದಿ ವ್ರತಗಳನ್ನು ಅಧಿಕ ಶ್ರಾವಣ ಮಾಸದಲ್ಲಿ ಮಾಡದೆ ನಿಜ (ಶುದ್ಧ) ಶ್ರಾವಣ ಮಾಸದಲ್ಲಿ ಮಾಡಬೇಕು.

ಜನ್ಮ ದಿನವನ್ನು ಅಧಿಕ ಮಾಸದಲ್ಲಿ ಆಚರಿಸದೇ ನಿಜ ಮಾಸದಲ್ಲಿ ಆಚರಿಸಬೇಕು!

ಶ್ರೀ. ರಾಜ ಕರ್ವೆ

ಧರ್ಮಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ಶುಭಕಾರ್ಯವನ್ನು ಮಾಡಬಾರದು. ಈ ವರ್ಷ ಅಧಿಕಶ್ರಾವಣ ಮಾಸವು ಬಂದಿದೆ. ಶ್ರಾವಣ ಮಾಸದಲ್ಲಿ ಹುಟ್ಟಿದವರು, ಅವರ ಜನ್ಮ ದಿನವನ್ನು ‘ಅಧಿಕ ಮಾಸ ‘ದಲ್ಲಿ ಆಚರಿಸದೆ ‘ನಿಜ (ಶುದ್ಧ) ಶ್ರಾವಣ ಮಾಸ’ದಲ್ಲಿ ಆಚರಿಸಬೇಕು. ನಿಜ (ಶುದ್ಧ) ಶ್ರಾವಣ ಮಾಸವು 17.8.2023 ರಿಂದ 15.9.2023 ರ ವರೆಗೆ ಇದೆ.
-ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೭.೨೦೨೩)